
ರೇಷನ್ ಕಾರ್ಡ್ (ration card) ಈಗ ಎಷ್ಟು ಪ್ರಮುಖ ದಾಖಲೆಯಾಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕರ್ನಾಟಕದಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಷಯವಾದ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ (ration vard cumpulsory for guarantee Schemes) ಸಹಾಯಧನವನ್ನು ಪಡೆಯಲು ರೇಷನ್ ಕಾರ್ಡ್ ನಲ್ಲಿ ಹೆಸರಿರುವುದು ಬಹಳ ಮುಖ್ಯ.
ಆದರೆ ಈವರೆಗೂ ಅನೇಕರು ರೇಷನ್ ಕಾರ್ಡ್ ಅನ್ನು ಬಹಳ ತಾತ್ಸಾರ ಮಾಡಿದ್ದರು ಕೆಲವರ ಬಳಿ ರೇಷನ್ ಕಾರ್ಡ್ ಇಲ್ಲ, ಇನ್ನು ಕೆಲವರಿಗೆ ರೇಷನ್ ಕಾರ್ಡ್ ನಲ್ಲಿ ಇರುವ ಹೆಸರು ತಪ್ಪಾಗಿದೆ, ರೇಷನ್ ಕಾರ್ಡ್ ನಲ್ಲಿ ಕುಟುಂಬದ ಹೊಸ ಸದಸ್ಯರ ಹೆಸರು ಸೇರ್ಪಡೆ ಆಗಬೇಕಾಗಿದೆ, ಮ’ರ’ಣ ಹೊಂದಿರುವ ಸದಸ್ಯರ ಹೆಸರನ್ನು ತೆಗೆದು ಹಾಕಿಸಬೇಕಿದೆ, ಕುಟುಂಬದಲ್ಲಿ ಮುಖ್ಯಸ್ಥರ ಸ್ಥಾನ ಬದಲಾಯಿಸಬೇಕಾಗಿದೆ.
ಇನ್ನು ಮುಂತಾದ ಅನೇಕ ತಿದ್ದುಪಡಿಗಳಿವೆ ರೇಷನ್ ಕಾರ್ಡ್ ನ ಅಗತ್ಯತೆ ಅರಿವಾದ ಮೇಲೆ ಅನೇಕರು ರೇಷನ್ ಕಾರ್ಡ್ ತಿದ್ದುಪಡಿಗಾಗಿ ಕಾಯುತ್ತಿದ್ದಾರೆ. ರೇಷನ್ ಕಾರ್ಡ್ ನಲ್ಲಿ ಮಾಹಿತಿ ಸರಿಯಾಗಿ ಇಲ್ಲದೆ ಇದ್ದವರು ಮತ್ತು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ ಇರುವ ರೀತಿ ರೇಷನ್ ಕಾರ್ಡ್ ನಲ್ಲಿ ಹೆಸರು ಇಲ್ಲದೆ ಇರುವವರು ಗ್ಯಾರಂಟಿ ಯೋಜನೆಯ ಹಣ ಪಡೆಯಲು ಸಾಧ್ಯವಾಗಲಿಲ್ಲ.
ಈ ಎಲ್ಲಾ ಕಾರಣಗಳಿಂದ ರೇಷನ್ ಕಾರ್ಡ್ ಪಡೆದುಕೊಳ್ಳಲು ಮತ್ತು ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಲು (new ration card amd correction application) ಕಾಯುತ್ತಿರುವವರ ಸಂಖ್ಯೆ ದುಪ್ಪಟ್ಟು ಹೆಚ್ಚಾಗಿದೆ. ಸರ್ಕಾರವು ಕೂಡ ಇವರ ಮನವಿಗಳಿಗೆ ಸ್ಪಂದಿಸಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಹಲವು ಬಾರಿ ಕಾಲಾವಕಾಶ ಮಾಡಿಕೊಟ್ಟಿದೆ.
