ಮುಖ ಬೆಳ್ಳಗೆ ಆಗಲು ಸಿಂಪಲ್ 15 ಟಿಪ್ಸ್.!

 

* ಹಸಿ ಹಾಲನ್ನು ತೆಗೆದುಕೊಂಡು ಒಂದು ಹತ್ತಿಯನ್ನು ಮುಳುಗಿಸಿ ದಿನ ನಿಮ್ಮ ಮುಖವನ್ನು ಒರೆಸಿಕೊಳ್ಳಿ ಇದರಿಂದ ನಿಮ್ಮ ಮುಖದಲ್ಲಿ ಇರುವ ಕೊಳೆ ಹೋಗಿ ಚರ್ಮ ಶುದ್ಧವಾಗುತ್ತದೆ.
* ಮುಖ ಎಣ್ಣೆಯುಕ್ತ ಆಗಿದ್ದಲ್ಲಿ ಕಡಲೆ ಹಿಟ್ಟು ಮತ್ತು ಅರಿಶಿನದ ಫೇಸ್ ಪ್ಯಾಕ್ ಮಾಡಿ ಹಚ್ಚಿರಿ.
* ನಿಂಬೆಯ ರಸ ಹಾಗೂ ಕಿತ್ತಳೆ ಹಣ್ಣಿನ ರಸವನ್ನು ನೀವು ಮುಖಕ್ಕೆ ಹಚ್ಚಿ ಕೊಂಡರೆ ಅದರಲ್ಲಿರುವ ವಿಟಮಿನ್ ಸಿ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

* ತೆಂಗಿನ ಎಣ್ಣೆ ಮತ್ತು ಬೀಟ್ ರೂಟ್ ಜ್ಯೂಸ್ ಇಂದ ತುಟಿಗಳಿಗೆ ಮಸಾಜ್ ಮಾಡುವುದರಿಂದ ತುಟಿಗಳು ನೈಸರ್ಗಿಕವಾಗಿ ಕೆಂಪಾಗಿ ಇರುತ್ತದೆ.
* ತುಳಸಿ ಎಲೆಗಳ ರಸ ತೆಗೆದು ಮುಖಕ್ಕೆ ಹಚ್ಚಿದರೆ ಅದು ಮುಖದಲ್ಲಿನ ಹಲವಾರು ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.
* ಅಲೋವೆರಾ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿನ ಮೊಡವೆ, ಕಪ್ಪು ಕಲೆಗಳು ದೂರವಾಗುತ್ತದೆ.

* ಆದಷ್ಟು ನೀರು ಕುಡಿಯುವುದು ಕೂಡ ಮುಖದ ಕಾಂತಿಗೆ ಕಾರಣ. ಆದ್ದರಿಂದ ಸರಿಯಾಗಿ ನೀರನ್ನು ಕುಡಿಯಿರಿ.
* ಮುಖವನ್ನು ಅತಿಯಾಗಿ ಯಾವಾಗಲೂ ತೊಳೆಯುತ್ತ ಇರುವ ಅಭ್ಯಾಸ ಇದ್ದರೆ ಅದನ್ನು ಬದಲಾಯಿಸಿಕೊಳ್ಳಿ. ದಿನಕ್ಕೆ ಸ್ವಚ್ಛ ನೀರಿನಿಂದ 3 ಬಾರಿ ತೊಳೆದರೆ ಸಾಕು.
* ಶ್ರೀಗಂಧವನ್ನು ಹಾಲಿನೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಮಾಡಿ ಎರಡು ವಾರಕ್ಕೊಮ್ಮೆ ಹಚ್ಚಿಕೊಂಡು ಮುಖವನ್ನು ತೊಳೆಯಿರಿ.

* ವಾರದಲ್ಲಿ 2 ರಿಂದ 3 ಬಾರಿ ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿ ಕೊಳ್ಳಿ.
* ಸ್ವಲ್ಪ ಜೇನು ತುಪ್ಪಕ್ಕೆ ಸಕ್ಕರೆಯನ್ನು ಸೇರಿಸಿ ವಾರದಲ್ಲಿ ಒಮ್ಮೆ ಸ್ಕ್ರಬ್ ಮಾಡಿಕೊಳ್ಳಿ.
* ಎರಡು ಚಮಚ ಸಕ್ಕರೆಗೆ ನಾಲ್ಕು ಚಮಚ ನಿಂಬೆ ರಸವನ್ನು ಹಾಕಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ ನಂತರ ಮುಖವನ್ನು ನೀರಿನಿಂದ ತೊಳೆಯಿರಿ. ಇದು ಮುಖದಲ್ಲಿನ ಕಪ್ಪು ಕೊಳೆಯನ್ನು ತೆಗೆದು ಹಾಕುತ್ತದೆ.

