
ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನರಿಗೆ ಬಂಗು ಕಪ್ಪು ಕಲೆಗಳು ಇರುವುದು ಸಹಜ. ಅದಕ್ಕಾಗಿ ಅವರು ಹೆಚ್ಚಿನ ಹಣವನ್ನು ಖರ್ಚು ಮಾಡಿ ಆಸ್ಪತ್ರೆಗಳಿಗೂ ಕೂಡ ತೋರಿಸಿಕೊಳ್ಳುತ್ತಾರೆ ಆದರೆ ಎಷ್ಟೇ ಪ್ರಯತ್ನ ಪಟ್ಟರು ಕೂಡ ಅದು ಹೋಗುವುದಿಲ್ಲ.
ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಮನೆಮದ್ದನ್ನು ಮಾಡಿ ಹಚ್ಚುತ್ತಾ ಬರುವುದ ರಿಂದ ನಿಮ್ಮ ಮುಖದ ಮೇಲೆ ಇರುವಂತಹ ಬಂಗು, ಕಪ್ಪು ಕಲೆಗಳು, ಎಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ. ಈ ಒಂದು ಬಂಗು ಕೆನ್ನೆಯ ಮೇಲೆ, ಮೂಗಿನ ಮೇಲೆ, ಹಣೆ ಭಾಗ, ಹೀಗೆ ಎಲ್ಲಾ ಕಡೆಯೂ ಕೂಡ ಕಾಣಿಸಿಕೊಳ್ಳುತ್ತದೆ. ಇದರಿಂದ ಅವರ ಮುಖವೇ ವಿಚಿತ್ರವಾಗಿ ಕಾಣಿಸುತ್ತಿರುತ್ತದೆ.
ಹಾಗಾಗಿ ಹೆಚ್ಚಿನ ಜನ ಈ ಸಮಸ್ಯೆ ಇರುವುದರಿಂದ ಹೊರಗಡೆ ಓಡಾಡುವುದಕ್ಕೂ ಕೂಡ ಹಿಂಜರಿಯುತ್ತಾರೆ. ಆದರೆ ಇನ್ನು ಮುಂದೆ ಈ ರೀತಿ ಹಿಂಜರಿಯುವಂತಹ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಈಗ ನಾವು ಹೇಳುವ ಈ ಒಂದು ಮನೆಮದ್ದನ್ನು ಮಾಡಿ ನೀವು ಒಂದು ವಾರ ಉಪಯೋಗಿಸಿದರೆ ಸಾಕು ನಿಮ್ಮ ಮುಖದ ಮೇಲೆ ಇರುವಂತಹ ಬಂಗು ಅಂದರೆ ಕಪ್ಪು ಕಲೆ ಎಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ.
ಹಾಗಾದರೆ ಈ ಮನೆ ಮದ್ದನ್ನು ಹೇಗೆ ಮಾಡುವುದು, ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹಾಗೂ ಇದನ್ನು ಹೇಗೆ ಉಪಯೋಗಿಸು ವುದು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಇದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಯಾವುದು ಎಂದರೆ.
* ಒಂದು ಆಲೂಗಡ್ಡೆ
ಆಲೂಗಡ್ಡೆಯ ರಸ ನಮ್ಮ ಮುಖದ ಮೇಲೆ ಇರುವಂತಹ ಕಪ್ಪು ಕಲೆಗಳನ್ನು ಅಂದರೆ ಪಿಗ್ಮೆಂಟೇಶನ್ ಅನ್ನು ದೂರ ಮಾಡುವಲ್ಲಿ ಬಹಳ ಪ್ರಮುಖವಾದ ಕಾರ್ಯ ನಿರ್ವಹಿಸುತ್ತದೆ. ಹಾಗೂ ಇದು ನಮ್ಮ ಚರ್ಮದ ಕಾಂತಿಯನ್ನು ಸಹ ಹೆಚ್ಚು ಮಾಡುವಲ್ಲಿ ಪ್ರಮುಖವಾದ ಕಾರ್ಯನಿರ್ವಹಿಸುತ್ತದೆ.
ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಅದನ್ನು ತುರಿದು ಅದರ ರಸವನ್ನು ತೆಗೆದುಕೊಳ್ಳಬೇಕು. ಆನಂತರ ಒಂದು ಚಿಕ್ಕ ಬೌಲ್ ಗೆ ಎರಡು ಚಮಚ ಅಕ್ಕಿ ಹಿಟ್ಟು, ಕಾಲು ಚಮಚ ಅರಿಶಿಣದ ಪುಡಿ, ಹಾಗೂ ಆಲೂಗಡ್ಡೆ ರಸ ಇಷ್ಟನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು ನಂತರ ಕೊನೆಯಲ್ಲಿ ಒಂದು ಚಮಚ ನಿಂಬೆಹಣ್ಣಿನ ರಸ, ಹಾಗೂ ಒಂದು ಚಮಚ ಅಲೋವೆರಾ ಜೆಲ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
* ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ ಐದು ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಬೇಕು. ಆನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಅಥವಾ ತಣ್ಣೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು.
ಆನಂತರ ಒಂದು ಚಮಚ ಅಕ್ಕಿಯನ್ನು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ ಸ್ವಲ್ಪ ಗಂಜಿ ಹದಕ್ಕೆ ಮಾಡಿ ಅದನ್ನು ಶೋಧಿಸಿಕೊಳ್ಳಬೇಕು.
ನಂತರ ಅದನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ ಅದನ್ನು ನಿಮ್ಮ ಮುಖಕ್ಕೆ ಹಾಕಿ ಮಸಾಜ್ ಮಾಡಿಕೊಳ್ಳುವುದರಿಂದ ನಿಮ್ಮ ಮುಖದ ಮೇಲೆ ಇರುವಂತಹ ಎಲ್ಲಾ ಕಪ್ಪು ಕಲೆಗಳು ಅಂದರೆ ಪಿಗ್ಮೆಂಟೇಷನ್ ಬಂಗು ಇವೆಲ್ಲವೂ ಕೂಡ ದೂರವಾಗುತ್ತದೆ. ಈ ಒಂದು ವಿಧಾನವನ್ನು ನೀವು ಪ್ರತಿನಿತ್ಯ ಮಾಡಬಹುದು. ಆದರೆ ಮೇಲೆ ಹೇಳಿದ ವಿಧಾನವನ್ನು ಹಾಕಿಕೊಳ್ಳುವುದನ್ನು ವಾರದಲ್ಲಿ ಒಂದು ದಿನ ಅಥವಾ ಎರಡು ದಿನ ಮಾಡಿಕೊಂಡರೆ ಸಾಕು ಅದರಿಂದ ನಿಮಗೆ ಉತ್ತಮವಾದ ಫಲಿತಾಂಶ ಸಿಗುತ್ತದೆ.