
ಭೂಲೋಕದ ಮೇಲೆ ಮನುಷ್ಯನ ನಾಗರೀಕತೆ ಆರಂಭವಾದ ದಿನದಿಂದ ಮನುಷ್ಯರಿಗೆ ತುಂಬಾ ಹತ್ತಿರವಾದ ಪ್ರಾಣಿಗಳಲ್ಲಿ ನಾಯಿ ಕೂಡ ಒಂದು ಏಕೆಂದರೆ ನಿಯತ್ತು ಮತ್ತು ವಿಶ್ವಾಸಕ್ಕೆ ಮತ್ತೊಂದು ಹೆಸರೆಂದರೆ ಅದು ನಾಯಿ ಎಂದು ಹೇಳಬಹುದು. ನಾಯಿಗೆ ಒಂದೇ ಒಂದು ಬಿಸ್ಕೆಟ್ ಹಾಕಿದರೆ ಸಾಕು ಆ ನಾಯಿ ಜೀವನವಿಡಿ ನಮಗೆ ನಿಯತ್ತಾಗಿ ವಿಶ್ವಾಸದಿಂದ ಇರುತ್ತದೆ ನಾಯಿಗಳಿಗೆ ಇರುವ ಚಾಣಾಕ್ಷ ಬುದ್ಧಿಗಳಿಂದ ಅಪರಾಧಿಗಳನ್ನು ಹಿಡಿಯಲು ಪೊಲೀಸರು ನಾಯಿಗಳನ್ನು ಬಳಸುತ್ತಾರೆ ಹೀಗೆ ಹಲವಾರು ರೀತಿಯಲ್ಲಿ ನಾಯಿಗಳು ನಮಗೆ ಸಹಾಯ ಮಾಡುತ್ತವೆ.
ನಾಯಿಗಳನ್ನು ನೋಡಿ ಮನುಷ್ಯರು ಕಲಿಯಬೇಕಾದಂತಹ ತುಂಬಾ ವಿಷಯಗಳಿವೆ. ನಾಯಿಗಳಿಗೆ ಸಂಬಂಧಿಸಿದ ಕೆಲವು ರೋಚಕ ಕಥೆಗಳನ್ನು ಇಲ್ಲಿ ಹೇಳಲಾಗಿದೆ. ಬೋಟ್ ಒಂದರಲ್ಲಿ ಒಬ್ಬ ವ್ಯಕ್ತಿ ಜೊತೆಗೆ ನಾಯಿಯೊಂದು ಪ್ರಯಾಣಿಸುತ್ತಿರುತ್ತದೆ. ಆಗ ಇದಕ್ಕಿದ್ದ ಹಾಗೆ ನಾಯಿ ನೀರಿನೊಳಗೆ ಜಿಗಿದು ಈಜಿಕೊಂಡು ಹೋಗುತ್ತದೆ ಏಕೆಂದರೆ ನೀರಿನೊಳಗೆ ಒಂದು ಉಡ ಮುಳುಗುತ್ತಿರುವುದನ್ನು ನೋಡಿ ನಾಯಿಯು ಉಡವನ್ನು ರಕ್ಷಿಸಿ ತನ್ನ ತಲೆಯ ಮೇಲೆ ಕೂರಿಸಿಕೊಂಡು ಮತ್ತೆ ಈಜಿ ಬಂದು ದಡ ತಲುಪಿಸಿದೆ.
ಹೀಗೆ ನೀರಿನಲ್ಲಿ ತಾನು ಮುಳುಗಿ ಹೋಗುವ ಸಾಧ್ಯತೆಗಳು ಇದ್ದರು ತನ್ನ ಪ್ರಾಣವನ್ನು ಲೆಕ್ಕಿಸದೆ ಉಡವನ್ನು ನಾಯಿ ಕಾಪಾಡಿತು. ಮತ್ತೊಬ್ಬ ಕಷ್ಟದಲ್ಲಿ ಇರುವ ವ್ಯಕ್ತಿಗೆ ಹೇಗೆ ಸಹಾಯ ಮಾಡಬೇಕು ಎಂದುದನ್ನು ನಾಯಿ ನೋಡಿ ಕಲಿಯಬೇಕು. ಒಂದು ನದಿಯಲ್ಲಿ ಜಿಂಕೆಮರಿ ಒಂದು ಕೊಚ್ಚಿಕೊಂಡು ಹೋಗುತ್ತಿತ್ತು ಅದನ್ನು ನುಡಿದ ನಾಯಿ ಒಂದು ಕೂಡಲೇ ನೀರಿನಲ್ಲಿ ಇಳಿದು ಜಿಂಕೆಮರಿಯನ್ನು ಬಾಯಿಂದ ಕಚ್ಚಿಕೊಂಡು ಬಂದು ಕ್ಷೇಮವಾಗಿ ತಂದು ದಡಕ್ಕೆ ಬಿಡುತ್ತದೆ. ಹೇಗೆ ನಾಯಿಗೆ ಇರುವ ಮಾನವೀಯತೆ ಮತ್ತೆ ಮನುಷ್ಯತ್ವ ಗುಣವನ್ನು ಮನುಷ್ಯರು ಕಲಿಯಬೇಕಾಗಿದೆ.
