Home Useful Information ಕೂದಲು ಉದ್ದ ಮತ್ತು ದಪ್ಪ ಆಗಲು ಟಿಪ್ಸ್..!

ಕೂದಲು ಉದ್ದ ಮತ್ತು ದಪ್ಪ ಆಗಲು ಟಿಪ್ಸ್..!

0
ಕೂದಲು ಉದ್ದ ಮತ್ತು ದಪ್ಪ ಆಗಲು ಟಿಪ್ಸ್..!

 

* ತಲೆಗೆ ಅಭ್ಯಂಜನ ಸ್ನಾನ ಮಾಡುವುದರಿಂದ ತಲೆ ಕೂದಲು ಸಂಪಾಗಿ ಬೆಳೆಯುವುದಲ್ಲದೆ ತಲೆ ಮತ್ತು ಮೆದುಳಿಗೂ ಒಳ್ಳೆಯದು.
* ನಿಮ್ಮ ಕೂದಲಿಗೆ ಸ್ವಲ್ಪ ನಿಂಬೆಹಣ್ಣನ್ನು ಹಚ್ಚಿ ಅರ್ಧ ಗಂಟೆ ಸೀಗೆಪುಡಿ ಹಚ್ಚಿ ತಿಕ್ಕಿ ಸ್ನಾನ ಮಾಡಿ ನಿಮ್ಮ ಕೂದಲು ಫಳ ಫಳನೆ ಹೊಳೆಯುತ್ತಾ ಸುಂದರವಾಗಿ ಕಾಣಿಸುತ್ತದೆ.
* ತಲೆ ಕೂದಲು ಹಸಿಯಾಗಿರುವಾಗ ಬಾಚಬಾರದು ನಿತ್ಯದಲ್ಲಿ ತಲೆ ಯನ್ನು ಎರಡು ಬಾರಿ ಬಾಚಿಕೊಳ್ಳಿ, ತೊಡಕಾಗಿರುವ ಕೂದಲುಗಳನ್ನು ಕೈಬೆರಳಿನಿಂದ ನಿಧಾನವಾಗಿ ಬಿಡಿಸಿ ಕೂದಲನ್ನು ಕೀಳಬೇಡಿ.

* ತಲೆಯಲ್ಲಿ ಹೊಟ್ಟು ಹೆಚ್ಚಾಗಿದ್ದರೆ ಹುಣಸೆ ನೀರಿಗೆ ಸ್ವಲ್ಪ ಬೆಲ್ಲದ ಪುಡಿ ಸೇರಿಸಿ ಕುದಿಸಿ ತಲೆಗೆ ಹಚ್ಚಿ ಸ್ನಾನ ಮಾಡಿ ಹೀಗೆ ಮಾಡುವುದರಿಂದ ಹೊಟ್ಟು ನಿವಾರಣೆಯಾಗುವುದು.
* ಕೇಶದ ತುದಿಗಳು ಸೀಳಿದರೆ ತುದಿಯನ್ನು ಕತ್ತರಿಸಿ ಇತರ ಉಪಚಾರ ವನ್ನು ಮಾಡಿರಿ ಕೇವಲ ತುದಿ ಸೀಳಿದಾಗ ಕತ್ತರಿಸುವ ಪರಿಪಾಠವನ್ನು ಮಾಡಿಕೊಳ್ಳಬೇಡಿ.

* ಕಡಲೆ ಹಿಟು, ಮತ್ತು ಮೊಸರು ಇವುಗಳನ್ನು ಸೇರಿಸಿ ತಲೆಕೂದಲನ್ನು ತೊಳೆಯಿರಿ ಈ ರೀತಿ ಮಾಡುವುದರಿಂದ ನಿಮ್ಮ ಕೂದಲಿನ ಕಾಂತಿ ಹೆಚ್ಚುತ್ತದೆ.
* ಅರ್ಧ ತೆಂಗಿನಕಾಯಿಯನ್ನು ತುರಿಯಿರಿ ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕಲಸಿ ಸೋಸಿ ಹಾಲು ಮತ್ತು ನಿಂಬೆ ಹಣ್ಣಿನ ರಸ ಸೇರಿಸಿ ನಂತರ ಇದನ್ನು ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿರಿ. ತುಸು ಸಮಯದ ನಂತರ ತಲೆ ಸ್ನಾನ ಮಾಡಿರಿ.ಇದರಿಂದ ಉದುರುವ ಕೂದಲು ನಿಲ್ಲುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯುತ್ತದೆ.

* ತಲೆ ಕೂದಲು ಗಟ್ಟಿಯಾಗಿ ನೆಲೆಯೂರಲು ತಲೆಯನ್ನು ನಿತ್ಯವೂ ಮಸಾಜ್ ಮಾಡಬೇಕು.
* ಇದು ಒಂದು ರೀತಿಯ ವ್ಯಾಯಾಮ. ಈ ರೀತಿ ಮಾಡುವುದರಿಂದ ಕೂದಲಿನ ಬೇರಿಗೆ ರಕ್ತ ಸರಳವಾಗಿ ಹರಿಯುತ್ತದೆ.
* ನಿತ್ಯ ಉಪಯೋಗಿಸುವ ಬಾಚಣಿಕೆಯನ್ನು ಹಳೆಯ ಹಲ್ಲು ತಿಕ್ಕುವ ಬ್ರಷ್ ನಿಂದ ಶುಚಿಗೊಳಿಸಿ ನಂತರ ಶಾಂಪೂದಿಂದ ಬೆಚ್ಚಗಿನ ನೀರಿನಿಂದ ತೊಳೆಯಿರಿ.

* ಒಡೆದ ಹಾಲನ್ನು ಚೆಲ್ಲದೆ ಇದರ ನೀರನ್ನು ಕೂದಲನ್ನು ತೊಳೆಯಲು ಬಳಸಿ ಇದು ಒಂದು ಪ್ರೋಟೀನ್ ಯುಕ್ತ ಉತ್ತಮವಾದ ಕೂದಲನ್ನು ತೊಳೆಯುವ ವಿಧಾನವಾಗಿದೆ.
* ಬಳಸದೆ ಇರುವ ಒಣಗಿದ ಕರಿಬೇವು ನೆಲ್ಲಿಕಾಯಿ ಮುಂತಾದವು ಗಳನ್ನು ಎಸೆಯದೆ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಾಯಿಸಿ ಆರಿಸಿ ದಿನನಿತ್ಯ ಬಳಸಿ ಕೂದಲು ಸೊಂಪಾಗಿ ಬೆಳೆಯುತ್ತದೆ.

* ಒಂದು ಲೋಟ ಬಿಸಿ ನೀರಿನಲ್ಲಿ ಹಿಡಿಯಷ್ಟು ತುಳಸಿ ಎಲೆಯನ್ನು ಹಾಕಿ ಕುದಿಸಿ ಇದಕ್ಕೆ ಎರಡು ಚಮಚ ಚಹಾದ ಸೊಪ್ಪನ್ನು ಹಾಕಿ ಪುನಃ ಎರಡು ಮೂರು ನಿಮಿಷ ಕುದಿಸಿ. ನಂತರ ಶೋಧಿಸಿ ಈ ತಯಾರಿಕೆಯನ್ನು ಕೂದಲಿಗೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡಿರಿ.

* ಬೆಣ್ಣೆ ಹಣ್ಣು ಇದರಲ್ಲಿ ಆರೋಗ್ಯಕರ ಕೊಬ್ಬಿನ ಅಂಶವಿದೆ ಹಾಗೂ ಕೂದಲಿಗೆ ಅಗತ್ಯವಾದ ವಿಟಮಿನ್ ಇದ್ದು 200 ಗ್ರಾo ಬೆಣ್ಣೆ ಹಣ್ಣು ತಿನ್ನುವುದರಿಂದ ಕೂದಲು ಆರೋಗ್ಯವಾಗಿ ಬೆಳೆಯುವುದು.
ಹೀಗೆ ಮೇಲೆ ಹೇಳಿದ ಇಷ್ಟು ವಿಧಾನಗಳು ಕೂಡ ಕೂದಲು ಉದ್ದವಾಗಿ ಬೆಳೆಯಲು ಪ್ರಮುಖವಾದಂತಹ ವಿಧಾನಗಳಾಗಿವೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಮೇಲೆ ಹೇಳಿದ ಎಲ್ಲಾ ವಿಧಾನಗಳನ್ನು ಅನುಸರಿಸುವುದು ತುಂಬಾ ಮುಖ್ಯ.

ಅದರಲ್ಲೂ ನೀವು ತಲೆ ಸ್ನಾನ ಮಾಡಿರುವ ಸಮಯದಲ್ಲಿ ಯಾವ ಕೆಲಸಗಳನ್ನು ಅನುಸರಿಸಬೇಕು ಎನ್ನುವಂತಹ ಮಾಹಿತಿಯನ್ನು ಸಹ ಮೇಲೆ ತಿಳಿಸಿದೆ. ಅವುಗಳನ್ನು ಅನುಸರಿಸುವುದರಿಂದ ನಿಮ್ಮ ತಲೆ ಕೂದಲಿನ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಜೊತೆಗೆ ತಲೆ ಕೂದಲು ಉದ್ದವಾಗಿ ದಪ್ಪವಾಗಿ ಕಪ್ಪಾಗಿ ಬೆಳೆಯುವುದಕ್ಕೂ ಕೂಡ ಇದು ತುಂಬಾ ಸಹಕಾರಿಯಾಗಿದೆ.

LEAVE A REPLY

Please enter your comment!
Please enter your name here