Home Useful Information ರಸ್ತೆಯಲ್ಲಿ ನಾಣ್ಯ ಸಿಕ್ಕಾಗ ಮಾಡಬೇಕಾದ ಈ ಕೆಲಸ ಏನು ಗೊತ್ತಾ? ಮಹಾಲಕ್ಷ್ಮಿ ದೇವಿ ಅನುಗ್ರಹ ಸಿಗಲು ಹೀಗೆ ಮಾಡಿ.!

ರಸ್ತೆಯಲ್ಲಿ ನಾಣ್ಯ ಸಿಕ್ಕಾಗ ಮಾಡಬೇಕಾದ ಈ ಕೆಲಸ ಏನು ಗೊತ್ತಾ? ಮಹಾಲಕ್ಷ್ಮಿ ದೇವಿ ಅನುಗ್ರಹ ಸಿಗಲು ಹೀಗೆ ಮಾಡಿ.!

0
ರಸ್ತೆಯಲ್ಲಿ ನಾಣ್ಯ ಸಿಕ್ಕಾಗ ಮಾಡಬೇಕಾದ ಈ ಕೆಲಸ ಏನು ಗೊತ್ತಾ? ಮಹಾಲಕ್ಷ್ಮಿ ದೇವಿ ಅನುಗ್ರಹ ಸಿಗಲು ಹೀಗೆ ಮಾಡಿ.!

 

ಸಾಮಾನ್ಯವಾಗಿ ನಾವು ರಸ್ತೆಗಳಲ್ಲಿ ನಡೆದಾಡುವ ಸಮಯದಲ್ಲಿ ನಾಣ್ಯಗಳು ಸಿಗುತ್ತಿರುತ್ತದೆ. ಆದರೆ ಅದನ್ನು ಏನು ಮಾಡಬೇಕು ಎನ್ನುವ ಗೊಂದಲ ಪ್ರತಿಯೊಬ್ಬರಲ್ಲೂ ಕೂಡ ಇರುತ್ತದೆ. ಹೌದು ಸಿಕ್ಕಂತಹ ನಾಣ್ಯವನ್ನು ದೇವಸ್ಥಾನಕ್ಕೆ ಹಾಕುವುದ ಅಥವಾ ನಮ್ಮ ಬಳಿಯೇ ಇಟ್ಟು ಕೊಳ್ಳಬಹುದ ಅಥವಾ ನಾಣ್ಯವನ್ನು ನಮ್ಮ ದಿನನಿತ್ಯದ ಖರ್ಚಿಗೆ ಬಳಸಬಹುದಾ ಎನ್ನುವಂತಹ ಪ್ರಶ್ನೆ ಎಲ್ಲರಲ್ಲೂ ಬರುತ್ತದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಆ ನಾಣ್ಯವನ್ನು ನಾವು ಏನು ಮಾಡಬೇಕು ಹಾಗೂ ಅದಕ್ಕೆ ಪರಿಹಾರ ಮಾರ್ಗ ಏನು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ ಮಹಾಲಕ್ಷ್ಮಿ ದೇವಿ ಒಂದೊಂದು ಬಾರಿ ಒಂದೊಂದು ರೀತಿ ಒಲಿಯುತ್ತಾಳೆ.

ಮಹಾಲಕ್ಷ್ಮಿ ದೇವಿಯು ಶುಭ ಯೋಗಗಳನ್ನು ಮನುಷ್ಯನ ಜೀವನಕ್ಕೆ ನೀಡಿದ್ದಾಳೆ ಎಂದರೆ ಆ ಜೀವನವೇ ಬದಲಾಗಿ ಹೋಗುತ್ತದೆ. ಅದೇ ರೀತಿ ನೀವು ನಡೆದುಕೊಂಡು ಹೋಗಬೇಕಾದರೆ ನಿಮಗೆ ನಾಣ್ಯ ಸಿಕ್ಕರೆ ಅದನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡಬಾರದು. ಆ ನಾಣ್ಯವನ್ನು ಸಿಕ್ಕಂತಹ ದಿನ ಮನೆಗೆ ತಂದು ಅದನ್ನು ಸ್ವಚ್ಛ ನೀರಿನಿಂದ ಅಥವಾ ಅರಿಶಿಣದ ನೀರಿನಿಂದ ತೊಳೆದು ದೇವರ ಮನೆಯಲ್ಲಿ ಒಂದು ತಟ್ಟೆಯಲ್ಲಿ ಅಕ್ಕಿ ಇಟ್ಟು.

