ಹಿಂದೆಲ್ಲ ವಯೋಸಹಜ ಕಾಯಿಲೆ ಎಂದು ಹೇಳಲಾಗುತ್ತಿದ್ದ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಈಗ ಅತ್ಯಂತ ಕಿರಿಯ ವಯಸ್ಸಿನವರಲ್ಲಿಯೇ ಕಾಣುತ್ತಿದ್ದೇವೆ. ಈಗಿನ ಯುವ ಜನತೆಯು ಆಧುನಿಕ ಜೀವನಶೈಲಿಗೆ ಹೊಂದಿಕೊಂಡು ಆರೋಗ್ಯದ ಬಗ್ಗೆ ಬಹಳ ತಾತ್ಸಾರ ಮಾಡುತ್ತಿದ್ದಾರೆ.
ಅವರು ಅಳವಡಿಸಿಕೊಂಡಿರುವ ತಪ್ಪಾದ ಜೀವನ ಶೈಲಿ, ಕಳಪೆ ಆಹಾರ ಪದ್ಧತಿ, ಆಶಿಸ್ತಿನಿಂದ ಕೂಡಿರುವ ದೈನಂದಿಕ ಚಟುವಟಿಕೆಗಳು, ಸರಿಯಾದ ನಿದ್ರೆ ಕ್ರಮ ಇಲ್ಲದೆ ಇರುವುದು ಇತ್ಯಾದಿ ಕಾರಣಗಳಿಂದಾಗಿ ನೂರಾರು ಕಾಯಿಲೆಗಳಿಗೆ ದೇಹ ಗೂಡಾಗುತ್ತಿದೆ ಇದರಲ್ಲಿ BP ಕೂಡ ಒಂದು.
ಈ ಮೇಲೆ ತಿಳಿಸಿದ ತಪ್ಪುಗಳನ್ನು ಸರಿಪಡಿಸಿಕೊಂಡರೆ ದೇಹಕ್ಕೆ ಬರುವ ಹತ್ತಾರು ಕಾಯಿಲೆಗಳಿಂದ ದೇಹವನ್ನು ರಕ್ಷಿಸಬಹುದು ಮತ್ತು ಈಗಾಗಲೇ ನಿಮಗೆ BP ಬಂದಿದ್ದರೆ ಅದನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಯೋಗ ಹಾಗೂ ಆಯುರ್ವೇದಿಕ್ ಚಿಕಿತ್ಸೆಯ ಮೊರೆ ಹೋಗಬಹುದು. ಆಯುರ್ವೇದದಲ್ಲಿ ತಿಳಿಸಲಾಗಿರುವ ಐದು ಅಪರೂಪದ ಮನೆ ಮದ್ದುಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ.
ಇವುಗಳ ಸೇವನೆಯಿಂದಾಗಿ BP ಕಂಟ್ರೋಲ್ ಗೆ ಬರುತ್ತದೆ ರಕ್ತನಾಳಗಳಲ್ಲಿ ರಕ್ತ ಸಂಚಾರಕ್ಕೆ ಅಡ್ಡಿಯಾದಾಗ, ಸಣ್ಣ ಸಣ್ಣ ಬ್ಲಾಕೇಜ್ ಗಳು ಉಂಟಾದಾಗ ಒತ್ತಡ ಹೆಚ್ಚಾಗಿ BP ಬರುತ್ತದೆ. ವೇಗಸ್ ನಾಡಿಯು ದೇಹದ ಹಲವು ಪ್ರಕ್ರಿಯೆಗಳ ಮೇಲೆ ಸಂಪರ್ಕ ಹೊಂದಿರುತ್ತದೆ.
ಉಸಿರಾಟ, ಜೀರ್ಣಕ್ರಿಯೆ, ಹೃದಯ ಸಂಬಂಧಿತ ಕಾರ್ಯ ಚಟುವಟಿಕೆಗಳು ಸೇರಿದಂತೆ ದೇಹದ ಬಹುತೇಕ ಕ್ರಿಯೆಗಳ ಮೇಲೆ ಕಂಟ್ರೋಲ್ ಹೊಂದಿರುತ್ತದೆ. ಇವುಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರೆ ವೇಗಸ್ ನಾಡಿ ಕೂಡ ಕ್ರಿಯಾಶೀಲವಾಗಿರಬೇಕು.
ಈಗ ನಾವು ಹೇಳುವ ಐದು ಜ್ಯೂಸ್ ಗಳನ್ನು ಸೇವಿಸುವುದರಿಂದ ವೇಗಸ್ ನಾಡಿ ಕ್ರಿಯಾಶೀಲವಾಗುತ್ತದೆ ಮತ್ತು ಲಿವರ್ ನಲ್ಲಿರುವ ಟಾಕ್ಸಿನ್ ಅಂಶಗಳು ಕೂಡ ದೇಹದಿಂದ ಹೊರ ಹೋಗಿ ದೇಹಕ್ಕೆ ಹೊಸ ಚೈತನ್ಯ ಬರುತ್ತದೆ ದೇಹದಲ್ಲಿರುವ ಅನಗತ್ಯ ಕೊಬ್ಬಿನಂಶ ಕೂಡ BP ಬರುವುದಕ್ಕೆ ಕಾರಣ.
ಈ ಐದು ಮನೆ ಮದ್ದುಗಳನ್ನು ಸೇವಿಸುವುದರಿಂದ ದೇಹದಲ್ಲಿ ಟ್ರೈ ಕ್ಲಿಸರೈಡ್ ಲೋ ಡೆನ್ಸಿನ್ ಹಿಪೋ ಪ್ರೋಟೀನ್ ನಂತಹ ಕೊಲೆಸ್ಟ್ರಾಲ್ ಉತ್ಪತ್ತಿಯಾಗುವುದು ಕುಂಠಿತವಾಗುತ್ತದೆ. BP ಕಂಟ್ರೋಲ್ ಆಗಲು ಮನೆ ಮದ್ದುಗಳ ಬದಲು ಔಷಧಿಗಳ ಮೊರೆ ಹೋಗುವುದರಿಂದ ಸೈಡ್ ಎಫೆಕ್ಟ್ ಗಳು ಕಟ್ಟಿಟ್ಟ ಬುತ್ತಿ ಎಂದು ಹೇಳಬಹುದು.
ಯಾಕೆಂದರೆ ರಕ್ತದೊತ್ತಡ ನಿಯಂತ್ರಿಸುವುದರ ಬದಲು ರಕ್ತದ ನಾಳಗಳಲ್ಲಿ ಉಂಟಾಗಿರುವ ಬ್ಲಾಕೇಜ್ ಕ್ಲಿಯರ್ ಮಾಡುವ ಬದಲು ಇಂಗ್ಲಿಷ್ ಮೆಡಿಸನ್ ನಲ್ಲಿ ಹೃದಯದ ಬಡಿತ ಕಡಿಮೆ ಆಗುವ ಔಷಧಿ ನೀಡಿರುತ್ತಾರೆ. ಮುಂದೆ ಇದು ಇದಕ್ಕಿಂತಲೂ ದೊಡ್ಡದಾದ ಮಾ’ರ’ಣಾಂ’ತಿ’ಕ ಕಾಯಿಲೆಗಳಿಗೆ ನಮ್ಮನ್ನು ಗುರಿ ಮಾಡಬಹುದು.
ಆದ್ದರಿಂದ ನ್ಯಾಚುರಲ್ ಆಗಿ ಇದನ್ನು ಕಂಟ್ರೋಲ್ಗೆ ತರಲು ಪ್ರಯತ್ನಿಸಿ. ನ್ಯಾಚುರಲ್ ಆಗಿ BP ಕಂಟ್ರೋಲ್ ಗೆ ಬರಲು ಸತತ ಐದು ತಿಂಗಳುಗಳ ಕಾಲ ನೀವು ಈ ಮನೆಮದ್ದನ್ನು ಪ್ರತಿದಿನ ಸೇವಿಸಬೇಕು. ಮೊದಲನೇ ತಿಂಗಳಿನಲ್ಲಿ 200 ಗ್ರಾಂ ನಷ್ಟು ಬೂದುಗುಂಬಳದ ಕಾಯಿ ಜ್ಯೂಸ್ ನ್ನು ಪ್ರತಿನಿತ್ಯವೂ ಸೇವಿಸಬೇಕು.
ಎರಡನೇ ತಿಂಗಳಿನಲ್ಲಿ 200 ಗ್ರಾಂ ನಷ್ಟು ಸೋರೆಕಾಯಿ ತೆಗೆದುಕೊಂಡು ಅದರಲ್ಲೂ ಜ್ಯೂಸ್ ಮಾಡಿ ಪ್ರತಿನಿತ್ಯವು ಸೇವಿಸಬೇಕು ಮತ್ತು ಮೂರನೇ ತಿಂಗಳಲ್ಲಿ ಐದರಿಂದ ಆರು ಬೆಟ್ಟದ ನೆಲ್ಲಿಕಾಯಿ ತೆಗೆದುಕೊಂಡು ಅದನ್ನು ಜ್ಯೂಸ್ ಮಾಡಿ ಪ್ರತಿನಿತ್ಯವು ಸೇವಿಸಬೇಕು.
ನಾಲ್ಕನೇ ತಿಂಗಳಿನಲ್ಲಿ ಎಂಟರಿಂದ ಹತ್ತು ಮೂರು ದಳ ಇರುವ ಬಿಲ್ಪತ್ರೆ ಎಲೆಗಳನ್ನು ತೆಗೆದುಕೊಂಡು ಅದರಿಂದ ಜ್ಯೂಸ್ ಮಾಡಿ ಪ್ರತಿನಿತ್ಯ ಸೇವಿಸಬೇಕು ಮತ್ತು ಕೊನೆಯ ತಿಂಗಳಿನಲ್ಲಿ ಒಂದು ಹಿಡಿ ನೆಲನೆಲ್ಲಿ ಸೊಪ್ಪು ತೆಗೆದುಕೊಂಡು ಅದನ್ನು ಜ್ಯೂಸ್ ಮಾಡಿ ಪ್ರತಿನಿತ್ಯವೂ ಸೇವಿಸಿ.
ದುರಭ್ಯಾಸಗಳಿಂದ ದೂರ ಇದ್ದು ಉತ್ತಮ ಆಹಾರ ಹಾಗೂ ಒಳ್ಳೆಯ ಜೀವನ ಶೈಲಿ ಅಳವಡಿಸಿಕೊಂಡು ಯೋಗ ಪ್ರಾಣಯಾಮದಲ್ಲಿ ತೊಡಗಿ, ಬೆಳಗ್ಗೆ ಬೇಗ ಹೇಳುವುದು ರಾತ್ರಿ ಬೇಗ ಮಲಗುವುದು ಇತ್ಯಾದಿ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ನಿಮ್ಮ BP ನ್ಯಾಚುರಲ್ ಆಗಿ ನಾರ್ಮಲ್ ಆಗುತ್ತದೆ.