ಹಾವು (Snake) ಎಂದ ತಕ್ಷಣವೇ ಎಲ್ಲರೂ ಎದೆ ನಡುಗುತ್ತದೆ ಕಾರಣ ಅದರಲ್ಲಿರುವ ವಿಷಕಾರಿ ಅಂಶ. ಹೆಡೆ ಎತ್ತಿ ನಿಂತ ಮೀಟರ್ ಉದ್ದದ ಕರಿನಾಗರದ ಹಾವನ್ನು (Black Cobra) ಕಂಡರೆ ಯಾರಿಗೆ ತಾನೇ ಭಯ ಆಗುವುದಿಲ್ಲ. ಬಹುಶಃ ಹಾವಾಡಿಗ ಮತ್ತು ಹಾವು ಹಿಡಿಯುವವರನ್ನು ಬಿಟ್ಟು ಉಳಿದ ಎಲ್ಲರಿಗೂ ಕೂಡ ಜೀವವೇ ಬಾಯಿಗೆ ಬಂದ ರೀತಿ ಆಗುತ್ತದೆ.
ಆದರೆ ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಾದದ್ದು ಏನು ಎಂದರೆ ಮನುಷ್ಯನಲ್ಲಿ ಬಿಟ್ಟು ಪ್ರಕೃತಿಯಲ್ಲಿ ಮತ್ಯಾವ ಜೀವಿಯು ಕೂಡ ವಿನಾಕಾರಣ ತೊಂದರೆ ಕೊಡುವುದಿಲ್ಲ ಎಂದು. ಅದೇ ರೀತಿ ಹಾವುಗಳು ಕೂಡ ಅವುಗಳ ಪಾಡಿಗೆ ಬಿಟ್ಟರೆ ಅವರಿಗೆ ಹಾವುಗಳಿಂದ ಯಾವುದೇ ಹಾನಿ ಆಗುವುದಿಲ್ಲ. ಮನುಷ್ಯ ತನ್ನ ಭಯ, ಗಾಬರಿ ಅಥವಾ ಚೇಷ್ಟೆ ಬುದ್ದಿಯಿಂದ ಅದರ ತಂಟೆಗೆ ಹೋಗಿ ವಿಪತ್ತಿಗೆ ಸಿಲುಕುತ್ತಾನೆ.
ಹಾವುಗಳು ಕೂಡ ವಿಶ್ವಾಸಾರ್ಹ ಪ್ರಾಣಿಯೇ, ಅವುಗಳನ್ನು ಕೂಡ ನಂಬಬಹುದು. ವಿಷ ಕಾರುವ ಪ್ರಾಣಿ ಆಗಿದ್ದರೂ ಕೂಡ ಅದು ವಿನಾಕಾರಣ ಯಾರ ಮೇಲು ಬುಸುಗುಡುವುದಿಲ್ಲ ಎನ್ನುವುದನ್ನು ನಿರೂಪಿಸುವಂತಹ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. IFS ಅಧಿಕಾರಿಯಾಗಿರುವ ಸುಶಾಂತ್ ನಂದ ಅವರು ಟ್ವಿಟರ್ ಖಾತೆಯಲ್ಲಿ (IFS Officer Sushanth Nanda Tweet) ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋ ಅಪ್ಲೋಡ್ ಆದ 15 ಗಂಟೆಗಳಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಹಾಗೂ ಸಾವಿರಾರು ಕಾಮೆಂಟ್ ಗಳನ್ನು ಗಿಟ್ಟಿಸಿಕೊಂಡಿದೆ, ಇಷ್ಟೆಲ್ಲಾ ಆಕರ್ಷಣೆಗೆ ಕಾರಣ ಆಗಿರುವುದು ಹಾವು ಮಾತ್ರ ಅಲ್ಲ ಹಾವಿನೊಂದಿಗೆ ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಹಸು (Cow) ಕೂಡ ಹೌದು, ಸುಮಾರು 17 ಸೆಕೆಂಡ್ ಗಳ ಕಾಲ ಇರುವ ಈ ವಿಡಿಯೋ ಈಗ ದೇಶದ ಎಲ್ಲರ ಗಮನವನ್ನು ಕೂಡ ಹಿಡಿದಿಟ್ಟುಕೊಂಡಿದೆ.
ಈ ವಿಡಿಯೋದಲ್ಲಿ ಹಸು ಒಂದರ ಮುಂದೆ ಹಾವು ಹೆಡೆ ಎತ್ತಿ ನಿಂತಿದೆ. ಆದರೆ ಹಸು ಗಾಬರಿಕೊಂಡಿಲ್ಲ, ಬದಲಿಗೆ ತನ್ನ ನಾಲಿಗೆಯಿಂದ ಹಾವಿನ ಹೆಡೆಯನ್ನು ಸವರುತ್ತಿದೆ. ಹಾವು ಕೂಡ ಹಸುವಿಗೆ ಪ್ರೀತಿಯಿಂದ ಸ್ಪಂದಿಸುತ್ತಿದೆ ಈವರಿಗೆ ಈ ವಿಡಿಯೋ ಮೂಲ ತಿಳಿದು ಬಂದಿಲ್ಲ ಆದರೆ ಈ ವಿಡಿಯೋ ನೋಡುತ್ತಿದ್ದರೆ ಬಹಳ ದಿನಗಳಿಂದ ಈ ಎರಡು ಪ್ರಾಣಿಗಳು ಫ್ರೆಂಡ್ಸ್ ಆಗಿರಬಹುದು ಅದರಿಂದ ಇಷ್ಟು ವಿಶ್ವಾಸದಿಂದ ಇವೆ ಎಂದು ಅರ್ಥ ಮಾಡಿಕೊಳ್ಳಬಹುದು.
ಇದನ್ನು ನೋಡಿದ ಪ್ರತಿಯೊಬ್ಬ ನೆಟ್ಟಿಗನು ಆಶ್ಚರ್ಯಕ್ಕೆ ಒಳಗಾಗಿದ್ದಾನೆ. ಅದರಲ್ಲಿ ಕೆಲವರು ಕಮೆಂಟ್ ಮಾಡುವ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಪೋಸ್ಟ್ ಮಾಡಿರುವಂತಹ ಸುಶಾಂತ್ ನಂದ ಅವರು ಶುದ್ಧ ಪ್ರೀತಿಯಿಂದ ಮಾತ್ರ ವಿಶ್ವಾಸ ಗಳಿಸಿಕೊಳ್ಳಲು ಸಾಧ್ಯ ಎಂದು ಅಡಿಬರಹ ಬರೆದು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗಳಲ್ಲಿ ಒಬ್ಬರು ಇದು ಸಾಮರಸ್ಯದ ಪ್ರೀತಿಯಾಗಿದೆ ಎಂದಿದ್ದಾರೆ.
Difficult to explain. The trust gained through pure love 💕 pic.twitter.com/61NFsSBRLS
— Susanta Nanda (@susantananda3) August 3, 2023
ಮತ್ತೊಬ್ಬರು ಪ್ರಕೃತಿಯನ್ನು ಅನುಭವಿಸಿದವರಿಗೆ ಮಾತ್ರ ಈ ರೀತಿ ವಿಶೇಷ ಅನುಭವಗಳು ಆಗಲು ಸಾಧ್ಯ ಎಂದು ಕಮೆಂಟ್ ಬರೆದಿದ್ದರೆ ಇದನ್ನು ಮನುಷ್ಯರಿಗೆ ಹೋಲಿಕೆ ಮಾಡಿದ ಮತ್ತೊಬ್ಬ ನೆಟ್ಟಿಗ ಮನುಷ್ಯರು ಈ ಪ್ರಾಣಿಗಳಿಂದ ನೋಡಿ ಬದುಕುವುದನ್ನು ಕಲಿಯುವ ಅವಶ್ಯಕತೆ ಇದೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ವಿಡಿಯೋವನ್ನು ತಪ್ಪದೆ ನೀವು ಸಹ ನೋಡಿ ಇದನ್ನು ನೋಡಿದ ಮೇಲೆ ನಿಮಗೇನು ಎನಿಸಿತು ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.