* ನಿಂಬೆ ಮತ್ತು ತುಳಸಿ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಂಡು ತೊಳೆ ಯುವುದರಿಂದ ಮುಖ ಕಾಂತಿಯುಕ್ತವಾಗುತ್ತದೆ.
* ಆಲೂಗಡ್ಡೆಯ ರಸವನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ತೊಳೆದರೆ ಮುಖದಲ್ಲಿನ ಟ್ಯಾನ್ ಕಡಿಮೆಯಾಗುತ್ತದೆ.
* ಸ್ವಲ್ಪ ಕಾಫಿ ಪುಡಿ, ಸಕ್ಕರೆ, ಅಲೋವೆರಾ ಜ್ಯೂಸ್ ಇವುಗಳನ್ನು ಮಿಕ್ಸಿ ಮಾಡಿ ಪೇಸ್ಟ್ ಮಾಡಿಕೊಂಡು ವಾರದಲ್ಲಿ ಒಮ್ಮೆ ಸ್ಕ್ರಬ್ ಮಾಡಿಕೊಳ್ಳಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಈ ವಿಧಾನಗಳನ್ನು ನೀವು ಅನುಸರಿಸುವುದರಿಂದ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಮೊದಲಿಗಿಂತ ನಂತರ ಇನ್ನು ಹೆಚ್ಚಿನ ಸೌಂದರ್ಯವನ್ನು ಪಡೆದು ಕೊಳ್ಳುತ್ತೀರಿ ಎಂದೇ ಹೇಳಬಹುದು. ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಮುಖದ ಸೌಂದರ್ಯ ವನ್ನು ಕಾಪಾಡಿಕೊಳ್ಳುವುದಕ್ಕೆ ಮಾರುಕಟ್ಟೆಗಳಲ್ಲಿ ಸಿಗುವಂತಹ ಹಲವಾರು ಪದಾರ್ಥಗಳನ್ನು ತಂದು ಉಪಯೋಗಿಸುತ್ತಾರೆ.

ಆದರೆ ಅವುಗಳನ್ನು ಹಚ್ಚುವುದರಿಂದ ಕೆಲವೊಂದಷ್ಟು ಜನರಿಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಹಾಗೂ ಕೆಲವೊಂದಷ್ಟು ಜನರಿಗೆ ಹಲವಾರು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ ಆದ್ದರಿಂದ ಈ ವಿಧಾನಗಳನ್ನು ಅನುಸರಿಸುವುದರ ಬದಲು ನೈಸರ್ಗಿಕ ವಾಗಿ ನಮಗೆ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ.

ಮನೆಯಲ್ಲಿ ಈ ವಿಧಾನ ಅನುಸರಿಸುವುದರಿಂದ ಆರೋಗ್ಯಕರ ವಾದ ಸುಲಭವಾದಂತಹ ವಿಧಾನವನ್ನು ಅನುಸರಿಸುವುದರ ಮೂಲಕ ನಿಮ್ಮ ತ್ವಚೆಯ ಆರೋಗ್ಯವನ್ನು ನೀವೇ ಕಾಪಾಡಿ ಕೊಳ್ಳಬಹುದು. ಯಾವುದೇ ರೀತಿಯ ಹಣಕಾಸಿನ ಖರ್ಚು ಕೂಡ ಇರುವುದಿಲ್ಲ. ಆದ್ದ ರಿಂದ ಮೇಲೆ ಹೇಳಿದ ಈ ವಿಧಾನಗಳನ್ನು ವಾರಕ್ಕೆ ಒಮ್ಮೆಯಾದರೂ ಪ್ರಯತ್ನಿಸುವುದು ಒಳ್ಳೆಯದು.

https://youtu.be/TsGAdD9VBEo?si=-TaFKM72n46Pv02E

Leave a Comment

WhatsApp Group Join Now
Telegram Group Join Now