ಇದರಲ್ಲಿ ಒಂದು ಸಂಖ್ಯೆ ಆಯ್ಕೆ ಮಾಡಿ ನಿಮ್ಮ ಜೀವನದಲ್ಲಿ ಯಶಸ್ಸು ಯಾವಗ ಸಿಗುತ್ತೆ ಅನ್ನೋ ಸಿಕ್ರೇಟ್ ತಿಳಿದುಕೊಳ್ಳಿ.!

 

ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಅವರ ಜೀವನದ ಗುರಿ ಇದ್ದೇ ಇರುತ್ತದೆ. ಕೆಲವರು ಮಹತ್ವಕಾಂಕ್ಷೆಗಳನ್ನು ಇಟ್ಟುಕೊಂಡು ಬದುಕುತ್ತಾರೆ, ಕೆಲವರಿಗೆ ಸಣ್ಣ ಪುಟ್ಟ ಕಾರ್ಯಗಳನ್ನು ಜಯಿಸಿದರೂ ಮಹದಾನಂದವಾಗುತ್ತದೆ.

ವಿದ್ಯಾರ್ಥಿಯೊಬ್ಬನಿಗೆ ಓದು ಮುಗಿದ ನಂತರ ಆತ ಬಯಸಿದ ಉದ್ಯೋಗ ಸಿಕ್ಕರೆ, ವ್ಯಾಪಾರ ವ್ಯವಹಾರ ಮಾಡುವ ವ್ಯಕ್ತಿಗೆ ತನ್ನ ಟಾರ್ಗೆಟ್ಗೆ ತಕ್ಕ ಲಾಭ ಸಿಕ್ಕರೆ ಅಥವಾ ಯಾವುದಾದರೂ ಒಂದು ಕ್ಷೇತ್ರದಲ್ಲಿ ಹೆಸರು ಮಾಡಬೇಕು ಎಂದು ಸಾಧನೆ ಮಾಡಲು ಸತತ ಶ್ರಮ ಹಾಕಿ ಹೋರಾಡುತ್ತಿರುವ ವ್ಯಕ್ತಿಗೆ ಗುರಿ ಎಷ್ಟೇ ತೀಕ್ಷ್ಣವಾಗಿದ್ದರೂ ಕೂಡ ಒಮ್ಮೊಮ್ಮೆ ಇನ್ನೆಷ್ಟು ದಿನ ಈ ಕ’ಷ್ಟ ಎಂದು ಅನಿಸದೆ ಇರದು.

ಅಂತಹ ಸಮಯಗಳಲ್ಲಿ ನಮಗೆ ಯಾವಾಗ ಗುರಿ ಮುಟ್ಟುತ್ತೇವೆ ಎನ್ನುವ ಸುಳಿವು ಸಿಕ್ಕರೆ ಅದು ದಾರಿದೀಪವಾಗುತ್ತದೆ. ಆ ಆಸೆಯಲ್ಲಿ ಇನ್ನಷ್ಟು ಮುಂದೆ ಹೋಗಲು ಶಕ್ತಿ ಬರುತ್ತದೆ. ಈ ರೀತಿ ನಿಮಗೂ ನಿಮ್ಮ ಸಕ್ಸಸ್ ಯಾವಾಗ ಸಿಗುತ್ತದೆ ಎಂದು ತಿಳಿದುಕೊಳ್ಳಲು ಕುತೂಹಲ ಇದ್ದರೆ ಅಥವಾ ಈ ಬಗ್ಗೆ ಗೊಂದಲಕ್ಕೀಡಾಗಿ ನೊಂದುಕೊಂಡಿದ್ದರೆ ಈಗ ನಾವು ಹೇಳುವ ಈ ವಿಧಾನದ ಮೂಲಕ ಉತ್ತರ ಕಂಡುಕೊಳ್ಳಿ.

ಇದನ್ನು ಮಾಡುವ ಮುನ್ನ ಮೊದಲಿಗೆ ಸ್ನಾನ ಮಾಡಿ ಮಾಡಿ ನಿಮ್ಮ ಇಷ್ಟ ದೇವರು ಹಾಗೂ ಕುಲ ದೇವರಿಗೆ ನಮಸ್ಕರಿಸಿ ಮನಸ್ಸಿನಲ್ಲಿ ದೇವರ ಧ್ಯಾನ ಮಾಡುತ್ತಾ ಸಕಾರಾತ್ಮಕವಾಗಿ ಆಲೋಚಿಸುತ್ತಾ ಕುಳಿತುಕೊಳ್ಳಿ. ಹತ್ತು ನಿಮಿಷ ಮೌನದಿಂದಿದ್ದು ಈಗ ಮನಸ್ಸಿನಲ್ಲಿ ನಿಮ್ಮ ಕಣ್ಣ ಎದುರಿಗೆ 3 ಕಳಶಗಳು ಇವೆ.

ಆ ತುಂಬಿದ ಕಳಶದಲ್ಲಿ ಮೊದಲನೇ ಕಳಶದ ಸಂಖ್ಯೆ 111, ಎರಡನೇ ಕಳಶದ ಸಂಖ್ಯೆ 222, ಮೂರನೇ ಕ‌ಳಶದ ಸಂಖ್ಯೆ 777 ಎಂದುಕೊಳ್ಳಿ. ಆ ಮೂರು ಕಳಶಗಳಲ್ಲಿ ಒಂದನ್ನು ಸೆಲೆಕ್ಟ್ ಮಾಡಿ. ನೀವೇನಾದರೂ 111 ಈ ಸಂಖ್ಯೆಯ ಕಳಶವನ್ನು ಸೆಲೆಕ್ಟ್ ಮಾಡಿದ್ದರೆ ನಿಮ್ಮ ಗುರಿ ಇನ್ನೂ ಬಹಳ ದೂರ ಇದೆ.

ನೀವು ಇನ್ನಷ್ಟು ಶ್ರಮಪಟ್ಟು ದುಡಿಯಬೇಕು. ನೀವು ಹಿಂದೆ ಮಾಡಿದ ಯಾವುದೋ ಒಂದು ತಪ್ಪಿನ ಪರಿಣಾಮವಾಗಿ ಈಗ ನಿಮಗೆ ಸಾಧನೆ ದೂರವಾಗುತ್ತಿದೆ, ಆದರೆ ಗೆಲ್ಲುವ ಅವಕಾಶ ಖಂಡಿತ ಇದ್ದೆ ಇದೆ. ನಿಮ್ಮ ಶ್ರಮ ಎಂದಿಗೂ ವ್ಯರ್ಥ ಆಗುವುದಿಲ್ಲ ಆದರೆ ನೀವು ಇನ್ನೂ ದೂರ ನಡೆಯಬೇಕು ಎಂದು ಅರ್ಥ

ನೀವೇನಾದರೂ 222 ಈ ಸಂಖ್ಯೆಯ ಕಳಶವನ್ನು ಸೆಲೆಕ್ಟ್ ಮಾಡಿದರೆ ನೀವು ಗುರಿಗೆ ಬಹಳ ಹತ್ತಿರದಲ್ಲಿ ಇದ್ದೀರಿ ಆದರೆ ಈ ಕ್ಷಣಕ್ಕೆ ಕೊನೆ ಹಂತದಲ್ಲಿ ಗೊಂದಲಕ್ಕೊಳಗಾಗುತ್ತಿದ್ದೀರಿ ಎಂದು ಅರ್ಥ. ನೀವು ಯಾವುದೇ ಅನುಮಾನ ಇಲ್ಲದೆ ನೀವು ಯಾವ ಹಾದಿಯಲ್ಲಿ ನಡೆಯುತ್ತಿದ್ದೀರಿ ಅದೇ ದಾರಿಯಲ್ಲಿ ಸಾಗಿ ಖಂಡಿತ ಗೆಲ್ಲುತ್ತೀರಿ.

ಇನ್ನು 777 ಸಂಖ್ಯೆ ಕಳಶವನ್ನು ಸೆಲೆಕ್ಟ್ ಮಾಡಿದ್ದೀರಾ ಎಂದರೆ ನೀವು ಕೂಡ ಸ್ವಲ್ಪ ಸಮಯ ಕಾಯಬೇಕಾಗುತ್ತದೆ, ಆದರೆ ಬಹಳ ದೂರವೇನಿಲ್ಲ. ಇನ್ನು ಕೆಲವೇ ಸಮಯದಲ್ಲಿ ಸಕ್ಸಸ್ ಸಿಗಲಿದೆ ಆದರೆ ಯಾವುದೇ ಕಾರಣಕ್ಕೂ ಹಿಂದೇಟು ಹಾಕಬೇಡಿ.

ಇದುವರೆಗೂ ನೀವು ಪಟ್ಟ ಕ’ಷ್ಟ ಎಷ್ಟು ಎಂದು ನಿಮಗೆ ಗೊತ್ತಿರುತ್ತದೆ. ಅದನ್ನೆಲ್ಲ ಒಮ್ಮೆ ನೆನೆಸಿಕೊಂಡು ಖಂಡಿತ ಮುನ್ನುಗ್ಗಿ ಅಂದುಕೊಂಡ ಕಾರ್ಯ ಜಯಿಸುತ್ತದೆ. ಈ ಪರೀಕ್ಷೆ ಮಾಡಿಕೊಂಡು ನಿಮ್ಮ ಏಕಾಗ್ರತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡು ಗುರಿ ಕಡೆ ನಡೆಯಿರಿ ಗುರಿಮುಟ್ಟುವ ತನಕ ನಿಲ್ಲದಿರಿ.

Leave a Comment

WhatsApp Group Join Now
Telegram Group Join Now