ಪ್ರತಿಯೊಬ್ಬರಿಗೂ ಕೂಡ ತಾವು ಚೆನ್ನಾಗಿ ಕಾಣಬೇಕು ಎನ್ನುವ ಆಸೆ ಇದೆ. ಅದರಲ್ಲಿ ಹೆಣ್ಣು ಮಕ್ಕಳಿಗಂತೂ ಅವರ ಸೌಂದರ್ಯದ್ದೇ ಚಿಂತೆ ಮ. ಈಗಷ್ಟೇ ಶಾಲೆಗೆ ಹೋಗುತ್ತಿರುವ ಹೆಣ್ಣು ಮಗುವಿನಿಂದ ಹಿಡಿದು ವಯಸ್ಸಾಗಿರುವವರ ವರೆಗೆ ಹೆಣ್ಣು ಮಕ್ಕಳು ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂದು ಆಸೆ ಪಡುತ್ತಾರೆ. ಅದಕ್ಕಾಗಿ ಎಷ್ಟೆಷ್ಟೋ ಮೇಕಪ್ ಮಾಡುತ್ತಾರೆ ಆದರೆ ಮುಖದಲ್ಲಿ ಅದರ ಪ್ರಭಾವ ಕಾಣಲಿಲ್ಲ ಎಂದರೆ ಆಗುವ ನೋ’ವು ಅಸ್ತಿಷ್ಟಲ್ಲ.
ಇದಕ್ಕೆ ಕಾರಣ ನಮ್ಮ ಮುಖದಲ್ಲಿರುವ ಕಲೆಗಳು ನಾವು ಏನೇ ಹಾಕಿ ಇದನ್ನು ಕವರ್ ಮಾಡಲು ಹೋದರು ಅದು ನ್ಯಾಚುರಲ್ ಎನಿಸುವುದಿಲ್ಲ ಮುಖದಲ್ಲಿರುವ ಕಪ್ಪು ಕಲೆಗಳು, ಭಂಗು ಮುಖದ ಚೆಂದವನ್ನು ಹಾಳು ಮಾಡುತ್ತಿರುತ್ತದೆ. ಯಾವುದೇ ಸಮಸ್ಯೆ ಆದರೂ ಅದಕ್ಕೆ ಪರಿಹಾರ ಇದ್ದೇ ಇದೆ. ಆದರೆ ಅಡ್ಡ ಪರಿಣಾಮಗಳಿಲ್ಲದೆ ಸೂಕ್ಷ್ಮವಾಗಿ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು ಇದಕ್ಕೆ ಆಯುರ್ವೇದ ಬೆಸ್ಟ್.
ಯಾವುದೇ ದುಬಾರಿ ಬೆಲೆಯ ಔಷಧಿ ಅಲ್ಲ ಜೊತೆಗೆ ನೂರಕ್ಕೆ ನೂರರಷ್ಟು ಯಾವುದೇ ಅಡ್ಡ ಪರಿಣಾಮ ಇಲ್ಲ ನ್ಯಾಚುರಲ್ಲಾಗಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ನ್ಯಾಚುರಲ್ ಆಗಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು. ಅದರ ಬದಲು ದುಬಾರಿ ಬೆಳೆಯ ಕೆಮಿಕಲ್ ಯುಕ್ತ ಕ್ರೀಮ್ ಗಳನ್ನು ಬಳಸಿದರೆ ಚರ್ಮದ ಆರೋಗ್ಯ ಬಹಳ ಸೂಕ್ಷ್ಮವಾಗಿರುವುದರಿಂದ ಮುಂದಿನ ದಿನಗಳಲ್ಲಿ ಬೇರೆ ರೀತಿಯ ಸಮಸ್ಯೆ ಕಾಣಿಸಿಕೊಳ್ಳಬಹುದು.
ಕೆಲವರು ಲೇಸರ್ ಚಿಕಿತ್ಸೆ ಕಡೆ ಹೋಗುತ್ತಾರೆ ಇದು ಕೂಡ ಒಳ್ಳೆಯದಲ್ಲ ಯಾಕೆಂದರೆ ಮುಖದಲ್ಲಿ ಅತಿ ಸೂಕ್ಷ್ಮತೆ ಸೂಕ್ಷ್ಮ ನರಗಳು ಇರುವುದರಿಂದ ಇದಕ್ಕೆಲ್ಲ ಹಾನಿ ಆಗುತ್ತದೆ. ಇದರ ಬದಲು ನ್ಯಾಚುರಲ್ ಆಗಿ ಯಾವ ರೀತಿ ಮುಖದಲಾಗಿರುವ ಭಂಗು ಹಾಗೂ ಕಪ್ಪು ಕಲೆಗಳನ್ನು ಹೋಗಿಸಿಕೊಳ್ಳಬಹುದು ಎನ್ನುವ ಮನೆಮದ್ದುಗಳನ್ನು ತಿಳಿಸಿಕೊಡುತ್ತಿದ್ದೇವೆ ಇದನ್ನು ಪಾಲಿಸಿ ಪರಿಹಾರ ಪಡೆಯಿರಿ.
