ಈಗಿನ ಕಾಲದಲ್ಲಿ ಸೌಂದರ್ಯಕ್ಕೆ ಬೆಲೆ ಎಂದರೆ ಆ ಮಾತು ತಪ್ಪಾಗಲಾರದು. ನಿಧಾನವಾಗಿ ನಾವು ವ್ಯಕ್ತಿತ್ವಕ್ಕೆ ಮನಸೋತು ಗೌರವ ಕೊಟ್ಟರು ಕೂಡ ಮೊದಲ ಬಾರಿಗೆ ನೋಡಿದ ತಕ್ಷಣ ಆಕರ್ಷಣೆಯಾಗುವುದು ಅವರ ಸೌಂದರ್ಯದಿಂದಲ ಹೀಗಾಗಿ ಪ್ರತಿಯೊಬ್ಬರೂ ದೇಹದ ಸೌಂದರ್ಯದ ಬಗ್ಗೆ ಕಾಳಜಿ ಮಾಡುತ್ತಾರೆ.
ಈ ವಿಚಾರದಲ್ಲಿ ಹೆಣ್ಣು ಮಕ್ಕಳು ಮಾತ್ರ ಎಂದು ಹೇಳುವಂತಿಲ್ಲ ಇತ್ತೀಚಿನ ದಿನಗಳಲ್ಲಿ ಹುಡುಗರು ಕೂಡ ಹೆಚ್ಚು ಅಟ್ರಾಕ್ಟಿವ್ ಆಗಿರೋದು ಕಾನ್ಫಿಡೆನ್ಸ್ ಎಂದು ಭಾವಿಸಿದ್ದಾರೆ, ಹಾಗಾಗಿ ತಮ್ಮನ್ನು ಚೆನ್ನಾಗಿ ಪ್ರಸೆಂಟ್ ಮಾಡಿಕೊಳ್ಳುವುದಕ್ಕೆ ಬಯಸುತ್ತಾರೆ. ಈ ವಿಚಾರದಲ್ಲಿ ಎಲ್ಲರಿಗೂ ಸಮಸ್ಯೆ ಆಗುವುದು ಮುಖ ಹಾಗೂ ಕೈಕಾಲುಗಳಲ್ಲಿ ಇರುವ ಕಲೆಗಳು ಅದಕ್ಕೆ ಸಂಬಂಧಪಟ್ಟ ಹಾಗೆ ಒಂದು ಪರಿಹಾರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಮುಖ ಹಾಗೂ ಕೈಕಾಲುಗಳಿಗೆ ಕಲೆಗಳು ಆಗುತ್ತವೆ ಅದು ನಾವು ಗಾಯ ಮಾಡಿಕೊಂಡಿದ್ದ ಕಲೆಗಳು ಅಥವಾ ಚರ್ಮದ ಸಮಸ್ಯೆಗಳಾಗಿ ಕಲೆಗಳು ಅಥವಾ ಆಕ್ಸಿಡೆಂಟ್ ಕುರುಹುಗಳು ಇನ್ಯಾವುದೋ ಮಾರ್ಕ್ ಗಳು ಇರಬಹುದು. ಇದು ಮುಖಕ್ಕೆ ದೃಷ್ಟಿಬೋಟ್ಟು ಇದ್ದಂತಾಗಿ ಮುಖದ ಲಕ್ಷಣವನ್ನೇ ಕೆಡಿಸಿ ಬಿಡುತ್ತದೆ. ಕೈಕಾಲುಗಳಲ್ಲಿ ಇದ್ದರೂ ಕೂಡ ಅದನ್ನು ತೋರಿಸಿಕೊಳ್ಳುವುದಕ್ಕೆ ಒಂದು ರೀತಿಯ ಮುಜುಗರ ಆಗುತ್ತದೆ.
ಯಾವುದೇ ಮಾರ್ಕ್ ಗಳು ಮುಖದಲ್ಲಿ ಉಳಿಯದಂತೆ ಜೊತೆಗೆ ಅತಿ ಹೆಚ್ಚು ಬಿಸಿಲಿನಲ್ಲಿ ಓಡಾಡಿ ಸನ್ ಟ್ಯಾನ್ ಆಗಿದ್ದರು ಅಥವಾ ಬಿಸಿಲಿಗೆ ಹೋಗದೆ ಇರುವ ಕಾರಣಕ್ಕಾಗಿ ಮುಖದಲ್ಲೀ ಭಂಗು ರೀತಿಯ ಕಲೆಗಳು ಆಗಿದ್ದರು ಈಗ ನಾವು ಹೇಳುತ್ತಿರುವ ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ. ಎರಡು ಮೂರು ಬಾರಿ ಇದನ್ನು ಮಾಡಿದಾಗಲೇ ಅದ್ಭುತವಾದ ರಿಸಲ್ಟ್ ಕಾಣುತ್ತೀರಿ ಮತ್ತು ಯಾವುದೇ ಫೇಶಿಯಲ್ ಗಿಂತಲೂ ಕಡಿಮೆ ಇಲ್ಲದ ಲುಕ್ ಹಾಗು ರಿಲ್ಯಾಕ್ಸ್ ಅನ್ನು ನೀಡುತ್ತದೆ.
