Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಬಿಗ್ ಬಾಸ್ ನಿಂದ ಹೊರ ಬರುತಿದ್ದಂತೆ ತಾಯಿಗೆ ಹೊಸ ಕಾರ್ ಗಿಫ್ಟ್ ಕೊಟ್ಟ ನೀತು ವನಜಾಕ್ಷಿ.!

Posted on November 27, 2023 By Kannada Trend News No Comments on ಬಿಗ್ ಬಾಸ್ ನಿಂದ ಹೊರ ಬರುತಿದ್ದಂತೆ ತಾಯಿಗೆ ಹೊಸ ಕಾರ್ ಗಿಫ್ಟ್ ಕೊಟ್ಟ ನೀತು ವನಜಾಕ್ಷಿ.!

 

ಬಿಗ್ ಬಾಸ್ ಸೀಸನ್ 10ರ (Bigboss S10) ಕಂಟೆಸ್ಟೆಂಟ್ ನೀತು ವನಜಾಕ್ಷಿ (Neethu Vanajakshi) ಏಳನೇ ವಾರಕ್ಕೆ ಮನೆಯಿಂದ ಹೊರ ಬಿದ್ದಿದ್ದಾರೆ. ಈ ಬಾರಿಯ ಸೀಸನ್ ನಲ್ಲಿ ಮೊಟ್ಟಮೊದಲ ಬಾರಿಗೆ ಕಿಚ್ಚನ ಚಪ್ಪಾಳೆಗೆ ಗಿಟ್ಟಿಸಿಕೊಂಡು ಕರ್ನಾಟಕದ ಜನತೆಯ ಮನ ಗೆದ್ದಿದ್ದ ನೀತು ಅವರು ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಕ್ವೀನ್ ರಿಯಾಲಿಟಿ ಶೋನಲ್ಲಿ (Queens Reality Show) ಕೂಡ ಕಾಣಿಸಿಕೊಂಡು ಮಿಂಚಿದ್ದರು.

ಇಪ್ಪತ್ತರ ಹರೆಯದವರೆಗೂ ಹುಡುಗನಾಗಿದ್ದ ಇವರು ನಂತರ ತಮ್ಮ ಇಚ್ಛೆಯಂತೆ ದೇಹದಲ್ಲಾದ ಬದಲಾವಣೆ ಗುರುತಿಸಿ ಹೆಣ್ಣಾದರು. ಟ್ರಾನ್ಸ್ ಜೆಂಡರ್ ಗಳನ್ನು ಬಹಳ ಹಗುರವಾಗಿ ಕಾಣುವ ಈಗಿನ ಕಾಲದಲ್ಲಿ ತಮ್ಮ ಕಮ್ಯುನಿಟಿಯವರು ಎಲ್ಲಾ ಕ್ಷೇತ್ರದಲ್ಲೂ ಕೂಡ ಮಿಂಚಬೇಕು ಎನ್ನುವ ಆಸೆ ತನ್ನದು ಎಂದು ಹೇಳಿಕೊಳ್ಳುವ ಇವರು ತಮ್ಮ ಸಾಧನೆಯ ಮೂಲಕ ಅದಕ್ಕೆ ರೆಡ್ ಕಾರ್ಪೆಟ್ ಹಾಕಿಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲೂ ಕೂಡ ತಮ್ಮ ಸ್ಪಷ್ಟ ನಿಲುವು, ನೇರ ಮಾತು ಹಾಗೂ ಟಫ್ ಕಾಂಪಿಟೇಶನ್ ಮೂಲಕ ವಾರ ಪೂರ್ತಿ ಸುದ್ದಿಯಲ್ಲಿರುತ್ತಿದ್ದ ನೀತು ಇದೇ ಕಾರಣಕ್ಕೆ ಮನೆಯವರ ಕೆಂಗಣ್ಣಿಗೆ ಗುರಿಯಾಗಿ ಪ್ರತಿ ವಾರವೂ ನಾಮಿನೇಟ್ ಆಗುತ್ತಿದ್ದರು. ಆದರೆ ಏಳನೇ ವಾರಕ್ಕೆ ಅವರ ಅದೃಷ್ಟ ಕೈಕೊಟ್ಟಿದ್ದು ಅರ್ಧ ಪ್ರಯಾಣ ಮುಗಿಸಿ ಮನೆಯಿಂದ ಆಚೆ (eliminated 7th week) ಬಂದಿದ್ದಾರೆ.

ಬಿಗ್ ಬಾಸ್ ಮನೆಗೆ ಹೋಗುವಾಗಲೇ ತಾಯಿಯೇ ತನ್ನ ಶಕ್ತಿ ಹಾಗಾಗಿ ತನ್ನ ಹೆಸರಿನ ಜೊತೆ ಅವರ ಹೆಸರನ್ನು ಸೇರಿಸಿಕೊಂಡಿದ್ದೇನೆ ಎನ್ನುವುದನ್ನು ಹೇಳಿಕೊಂಡು ಎಲ್ಲಾ ಹೆಣ್ಣು ಮಕ್ಕಳಿಗೂ ಈ ರೀತಿ ತಾಯಿ ಸಿಗಬೇಕು, ಪ್ರತಿಯೊಂದು ಮನೆಗಳಲ್ಲೂ ಕೂಡ ನನ್ನ ತಾಯಿ ರೀತಿ ಯೋಚಿಸಿದರೆ ನನ್ನ ರೀತಿ ಸಮಸ್ಯೆ ಇದ್ದವರು ಬದಲಾಗಿ ಒಳ್ಳೆಯ ಜೀವನ ಕಟ್ಟಿಕೊಳ್ಳುತ್ತಾರೆ.

