Home Useful Information ಗೃಹ ಲಕ್ಷ್ಮಿ ಇಂದು 27 ಜಿಲ್ಲೆಯವರಿಗೆ ಎರಡು ತಿಂಗಳ ಹಣ 4000 ಜಮಾ / ನಿಮಗೆ ಬಂತಾ ಹೀಗೆ ಮೊಬೈಲ್ ನಲ್ಲಿ ಚೆಕ್ ಮಾಡಿ.!

ಗೃಹ ಲಕ್ಷ್ಮಿ ಇಂದು 27 ಜಿಲ್ಲೆಯವರಿಗೆ ಎರಡು ತಿಂಗಳ ಹಣ 4000 ಜಮಾ / ನಿಮಗೆ ಬಂತಾ ಹೀಗೆ ಮೊಬೈಲ್ ನಲ್ಲಿ ಚೆಕ್ ಮಾಡಿ.!

0
ಗೃಹ ಲಕ್ಷ್ಮಿ ಇಂದು 27 ಜಿಲ್ಲೆಯವರಿಗೆ ಎರಡು ತಿಂಗಳ ಹಣ 4000 ಜಮಾ / ನಿಮಗೆ ಬಂತಾ ಹೀಗೆ ಮೊಬೈಲ್ ನಲ್ಲಿ ಚೆಕ್ ಮಾಡಿ.!

 

ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದವರು ಮಾಡಿರುವಂತಹ ಐದು ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವಂತಹ ಈ ಗೃಹಲಕ್ಷ್ಮಿ ಯೋಜನೆ. ಅಂದರೆ ಇನ್ನೂ ಬಹಳಷ್ಟು ಜನರಿಗೆ ಅದರಲ್ಲೂ 10 ಲಕ್ಷ ಜನರಿಗೆ ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತಿನ ಹಣ ಬರಬೇಕಾಗಿದೆ ಹೀಗೆ ಮೊದಲನೇ ಕಂತಿನ ಹಣ ಬಂದಿಲ್ಲದೆ ಇರುವಂತಹ ಜನರು ಈ ಹಣ ಬರುವುದಕ್ಕೆ ಏನು ಮಾಡಬೇಕು ಎಂಬ ಗೊಂದಲದಲ್ಲಿಯೇ ಇದ್ದಾರೆ.

ಅದಕ್ಕಾಗಿ ಸರ್ಕಾರದವರು ಈ ರೀತಿ ಹಣ ಬಂದಿಲ್ಲದೆ ಇರುವಂತಹ ಜನರಿಗೆ ತಮ್ಮ ತಾಲೂಕಿನ ಜಿಲ್ಲೆಯ ಅಕ್ಕಪಕ್ಕ ಇರುವಂತಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕೇಂದ್ರಕ್ಕೆ ಕೆಲವೊಂದಷ್ಟು ಸೂಚನೆಗಳನ್ನು ಸಹ ಕೊಟ್ಟಿದ್ದಾರೆ.

ಅಂಥವರು ಯಾರಿಗೆ ಹಣ ಬಂದಿಲ್ಲವೋ ಅವರ ಮನೆಯ ಬಾಗಿಲಿಗೆ ಬಂದು ಅವರಿಗೆ ಇನ್ನೂ ಯಾಕೆ ಹಣ ಬಂದಿಲ್ಲ ಎಂಬ ಕಾರಣವನ್ನು ಕಂಡುಹಿಡಿಯುವುದರ ಮೂಲಕ ಇವರಿಗೆ ಈ ಒಂದು ಸೂಚನೆಯನ್ನು ಕೊಟ್ಟಿದ್ದಾರೆ. ಅದರಂತೆ ಅವರಿಗೆ ಯಾವ ದಾಖಲಾತಿಗಳು ಸರಿಯಾಗಿಲ್ಲ ಅದೆಲ್ಲವನ್ನು ಸಹ ಸರಿಪಡಿಸಿ ಹಣ ಬರುವಂತೆ ಮಾಡಬೇಕು ಎಂಬ ಸೂಚನೆಯನ್ನು ಕೊಟ್ಟಿದ್ದಾರೆ.

