ದೇಶದ ಹಲವು ರಾಜ್ಯಗಳಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ಇದೆ, ಅದು ಮುಗಿಯುತ್ತಿದ್ದಂತೆ ಲೋಕಸಭಾ ಚುನಾವಣೆಯು (Lokasabha election-2023) ಕೂಡ ಅದರ ಬೆನ್ನೆಲೆ ಬರುತ್ತದೆ. ಹಾಗಾಗಿ ದೇಶದಾದ್ಯಂತ ಪಕ್ಷದ ಬಲವರ್ಧನೆ ಮಾಡಿಕೊಳ್ಳಲು ರಾಜಕೀಯ ಪಕ್ಷಗಳು ಸಾಕಷ್ಟು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿವೆ.
ಆದರೆ ಕೇಂದ್ರದಲ್ಲಿ ಈಗಾಗಲೇ ಎರಡು ಬಾರಿ ಅಧಿಕಾರ ಗೆದ್ದಿರುವ ಮೋದಿ ನೇತೃತ್ವದ NDA ಸರ್ಕಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ಜನಪರ ಯೋಜನೆಗಳನ್ನು ಜಾರಿಗೆ ತರುವ ಮುನ್ನ ಪರೋಕ್ಷವಾಗಿ ಮತ ಬೇಟೆಯಾಡುತ್ತಿದ್ದಾರೆ.
ಇದರ ಪ್ರಯುಕ್ತ ಕೆಲವು ವಿಶೇಷವಾದ ಯೋಜನೆಗಳ ಘೋಷಣೆಯಾಗಿದ್ದು ಗೃಹಿಣಿಯರು, ರೈತರು, ಸ್ವಂತ ಮನೆ ಕನಸು ಹೊಂದಿರುವವರು ಎಲ್ಲರನ್ನು ಅನ್ವಯಿಸಿ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ ಇವುಗಳ ವಿವರ ಇಲ್ಲಿದೆ ನೋಡಿ.
1. ಪ್ರಧಾನ ಮಂತ್ರಿ ಉಜ್ವಲ್ ಯೋಜನೆ (PMUY) ಫಲಾನುಭವಿಗಳಿಗೆ ಕೆಲ ತಿಂಗಳ ಹಿಂದೆ ಪ್ರತಿ ಬುಕ್ಕಿಂಗ್ ಮೇಲೆ 200 ರೂ. ಸಬ್ಸಿಡಿ ನೀಡಲಾಗಿತ್ತು. ಈಗ ಅದನ್ನು 300ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸಚಿವ ಸಂಪುಟದಲ್ಲಿಯೇ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗಿದೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕುರ್ ರವರೇ ಈ ಬಗ್ಗೆ ಮಾಹಿತಿ ಹಂಚಿ ಕೊಂಡಿದ್ದಾರೆ.
2. ಇದರೊಂದಿಗೆ ನಗರ ಭಾಗದಲ್ಲಿ ವಾಸಿಸುವವರಿಗೂ ಕೂಡ ಅತಿ ದೊಡ್ಡ ರಿಯಾಯಿತಿ ನೀಡಲು ಮುಂದಾಗಿರುವ ಪ್ರಧಾನಮಂತ್ರಿಗಳು ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ರೀತಿಯಲ್ಲಿಯೇ ಮತ್ತೊಂದು ಯೋಜನೆಯನ್ನು ಜಾರಿಗೆ ತರುವ ಸಿದ್ಧತೆ ಮಾಡಿಕೊಂಡಿದ್ದಾರೆ.
ಈ ಹೊಸ ಯೋಜನೆಯ ಪ್ರಕಾರ ಇನ್ನು ಮುಂದೆ ಯಾರಾದರೂ ನಗರ ಪ್ರದೇಶಗಳಲ್ಲಿ ವಾಸಕ್ಕಾಗಿ ಸ್ವಂತ ಮನೆ ಖರೀದಿಗೆ ಅಥವಾ ನಿರ್ಮಾಣಕ್ಕೆ ಸಾಲ ಪಡೆದುಕೊಂಡರೆ 50 ಲಕ್ಷದ ಸಾಲದ ವರೆಗೆ ವಾರ್ಷಿಕವಾಗಿ 3 ರಿಂದ 6% ವರೆಗೆ ಅವರಿಗೆ ಬಡ್ಡಿಯಲ್ಲಿ ಸಹಾಯಧನ ಸಿಗಲಿದೆ ಈ ರೀತಿಯ ಯೋಚನೆಯು ಶೀಘ್ರದಲ್ಲೇ ಜಾರಿಯಾಗಲು ಸಿದ್ಧವಾಗಿದೆ.
3. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಂತ ಉದ್ಯೋಗ ಆರಂಭಿಸುವವರಿಗೆ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದು ಸಹಾಯ ಮಾಡಿದ್ದಾರೆ. ಈಗ ಪ್ರಧಾನ ಮಂತ್ರಿ ಸ್ವನಿಧಿ (PM Swanidhi Scheme) ಯೋಜನೆ ಎನ್ನುವ ಹೆಸರಿನಲ್ಲಿ ದೇಶದ ಯುವಜನತೆಗೆ ನೆರವಾಗುತ್ತಿದ್ದಾರೆ.
ಈ ಯೋಜನೆಯಲ್ಲಿ ಪ್ರಯೋಜನ ಪಡೆದು ಸ್ವಂತ ಬಿಸಿನೆಸ್ ಆರಂಭಿಸುವ ಫಲಾನುಭವಿಗಳು 50,000ದವರೆಗೆ 0% ಪಡ್ಡಿದರದಲ್ಲಿ ಸಾಲ ಪಡೆಯುವುದು, ಇದರಲ್ಲಿ 25 ಸಾವಿರ ಸಬ್ಸಿಡಿ ಇರುತ್ತದೆ. ಅತಿ ಕಡಿಮೆ ಕಾಗದ ಪತ್ರಗಳಲ್ಲಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಕೇಳಲಾಗುವ ದಾಖಲೆಗಳನ್ನು ಸಲ್ಲಿಸಿ ಅರ್ಹರು ಸಾಲ ಪಡೆದು ತಮ್ಮ ಬಿಸಿನೆಸ್ ಕನಸು ನನಸು ಮಾಡಿಕೊಳ್ಳಬಹುದು.
4. ರೈತರ ಬಗ್ಗೆ ಕೂಡ ಅಪಾರವಾದ ಕಾಳಜಿ ಹೊಂದಿರುವ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (PMKSY) ಯೋಜನೆಯಡಿ ನೀಡುತ್ತಿರುವ ವಾರ್ಷಿಕ 6,000ರೂ. ಸಹಾಯಧನವನ್ನು 8,000ರೂ. ಗೆ ಹೆಚ್ಚಿಸಲು ನಿರ್ಧರಿಸಿದೆ ಎನ್ನುವ ಮಾಹಿತಿ ಕೂಡ ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಈ ಯೋಜನೆ ಜಾರಿಗೆ ತಂದಿದ್ದರು, ಈವರೆಗೆ 14 ಕಂತುಗಳು ಯಶಸ್ವಿಯಾಗಿ ಅರ್ಹ ಫಲಾನುಭವಿಗಳಿಗೆ ತಲುಪಿದೆ, 15ನೇ ನಿರೀಕ್ಷೆಯಲ್ಲಿರುವ ರೈತರಿಗೆ ಈ ರೀತಿ ಸಿಹಿ ಸುದ್ದಿ ಕೊಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.