ಇತ್ತೀಚಿನ ದಿನದಲ್ಲಿ ನಾವು ಅನುಸರಿಸುತ್ತಿರುವಂತಹ ಆಹಾರ ಶೈಲಿ ಹಾಗೂ ಜೀವನಶೈಲಿಯಿಂದ ನಮ್ಮ ದೇಹದ ತೂಕವನ್ನು ಯಥೇಚ್ಛವಾಗಿ ಹೆಚ್ಚಿಸಿಕೊಂಡಿರುತ್ತೇವೆ. ಹಾಗಾಗಿ ಇಂತಹ ಸಮಸ್ಯೆಯನ್ನು ನಾವು ದೂರ ಮಾಡಿಕೊಳ್ಳಬೇಕು ಎಂದರೆ ಕೆಲವೊಂದು ಉತ್ತಮವಾದಂತಹ ವಿಧಾನ ಗಳನ್ನು ಕೆಲವೊಂದು ಪದಾರ್ಥಗಳನ್ನು ನಮ್ಮ ಆಹಾರ ಕ್ರಮದಲ್ಲಿ ಸೇವನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ಹೌದು ಆದರೆ ಕೆಲ ವೊಂದಷ್ಟು ಜನ ಇಂತಹ ಉತ್ತಮವಾದ ವಿಧಾನಗಳನ್ನು ಅನುಸರಿಸು ವುದರ ಬದಲು ವಿರುದ್ಧವಾದ ದಿಕ್ಕಿನಲ್ಲಿ ಹೋಗಿ ಅದರಿಂದ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ. ಆದ್ದರಿಂದ ಯಾರೂ ಕೂಡ ಅಂತಹ ವಿಧಾನಗಳನ್ನು ಅನುಸರಿಸಬಾರದು ಬದಲಿಗೆ ಸೂಕ್ತವಾದ ಮಾಹಿತಿಯನ್ನು ತಿಳಿದು ನಂತರ ಅದಕ್ಕೆ ಉತ್ತಮವಾದ ಪರಿಹಾರ ಮಾರ್ಗ ಕಂಡುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಹೌದು ನಾವು ಸೇವನೆ ಮಾಡುವಂತಹ ಆಹಾರ ಪದಾರ್ಥದಿಂದ ನಮ್ಮ ಜೀವನಶೈಲಿಯಿಂದಲೇ ನಾವು ನಮ್ಮ ದೇಹದ ತೂಕವನ್ನು ಹೆಚ್ಚಿಸಿ ಕೊಂಡಿರುತ್ತೇವೆ. ಆದ್ದರಿಂದ ಅಂತಹ ವಿಧಾನಗಳನ್ನು ನಾವು ಸರಿಪಡಿಸಿಕೊಳ್ಳಬೇಕು. ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ಎಲ್ಲರೂ ಕೂಡ ಕೆಲಸದ ಒತ್ತಡದಿಂದ ಸರಿಯಾದ ಸಮಯಕ್ಕೆ ನಿದ್ರೆ ಮಾಡುತ್ತಿಲ್ಲ ಸರಿಯಾದ ಸಮಯಕ್ಕೆ ಒಳ್ಳೆಯ ಆಹಾರ ಕ್ರಮವನ್ನು ಅನುಸರಿಸುತ್ತಿಲ್ಲ.
ಸಮಯ ಸಿಕ್ಕಾಗ ಆಹಾರವನ್ನು ಸೇವನೆ ಮಾಡುವುದು ಸಮಯ ಸಿಕ್ಕಾಗ ನಿದ್ರೆ ಮಾಡುವುದು ಹೀಗೆ ಸಮಯಕ್ಕೆ ಅನುಗುಣವಾಗಿ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಬಹಳ ಹಿಂದಿನ ದಿನದಲ್ಲಿ ಎಲ್ಲರೂ ಕೂಡ ಯಾವ ಕೆಲಸಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದನ್ನು ತಿಳಿದು ಆನಂತರ ಆ ಕೆಲಸವನ್ನು ಆ ಸಮಯದಲ್ಲಿ ಮುಗಿಸಿ ನಂತರ ಎಲ್ಲಾ ವಿಧಾನಗಳನ್ನು ಅನುಸರಿಸುತ್ತಿದ್ದರು.
ಆಗ ಅವರಿಗೆ ಯಾವುದೇ ರೀತಿಯ ಇಂತಹ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತಿರಲಿಲ್ಲ ಜೊತೆಗೆ ಉತ್ತಮವಾದ ಆಹಾರ ಪದ್ಧತಿ ಜೀವನ ಶೈಲಿ ಎಲ್ಲವನ್ನು ಸಹ ಅನುಸರಿಸುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರ ಜೀವನ ಶೈಲಿಯೂ ಕೂಡ ವಿಭಿನ್ನವಾಗಿದ್ದು ಇದರಿಂದಲೇ ಈ ಎಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ ಎಂದು ಹೇಳಬಹುದು.
ಹಾಗಾದರೆ ನಮ್ಮ ದೇಹದ ತೂಕವನ್ನು ಅಂದರೆ ನಮ್ಮ ಹೊಟ್ಟೆ ಸುತ್ತಲಿನ ಗೊಜ್ಜನ್ನು ಹೇಗೆ ಕಡಿಮೆ ಸಮಯದಲ್ಲಿ ಕಡಿಮೆ ಮಾಡಿಕೊಳ್ಳಬಹುದು. ಅದಕ್ಕೆ ಯಾವ ಮನೆ ಮದ್ದನ್ನು ಮಾಡಿ ಸೇವನೆ ಮಾಡಬೇಕಾಗುತ್ತದೆ ಎನ್ನುವುದರ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಮನೆ ಮದ್ದನ್ನು ಮಾಡುವುದಕ್ಕೆ ಬೇಕಾಗಿರುವುದು ಕೇವಲ ಎರಡೇ ಎರಡು ಪದಾರ್ಥ ಅದು ಯಾವುದೆಂದರೆ.
* ಒಂದು ಹಿಡಿ ಕರಿಬೇವಿನ ಸೊಪ್ಪು
* ಜೀರಿಗೆ 50 ಗ್ರಾಂ
ಮೊದಲು ಕರಿಬೇವಿನ ಎಲೆಯನ್ನು ನೆರಳಲ್ಲಿ ಚೆನ್ನಾಗಿ ಗುಣಗಳು ಬಿಡಬೇಕು ಆನಂತರ ಜೀರಿಗೆ ಕರಿಬೇವಿನ ಸೊಪ್ಪು ಎರಡನ್ನು ಸಹ ಮಿಕ್ಸಿಯಲ್ಲಿ ಹಾಕಿ ನುಣ್ಣನೆ ಪುಡಿ ಮಾಡಬೇಕು ಈ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಪ್ರತಿದಿನ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಸೇವನೆ ಮಾಡುತ್ತಾ ಬರುವುದರಿಂದ ನಿಮ್ಮ ದೇಹದಲ್ಲಿರುವಂತಹ ಬೊಜ್ಜು ದಿನೇ ದಿನೇ ಕಡಿಮೆಯಾಗುತ್ತಾ ಬರುತ್ತದೆ.
ಇದರ ಜೊತೆ ನೀವು ಇದನ್ನು ಹಾಗೆ ಕುಡಿಯಲು ಸಾಧ್ಯವಾಗುತ್ತಿಲ್ಲ ಎಂದರೆ ಆ ನೀರಿಗೆ ನಿಂಬೆಹಣ್ಣಿನ ರಸ ಅಥವಾ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವನೆ ಮಾಡುವುದು ಒಳ್ಳೆಯದು. ಹಾಗೇನಾದರೂ ಜೇನುತುಪ್ಪ ಮತ್ತು ನಿಂಬೆಹಣ್ಣಿನ ರಸ ನಿಮಗೆ ಆಗುವುದಿಲ್ಲ ಎಂದರೆ ಕೇವಲ ಪುಡಿಯನ್ನು ಮಿಶ್ರಣ ಮಾಡಿ ಸೇವನೆ ಮಾಡುವುದು ಉತ್ತಮ.