ನಾವೆಲ್ಲ ಮನುಷ್ಯರು ನಮ್ಮ ಜೀವನಪರ್ಯಂತ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬಾರದಂತೆ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ಎಂದು ಆಲೋಚನೆ ಮಾಡುವುದಿಲ್ಲ. ಬದಲಿಗೆ ಕ್ಷಣ ಮಾತ್ರಕ್ಕೆ ಯಾವ ವಿಧಾನ ಸರಿ ಇರುತ್ತದೆಯೋ ಅಂತಹ ವಿಧಾನಗಳನ್ನು ಅನುಸರಿಸುವುದರ ಮೂಲಕ ನಾವು ನಮ್ಮ ಜೀವನವನ್ನು ನಡೆಸುತ್ತೇವೆ.
ಆದರೆ ಈ ರೀತಿ ನಡೆಸುವುದರಿಂದ ನಮ್ಮ ಜೀವನ ಪರ್ಯಂತ ಒಂದಲ್ಲ ಒಂದು ಸಮಸ್ಯೆಗಳನ್ನು ನಾವು ಎದುರಿಸುತ್ತಿರುತ್ತೇವೆ ಎಂದು ಹೇಳಬ ಹುದು ಹೌದು ಅದು ನಮ್ಮ ಪ್ರತಿಯೊಂದು ವಿಚಾರಕ್ಕೂ ಕೂಡ ಸಂಬಂಧಿ ಸಿದೆ ಅದರಲ್ಲೂ ಬಹಳ ಮುಖ್ಯವಾಗಿ ನಮ್ಮ ಆರೋಗ್ಯದ ವಿಚಾರವಾಗಿ ಯಾವ ಕೆಲವು ಉತ್ತಮ ವಿಧಾನಗಳನ್ನು ಅನುಸರಿಸಬೇಕು ಎಂದು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಆದರೆ ನಮ್ಮ ಸುತ್ತಮುತ್ತ ಇರುವಂತಹ ಪಕ್ಷಿಗಳು ತಮ್ಮ ಜೀವನ ಪರ್ಯಂತ ಯಾವ ರೀತಿಯಾಗಿ ಬದುಕುತ್ತವೆ ಹಾಗೂ ಅವು ಹೇಗೆ ಜೀವನ ನಡೆಸುತ್ತವೆ ಎನ್ನುವುದನ್ನು ತಿಳಿದುಕೊಂಡರೆ ನಾವು ಕೂಡ ಏನಾದರೂ ನಮ್ಮ ಜೀವನ ಕ್ರಮದಲ್ಲಿ ಕೆಲವೊಂದು ಇಂತಹ ಒಳ್ಳೆಯ ಬದಲಾವಣೆಯನ್ನು ಮಾಡಿಕೊಂಡಿದ್ದೇನೆ ಆದಲ್ಲಿ ನಮಗೆ ಯಾವುದೇ ರೀತಿಯ ರೋಗಗಳು ಕೂಡ ಬರುವುದಿಲ್ಲ.
ಜೀವನಪರ್ಯಂತ ನಾವು ಸುಖವಾಗಿ ಸಂತೋಷವಾಗಿ ಆರೋಗ್ಯವಾಗಿ ಇರಬಹುದು ಎಂದೇ ಹೇಳಬಹುದು. ಹಾಗಾದರೆ ಈ ದಿನ ಒಬ್ಬ ಮನುಷ್ಯ ಯಾವುದೇ ರೋಗ ಇಲ್ಲದೆ ಅವನು ಇರುವ ತನಕ ಆರೋಗ್ಯವಾಗಿ ಇರಬೇಕು ಎಂದರೆ ಯಾವ ಕೆಲವು ವಿಷಯಗಳನ್ನು ತಿಳಿದುಕೊಂಡಿರಬೇಕು ಹಾಗೂ ಅವನ್ನು ಯಾವ ರೀತಿಯ ಜೀವನಶೈಲಿಯನ್ನು ಅನುಸರಿಸಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
ಒಬ್ಬ ಮನುಷ್ಯನ ಜೀವನದಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲದೆ ನೆಮ್ಮದಿಯ ಜೀವನ ನಡೆಸಬೇಕು ಎಂದರೆ ಅವನು ಮೊದಲು ಎಲ್ಲಾ ಆಸೆ ದುರಾಸೆಗಳನ್ನು ಕೂಡ ಬಿಡಬೇಕು. ಹೌದು ಹೆಚ್ಚಿನ ಹಣಕಾಸು ಇದ್ದರೆ ನನಗೆ ನೆಮ್ಮದಿ ಸಿಗುತ್ತದೆ ಎನ್ನುವ ಉದ್ದೇಶದಿಂದ ಹಲವಾರು ರೀತಿಯ ತೊಂದರೆಗಳನ್ನು ತಂದುಕೊಳ್ಳುವುದರಿಂದ ಆ ವ್ಯಕ್ತಿ ಜೀವನ ಪರ್ಯಂತ ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ.
