ಈ ಬಾರಿಯ ದೀಪಾವಳಿಯು ಕೆಲವೊಂದಷ್ಟು ರಾಶಿಯವರಿಗೆ ಅದೃ ಷ್ಟದ ಬಾಗಿಲನ್ನೇ ತೆರೆಯಲಿದೆ ಎಂದೇ ಹೇಳಬಹುದು. ಇದುವರೆಗೆ ಬರಿ ಕಷ್ಟದ ದಿನಗಳನ್ನು ಕಂಡವರಿಗೆ ಇನ್ನು ಮುಂದೆ ಸುಖ ಪಡೆಯುವ ಸಮಯ ಬರಲಿದೆ. ಹಾಗಾದರೆ ದೀಪಾವಳಿಯ ಈ ಸಮಯದಲ್ಲಿ ಹೆಚ್ಚು ಅದೃಷ್ಟವನ್ನು ಪಡೆಯುತ್ತಿರುವಂತಹ ಆರು ರಾಶಿಗಳು ಯಾವುವು.?
ಹಾಗೂ ಅವರು ಯಾವ ರೀತಿಯ ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತಾರೆ ಯಾವ ವಿಚಾರಗಳಲ್ಲಿ ಹೆಚ್ಚು ಲಾಭವನ್ನು ಪಡೆಯುತ್ತಾರೆ ಹಾಗೂ ಅವರ ವ್ಯಾಪಾರ ವ್ಯವಹಾರದಲ್ಲಿ ಯಾವ ರೀತಿಯ ಅಭಿವೃದ್ಧಿ ಉಂಟಾ ಗುತ್ತದೆ. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
* ರಾಶಿ ಮೇಷ ರಾಶಿ :- ಈ ದೀಪಾವಳಿ ನಿಮಗೆ ಅದೃಷ್ಟದ ಬಾಗಿಲನ್ನೇ ತೆರೆಯಲಿದೆ. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ದೊರೆಯಲಿದೆ. ನೀವು ಕೆಲಸ ಮಾಡುವಂತಹ ಸ್ಥಳದಲ್ಲಿ ನಿಮ್ಮ ಬಾಸ್ ನಿಮ್ಮಿಂದ ಹೆಚ್ಚಿನ ಕೆಲಸವನ್ನು ಅಂದರೆ ನಿಮ್ಮ ಹೊಣೆಗಾರಿಕೆಯನ್ನು ನಿರೀಕ್ಷಿಸುತ್ತಾರೆ.
ನೀವು ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಒಂದು ಟೀಮ್ ಹೆಚ್ಚಿನ ಹೆಸರನ್ನು ಪಡೆಯ ಬಹುದು. ಬೇರೆಯ ವರು ನಿಮ್ಮ ಒಂದು ತಂಡಕ್ಕೆ ಬಂದು ನಿಮ್ಮ ಮಾರ್ಗದರ್ಶನವನ್ನು ಪಡೆಯಲು ಇಷ್ಟಪಡಬಹುದು. ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಅಭಿವೃದ್ಧಿ ಉಂಟಾಗುತ್ತದೆ. ಹಾಗೂ ನಿಮ್ಮ ವೇತನ ಶ್ರೇಣಿ ಹೆಚ್ಚಾಗುವ ಬಲವಾದ ಸಾಧ್ಯತೆಗಳು ಕೂಡ ಇದೆ. ಜೊತೆಗೆ ಈ ದೀಪಾವಳಿಯಂದು ಲಕ್ಷ್ಮಿ ಪೂಜೆಯನ್ನು ತಪ್ಪದೇ ಮಾಡಿ.
* ಮಿಥುನ ರಾಶಿ :- ಈ ದೀಪಾವಳಿ ನಿಮಗೆ ಹೆಚ್ಚಿನ ಸಂತೋಷವನ್ನು ತರಲಿದೆ ಕೌಟುಂಬಿಕವಾಗಿ ಇದು ನಿಮಗೆ ಸುಖಕರವಾದ ಅನುಭವ ವನ್ನು ಒದಗಿಸಲಿದೆ. ಸೂರ್ಯ, ಚಂದ್ರ, ಶನಿ, ಮುಂತಾದ ಗ್ರಹಗಳು ನಿಮಗೆ ಅನುಕೂಲಕರವಾದ ಸ್ಥಾನದಲ್ಲಿ ಇದ್ದು ಸಂಗಾತಿಯ ಸೌಖ್ಯವನ್ನು ದಯಪಾಲಿಸಲಿದ್ದಾರೆ.
ಮಕ್ಕಳಿಂದ ಸಂತೋಷದ ನಿರೀಕ್ಷೆ ಇದೆ. ನಿಮ್ಮ ಬಂಧು ಬಾಂಧವರಿಂದ ಶುಭ ಸುದ್ದಿಗಳು ಬರಬಹುದು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಶುಭ ಸುದ್ದಿಗಳು ಬರುವ ಸೂಚನೆ ಇದೆ. ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವುದಷ್ಟೇ ಅಲ್ಲದೆ ಕಷ್ಟದಲ್ಲಿರುವವ ರಿಗೆ ಕೆಲವೊಂದಷ್ಟು ಹಣಕಾಸಿನ ಸಹಾಯವನ್ನು ಮಾಡಿ ಇದರಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ.
* ಸಿಂಹ ರಾಶಿ :- ನಿಮ್ಮ ಮಿತ್ರರು ನಿಮಗೆ ಅನುಕೂಲಕರವಾಗಿ ನಡೆದು ಕೊಳ್ಳುತ್ತಾರೆ. ನಿಮ್ಮ ಪ್ರೀತಿ ಪಾತ್ರರಿಂದ ಹರ್ಷದ ಸುದ್ದಿಗಳನ್ನು ಕೇಳುವ ಸಾಧ್ಯತೆ ಇದೆ ನೀವು ಗಳಿಸಿದ ಹಣದಲ್ಲಿ ಉಳಿತಾಯ ಮಾಡುವ ಬಲವಾದ ಸಾಧ್ಯತೆ ಇದೆ. ಇದರಿಂದ ನಿಮಗೆ ಹೆಚ್ಚಿನ ಧನ ಲಾಭ ಆಗುವ ಸಾಧ್ಯತೆ ಇದೆ.
ನಿಮ್ಮ ಮಾತಿನ ಮೇಲೆ ನಿಮಗೆ ಹೆಚ್ಚಿನ ಆತ್ಮವಿಶ್ವಾಸ ಬರಲಿದೆ. ಹಾಗೂ ಇತರರು ನಿಮ್ಮ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಆಲಿಸಲಿದ್ದಾರೆ. ಗುರು ಗ್ರಹ ನಿಮಗೆ ಹೆಚ್ಚು ಅನುಕೂಲಕರವಾಗಿ ವರ್ತಿಸಲಿದೆ. ಈ ದೀಪಾವಳಿಯಂದು ಗೋಪೂಜೆಯನ್ನು ಮನಸಿಟ್ಟು ಮಾಡಿ ಹಾಗೆಯೇ ದಾನಗಳನ್ನು ಸಹ ಮಾಡಿ.
* ಕನ್ಯಾ ರಾಶಿ :- ನಿಮಗೆ ಗುರು ಗ್ರಹ ಹಾಗೂ ಶನಿ ಗ್ರಹಗಳು ಅನುಕೂಲ ಕರವಾದ ಸ್ಥಾನದಲ್ಲಿದ್ದು ನಿಮಗೆ ಆಶೀರ್ವಾದ ಮಾಡುತ್ತಿರುವುದರಿಂದ ಜ್ಞಾನ ಸಂಬಂಧಿಸಿದ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ನೆರವೇರುತ್ತದೆ. ನಿಮ್ಮ ಕೌಟುಂಬಿಕ ಜೀವನವಾಗಿರಬಹುದು ನಿಮ್ಮ ವ್ಯಾಪಾರ ವ್ಯವಹಾರದ ಜೀವನವಾಗಿರಬಹುದು ಎರಡು ಕೂಡ ಸುಖಕರವಾಗಿ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.