ಅವರಿಗೆ ಕುಟುಂಬದ ಸಪೋರ್ಟ್ ಮುಖ್ಯ ಎಲ್ಲಾ ಮಂಗಳಮುಖಿಯರಿಗೂ ಈ ರೀತಿ ಕುಟುಂಬದ ಸಪೋರ್ಟ್ ಸಿಗಲಿ ಆ ಮೂಲಕ ಅವರ ಬದುಕನ್ನು ಎಲ್ಲರೂ ಮೆಚ್ಚುವಂತೆ ಕಟ್ಟಿಕೊಳ್ಳುವಂತಾಗಲಿ ಎಂದು ತಾಯಿ ಗುಣಗಾನ ಮಾಡಿದ್ದ ಇವರು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆ ತನ್ನ ಇಷ್ಟೊಂದು ಯಶಸ್ಸಿಗೆ ಕಾರಣಕರ್ತರಾದ ತನ್ನ ತಾಯಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ.

ತನ್ನ ತಾಯಿ ಕೂಡ ಒಂದು ರೋಲ್ ಮಾಡೆಲ್ ಎಂದು ಹೇಳಿಕೊಳ್ಳುವ ನೀತು ವನಜಾಕ್ಷಿ ಬಿಗ್ ಬಾಸ್ ಮನೆಗೆ ಹೋಗಲು ಮುಖ್ಯ ಕಾರಣ ನನ್ನ ತಾಯಿ ಅದೇ ಕಾರಣಕ್ಕಾಗಿ ನನ್ನ ಗೆಲುವಿನ ಭಾಗ ಅವರು ಆಗಬೇಕು ಎಂದು ಯಶಸ್ವಿಯಾಗಿ ಐವತ್ತು ದಿನ ಮುಗಿಸಿ ಆಚೆ ಬಂದ ಸಂತಸದಲ್ಲಿ ತನ್ನ ತಾಯಿಗೆ ಮಾರುತಿ ಸುಜುಕಿ ದುಬಾರಿ ಬೆಲೆಯ ಬಿಳಿ ಬಣ್ಣದ ಕಾರ್ ನ್ನು ಉಡುಗೊರೆಯಾಗಿ (Neethu Surprice gift to Mother) ನೀಡಿದ್ದಾರೆ.

ಹಾಗಾಗಿ ನೆನ್ನೆಯಷ್ಟೇ ಮನೆಯಿಂದ ಎಲಿಮಿನೇಟ್ ಆಗಿ ಬಂದ ನೀತು ವನಜಾಕ್ಷಿ ಅವರು ಇಂದು ತನ್ನ ತಾಯಿಗೆ ಕಾರ್ ನೀಡಿ ಖುಷಿ ಪಡಿಸಿದ್ದಾರೆ. ನೀತು ತಾಯಿಯ ಜೊತೆ ನಿಂತು ಕಾರ್ ಖರೀದಿಸುತ್ತಿರುವುದು ಮತ್ತು ಅದೇ ಕಾರಿನಲ್ಲಿ ಕೂರಿಸಿಕೊಂಡು ಡ್ರೈವ್ ಮಾಡುತ್ತಾ ತಮ್ಮ ಮನೆಗೆ ಬಂದಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು ನೆಟ್ಟಿಗರು ನೀತು ನಿಜವಾದ ಸಾಧಕಿ ಆಕೆಗೆ ಅವರ ತಾಯಿಯ ಶಕ್ತಿ ಎಂದು ಮೆಚ್ಚಿಕೊಂಡಾಡುತ್ತಿದ್ದಾರೆ.

ನೀತು ಅವರ ಬದುಕಿನ ಕಹಿ ಘಟನೆಗಳು ಮುಗಿದು ಇದೇ ರೀತಿ ಸಾಧನೆಯ ಶಿಖರ ಏರಲಿ ಎಂದು ನಾವು ಕೂಡ ಹಲಸೋಣ ಅದೇ ರೀತಿ ಪ್ರತಿಯೊಂದು ಹೆಣ್ಣಿಗೂ ಗಂಡಿಗೂ ಟ್ರಾನ್ಸ್ ಜೆಂಡರ್ ಗೂ ಅವರ ಕುಟುಂಬದಿಂದ ಇಷ್ಟೇ ಸಪೋರ್ಟ್ ಸಿಗುವಂತಾಗಲಿ ಎಂದು ಬಯಸೋಣ.

Viral News
WhatsApp Group Join Now
Telegram Group Join Now

Post navigation

Previous Post: BP ಕಂಟ್ರೋಲ್ ಮಾಡುವ 5 ಜ್ಯೂಸ್ ಗಳು, ಜೀವನಶೈಲಿ ಹೀಗಿದ್ದರೆ ಜೀವನಪರ್ಯಂತ BP ಬರುವುದಿಲ್ಲ.!
Next Post: ಗ್ಯಾಸ್ಟ್ರಿಕ್ ಶಾಶ್ವತವಾಗಿ ವಾಸಿಯಾಗಲು ಸರಳ ಉಪಾಯ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore