Sunday, June 4, 2023
HomePublic Vishyaಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಅಮ್ಮನಿಗೆ ಸ್ವತಃ ತಾನೇ ಮುಂದು ನಿಂತು 2ನೇ ಮದುವೆ ಮಾಡಿಸಿದ ಮಗ..!...

ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಅಮ್ಮನಿಗೆ ಸ್ವತಃ ತಾನೇ ಮುಂದು ನಿಂತು 2ನೇ ಮದುವೆ ಮಾಡಿಸಿದ ಮಗ..! ಆತನ ಕಾರ್ಯಕ್ಕೆ ಎಲ್ಲರಿಂದಲೂ ಸಿಕ್ಕಿದೆ ಮೆಚ್ಚುಗೆ.

 

ತಂದೆಯ ಮ-ರ-ಣದ ಬಳಿಕ ಒಂಟಿಯಾಗಿ ಜೀವನವನ್ನು ಸಾಗಿಸುತ್ತಿದ್ದ ಅಮ್ಮನಿಗೆ ಮನವೊಲಿಸಿ ಮಗನೇ ನಿಂತು ಮರು ಮದುವೆ ಮಾಡಿಸಿದ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ. ಈ ಕ್ರಾಂತಿಕಾರಿ ಮಗನ ಹೆಸರು ಯುವರಾಜ್. ‘ಅಮ್ಮನ ಹಣೆಯಲ್ಲಿ ಇಲ್ಲದ ಕುಂಕುಮ, ಬಳೆಗಳಿಲ್ಲದ ಕೈ ಇವೆಲ್ಲವನ್ನು ನೋಡಲು ತುಂಬಾ ನೋವಾಗುತ್ತಿತ್ತು. ಅದಕ್ಕಾಗಿ ಮರು ಮದುವೆ ಮಾಡಲು ನಿರ್ಧರಿಸಿದೆ’ ಎಂದು ಯುವರಾಜ್ ಹೇಳುತ್ತಾರೆ.

ಸಾಮಾನ್ಯವಾಗಿ ನಾವು ದಿನನಿತ್ಯದ ಬದುಕಿನಲ್ಲಿ ತಂದೆ-ತಾಯಿಗಳು ನಿಂತು ಮಕ್ಕಳಿಗೆ ಮದುವೆ ಮಾಡಿಸುವುದನ್ನು ನೋಡಿರುತ್ತೇವೆ. ವಧು ವರರನ್ನು ಹುಡುಕುವುದರಿಂದ ಹಿಡಿದು ಮದುವೆ ಮನೆಯ ಎಲ್ಲಾ ತಯಾರಿಗಳನ್ನು ತಂದೆ-ತಾಯಿಯೇ ವಹಿಸಿಕೊಳ್ಳುತ್ತಾರೆ. ಕಷ್ಟವಾದರೂ ಸರಿ; ನೂರಾರು ಸಂಖ್ಯೆಯಲ್ಲಿ ಸಂಬಂಧಿಗಳನ್ನು ಕರೆದು, ಊಟೋಪಚಾರ, ಅತಿಥಿ ಸತ್ಕಾರವೆಂದು ಮಾಡುತ್ತಾ, ಮದುಮಕ್ಕಳಿಗೆ ಉಡುಗೊರೆ ಬಂಗಾರವೆಂದು ಮಾಡಿಸಿ ಎಲ್ಲ ಜವಾಬ್ದಾರಿಗಳನ್ನು ತಂದೆ-ತಾಯಿಯೇ ಹೊತ್ತು ವಿವಾಹ ಕಾರ್ಯವನ್ನು ನೆರವೇರಿಸುತ್ತಾರೆ. ಆದರೆ ಮಹಾರಾಷ್ಟ್ರದ ಯುವರಾಜ್ ತಂದೆಯ ಸಾ-ವಿ-ನ ಬಳಿಕ, ಅಮ್ಮನಿಗೆ ಹೊಸ ಜೀವನವನ್ನು ನೀಡಲು ಎರಡನೇ ಮದುವೆಯನ್ನು ಮಾಡಿಸಿದ್ದಾನೆ.

ಯುವರಾಜ್ ತನ್ನ ತಂದೆ ಮತ್ತು ತಾಯಿಯೊಂದಿಗೆ ಕಾರವೀರ ತಾಲೂಕಿನ ಶಿಂಗ್ಣಾಪುರದಲ್ಲಿ ವಾಸವಾಗಿದ್ದ. ತಂದೆ ನಾರಾಯಣ ಶೆಲ್ಲಿ ಹಾಗೂ ತಾಯಿ ರತ್ನಾ ಶೆಲ್ಲಿ. ನಾರಾಯಣ ಶೈಲಿ ಅವರು ಸೆಂಟ್ರಿಂಗ್ ಕೆಲಸವನ್ನು ಮಾಡಿಕೊಂಡಿದ್ದರು. ಯುವರಾಜ್ ಖಾಸಗಿ ಬ್ಲಡ್ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಮತ್ತು ಸಂಜೆ ನೃತ್ಯ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಪುಟ್ಟ ಸಂಸಾರವು ಕಷ್ಟ ನಷ್ಟಗಳಿದ್ದರೂ ಖುಷಿಯಿಂದಲೇ ಸಾಗುತ್ತಿತ್ತು. ಆದರೆ ಅದೊಂದು ಘಟನೆ ಸುಖವನ್ನೇ ಹಾಳು ಮಾಡಿತು. 2022ರ ಜುಲೈ 26ರಂದು ಯುವರಾಜ್ ತಂದೆ ಪ್ರಯಾಣಿಸುತ್ತಿದ್ದಾಗ ವಾಹನವು ಅ.ಪ.ಘಾ.ತ.ಕ್ಕೀಡಾಯಿತು.

ಆ ಕೂಡಲೇ ಚಿಕಿತ್ಸೆಯನ್ನು ಕೊಡಿಸಿದರು ಕೂಡ ನಾರಾಯಣ್ ಬದುಕುಳಿಯಲೇ ಇಲ್ಲ. ಅಮ್ಮ ಮಗ ಇಬ್ಬರು ನಾರಾಯಣ ಶೆಲ್ಲಿ ಅವರ ಮರಣದ ನೋವಿನಿಂದ ಹೊರಬರಲು ತೊಳಲಾಡಿದರು. ಯುವರಾಜ್ ತಾಯಿ ರತ್ನಾ ಅದಾಗಲೇ ಕರೋನಾ ಸಂದರ್ಭದಲ್ಲಿ ತನ್ನ ಆರು ಜನ ಸಹೋದರ ಸಹೋದರಿಯರನ್ನು ಕಳೆದುಕೊಂಡಿದ್ದಳು. ಮಹಾಮಾರಿಯು ಮಾಡಿದ ಅವಾಂತರದಿಂದ ಹೊರಬರುವಷ್ಟರಲ್ಲಿ ತನ್ನ ಪತಿಯನ್ನು ಕಳೆದುಕೊಂಡಳು. ಇದರಿಂದಾಗಿ ಆಕೆ ಮಾನಸಿಕವಾಗಿ ತುಂಬಾ ನೋವನ್ನು ಅನುಭವಿಸಿ ಖಿನ್ನತೆಗೆ ಒಳಗಾಗಿದ್ದಳು.

ಖಿನ್ನತೆಯಿಂದಾಗಿ ದೇಹದ ರೋಗ ನಿರೋಧಕ ಶಕ್ತಿಯು ಕುಗ್ಗಿ ಕಾಯಿಲೆಗಳು ಬರಲು ಪ್ರಾರಂಭಿಸಿದವಂತೆ. ನಗುನಗುತ್ತಾ ಜೀವನ ಸಾಗಿಸುತ್ತಿದ್ದ ತಾಯಿಯ ಬದುಕಲ್ಲಿ ಇಷ್ಟೊಂದು ನೋವನ್ನು ನೋಡಿ ಯುವರಾಜ್ ಕೂಡ ಖಿನ್ನತೆಗೊಳಗಾಗಿದ್ದನಂತೆ. ಕುಂಕುಮವಿಲ್ಲದ ತಾಯಿಯ ಹಣೆ, ಬಳೆಗಳಿಲ್ಲದ ತಾಯಿಯ ಕೈ ಇವೆಲ್ಲ ಯುವರಾಜ್ಗೆ ತುಂಬಾ ನೋವು ಉಂಟು ಮಾಡಿತ್ತಂತೆ. ಹತಾಶಳಾದ ರತ್ನಾಳನ್ನು ಉಳಿಸಿಕೊಳ್ಳುವ ಭರದಲ್ಲಿ ಯುವರಾಜ್, ದೂರದ ಸಂಬಂಧಿ ಹಾಗೂ ಎರಡು ವರ್ಷದ ಹಿಂದೆಯೇ ವಿ.ಚ್ಛೇ.ದ.ನ ಪಡೆದು ಒಬ್ಬಂಟಿಯಾಗಿ ಬದುಕುತ್ತಿದ್ದ ಕರ್ನಾಟಕದ ಕರಗಜಾ ಗ್ರಾಮದ ಮಾರುತಿ ವಾಟ್ಕರ್ ಎಂಬುವವರ ಜೊತೆ ತಾಯಿಗೆ ಮರು ವಿವಾಹ ಮಾಡಲು ನಿರ್ಧರಿಸಿದನು.

ಅಂತೆಯೇ ಜನವರಿ 12ರಂದು ಗುರುವಾರ ಶಿಂಗ್ಣಾಪುರದಲ್ಲಿ ಮಾರುತಿಯವರೊಂದಿಗೆ ತಾಯಿಗೆ ಎರಡನೇ ಮದುವೆಯನ್ನು ಮಾಡಿಸಿದನು. ಮರು ಮದುವೆಯಾದರೆ ಸಮಾಜ ಏನು ಹೇಳುತ್ತದೆಯೋ ಎಂದು ನಿರಾಕರಿಸಿದ್ದ ತಾಯಿಯನ್ನು ಮರು ಮದುವೆಗೆ ಒಪ್ಪಿಸಿ ತಾನೇ ನಿಂತು ಎಲ್ಲಾ ಕಾರ್ಯಕ್ರಮವನ್ನು ಮಾಡಿಸಿರುವ ಯುವರಾಜ್ಗೆ ಎಲ್ಲೆಡೆಯಿಂದಲೂ ಹರ್ಷ ವ್ಯಕ್ತವಾಗಿದೆಯಂತೆ. ಮಹಿಳೆಯ ಭಾವನೆಗೆ, ಘನತೆಗೆ ಗೌರವವನ್ನು ನೀಡುವ ಕೆಲಸ ಮಾಡಿದ್ದಾನೆ ಎಂದು ಹೊಗಳಿದ್ದಾರಂತೆ.