* ಮೊದಲಿಗೆ ಯಾವುದೇ ಸಮಸ್ಯೆಗೆ ಯಾವುದೇ ಸಮಸ್ಯೆಗೆ ಕಾರಣ ಕಂಡುಕೊಂಡರೆ ಪರಿಹಾರ ಬಹಳ ಸುಲಭ ಜೊತೆಗೆ ಅದನ್ನು ಮತ್ತೆ ಬಾರದಂತೆ ಮೂಲದಿಂದ ಗುಣ ಮಾಡುವುದು ಕೂಡ ಮುಖ್ಯ, ಹೀಗಾಗಬೇಕು ಎಂದರೆ ಮೊದಲು ನಿಮ್ಮ ಕರುಳು ಕ್ಲೀನ್ ಆಗಿ ಇರಬೇಕು.
ಅಜೀರ್ಣ ಮಲಬದ್ಧತೆ ಮತ್ತು ಪಿತ್ತ ವಿಕಾರಗಳಿಂದಾಗಿ ಕರುಳಿನಲ್ಲಿ ಟಾಕ್ಸಿನ್ ಅಂಶಗಳು ಸೇರಿಕೊಂಡು ಅದರ ಪರಿಣಾಮವಾಗಿ ಮುಖದಲ್ಲಿ ಈ ರೀತಿ ಕಲೆಗಳು ಉಂಟಾಗುತ್ತಿರುತ್ತವೆ. ನಮ್ಮ ಹೊಟ್ಟೆ ಕ್ಲೀನ್ ಆಗಲು ತುಪ್ಪದ ಸೇವನೆ ಅತ್ಯುತ್ತಮ ಔಷಧಿ ಪ್ರತಿದಿನ ಬೆಳಿಗ್ಗೆ ತಪ್ಪದೇ ಒಂದು ಚಮಚ ಶುದ್ಧ ಹಸುವಿನ ತುಪ್ಪ ಸೇವಿಸಿ.
* ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಸಾಧ್ಯವಾದಷ್ಟು ಕುಡಿಯುವುದರಿಂದ ಕೂಡ ಕರುಳು ಕ್ಲೀನ್ ಆಗುತ್ತದೆ ಈ ಮೂಲಕ ಮಲಬದ್ಧತೆ, ಅಸಿಡಿಟಿ ಹಾಗೂ ಅಜೀರ್ಣದಂತಹ ಸಮಸ್ಯೆಗಳು ಕ್ಲಿಯರ್ ಆಗುತ್ತವೆ.
* ಹೊರಗಿನಿಂದ ಕೂಡ ಔಷಧಿ ಹಾಕುವುದು ಮುಖ್ಯ. ಅದಕ್ಕಾಗಿ ಕಕ್ಕೆ ಮರ ಎನ್ನುವುದು ಹಳ್ಳಿಗಾಡಿನಲ್ಲಿರುವ ಎಲ್ಲರಿಗೂ ತಿಳಿದಿರುತ್ತದೆ. ಇದು ಸೀಸನ್ ನಲ್ಲಿ ವೃಕ್ಷ ಪೂರ್ತಿ ಹೂ ಬಿಡುತ್ತದೆ. ಹೂ ಹಳದಿ ಬಣ್ಣದಲ್ಲಿದ್ದು ಹೂ ಬಿಟ್ಟಾಗ ಇಡಿ ವೃಕ್ಷವೇ ಬಂಗಾರದ ವೃಕ್ಷದ ರೀತಿ ಕಾಣುತ್ತಿರುತ್ತದೆ.
ಆ ಸಮಯದಲ್ಲಿ ಹೂವನ್ನು ತಂದು ಚೆನ್ನಾಗಿ ಒಣಗಿಸಿ ಪುಡಿಮಾಡಿ ಇಟ್ಟುಕೊಳ್ಳಿ, ನಿಮಗೆ ಯಾವ ದಿನ ಹಚ್ಚಬೇಕು ಆ ದಿನ ಕೊಬ್ಬರಿ ಎಣ್ಣೆ ಜೊತೆಗೆ ಈ ಪುಡಿಯನ್ನು ಮಿಕ್ಸ್ ಮಾಡಿ ಭಂಗು ಅಥವಾ ಕಪ್ಪು ಕಲೆಗಳು ಇರುವ ಜಾಗಕ್ಕೆ ಹಾಕಿ ರಾತ್ರಿಪೂರ್ತಿ ಹಾಗೆ ಬಿಟ್ಟು ಮರುದಿನ ಬೆಳಿಗ್ಗೆ ಕಡಲೇಹಿಟ್ಟಿನಿಂದ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ ಅದ್ಭುತವಾದ ರಿಸಲ್ಟ್ ಕಾಣುತ್ತೀರಿ.
* ಒಂದು ವೇಳೆ ಇದನ್ನು ಮಾಡಲು ಸಾಧ್ಯವಾಗದೆ ಇದ್ದರೆ ಆಯುರ್ವೇದ ಅಂಗಡಿಗಳಲ್ಲಿ ಸೌಂದರ್ಯ ತೈಲ ಸಿಗುತ್ತದೆ ಅದನ್ನು ಕೂಡ ಬಳಸಬಹುದು.