ನಾವೆಲ್ಲರೂ ಕೂಡ ಮನೆಯಲ್ಲಿ ಉಪಯೋಗಿಸುವಂತಹ ಕೆಲವೊಂದು ಪದಾರ್ಥಗಳನ್ನು ಕೆಲಸಕ್ಕೆ ಬರುವುದಿಲ್ಲ ಎಂದು ಆಚೆ ಹಾಕುತ್ತಿರುತ್ತೇವೆ. ಆದರೆ ಇನ್ನು ಮುಂದೆ ಅದನ್ನು ಬಿಸಾಡುವ ಅವಶ್ಯಕತೆ ಇರುವುದಿಲ್ಲ. ಹೌದು ಅದನ್ನು ಸಹ ಮತ್ತೆ ಪುನರ್ ಬಳಕೆ ಮಾಡಿಕೊಳ್ಳ ಬಹುದು. ಹಾಗಾದರೆ ಯಾವ ಕೆಲವು ಪದಾರ್ಥಗಳನ್ನು ನಾವು ಎಸೆಯುತ್ತೇವೆ.
ಹಾಗೂ ಅದನ್ನು ನಾವು ಮತ್ತೆ ಹೇಗೆ ಉಪಯೋಗಿಸಿಕೊಳ್ಳುವುದರಿಂದ ಯಾವ ಕೆಲಸಕ್ಕೆ ಅದು ಅನುಕೂಲವಾಗುತ್ತದೆ ಹಾಗೂ ಅಡುಗೆಮನೆಯ ವಿಚಾರವಾಗಿ ಯಾವ ಕೆಲವು ಟಿಪ್ಸ್ ಗಳನ್ನು ನಾವು ಅನುಸರಿಸಬಹುದು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
* ಮೊದಲನೆಯದಾಗಿ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಈರುಳ್ಳಿಯನ್ನು ಬಳಸುತ್ತೇವೆ. ಈರುಳ್ಳಿ ಸಿಪ್ಪೆಯನ್ನು ಆಚೆ ಹಾಕುತ್ತೇವೆ. ಆದರೆ ಈ ಒಂದು ಕೆಲಸ ಮಾಡಿದರೆ ನೀವು ಇನ್ನು ಮುಂದೆ ಈರುಳ್ಳಿ ಸಿಪ್ಪೆಯನ್ನು ಆಚೆ ಹಾಕುವುದಿಲ್ಲ. ಅದು ತುಂಬಾ ಒಳ್ಳೆಯ ಕೆಲಸಕ್ಕೆ ಬರುತ್ತದೆ ಎಂದು ಹೇಳಬಹುದು.
ಹೌದು ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟು ಅದಕ್ಕೆ ಈರುಳ್ಳಿ ಸಿಪ್ಪೆ ಹಾಗೂ ಸ್ವಲ್ಪ ಕರಿಬೇವಿನ ಎಲೆ ಇಷ್ಟನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಆನಂತರ ಅದನ್ನು ಶೋಧಿಸಿ ಆ ನೀರನ್ನು ನಮ್ಮ ತಲೆಗೆ ಹಾಕುವುದರಿಂದ ಇದು ಒಂದು ಟೋನರ್ ರೀತಿ ಕೆಲಸ ಮಾಡುತ್ತದೆ. ತಲೆಯಲ್ಲಿ ಡ್ಯಾಂಡ್ರಫ್, ಹಾಗೂ ತಲೆಯಲ್ಲಿ ನವೆ ಈ ರೀತಿಯ ಸಮಸ್ಯೆ ಇದ್ದರೆ ಅಂತವರು ಈ ನೀರನ್ನು ತಲೆಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತಲೆಸ್ನಾನ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ನೀರನ್ನು ನೀವು ವಾರಕ್ಕೆ ಒಮ್ಮೆ ಮಾಡಿ ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳ ಬಹುದು.