ಆದರೆ ಪ್ರತಿ ಬಾರಿಯೂ ಸರ್ವರ್ ಸಮಸ್ಯೆ ಅಥವಾ ಹೆಚ್ಚಾದ ರಜ ದಿನಗಳು ಇತ್ಯಾದಿ ಕಾರಣಗಳಿಂದಾಗಿ ಸಂಪೂರ್ಣವಾಗಿ ಎಲ್ಲರಿಗೂ ತಿದ್ದುಪಡಿ ಮಾಡಿಸಿಕೊಳ್ಳಲು ಹಾಗೂ ಹೊಸ ಕಾಡಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಅಂತವರಿಗೆ ಮತ್ತೊಮ್ಮೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ (Food amd Civil supply department notification)
ಫಲಾನುಭವಿಗಳ ಮಾಹಿತಿ ತಿದ್ದುಪಡಿ ಮತ್ತು ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆಗೆ 29 & 30 ನವೆಂಬರ್, 2023ರ ಬೆಳಗ್ಗೆ 10:00 ರಿಂದ 12:00 ಗಂಟೆವರೆಗೆ ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರಿಗೆ 3 ಡಿಸೆಂಬರ್, 2023 ರಂದು ಬೆಳಗ್ಗೆ 11:00 ರಿಂದ ಮಧ್ಯಾಹ್ನ 2:00 ರವರೆಗೆ ಅರ್ಜಿ ಆಹ್ವಾನಿಸಲಾಗುವುದು. ಈ ಬಾರಿ ಪ್ರೈವೇಟ್ ಸೆಕ್ಟರ್ ನಲ್ಲಿ ಅವಕಾಶ ಇರುವುದಿಲ್ಲ.
ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಮಾತ್ರ ತಿಳಿಸಲಾದ ದಿನಾಂಕದಂದು ನೀಡಿರುವ ಸಮಯದ ಒಳಗಡೆ ಅರ್ಜಿ ಸಲ್ಲಿಸಿ ಬೇಕು ಎಂದು ಪ್ರಕಟಣೆ ಹೊರಡಿಸಿ ಘೋಷಿಸಲಾಗಿತ್ತು. ಆದರೆ ಈಗ ಅದರಲ್ಲಿ ಒಂದು ಪ್ರಮುಖ ಬದಲಾವಣೆ (update) ಆಗಿದೆ ಮತ್ತೊಮ್ಮೆ ಇಲಾಖೆ ವತಿಯಿಂದ ಈ ಕುರಿತಾದ ಪ್ರಕಟಣೆ ಹೊರಡಿಸಿ ನಾಗರಿಕರಿಗೆ ವಿಷಯ ತಿಳಿಸಲಾಗಿದೆ.
ಪ್ರಕಟಣೆಯಲ್ಲಿರುವ ವಿಷಯ ಏನೆಂದರೆ, ಈ ಮೇಲೆ ತಿಳಿಸಿದ ದಿನಗಳಂದು ತಾಂತ್ರಿಕ ದೋಷಗಳಿರುವ ಕಾರಣ ಸೇವೆಗಳು ಲಭ್ಯವಿಲ್ಲ (no service because of technical issues) ಆದರೆ ಈ ಸಮಸ್ಯೆಯನ್ನು ಸರಿಪಡಿಸಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಹೆಚ್ಚಿನ ಸಮಯಾವಕಾಶ ಕಲ್ಪಿಸಿ ಕೊಡಲಾಗುವುದು ಎಂದು ಸ್ಪಷ್ಟೀಕರಿಸಲಾಗಿದೆ.
ಇದರಿಂದ ಸಾಕಷ್ಟು ಜನರಿಗೆ ನಿರಾಸೆ ಆಗಿರುವುದಂತೂ ನಿಜ ಆದರೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಅವಕಾಶ ನೀಡಲಾಗುವುದು ಎನ್ನುವ ಭರವಸೆ ಇರುವುದರಿಂದ ಸಮಾಧಾನ ಪಟ್ಟುಕೊಳ್ಳೋಣ. ಬಹಳ ಜನರಿಗೆ ಉಪಯುಕ್ತವಾಗುವ ಮಾಹಿತಿ ಇದಾಗಿದ್ದು ತಪ್ಪದೆ ಇದನ್ನು ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.