ಅದರ ಮೇಲೆ ಸಿಕ್ಕ ನಾಣ್ಯ ಇಡುವುದರ ಮೂಲಕ ಅರಿಶಿನ ಕುಂಕುಮ ಇಟ್ಟು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಎಂದೇ ಮನಸ್ಸಿನಲ್ಲಿ ನೆನೆದು ಪೂಜೆ ಮಾಡುತ್ತಾ ಬಂದರೆ ತಾಯಿ ಮಹಾಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ನಿಮಗೆ ಸಿಗುತ್ತಾ ಹೋಗುತ್ತದೆ.

ನಿಮಗೇನಾದರೂ ಖರ್ಚುಗಳು ಹೆಚ್ಚಾಗುತ್ತಾ ಇದ್ದರೆ ಹಣಕಾಸಿನ ಸಮ ಸ್ಯೆಗಳು ಉಂಟಾಗುತ್ತಿದ್ದರೆ ಇದೆಲ್ಲವೂ ಸಹ ನಿಮ್ಮಿಂದ ದೂರವಾಗುತ್ತದೆ ಎನ್ನುವ ಸಮಯ ಬಂದಿದೆ ಎಂದರೆ ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ನಿಮಗೆ ನಾಣ್ಯಗಳು ಸಿಗುತ್ತದೆ. ಹೌದು ಇದರ ಅರ್ಥ ನಿಮ್ಮ ಹಿಂದಿನ ದಿನದಿಂದ ಅನುಭವಿಸಿಕೊಂಡು ಬಂದಂತಹ ಕಷ್ಟ ಎಲ್ಲ ರೀತಿಯ ತೊಂದರೆಗಳು ಸಹ ಇನ್ನೇನು ದೂರವಾಗುತ್ತದೆ ಎನ್ನುವುದರ ಸಂಕೇತ ಇದಾಗಿದೆ.

ನಿಮಗಿರುವಂತಹ ಎಲ್ಲಾ ಸಮಸ್ಯೆಗಳು ಕೂಡ ಸದ್ಯದಲ್ಲಿಯೇ ದೂರವಾಗುತ್ತದೆ ಎನ್ನುವುದರ ಸೂಚನೆ ಇದರಿಂದ ಸಿಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ರೀತಿ ನಿಮಗೆ ರಸ್ತೆ ಯಲ್ಲಿ ನಾಣ್ಯಗಳು ಸಿಕ್ಕರೆ ಅದನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡಬೇಡಿ ಅದರಲ್ಲೂ ದೇವಸ್ಥಾನದ ಹುಂಡಿಗೆ ಹಾಕಲೇಬೇಡಿ ಮೇಲೆ ಹೇಳಿದ ವಿಧಾನವನ್ನು ಅನುಸರಿಸುವುದರ ಮೂಲಕ ಅದನ್ನು ನಿಮ್ಮ ಮನೆಗೆ ತಂದು.

ಪೂಜೆ ಮಾಡುವುದರ ಮೂಲಕ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರ ರಾಗಿ ಎಂದೇ ಹೇಳಬಹುದಾಗಿದೆ. ಹೀಗೆ ಸಿಕ್ಕ ನಾಣ್ಯವನ್ನು ಪ್ರತಿ ಮಂಗಳವಾರ ಶುಕ್ರವಾರ ತಪ್ಪದೆ ಪೂಜೆಯನ್ನು ಮಾಡುತ್ತಾ, ಲಕ್ಷ್ಮಿ ದೇವಿಯನ್ನು ನೆನೆದು ನಮ್ಮ ಮನೆಯಲ್ಲಿ ಏನೇ ಸಂಕಷ್ಟ ಇದ್ದರೂ ಹಣಕಾಸಿನ ಸಮಸ್ಯೆ ಇದ್ದರೂ ಅದೆಲ್ಲ ದೂರವಾಗುವಂತೆ ತಾಯಿ ಲಕ್ಷ್ಮಿ ದೇವಿಯನ್ನು ಪ್ರಾರ್ಥನೆ ಮಾಡುತ್ತಾ ಆ ನಾಣ್ಯವನ್ನು ಪ್ರತಿನಿತ್ಯ ಪೂಜೆ ಮಾಡಬೇಕು.

ಈ ರೀತಿ ಮಾಡುತ್ತ ಬರುವುದರಿಂದ ನಿಮ್ಮ ಜೀವನದಲ್ಲಿ ಎದುರಾಗುವಂತಹ ಎಲ್ಲ ರೀತಿಯ ಸಮಸ್ಯೆಗಳು ಸಹ ಸಂಪೂರ್ಣವಾಗಿ ದೂರವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಮೇಲೆ ಹೇಳಿದ ಈ ಎಲ್ಲಾ ವಿಧಾನಗಳನ್ನು ಅನುಸರಿಸುವುದರ ಮೂಲಕ ನೀವು ನಿಮ್ಮ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಬಹುದು ಎಂದೇ ಹೇಳಬಹುದು.

LEAVE A REPLY

Please enter your comment!
Please enter your name here