ಪ್ರತಿಯೊಬ್ಬರ ಮಾತಿನ ವೈಖರಿ ವಿಭಿನ್ನವಾಗಿರುತ್ತದೆ. ಒಬ್ಬರಂತೆ ಮತ್ತೊ ಬ್ಬರು ಮಾತನಾಡುವುದಿಲ್ಲ. ಒಬ್ಬರು ಶಾಂತ ಸ್ವಭಾವವಾಗಿ ತಾಳ್ಮೆಯಿಂದ ಮಾತನಾಡಿದರೆ ಇನ್ನೂ ಕೆಲವೊಂದಷ್ಟು ಜನ ಹೆಚ್ಚು ಜೋರಾಗಿ ಒಬ್ಬರ ಮನಸ್ಸಿಗೆ ನೋವಾಗುವ ಹಾಗೆ ಮಾತನಾಡುತ್ತಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬರ ಮಾತಿನ ವೈಖರಿ ತುಂಬಾ ಬದಲಾಗುತ್ತಿರುತ್ತದೆ ಎಂದೇ ಹೇಳಬಹುದು.
ಆದರೆ ಪ್ರತಿಯೊಬ್ಬರು ತಿಳಿದು ಕೊಳ್ಳಬೇಕಾದ ವಿಷಯ ಏನು ಎಂದರೆ ಯಾರೊಬ್ಬ ವ್ಯಕ್ತಿಯಾಗಲಿ ಆ ವ್ಯಕ್ತಿ ಯಾರ ಜೊತೆ ಹೇಗೆ ಮಾತನಾಡುತ್ತಾನೆ ಹೇಗೆ ನಡೆದುಕೊಳ್ಳುತ್ತಾನೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ ಹೌದು. ನಮ್ಮ ಮುಂದೆ ಇರುವಂತಹ ವ್ಯಕ್ತಿ ಯಾವ ರೀತಿಯಾಗಿ ಮಾತನಾಡುತ್ತಾನೆ ಎನ್ನುವುದರ ಮೇಲೆ ನಮ್ಮ ಒಂದು ಮಾತಿನ ವೈಖರಿಯು ಕೂಡ ನಿಂತಿರುತ್ತದೆ.
ಹಾಗಾಗಿ ಪ್ರತಿಯೊಬ್ಬರೂ ಕೂಡ ಬೇರೊಬ್ಬರ ಜೊತೆ ಮಾತನಾಡುವ ಸಮಯದಲ್ಲಿ ಆದಷ್ಟು ತಾಳ್ಮೆಯಿಂದ ಪ್ರೀತಿ ವಿಶ್ವಾಸದಿಂದ ಮಾತನಾಡು ವುದು ಬಹಳ ಮುಖ್ಯವಾಗಿರುತ್ತದೆ ಇಲ್ಲವಾದರೆ ಅವರ ಮಾತಿನ ವೈಖರಿ ಬದಲಾಗುತ್ತಿದ್ದ ಹಾಗೆ ನಿಮ್ಮ ಮಾತಿನ ವೈಖರಿಯು ಕೂಡ ತುಂಬಾ ಬದಲಾಗುತ್ತಾ ಹೋಗುತ್ತದೆ.
ಕೆಲವೊಂದಷ್ಟು ಜನ ಪ್ರತಿಯೊಂದು ವಿಷಯಕ್ಕೂ ಕೂಡ ಜೋರಾಗಿ ಮಾತನಾಡುತ್ತಾ ಬೈಯುವ ರೀತಿ ಮಾತನಾಡುತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ಜನ ಜೋರಾಗಿ ಮಾತನಾಡುತ್ತಿರುತ್ತಾರೆ ಅದರಿಂದ ಅವರ ಮುಂದೆ ಇರುವಂತಹ ವ್ಯಕ್ತಿಗೆ ತುಂಬಾ ಬೇಸರ ಉಂಟಾಗುತ್ತದೆ ಎಂದು ಹೇಳಬಹುದು. ಆ ವ್ಯಕ್ತಿಯ ಮಾತಿನಲ್ಲಿ ಅಷ್ಟು ಗಡಸು ಇರುತ್ತದೆ ಆದರೆ ಅವರ ಮನಸ್ಸು ತುಂಬಾ ಮೃದುವಾಗಿರುತ್ತದೆ.
ಆದರೆ ಅವರ ಮಾತಿನ ವರಸೆಯಿಂದ ಅವರು ಸರಿ ಇಲ್ಲ ಎನ್ನುವಂತಹ ಮನಸ್ಥಿತಿ ನಮ್ಮಲ್ಲಿ ಕಾಣಿಸಿಕೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಮಾತನಾಡುವ ಸಮಯದಲ್ಲಿ ಆದಷ್ಟು ತಾಳ್ಮೆಯಿಂದ ಪ್ರೀತಿ ವಿಶ್ವಾಸದಿಂದ ಮಾತನಾಡಿದರೆ ಅವರ ಮಾತಿನಲ್ಲಿ ಮಾಧುರ್ಯತೆ ಹಾಗೂ ಮಾತನಾಡುತ್ತಿರುವಂತಹ ವ್ಯಕ್ತಿಯ ಮೇಲೆ ಹೆಚ್ಚು ಗೌರವ ಉಂಟಾಗುವುದಕ್ಕೆ ಪ್ರಾರಂಭವಾಗುತ್ತದೆ.
ನೀವೇ ನಾದರೂ ಜೋರಾಗಿ ಮಾತನಾಡಿದರೆ ನಿಮ್ಮ ಮುಂದೆ ಇರುವ ವ್ಯಕ್ತಿಗೆ ನಿಮ್ಮ ಮೇಲೆ ಅಸಮಾಧಾನ ಉಂಟಾಗುತ್ತದೆ. ಆದ್ದರಿಂದ ಪ್ರತಿ ಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ತಮ್ಮ ದಿನ ನಿತ್ಯದ ಜೀವನದಲ್ಲಿ ಪ್ರತಿಯೊಂದು ಕಡೆಯೂ ಕೂಡ ನೀವು ಕೆಲಸ ಮಾಡುವಂತಹ ಸ್ಥಳ ವಾಗಿರಬಹುದು, ಮನೆಯಲ್ಲಿ ನಿಮ್ಮ ಕುಟುಂಬದ ಜೊತೆ ನಿಮ್ಮ ಮಕ್ಕಳ ಜೊತೆ ಮಾತನಾಡುವಂತಹ ಮಾತಿನ ವೈಖರಿ ತುಂಬಾ ಪ್ರೀತಿ ವಿಶ್ವಾಸ ದಿಂದ ಮಧುರ ಧ್ವನಿಯಾಗಿದ್ದರೆ ತುಂಬಾ ಒಳ್ಳೆಯದು.
ಆಗ ಅವರೆಲ್ಲ ರಿಗೂ ಕೂಡ ನಿಮ್ಮ ಮೇಲೆ ಒಳ್ಳೆಯ ಭಾವನೆ ಉಂಟಾಗುತ್ತದೆ ಹಾಗೇನಾದರೂ ನೀವು ಅವರ ಮುಂದೆ ಜೋರಾಗಿ ಮಾತನಾಡಿದರೆ ಅವರಿಗೆ ನಿಮ್ಮ ಮೇಲೆ ಒಂದು ರೀತಿಯ ಮನಸ್ತಾಪ ಉಂಟಾಗುತ್ತದೆ ಹೌದು ನಮ್ಮ ಮಾತಿನಿಂದ ನಾವು ಕೆಟ್ಟವರಾಗುವ ಸನ್ನಿವೇಶಗಳು ಉಂಟಾಗುತ್ತದೆ.
ಆದ್ದರಿಂದ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ನಾವು ಪ್ರತಿ ಬಾರಿ ಮಾತನಾಡುವಂತಹ ಸಮಯದಲ್ಲಿ ಯಾವ ಮಾತನ್ನು ನಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಇರಬೇಕು ಎಂದರೆ “ಓಂ ಸ್ವಭಾವ ಮಧುರಾಯಯ್ ನಮಃ” ಎಂದು ಹೇಳುತ್ತಾ ಇರಬೇಕು ಆಗ ನಿಮ್ಮ ಮುಂದೆ ಇರುವ ವ್ಯಕ್ತಿ ನೀವು ಹೇಳಿದ ಹಾಗೆ ಕೇಳುತ್ತಾರೆ.
ನಿಮ್ಮ ಮನಸ್ಸಿನಲ್ಲಿ ಒಂದು ರೀತಿಯ ಬದಲಾವಣೆ ಎನ್ನುವುದು ಬರುತ್ತದೆ ಜೊತೆಗೆ ನೀವು ಕೂಡ ಒಳ್ಳೆಯ ರೀತಿಯ ಮನಸ್ಥಿತಿಯನ್ನು ಹೊಂದುತ್ತೀರಿ ಆದ್ದರಿಂದ ಇದನ್ನು ನಿಮ್ಮ ಮಾತಿನಲ್ಲಿ ಹೇಳುತ್ತಾ ಬರುವುದು ತುಂಬಾ ಒಳ್ಳೆಯದು.