ನಮ್ಮ ಭಾರತೀಯರು ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಇವುಗಳನ್ನು ನಂಬಿಕೊಂಡು ಪಾಲಿಸಿಕೊಂಡು ಬಂದವರು. ಈ ಹಿಂದೆ ಇದನ್ನು ಕೇವಲ ಮೂಡನಂಬಿಕೆ ಎಂದು ಅಲ್ಲಗಳೆಯಲಾಗುತ್ತಿದ್ದಾದರೂ ಇತ್ತೀಚೆಗೆ ವೈಜ್ಞಾನಿಕ ಸಂಶೋಧನೆಗಳಿಂದ ಇವು ಅರ್ಥಪೂರ್ಣವಾಗಿದೆ ಆದರೆ ಜನರಿಗೆ ತಲುಪುವಲ್ಲಿ ವಿಫಲವಾಗಿದೆ ಎನ್ನುವುದು ತಿಳಿದು ಬಂದಿದೆ.
ಈ ರೀತಿ ವೈಜ್ಞಾನಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ಕಾರಣ ಹೊಂದಿರುವ ಕೆಲ ಆಚರಣೆಗಳು ನಮ್ಮ ಬದುಕಿನ ಮೇಲೆ ಬಹಳ ಉತ್ತಮ ಪರಿಣಾಮವನ್ನು ಬೀರುತ್ತವೆ. ಇವುಗಳಲ್ಲಿ ಒಂದು ನಾವು ರಾತ್ರಿ ಮಲಗುವಾಗ ಯಾವ ಕಡೆಗೆ ತಲೆ ಇಟ್ಟು ಮಲಗಬೇಕು ಎನ್ನುವುದು.
ನಮ್ಮ ಶಾಸ್ತ್ರಗಳಲ್ಲಿ ಹೇಳುವ ಪ್ರಕಾರ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು ವೈಜ್ಞಾನಿಕವಾಗಿ ಕೂಡ ಈ ಕಡೆಗೆ ತಲೆ ಇಟ್ಟು ಮಲಗಿದಾಗ ಏಕಾಗ್ರತೆ ಹೆಚ್ಚಾಗುತ್ತದೆ ಮತ್ತು ಸೂರ್ಯೋದಯವಾದ ತಕ್ಷಣ ಎಚ್ಚರವಾಗುವುದರಿಂದ ಅವರು ಲವಲವಿಕೆಯಿಂದ ದಿನ ಆರಂಭಿಸುತ್ತಾರೆ ಇದರ ಮೂಲಕ ಅವರ ಎಲ್ಲಾ ಕಾರ್ಯಗಳು ಕೈಕೊಡುತ್ತದೆ ಎನ್ನುವ ನಂಬಿಕೆ.
ಅದೇ ರೀತಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎನ್ನುವುದು ಇದೆ ಯಾಕೆಂದರೆ ವೈಜ್ಞಾನಿಕವಾಗಿ ಭೂಮಿಯ ಅಯಸ್ಕಾಂತೀಯ ಶಕ್ತಿಗೆ ವಿರುದ್ಧ ದಿಕ್ಕಾಗಿರುವುದರಿಂದ ನಮಗೆ ನಿದ್ರೆ ಸರಿಯಾಗಿ ಆಗೋದಿಲ್ಲ ಹಾಗೂ ಮಾನಸಿಕ ಗೊಂದಲಗಳು ಹೆಚ್ಚಾಗುತ್ತವ.ೆ ಈ ಕಾರಣಕ್ಕಾಗಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ಹೇಳಲಾಗಿದೆ.
ಯಾವ ದಿಕ್ಕಿನಲ್ಲಿ ಮಲಗುತ್ತೇವೆ ಎನ್ನುವುದನ್ನು ಜೊತೆಗೆ ಮಲಗುವಾಗ ನಮ್ಮ ತಲದಿಂಬಿನ ಕೆಳಗೆ ಯಾವ ವಸ್ತು ಇಟ್ಟುಕೊಳ್ಳುತ್ತೇವೆ ಎನ್ನುವುದು ಕೂಡ ನಮ್ಮ ಮಾನಸಿಕ ಆರೋಗ್ಯ, ಸಕಾರಾತ್ಮಕ ಶಕ್ತಿ, ದೇಹದ ಚೈತನ್ಯ, ಬದುಕಿನ ನಮ್ಮ ಉನ್ನತಿ ಹಾಗೂ ಅವನತಿ ಮೇಲೆ ಪರಿಣಾಮ ಬೀರುತ್ತದೆ ಇದನ್ನು ಸರಿಪಡಿಸಿಕೊಳ್ಳುವುದಕ್ಕೂ ಕೂಡ ಇದೇ ಉಪಾಯವಾಗಿದೆ.
ಹಾಗಾಗಿ ಈ ಅಂಕಣದಲ್ಲಿ ಮಲಗುವಾಗ ಯಾವ ವಸ್ತುವನ್ನು ತಲೆತುಂಬಿನ ಕೆಳಗೆ ಇಟ್ಟುಕೊಂಡರೆ ಏನು ಪರಿಹಾರ ಇದೆ ಎನ್ನುವುದರ ಬಗ್ಗೆ ತಿಳಿಸುತ್ತಿದ್ದೇವೆ…
* ಮಲಗುವಾಗ ನಿಮ್ಮ ತಲೆದಿಂಬಿನ ಕೆಳಗಡೆ ಯಾವುದಾದರೂ ಕಬ್ಬಿಣದ ವಸ್ತು ಇಟ್ಟುಕೊಂಡು ಮಲಗುವುದರಿಂದ ಮಾಟ ಮಂತ್ರಗಳ ಪ್ರಭಾವ ನಿಮ್ಮ ಮೇಲೆ ಬೀಳುವುದಿಲ್ಲ.