ಹಾಗೂ ಈಗಾಗಲೇ ಈ ಯೋಜನೆ ಜಾರಿಯಲ್ಲಿಯೂ ಕೂಡ ಇದೆ ಆದ್ದರಿಂದ ಇಂಥವರು ಯಾವುದೇ ರೀತಿಯ ಭಯಪಡುವ ಅವಶ್ಯಕತೆ ಇಲ್ಲ. ಬದಲಿಗೆ ಈ ಒಂದು ಕೇಂದ್ರಗಳಿಗೆ ಹೋಗಿ ನೀವು ಇದರ ಬಗ್ಗೆ ಮಾಹಿತಿಗಳನ್ನು ತಿಳಿದುಕೊಂಡು ನಂತರ ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ 27 ಜಿಲ್ಲೆಯವರೆಗೆ ಎರಡನೇ ಕಂತಿನ ಹಣದ ಜೊತೆಗೆ ಮೂರನೇ ಕಂತಿನ ಹಣವನ್ನು ಸಹ ಬಿಡುಗಡೆ ಮಾಡುತ್ತಿದ್ದಾರೆ. ಹಾಗಾದರೆ ಆ 27 ಜಿಲ್ಲೆ ಯಾವುದು ಹಾಗೂ ಈ ಹಣ ನಿಮ್ಮ ಅಕೌಂಟ್ ಗೆ ಬಂದಿದೆಯ ಬಂದಿಲ್ಲವಾ ಎನ್ನುವುದನ್ನು ಹೇಗೆ ನೀವೇ ನಿಮ್ಮ ಮೊಬೈಲ್ ಗಳಲ್ಲಿ ಚೆಕ್ ಮಾಡಿಕೊಳ್ಳುವುದು.

ಹೀಗೆ ಈ ಎಲ್ಲ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಹೆಚ್ಚಿನ ಜನಕ್ಕೆ ತಮ್ಮ ಅಕೌಂಟ್ ಗೆ ಹಣ ಬಂದಿದೆಯ ಬಂದಿಲ್ಲವಾ ಎನ್ನುವುದನ್ನು ತಿಳಿಯುವುದಕ್ಕೆ ಅವರ ಬ್ಯಾಂಕ್ ಪಾಸ್ ಬುಕ್ ತೆಗೆದು ಕೊಂಡು ಹೋಗಿ ಬ್ಯಾಂಕ್ ನಲ್ಲಿ ಚೆಕ್ ಮಾಡಿಸುತ್ತಾರೆ. ಆದರೆ ಇನ್ನು ಮುಂದೆ ಈ ರೀತಿಯ ಅವಶ್ಯಕತೆ ಇಲ್ಲ ಬದಲಿಗೆ ಮನೆಯಲ್ಲಿಯೇ ಕುಳಿತು ನೀವು ಇದರ ಮಾಹಿತಿಯನ್ನು ತಿಳಿಯಬಹುದು.

ಹಾಗಾದರೆ ಎರಡನೇ ಕಂತಿನ ಹಣದ ಜೊತೆಗೆ ಮೂರನೇ ಕಂತಿನ ಹಣ ಬಿಡುಗಡೆಯಾಗಿರುವಂತಹಆ ಜಿಲ್ಲೆಗಳು ಯಾವುದು ಎಂದು ನೋಡು ವುದಾದರೆ. ಬಾಗಲಕೋಟೆ, ಬೆಂಗಳೂರು, ಬೆಂಗಳೂರು ರೂರಲ್, ಬೆಳಗಾಂ, ಬಳ್ಳಾರಿ, ಬೀದರ್, ಬಿಜಾಪುರ್, ಚಾಮರಾಜನಗರ, ಚಿಕ್ಕಮಂಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ, ಕಲ್ಬುರ್ಗಿ, ಹೀಗೆ ಇನ್ನೂ ಹಲವಾರು ಜಿಲ್ಲೆಗಳಿಗೆ ಈ ಹಣ ಬಿಡುಗಡೆಯಾಗಿದೆ. ಆದರೆ ಅದನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎಂದು ನೋಡುವುದಾದರೆ.

ಮೊದಲು ಪ್ಲೇ ಸ್ಟೋರ್ ಗೆ ಹೋಗಿ ಅಲ್ಲಿ ಡಿ ಬಿ ಟಿ ಎನ್ನುವ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಆನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ವೆರಿಫಿಕೇಶನ್ ಕೊಟ್ಟರೆ ಅಲ್ಲಿ ಒಂದು ಓಟಿಪಿ ಕೇಳುತ್ತದೆ ಆನಂತರ ಅಲ್ಲಿ ಕೇಳುವಂತಹ ಮಾಹಿತಿಗಳನ್ನು ಹಾಕುವುದರ ಮೂಲಕ ನೀವು ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ ಯ ಹಣ ಬಂದಿದೆಯ ಬಂದಿಲ್ಲ ಎನ್ನುವುದನ್ನು ಸಂಪೂರ್ಣವಾಗಿ ನೀವು ತಿಳಿದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/WTyLURR-KZo?si=ZSU9W67scXWsDlg-

LEAVE A REPLY

Please enter your comment!
Please enter your name here