ನಾವೆಲ್ಲರೂ ಕೂಡ ಬಹಳ ಹಿಂದಿನ ದಿನದಿಂದಲೂ ಕೂಡ ಏಲಕ್ಕಿಯನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇವಿಸುತ್ತಾ ಬಂದಿದ್ದೇವೆ. ಅದರಲ್ಲೂ ಆಯುರ್ವೇದದಲ್ಲಿ ಇದರ ಬಳಕೆ ಶ್ಲಾಘನೀಯ ಎಂದೇ ಹೇಳಬಹುದು. ಇದು ಶೀತ ಜ್ವರದಂತಹ ಹಲವರು ಆರೋಗ್ಯ ಸಮಸ್ಯೆ ದೂರ ಮಾಡು ವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.
ಹೀಗೆ ಇಷ್ಟೆಲ್ಲ ಲಾಭವನ್ನು ಹೊಂದಿರುವಂತಹ ಈ ಒಂದು ಪುಟ್ಟ ಏಲಕ್ಕಿ ಯನ್ನು ನಾವು ನಮ್ಮ ಆಹಾರ ಕ್ರಮದಲ್ಲಿ ಸೇವನೆ ಮಾಡುವುದು ಬಹಳ ಒಳ್ಳೆಯದು ಎಂದೇ ಹೇಳಬಹುದು. ಯಾವುದೇ ಅಡುಗೆ ಮಾಡಿದರು ಸರಿಯೇ ಅದರಲ್ಲಿ ಒಂದು ಏಲಕ್ಕಿಯನ್ನು ಹಾಕಿದರೆ ಬರುವಂತಹ ಘಮ ಹೇಳಲು ಅಸಾಧ್ಯ ಅದರಲ್ಲೂ ಸಿಹಿ ಪದಾರ್ಥಗಳನ್ನು ತಯಾರು ಮಾಡುವಾಗ ಇದರ ಬಳಕೆ ತುಂಬಾ ಅವಶ್ಯಕ ಎಂದೇ ಹೇಳಬಹುದು.
ಅದರಲ್ಲೂ ಕೆಲವೊಂದಷ್ಟು ಜನ ಬೆಳಗ್ಗಿನ ಸಮಯ ಚಹಾ ಕುಡಿಯು ವಂತಹ ಸಮಯದಲ್ಲಿಯೂ ಕೂಡ ಏಲಕ್ಕಿಯನ್ನು ಹಾಕಿ ಕುಡಿಯುತ್ತಾರೆ ಈ ರೀತಿ ಕುಡಿಯುವುದರಿಂದ ಚಹಾದ ಘಮ ಅದ್ಭುತವಾಗಿ ಬರುವು ದಷ್ಟೇ ಅಲ್ಲದೆ ಅದರಿಂದ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು ಎನ್ನುವ ಉದ್ದೇಶದಿಂದಲೂ ಕೂಡ ಏಲಕ್ಕಿಯನ್ನು ಬಳಸುತ್ತಾರೆ.
ಹಾಗಾದರೆ ಈ ದಿನ ನಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಏಲಕ್ಕಿಯನ್ನು ಸೇವನೆ ಮಾಡುವುದರಿಂದ ನಾವು ಯಾವುದೆಲ್ಲ ರೀತಿಯ ಪ್ರಯೋಜನ ಗಳನ್ನು ಪಡೆದುಕೊಳ್ಳಬಹುದು ಹಾಗೂ ಇದು ಯಾವ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
* ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ :- ಇದರಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವಂತಹ ಕೆಲವು ಗುಣಗಳು ಇವೆ. ಆದ್ದರಿಂದ ಮೊದಲ ಹಂತದಲ್ಲಿರುವಂತಹ ಕ್ಯಾನ್ಸರ್ ರೋಗಿಗಳು ಇದರ ಬಳಕೆಯನ್ನು ಮಾಡುವುದರಿಂದ ಅದನ್ನು ದೂರ ಮಾಡಿಕೊಳ್ಳಬಹುದು ಎಂದು ವೈದ್ಯರು ಕೂಡ ತಿಳಿಸಿದ್ದಾರೆ.
* ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ :- ಇತ್ತೀಚಿನ ದಿನದಲ್ಲಿ ನಾವು ಅನುಸರಿಸುತ್ತಿರುವಂತಹ ಆಹಾರ ಪದ್ಧತಿಯು ಬಹಳ ಕೆಟ್ಟದಾಗಿದೆ ಎಂದೇ ಹೇಳಬಹುದು. ಹೌದು ನಾವು ತಿನ್ನುವಂತಹ ಆಹಾರ ಸರಿಯಾಗಿ ಜೀರ್ಣ ಆಗದೆ ಅದು ಹೊಟ್ಟೆಯಲ್ಲಿಯೇ ಹಲವಾರು ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಗ್ಯಾಸ್, ಅಸಿಡಿಟಿ, ವಾಕರಿಕೆ, ಎದೆ ಉರಿ, ಹೀಗೆ ಇನ್ನು ಹೆಚ್ಚಿನ ಸಮಸ್ಯೆಗಳು ಕಾಡುತ್ತದೆ. ಆದ್ದರಿಂದ ಏಲಕ್ಕಿಯನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು ಇದು ನಮ್ಮ ಎಲ್ಲಾ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ ಎಂದು ಹೇಳಬಹುದು.
* ಬಾಯಿಯ ದುರ್ವಾಸನೆಯನ್ನು ದೂರಮಾಡುತ್ತದೆ.
* ವಸಡುಗಳನ್ನು ಆರೋಗ್ಯವಾಗಿರಿಸುತ್ತದೆ.
* ಉಸಿರಾಟದ ತೊಂದರೆಗಳಿಂದ ನಮ್ಮನ್ನು ರಕ್ಷಿಸುತ್ತದೆ.
* ದೇಹದಲ್ಲಿ ರೋಗನಿರೋಧಕ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
* ಪಿತ್ತ ಜನಕಾಂಗವನ್ನು ಆರೋಗ್ಯವಾಗಿರಿಸುತ್ತದೆ.
* ಮಧುಮೇಹ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
* ಮಳೆಗಾಲದಲ್ಲಿ ನಮ್ಮ ಆರೋಗ್ಯಕ್ಕೆ ಎದುರಾಗುವ ಹಲವಾರು ಸೋಂಕುಗಳನ್ನು ಅತ್ಯಂತ ಸುಲಭವಾಗಿ ನಿವಾರಣೆ ಮಾಡುವ ಲಕ್ಷಣ ಗಳು ಏಲಕ್ಕಿಯಲ್ಲಿ ಸಿಗುತ್ತವೆ. ಏಕೆಂದರೆ ಇದರಲ್ಲಿ ಬ್ಯಾಕ್ಟಿರಿಯಾ ಹಾಗೂ ಫಂಗಸ್ ಸೋಂಕುಗಳನ್ನು ತಡೆ ಹಾಕುವ ಆಂಟಿ ಮೈಕ್ರೋಬಿಯಲ್ ಲಕ್ಷಣಗಳು ಸಿಗುತ್ತವೆ. ದೇಹದ ಜೀವಕೋಶಗಳ ಮಟ್ಟದಲ್ಲಿ ಕೆಲಸ ಮಾಡಿ ಸಂಪೂರ್ಣ ಆರೋಗ್ಯವನ್ನು ರಕ್ಷಣೆ ಮಾಡುವ ಗುಣ ಪಡೆದಿದೆ.
* ದೇಹದಲ್ಲಿ ಬೊಜ್ಜು, ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣ, ಅಧಿಕ ರಕ್ತದ ಒತ್ತಡ, ಹೆಚ್ಚು ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿವಾರಣೆ ಮಾಡುತ್ತದೆ.
* ಹೃದಯಾಘಾತವನ್ನು ತಪ್ಪಿಸುವ ಗುಣವನ್ನು ಏಲಕ್ಕಿ ಪಡೆದಿದೆ. ಏಕೆಂದರೆ ಇದರಲ್ಲಿ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ.
* ಹೊಟ್ಟೆಯ ಭಾಗದ ಅಲ್ಸರ್ ಸಮಸ್ಯೆಯನ್ನು ನಿವಾರಣೆ ಮಾಡುವ ಗುಣವನ್ನು ಹೊಂದಿದೆ.