ನಿಮ್ಮ ಮನೆಯಲ್ಲಿ ಇರುವ ಪದಾರ್ಥಗಳಲ್ಲಿ ಉಪಯೋಗಿಸಿಕೊಂಡು ಅತಿ ಕಡಿಮೆ ಖರ್ಚಿನಲ್ಲಿ ಅದ್ಭುತವಾದ ರಿಸಲ್ಟ್ ಕೊಡುವ ಈ ಮನೆ ಮದ್ದು ಮಾಡಬಹುದು. ಇದನ್ನು ಮಾಡಲು ಬೇಕಾಗಿರುವುದು ನಿಂಬೆಹಣ್ಣಿನ ಸಿಪ್ಪೆ, ನಿಂಬೆಹಣ್ಣಿನ ರಸ, ಮುಲ್ತಾನ್ ಮಟ್ಟಿ, ರೋಜ್ ಪೆಟಲ್ಸ್, ಅಲೋವೆರಾ ಹಾಗೂ ಸ್ವಲ್ಪ ದಾಲ್ಚಿನ್ನಿ ಪೌಡರ್.
ಈಗ ನಾನು ಹೇಳಿದ ಈ ಎಲ್ಲಾ ವಸ್ತುಗಳನ್ನು ಕೂಡ ಒಂದು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಗ್ರೈಂಡ್ ಮಾಡಿಕೊಳ್ಳಿ ಈ ರೀತಿ ತಯಾರಾದ ಫೈನ್ ಪೇಸ್ಟ್ ಅನ್ನು ಮೊದಲು ಮುಖವನ್ನು ಚೆನ್ನಾಗಿ ವಾಶ್ ಮಾಡಿ ಮುಖಕ್ಕೆ ಅಪ್ಲೈ ಮಾಡಿ ಪ್ಯಾಕ್ ಹಾಕಿಕೊಳ್ಳಿ. ಒಂದು ವೇಳೆ ಕೈಕಾಲುಗಳಲ್ಲಿ ಈ ರೀತಿ ಕಲೆಗಳು ಇದ್ದರೆ ಕೈ ಕಾಲುಗಳಿಗೂ ಕೂಡ ಹಚ್ಚಬಹುದು.
ಇದನ್ನು ತಯಾರಿಸುವಾಗಲೇ ಮುಲ್ತಾನ್ ಮಟ್ಟಿ ಜಾಸ್ತಿಯಾಗಿ ಬಳಸಿ ಅದು ಉತ್ತಮ ರಿಸಲ್ಟ್ ಕೊಡುತ್ತದೆ. ಈ ರೀತಿ ಹಾಕಿದ ಮೇಲೆ ಅದು ಒಣಗುವರೆಗೂ ಬಿಟ್ಟು ನಿಧಾನವಾಗಿ ಅದನ್ನು ಸ್ಕ್ರಬ್ ಮಾಡಿ ತೆಗೆಯಿರಿ ಈಗ ಮುಖವನ್ನು ವಾಶ್ ಮಾಡಲು ಕಡಲೆ ಹಿಟ್ಟು ಅಥವಾ ಮುಲ್ತಾನ್ ಮಟ್ಟಿಯನ್ನೇ ಬಳಸಿ. ಈ ರೀತಿ ವಾರದಲ್ಲಿ ಎರಡು ದಿನ ಅಥವಾ ಮೂರು ದಿನ ಮಾಡಿ ಒಂದೇ ವಾರದಲ್ಲಿ ನಿಮಗೆ ಅದ್ಭುತವಾದ ರಿಸಲ್ಟ್ ತಿಳಿಯುತ್ತದೆ ಮತ್ತು ಇದರ ಫಲಿತಾಂಶವನ್ನು ನೀವು ಅರಿತ ಮೇಲೆ ತಪ್ಪದೆ ಈ ಸಿಂಪಲ್ ಟ್ರಿಕ್ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ.