ಇತ್ತೀಚಿನ ದಿನದಲ್ಲಿ ಪ್ರತಿಯೊಂದು ಕೆಲಸಕ್ಕೂ ಯಾವುದೇ ರೀತಿಯ ಬ್ಯಾಂಕ್ ವ್ಯವಹಾರಗಳಿಗೆ ಇನ್ಯಾವುದೇ ವ್ಯವಹಾರವಾಗಿರಲಿ ನಮಗೆ ನಮ್ಮ ಆಧಾರ್ ಕಾರ್ಡ್ ಬಹಳ ಮುಖ್ಯವಾಗಿ ಬೇಕಾಗಿರುತ್ತದೆ. ಹೌದು ಅದರಲ್ಲೂ ನಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇರುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಯಾವುದೇ ರೀತಿಯ ಮಾಹಿತಿಗಳು ಕೂಡ ನಮಗೆ ಸರಿಯಾಗಿ ಬರುವುದಿಲ್ಲ.
ನಾವು ಯಾವುದೇ ಒಂದು ಕೆಲಸಕ್ಕೂ ಕೂಡ ನಮ್ಮ ಫೋಟೋ ಆಧಾರ್ ಕಾರ್ಡ್ ವೋಟರ್ ಐಡಿ ಹೀಗೆ ಕೆಲವೊಂದಷ್ಟು ದಾಖಲಾತಿಗಳನ್ನು ನಾವು ಕಡ್ಡಾಯವಾಗಿ ಕೊಡುತ್ತೇವೆ. ಅವೆಲ್ಲ ಮಾಹಿತಿ ನಮಗೆ ಬ್ಯಾಂಕ್ ಗೆ ಬರುತ್ತದೆ ಆದ್ದರಿಂದ ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಇರುವುದು ಬಹಳ ಮುಖ್ಯವಾಗಿರುತ್ತದೆ.
ಹಾಗೆನಾದರೂ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಇಲ್ಲ ಎಂದರೆ ಕೆಲವೊಂದಷ್ಟು ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ನಿಮ್ಮ ಆಧಾರ್ ಕಾರ್ಡ್ ಯಾವ ಯಾವ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದೆ ಹಾಗೂ ಆಗಿಲ್ಲ ಎಂದರೆ ಯಾವ ವಿಧಾನ ಅನುಸರಿಸುವುದರ ಮೂಲಕ ಲಿಂಕ್ ಆಗಿದೆಯಾ ಆಗಿಲ್ವಾ ಎನ್ನುವುದನ್ನು ತಿಳಿದುಕೊಳ್ಳಬಹುದು ಎನ್ನುವುದನ್ನು ಈ ದಿನ ತಿಳಿಯೋಣ.
ಹಾಗಾದರೆ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಇಲ್ಲವಾ ಎನ್ನುವುದನ್ನು ಹೇಗೆ ಕಂಡುಹಿಡಿಯುವುದು ಎನ್ನುವುದನ್ನು ಪ್ರತಿಯೊಂದು ಒಂದೊಂದು ವಿಧಾನವನ್ನು ಈ ಕೆಳಗೆ ತಿಳಿಯೋಣ. ಮೊದಲನೆಯದಾಗಿ ನೀವು ಆಧಾರ್ ಕಾರ್ಡ್ ಮೂಲ ವೆಬ್ಸೈಟ್ ಗೆ ಹೋಗಬೇಕು ಹೌದು ಗೂಗಲ್ ಕ್ರೋಮ್ ಗೆ ಹೋಗಿ ಅಲ್ಲಿ ನೀವು UID ಎನ್ನುವಂತಹ ಆಯ್ಕೆಯನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ಆಧಾರ್ ಕಾರ್ಡ್ ನ ಮೂಲ ವೆಬ್ಸೈಟ್ ತಿಳಿಯುತ್ತದೆ.
ಆನಂತರ ಅಲ್ಲಿ ಮೈ ಆಧಾರ್ ಎನ್ನುವಂತಹ ಆಯ್ಕೆಯನ್ನು ಒತ್ತಬೇಕು. ಆನಂತರ ಅಲ್ಲಿ ಲಾಗಿನ್ ಆಗುವುದಕ್ಕೆ ಒಂದು ಆಯ್ಕೆಯನ್ನು ಕೇಳುತ್ತದೆ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ಯಾವ ಮೊಬೈಲ್ ನಂಬರ್ ಕೊಟ್ಟಿರುತ್ತೀರೋ ಅಲ್ಲಿಗೆ ಒಂದು OTP ಬರುತ್ತದೆ. ಆನಂತರ ನೀವು ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಓಕೆ ಕೊಟ್ಟರೆ ಮತ್ತೆ ಒಂದು ಆಯ್ಕೆ ಬರುತ್ತದೆ.
ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಗೂ ಮೇಲೆ ಒಂದು ವೆರಿಫಿಕೇಶನ್ ನಂಬರ್ ಎಂದು ಇರುತ್ತದೆ ಅದನ್ನು ಹಾಕುವುದರ ಮೂಲಕ ಓಕೆ ಕೊಟ್ಟರೆ ನಿಮ್ಮ ಮೊಬೈಲ್ ಗೆ OTP ಬರುತ್ತದೆ. ಆನಂತರ ಆ OTP ಯನ್ನು ಕೊಟ್ಟು ಲಾಗಿನ್ ಕೊಟ್ಟರೆ ಅಲ್ಲಿ ಹಲವಾರು ಆಯ್ಕೆಗಳು ಬರುತ್ತದೆ.
ಅದರಲ್ಲಿ ನೀವು ಬ್ಯಾಂಕ್ ಅಕೌಂಟ್ ಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಎಂದು ಕಂಡು ಹಿಡಿಯುವುದಕ್ಕೆ ಅಲ್ಲಿ ಇರುವಂತಹ ಬ್ಯಾಂಕ್ ಸೀಡಿಂಗ್ ಸ್ಟೇಟಸ್ ಆಯ್ಕೆಯ ಮೇಲೆ ಒತ್ತಬೇಕು ಆನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಯಾವೆಲ್ಲ ಬ್ಯಾಂಕ್ ಗೆ ಲಿಂಕ್ ಆಗಿರುತ್ತದೆಯೋ ಆ ಎಲ್ಲಾ ಮಾಹಿತಿಗಳು ಕೂಡ ಇಲ್ಲಿ ಬರುತ್ತದೆ.
ಹೀಗೆ ಈ ವಿಧಾನ ಅನುಸರಿಸುವುದರ ಮೂಲಕ ನೀವೇ ನಿಮ್ಮ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಫೋನ್ ಮೂಲಕವೇ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆಯಾ ಆಗಿಲ್ವವಾ ಎನ್ನುವುದನ್ನು ಸುಲಭವಾಗಿ ತಿಳಿದು ಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!