ಕೆಲವು ಹೆಣ್ಣು ಮಕ್ಕಳೇ ಹಾಗೆ ತಾವು ಇದ್ದ ಮನೆಗೂ ಕೂಡ ಅದೃಷ್ಟವನ್ನು ತರುತ್ತಾರೆ ಮತ್ತು ಮದುವೆಯಾಗಿ ಹೋಗುವ ಮನೆಗೆ ಕೂಡ ತುಂಬಾನೇ ಅದೃಷ್ಟವನ್ನು ತರುತ್ತಾರೆ. ಹೌದು ಆ ಒಂದು ಸಾಲಿನಲ್ಲಿ ಈ ರಾಶಿಯ ಹೆಣ್ಣು ಮಕ್ಕಳು ತುಂಬಾನೇ ಅದೃಷ್ಟವಂತರು ಅಂತಾನೆ ಹೇಳಬಹುದು ಇವರು ಮದುವೆಯಾಗಿ ಹೋಗುವ ಮನೆಗೆ ಕೂಡ ತುಂಬಾನೇ ಅದೃಷ್ಟವನ್ನು ತರುತ್ತಾರೆ.
ಹೌದು ಇವರು ಮದುವೆಯಾಗಿ ಸೊಸೆಯಾಗಿ ಹೋಗುವ ಮನೆ ತುಂಬಾನೇ ಅದೃಷ್ಟದಿಂದ ಕೂಡಿರುತ್ತದೆ. ಹಾಗಾದರೆ ಎಲ್ಲಾ ಅದೃಷ್ಟವನ್ನು ಕೊಡುವಂತಹ ಆ ಅದೃಷ್ಟವಂತ ರಾಶಿಗಳು ಯಾವುವು, ಹಾಗೂ ಅವರು ಹೋಗುವಂತಹ ಮನೆಗೆ ಯಾವುದೆಲ್ಲ ರೀತಿಯ ಒಳ್ಳೆಯ ಬದಲಾವಣೆಗಳು ಆಗುತ್ತದೆ ಎಂಬುದನ್ನು ಈ ದಿನ ತಿಳಿಯೋಣ.
* ಮೊದಲನೆಯದಾಗಿ ಮೇಷ ರಾಶಿ :- ಮೇಷ ರಾಶಿ ಹುಡುಗಿಯರು ತುಂಬಾನೇ ಶ್ರೇಷ್ಠವಾದ ಮನಸ್ಸನ್ನು ಹೊಂದಿರುತ್ತಾರೆ. ಮತ್ತು ಈ ಒಂದು ರಾಶಿಯ ಅಧಿಪತಿ ಮಂಗಳ ಹಾಗೂ ಈ ರಾಶಿಗೆ ಸೇರಿದ ಹುಡುಗಿಯರು ತುಂಬಾನೇ ಮೌನವಾಗಿರುತ್ತಾರೆ. ಹಾಗಂತ ಅವರು ಸುಮ್ಮನಿರುವುದಿಲ್ಲ ಮೌನವಾಗಿದ್ದರು ಕೂಡ ತಮ್ಮ ಗುರಿಯನ್ನು ಸಾಧಿಸಲು ಏನೇನು ಪ್ರಯತ್ನ ಬೇಕೋ ಅದನ್ನು ಮಾಡುತ್ತಿರುತ್ತಾರೆ.
* ಎರಡನೆಯದಾಗಿ ಸಿಂಹ ರಾಶಿ :- ಸಿಂಹ ರಾಶಿಯ ಹುಡುಗಿಯರು ಕೂಡ ತುಂಬಾನೇ ನಿರ್ಭಯರು ಅವರು ಯಾವುದೇ ಒಂದು ಕೆಲಸವ ನ್ನು ತುಂಬಾ ಕಾತುರವಿಲ್ಲದೆ ತುಂಬಾ ನಿಧಾನವಾಗಿ ಮಾಡುತ್ತಾರೆ ಅವರು ಮಾಡುವoತಹ ಕೆಲಸ ತುಂಬಾನೇ ಪರ್ಫೆಕ್ಟ್ ಆಗಿರುವಂತೆ ಮಾಡುತ್ತಾರೆ ಮತ್ತು ಇವರು ನೋಡಲು ತುಂಬಾನೇ ಮುಗ್ಧರಾಗಿರುತ್ತಾರೆ.