ಇನ್ನು ವಿಚಾರಕ್ಕೆ ಬರುವುದಾದರೇ ಒಂದು ನಾಯಿ ರಸ್ತೆ ಬಳಿಯಲ್ಲಿರುವ ಡ್ರೈನೇಜ್ ಚೇಂಬರ್ ನ ಪಕ್ಕ ಕೆಲ ಕಾಲ ಹಾಗೆ ಕುಳಿತಿರುತ್ತದೆ ಅಲ್ಲಿ ಓಡಾಡುತ್ತಿದ್ದ ಅಕ್ಕಪಕ್ಕದ ಜನರು ಅದನ್ನು ನೋಡುತ್ತಾ ಹೋಗುತ್ತಿದ್ದರು ಅದರಲ್ಲಿ ಒಬ್ಬಳು ಹುಡುಗಿ ನಾಯಿಯು ಏಕೆ ಅಲ್ಲಿ ಕುಳಿತಿದೆ ಎಂದು ಕುತೂಹಲದಿಂದ ನಾಯಿಯ ಬಳಿ ಹೋಗಿ ಅದಕ್ಕೆ ಹೊಟ್ಟೆ ಹಸಿದಿರಬಹುದು ಎಂದು ಭಾವಿಸಿ ಊಟ ಹಾಕುತ್ತಾಳೆ. ಆದರೆ ನಾಯಿ ಊಟವನ್ನು ಕೂಡ ಡ್ರೈನೇಜ್ ಒಳಗೆ ತಳ್ಳಿಬಿಟ್ಟು ಮೋರಿ ಕಡೆ ತಲೆ ತೋರಿಸಿ ಆ ಹುಡುಗಿಯ ಮುಂದೆ ಜೋರಾಗಿ ಬೊಗಳುತ್ತದೆ.
ಆದರೆ ಆ ಹುಡುಗಿಗೆ ಅರ್ಥವಾಗದೆ ಆಫೀಸಿಗೆ ತಡವಾಗುತ್ತದೆ ಎಂದು ಹೊರಟು ಬಿಡುತ್ತಾಳೆ. ಆದರೆ ನಾಯಿ ದಿನವಿಡಿ ಆ ಚೇಂಬರ್ ಮುಂದೆಯೆ ಕುಳಿತಿರುತ್ತದೆ ಅದೇ ಹುಡುಗಿ ಆಫೀಸ್ ಮುಗಿಸಿ ಬರುವಾಗಲು ನಾಯಿ ಡ್ರೈನೇಜ್ ಹತ್ತಿರವೇ ಇರುವುದನು ನೋಡಿ ಸಂದೇಹದಿಂದ ನಾಯಿಯ ಬಳಿ ಬಂದು ಪ್ರೀತಿಯಿಂದ ತಲೆ ಸವರುತ್ತಾಳೆ ನಾಯಿಯು ಮತ್ತೆ ಡ್ರೈನೇಜ್ ಕಡೆ ತಲೆ ತೋರಿಸಿ ಜೋರಾಗಿ ಬೊಗಳುತ್ತಿತ್ತು ಆದರೆ ಅಲ್ಲಿದ್ದವರಿಗೆಲ್ಲಾ ನಾಯಿ ಹೇಳುತ್ತಿರುವುದು ಗೊತ್ತಾಗದೆ ತಕ್ಷಣ ಅನಿಮಲ್ ರಿಸೀವ್ ಸ್ಟೇಷನ್ ಗೆ ಹುಡುಗಿ ಕರೆ ಮಾಡುತ್ತಾಳೆ.
ಅಲ್ಲಿನ ಸಿಬ್ಬಂದಿ ಬಂದು ನಾಯಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದರೂ ನಾಯಿಯು ಅಲ್ಲಿಂದ ಮೇಲೆ ಎದ್ದಲಿಲ್ಲ. ಆಗ ಸಂದೇಹದಿಂದ ಡ್ರೈನೇಜ್ ಒಳಗೆ ಏನಿದೆ ಎಂದು ತಿಳಿಯಲು ಪ್ರಯತ್ನಿಸುತ್ತಾರೆ. ಮೊದಲಿಗೆ ಅದು ತಿಳಿಯಲಿಲ್ಲ ನಂತರ ಮೋರಿ ಒಳಗೆ ಸಿಸಿ ಕ್ಯಾಮರಾ ಬಿಟ್ಟು ನೋಡಿದಾಗ ಆ ಮೋರಿಯ ಒಳಗೆ ಸುಮಾರು ನಾಲ್ಕು ಬೆಕ್ಕಿನ ಮರಿಗಳು ಇದ್ದವು. ಮೋರಿಯಿಂದ ಹೊರ ಬರಲಾಗದೆ ಆ ಬೆಕ್ಕಿನ ಮರಿಗಳು ರೋದಿಸುತ್ತಿದ್ದವು ಅದನ್ನು ಗಮನಿಸಿದ ನಾಯಿಯು ಅವುಗಳನ್ನು ಕಾಪಾಡುವ ಉದ್ದೇಶದಿಂದ ಬೆಳಿಗ್ಗೆಯಿಂದಲೂ ಆ ಮೋರಿಯ ಬಳಿ ಕುಳಿತಿತ್ತು ತಕ್ಕಣ ರಿಸಿವ್ ಸಿಬ್ಬಂದಿಗಳು ಬೆಕ್ಕಿನ ಮರಿಗಳನ್ನು ಹೊರ ತೆಗೆದಿದ್ದಾರೆ ಹೊರ ಬಂದ ಬೆಕ್ಕಿನ ಮರಿಗಳನ್ನು ನೋಡಿದ ನಾಯಿ ಅಲ್ಲಿಂದ ಹೊರಟು ಹೋಗುತ್ತದೆ.