ಬದಲಿಗೆ ಯಾವ ವಿಧಾನದ ಮೂಲಕ ಹೇಗೆ ಹಣವನ್ನು ಸಂಪಾದನೆ ಮಾಡಬೇಕು ಏನು ಮಾಡಬೇಕು ಹೀಗೆ ಅಂತಹ ಕೆಟ್ಟ ಆಲೋಚನೆಯಲ್ಲಿಯೇ ಅವನ ಮನಸ್ಸು ಇರುತ್ತದೆ ಬದಲಿಗೆ ನಾನು ಮಾಡುತ್ತಿರುವಂತಹ ಕಾಯಕಕ್ಕೆ ಎಷ್ಟು ಹಣ ಬರುತ್ತದೆಯೋ ಅಷ್ಟರಲ್ಲಿ ನಾನು ನೆಮ್ಮದಿಯ ಜೀವನವನ್ನು ನಡೆಸಬೇಕು ಎಂದು ಒಬ್ಬ ವ್ಯಕ್ತಿ ಆಲೋಚನೆ ಮಾಡುವುದಿಲ್ಲ.
ಬದಲಿಗೆ ಬೆಳಗ್ಗೆ ಎದ್ದ ತಕ್ಷಣದಿಂದ ರಾತ್ರಿ ಮಲಗುವವರೆಗೂ ಕೂಡ ಹಣಕಾಸು ಹಣ ಎನ್ನುವ ಆಲೋಚನೆಯಲ್ಲಿಯೇ ಇರುತ್ತಾನೆ. ಆದರೆ ನಮ್ಮ ಸುತ್ತಮುತ್ತ ಇರುವಂತಹ ಪ್ರಾಣಿ ಪಕ್ಷಿಗಳು ಯಾವುದೇ ರೀತಿಯ ಹಣಕ್ಕಾಗಿ ಹಾತೊರೆಯುವುದಿಲ್ಲ. ಉದಾಹರಣೆಗೆ ಒಂದು ಕಾಗೆ ಎಲ್ಲಾ ದರೂ ಸ್ವಲ್ಪ ಆಹಾರವನ್ನು ಕಂಡರೂ ಕೂಡ ತಾನು ಶಬ್ದ ಮಾಡುತ್ತಾ ಉಳಿದ ಕಾಗೆಗಳನ್ನು ಕೂಡ ತನ್ನ ಬಳಿ ಕರೆತರುತ್ತದೆ.
ಆದರೆ ಒಬ್ಬ ಮನುಷ್ಯ ಎಲ್ಲಾದರೂ ಒಂದು ಲಾಭ ಸಿಗುತ್ತದೆ ಎಂದರೆ ಅದನ್ನು ಯಾರಿಗೂ ಕೂಡ ಹೇಳುವುದಿಲ್ಲ ಬದಲಿಗೆ ನಾನೊಬ್ಬನೇ ಅದನ್ನು ಪಡೆದುಕೊಳ್ಳಬೇಕು ಎಂಬ ದುರಾಲೋಚನೆ ಅವನಲ್ಲಿ ಇರುತ್ತದೆ. ಇದರಿಂದ ಆ ವ್ಯಕ್ತಿ ತನ್ನ ಜೀವನಪರ್ಯಂತ ಇಂತಹ ಕೆಟ್ಟ ಆಲೋಚನೆ ಯಲ್ಲಿಯೇ ಇರುತ್ತಾನೆ ಹೊರತು ಒಳ್ಳೆಯದರ ಕಡೆ ಹೆಚ್ಚು ಚಿಂತೆ ಮಾಡುವುದಿಲ್ಲ. ಆದ್ದರಿಂದ ಅವನಿಗೆ 108 ಕಾಯಿಲೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.