* ನಾವು ತರಕಾರಿ ಕತ್ತರಿಸುವಂತಹ ಚಾಪಿಂಗ್ ಬೋರ್ಡ್ ಸಾಮಾನ್ಯ ವಾಗಿ ತರಕಾರಿಗಳ ಕೊಳೆ ಹೀಗೆ ಕೆಲವೊಂದು ಕಲೆಗಳು ಕೂಡ ಅದರಲ್ಲಿ ಇರುತ್ತದೆ. ಆದರೆ ಅದನ್ನು ನಾವು ತೊಳೆಯದೆ ಹಾಗೆಯೇ ಪದೇಪದೇ ಉಪಯೋಗಿಸಬಾರದು ಬದಲಿಗೆ ಅದರ ಮೇಲೆ ಸ್ವಲ್ಪ ಅಡುಗೆ ಸೋಡಾ ಹಾಕಿ ಅದರಲ್ಲಿ ವಿನಿಗರ್ ಅಥವಾ ನಿಂಬೆಹಣ್ಣಿನ ರಸ ಹಾಕಿ ಉಜ್ಜಿ ತೊಳೆದರೆ ಸಾಕು.
ಅದರಲ್ಲಿ ಇರುವಂತಹ ಎಲ್ಲಾ ಕಲೆಗಳು ಮತ್ತು ಯಾವುದೇ ತರಕಾರಿ ಕಲೆ ಎಲ್ಲವೂ ಕೂಡ ಸಂಪೂರ್ಣವಾಗಿ ಹೋಗುತ್ತದೆ. ಹಾಗೂ ಯಾವುದೇ ರೀತಿಯ ಕಸ ಧೂಳು ಇದ್ದರೂ ಕೂಡ ಅವೆಲ್ಲವೂ ಸಂಪೂರ್ಣವಾಗಿ ಹೋಗುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಕೂಡ ನೀರನ್ನು ಫಿಲ್ಟರ್ ನಿಂದ ತರುತ್ತೇವೆ ಆದರೆ ಅದೇ ಕ್ಯಾನ್ ಪದೇ ಪದೇ ಉಪಯೋಗಿಸುವುದರಿಂದ ಕ್ಯಾನ್ ಒಳಗಡೆ ಒಂದು ರೀತಿಯ ಕೊಳೆ ಇರುತ್ತದೆ.
ಅದನ್ನು ಕೈ ಹಾಕಿ ತೊಳೆಯಲು ಸಾಧ್ಯವಾಗುವುದಿಲ್ಲ ಅಂತಹ ಸಮಯದಲ್ಲಿ ಆ ಬಾಟಲ್ ಒಳಗಡೆ ಒಂದು ಚಮಚ ಅಡುಗೆ ಸೋಡಾ ಹಾಗೂ ಎರಡರಿಂದ ಮೂರು ಚಮಚ ಅಕ್ಕಿ ಇಷ್ಟನ್ನು ಹಾಕಿ ಚೆನ್ನಾಗಿ ಕುಲುಕಬೇಕು. ಹೌದು ಅಕ್ಕಿಯು ಒಂದು ರೀತಿಯ ಸ್ಕ್ರಬ್ಬರ್ ಆಗಿ ಕೆಲಸ ಮಾಡುತ್ತದೆ ಹಾಗೂ ಅಡುಗೆ ಸೋಡಾ ಒಳಗಡೆ ಇರುವಂತಹ ಎಲ್ಲಾ ಕೊಳೆಯನ್ನು ತೆಗೆಯುತ್ತದೆ.
ಈ ಒಂದು ವಿಧಾನ ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹೌದು ಸುಮ್ಮನೆ ನೀರಿನಿಂದ ತೊಳೆಯುವುದರ ಬದಲು ಈ ವಿಧಾನ ಅನುಸರಿಸುವುದ ರಿಂದ ಆ ಒಂದು ಕ್ಯಾನ್ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.