ನೋಡಲು ಮುಗ್ಧರಾಗಿದ್ದರು ಕೂಡ ತುಂಬಾ ಅದ್ಭುತವಾದ ಪ್ರತಿಭೆಯನ್ನು ಇವರು ಹೊಂದಿರುತ್ತಾರೆ ಮತ್ತು ಸಮಯ ಸಂದರ್ಭ ಬಂದಾಗ ಅವರ ಒಂದು ಪ್ರತಿಭೆಯನ್ನು ಇವರು ಹೊರ ಸೂಸುತ್ತಾರೆ ಮತ್ತು ಅವರಿಗೆ ತುಂಬಾನೇ ಕೋಪ ಬೇಗ ಬರುತ್ತದೆ.
* ಮೂರನೇಯದಾಗಿ ಧನಸ್ಸು ರಾಶಿ :- ಧನಸ್ಸು ರಾಶಿಯ ಹುಡುಗಿ ಯರು ಕೂಡ ಅಧ್ಯಯನದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾರೆ. ಮತ್ತು ಅವರಿಗೆ ಪ್ರತಿಯೊಂದು ವಿಷಯದ ಬಗ್ಗೆ ತಿಳುವಳಿಕೆ ಇರುತ್ತದೆ. ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ವಿಮರ್ಶೆ ಮಾಡಿಯೇ ಮಾತನಾಡುತ್ತಾರೆ ಮತ್ತು ಇವರು ಗಣಿತ ಶಾಸ್ತ್ರದಲ್ಲಿ ತುಂಬಾನೇ ಪ್ರವೀಣರು ಆಗಿರುತ್ತಾರೆ ಈ ಒಂದು ರಾಶಿಯ ಅಧಿಪತಿ ಗುರು ಆದ್ದರಿಂದ ಅವರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸ್ಥಾನ ಮಾನವನ್ನು ಕೂಡ ಪಡೆಯುತ್ತಾರೆ.
* ಇನ್ನು ಮಕರ ರಾಶಿ :- ಮಕರ ರಾಶಿಯ ಹುಡುಗಿಯರು ಇವರ ಅಧಿ ಪತಿ ಶನಿ ಎಂದು ಹೇಳಬಹುದು. ಶನಿ ಗ್ರಹವು ಶ್ರಮಕ್ಕೆ ಕಾರಣವೆಂದೇ ಪರಿಗಣಿಸಲಾಗಿದೆ. ಹೌದು ಹೆಚ್ಚಿನ ಯಾವುದೇ ಕೆಲಸ ಮಾಡುವಾಗ ತುಂಬಾನೇ ಶ್ರಮ ಪಟ್ಟು ಕೆಲಸವನ್ನು ಮಾಡುತ್ತಾರೆ. ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮಾಡುವುದಿಲ್ಲ. ಮತ್ತು ಇವರು ಜೀವನದಲ್ಲಿ ಅನೇಕ ಯಶಸ್ಸನ್ನು ಸಾಧಿಸುತ್ತಾರೆ ತಮ್ಮ ಗಂಡನಿಗೆ ಅದೃಷ್ಟವನ್ನು ತರುತ್ತಾರೆ.
ಈ ಮೇಲೆ ಹೇಳಿದ ಇಷ್ಟು ರಾಶಿಯವರು ಕೂಡ ತಮ್ಮ ಹುಟ್ಟಿದ ಮನೆಗಿಂತ ಹೋದ ಮನೆ ಅಂದರೆ ಗಂಡನ ಮನೆಗೆ ಹೆಚ್ಚು ಅದೃಷ್ಟವನ್ನು ತರುತ್ತಾರೆ ಎಂದೇ ಹೇಳಬಹುದು. ನಮ್ಮ ಹಿಂದೂ ಸಂಪ್ರದಾಯದಲ್ಲಿ ಯಾವುದೇ ವಿವಾಹ ಕಾರ್ಯಕ್ರಮ ನಡೆಯುತ್ತಿದ್ದರೆ ಅಲ್ಲಿ ಹೆಣ್ಣು ಮತ್ತು ಗಂಡಿನ ಸಂಪೂರ್ಣವಾದಂತಹ ವಿಚಾರದ ಬಗ್ಗೆ ಅಂದರೆ ಅವರ ಜಾತಕದ ಆಧಾರದ ಮೇಲೆ ಇಬ್ಬರ ಮದುವೆಯನ್ನು ಒಪ್ಪಿಗೆ ಮಾಡಿ ವಿವಾಹ ನಡೆಸುತ್ತಾರೆ. ಇದು ಬಹಳ ಹಿಂದಿನ ದಿನದಿಂದಲೂ ಕೂಡ ಬಂದಂತಹ ವಿಚಾರವಾಗಿದ್ದು ಈಗಲೂ ಕೂಡ ಈ ವಿಧಾನಗಳನ್ನು ಅನುಸರಿಸಲಾಗುತ್ತದೆ.