* ನೀವು ಕೈಗೊಂಡ ಕೆಲಸ ಪೂರ್ತಿ ಆಗಲಿಲ್ಲ ಎಂದರೆ ಅಥವಾ ಹೊಸ ಯೋಜನೆ ಆರಂಭಿಸಿ ಅದಕ್ಕೆ ವಿಪರೀತ ಅಡಚಣೆಯಾಗುತ್ತಿದ್ದರೆ ಅಥವಾ ನಿಮ್ಮ ಎಲ್ಲಾ ಕಾರ್ಯಗಳು ನಿರಾತಂಕವಾಗಿ ನಡೆಯಬೇಕು ಅಂದರೆ ರಾತ್ರಿ ಮಲಗುವಾಗ ತಲೆ ದಿಂಬಿನ ಕೆಳಗೆ ಚಿನ್ನ ಅಥವಾ ಬೆಳ್ಳಿಯ ವಸ್ತುಗಳನ್ನು ಇಟ್ಟುಕೊಂಡು ಮಲಗಿ ನಿಮ್ಮ ಭಾಗ್ಯ ಬದಲಾಗುತ್ತದೆ.
* ನಿಮಗೆ ದುಸ್ವಪ್ನಗಳು ಹೆಚ್ಚಾಗಿ ಬೀಳುತ್ತಿದ್ದರೆ ನಿಮ್ಮ ತಲೆಯಲ್ಲಿ ಬರೀ ನಕರಾತ್ಮಕ ಚಿಂತೆಗಳು ಓಡುತ್ತಿದ್ದರೆ ಅಥವಾ ನಿಮಗೆ ಮಲಗುವ ಸಮಯದಲ್ಲಿ ಒಂದು ರೀತಿಯ ಭಯ ಕಾಡುತ್ತಿದ್ದರೆ, ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಉತ್ತಮ ನಿದ್ರೆಗಾಗಿ ತಲೆ ದಿಂಬಿನ ಕೆಳಗಡೆ ಬೆಳ್ಳುಳ್ಳಿ ಎಸಳುಗಳನ್ನು ಇಟ್ಟುಕೊಂಡು ಮಲಗಿರಿ ಅದು ನಿಮ್ಮ ಎಲ್ಲಾ ನೆಗೆಟಿವಿಟಿ ಗ್ರಹಿಸುತ್ತದೆ.
* ನೀವು ಬಹಳ ಹಣಕಾಸಿನ ಸಮಸ್ಯೆ ಎದುರಿಸುತ್ತಾ ಇದ್ದರೆ ತಲೆ ದಿಂಬಿನ ಕೆಳಗೆ ಮೂಲಂಗಿ ಇಟ್ಟುಕೊಂಡು ಮಲಗಬೇಕು ಮತ್ತು ಅದನ್ನು ಮರುದಿನ ಈಶ್ವರನ ದೇವಸ್ಥಾನದಲ್ಲಿ ಯಾರಿಗಾದರೂ ದಾನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಹಣಕಾಸಿನ ತೊಡಕು ನಿವಾರಣೆ ಆಗುತ್ತದೆ. ರಾಹು ಕೇತು ಪ್ರಭಾವ, ಶನಿ ವಕ್ರದೃಷ್ಠಿ ನಿಮ್ಮ ಮೇಲೆ ಬಿದ್ದಿದ್ದರೆ ನಿವಾರಣೆ ಆಗುತ್ತದೆ.
* ಕೃಷಿ ವ್ಯಾಪಾರ ಇವುಗಳಲ್ಲಿ ಅಭಿವೃದ್ಧಿ ಹೊಂದಬೇಕು ಎಂದರೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಚೆನ್ನಾಗಿ ನಡೆಯಬೇಕು ಎಂದರೆ ರಾತ್ರಿ ಮಲಗುವ ಸ್ವಲ್ಪ ಹೆಸರುಕಾಳನ್ನು ಹಸಿರು ಬಣ್ಣದ ಬಟ್ಟೆಯಲ್ಲಿ ಕಟ್ಟಿ ತಲೆ ದಿಂಡಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಮರುದಿನ ಬೆಳಿಗ್ಗೆ ಸ್ನಾನ ಆದ ಮೇಲೆ ದೇವರಿಗೆ ಕೈಮುಗಿದು ದೇವಸ್ಥಾನದಲ್ಲಿ ಇದನ್ನು ಅರ್ಪಿಸಬೇಕು, ಇದರಿಂದ ಉತ್ತಮ ಫಲಿತಾಂಶ ಕಾಣಬಹುದು.
* ಇದ್ದಕ್ಕಿದ್ದಂತೆ ನಿಮಗೆ ಸಾವಿನ ಬಗ್ಗೆ ಭಯ ಕಾಡುತ್ತಿದ್ದರೆ, ಮನಸ್ಸಿಗೆ ಶಾಂತಿ ಇಲ್ಲ ಎಂದರೆ ನೀವು ಹನುಮಾನ್ ಚಾಲೀಸಾ ಪಠಿಸಬೇಕು ಮತ್ತು ಆ ಹನುಮಾನ್ ಚಾಲೀಸವನ್ನು ರಾತ್ರಿ ಹೊತ್ತು ಮಲಗುವಾಗ ತಲೆ ತಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ.