Sunday, June 4, 2023
HomePublic Vishyaಮಗ ಚೆನ್ನಾಗಿ ಬದುಕಲಿ ಎಂಬ ಆಸೆಯಿಂದ ಆಸ್ತಿ ಮತ್ತು ಮನೆ ಕಟ್ಟಿಕೊಟ್ಟ ತಂದೆ. ಆದ್ರೆ ಕೊನೆಗೆ...

ಮಗ ಚೆನ್ನಾಗಿ ಬದುಕಲಿ ಎಂಬ ಆಸೆಯಿಂದ ಆಸ್ತಿ ಮತ್ತು ಮನೆ ಕಟ್ಟಿಕೊಟ್ಟ ತಂದೆ. ಆದ್ರೆ ಕೊನೆಗೆ ಮಗ ಮಾಡಿದ್ದೇನು ಗೊತ್ತಾ.? ಪ್ರತಿಯೊಬ್ಬ ತಂದೆ ತಾಯಿ ಕೂಡ ಇದನ್ನು ನೋಡಲೇಬೇಕು.

 

ಚಿಕ್ಕಂದಿನಿಂದಲೂ ಮಗ ಬೇಕು ಎಂದಿದ್ದನ್ನು ತಂದೆ ಕೊಡಿಸುತ್ತಿದ್ದರು. ಆದರೆ ಕೊನೆಯಲ್ಲಿ ಮಗನು ತಂದೆಯ ಕೊ-ಲೆ-ಗೆ ಕೋಟಿ ರೂಪಾಯಿಗಳಷ್ಟು ಕೊಟ್ಟು ಸುಪಾರಿ ನೀಡಿದ್ದು, ತಂದೆಯ ಕಥೆಯನ್ನೇ ಮುಗಿಸಿ ಬಿಟ್ಟಿದ್ದಾನೆ. ಇಂತದ್ದೊಂದು ಘಟನೆ ನಡೆದಿರುವುದು ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ. ಈ ಕೊ-ಲೆ-ಯ ಹಿಂದೊಂದು ಬಲವಾದ ಕಾರಣವಿದೆಯಂತೆ.

ಹುಟ್ಟಿದ ಶಿಶುವಿನ ಲಾಲನೆ ಪಾಲನೆಯಿಂದ ಹಿಡಿದು ವಿದ್ಯಾಭ್ಯಾಸವನ್ನು ನೀಡಿ ಸಂಸ್ಕಾರ ಸಂಸ್ಕೃತಿಯನ್ನು ತಿಳಿಸಿಕೊಟ್ಟು ಬೆಳೆಸುವವರು ತಂದೆ ತಾಯಿ. ತಾವು ದುಡಿದ ದುಡ್ಡೆಲ್ಲವನ್ನು ಮಕ್ಕಳ ಸಂತೋಷಕ್ಕಾಗಿ ಮೀಸಲಿಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ತಾವು ಬೆಳೆದು ನಿಂತು ಉದ್ಯೋಗವನ್ನು ಹಿಡಿದು ಸಂಸಾರವನ್ನು ಪ್ರಾರಂಭಿಸಿದಾಗ ತಂದೆ ತಾಯಿಗಳನ್ನು ಮರೆಯುತ್ತಾರೆ. ಹೆತ್ತವರನ್ನು ತಮ್ಮಿಂದ ದೂರವಿಡುತ್ತಾರೆ.

ಅದಕ್ಕಾಗಿ ಆಶ್ರಮಗಳ ಸಂಖ್ಯೆಯು ಕೂಡ ಹೆಚ್ಚಾಗುತ್ತಿದೆ. ಒತ್ತಡದ ಬದುಕಿನಲ್ಲಿ ವಯಸ್ಕ ತಂದೆ-ತಾಯಿಗಳನ್ನು ನೋಡಿಕೊಳ್ಳುವುದು ಮಕ್ಕಳಿಗೆ ಹೊರೆಯಾಗಿ ಕಾಣುತ್ತಿದೆ. ತಮ್ಮ ಕರ್ತವ್ಯವನ್ನು ಇತ್ತೀಚಿನ ಹಲವಾರು ಯುವಕರು ಮರೆತಿದ್ದಾರೆ. ತಂದೆ ತಾಯಿ ಮಾಡಿರುವ ಆಸ್ತಿ, ಹಣ, ಬಂಗಾರ, ಮನೆ ಎಲ್ಲದರಲ್ಲಿಯೂ ಮಕ್ಕಳಿಗೆ ಪಾಲು ಬೇಕು. ಆದರೆ ಅವರನ್ನು ನೋಡಿಕೊಳ್ಳುವುದು ಯಾರಿಗೂ ಬೇಡ.

ಬೆಂಗಳೂರಿನ ಮಾರಾತ್ ಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರುವ ಭಾಗದಲ್ಲಿ ಮಣಿಕಂಠ ಎಂಬ ವ್ಯಕ್ತಿಯು ತನ್ನ ತಂದೆಯನ್ನೇ ಮುಗಿಸಲು ಸುಪಾರಿ ನೀಡಿದ್ದನಂತೆ. ಇವರ ತಂದೆಯ ಹೆಸರು ನಾರಾಯಣಸ್ವಾಮಿ. ಅವರು ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದರು. ಅವರು ಫೆಬ್ರುವರಿ 13 ರಂದು ಅನುಮಾನಾಸ್ಪದ ರೀತಿಯಲ್ಲಿ ಕೊ-ಲೆಯಾಗಿದ್ದರು. ಇಂದ್ರಪ್ರಸ್ಥ ಅಪಾರ್ಟ್ಮೆಂಟ್ ಬಳಿ ನಾರಾಯಣಸ್ವಾಮಿ ಅವರ ಶ-ವ-ವು ಪತ್ತೆಯಾಗಿತ್ತು.

ಈ ಘಟನೆಯು ತಿಳಿದಂತೆಲೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದರು. ತನಿಖೆ ನಡೆಸುವ ವೇಳೆ ಆರೋಪಿಗಳಾದ ನಡವತ್ತಿ ಶಿವ ಹಾಗೂ ಆದರ್ಶ ಎಂಬುವವರನ್ನು ಬಂಧಿಸಿದ್ದರು. ಈ ಆರೋಪಿಗಳನ್ನು ಸರಿಯಾದ ರೀತಿಯಲ್ಲಿ ವಿಚಾರಿಸಿದಾಗ ವಿಚಿತ್ರವಾದ ಸತ್ಯ ಒಂದು ಹೊರ ಬಿದ್ದಿತ್ತು. ಅದೇನೆಂದರೆ ನಾರಾಯಣಸ್ವಾಮಿಯವರ ಪ್ರಾ-ಣ-ವನ್ನು ತೆಗೆಯಲು ಅವರ ಸ್ವಂತ ಪುತ್ರನಾದ ಮಣಿಕಂಠನೆ ಹಣ ನೀಡಿರುವುದು.

ಈತ ತನ್ನ ತಂದೆಯನ್ನು ಯಾರಿಗೂ ತಿಳಿಯದ ಹಾಗೆ ಮುಗಿಸಿದರೆ ಆರೋಪಿಗಳಿಗೆ ಹಣದೊಂದಿಗೆ ಒಂದು ಫ್ಲಾಟ್ ಹಾಗೂ ಐಷಾರಾಮಿ ಕಾರೊಂದನ್ನು ನೀಡುವುದಾಗಿ ಹೇಳಿದ್ದನಂತೆ. ಅಡ್ವಾನ್ಸ್ ಹಣವಾಗಿ 15 ಲಕ್ಷ ರೂಪಾಯಿಗಳನ್ನು ಅದಾಗಲೇ ನೀಡಿದ್ದನಂತೆ. ಈ ವಿಷಯವು ಬೆಳಕಿಗೆ ಬರುತ್ತಿದ್ದಂತಲೇ ಪೊಲೀಸರು ನಾರಾಯಣಸ್ವಾಮಿಯವರ ಪುತ್ರ ಮಣಿಕಂಠನನ್ನು ಬಂಧಿಸಿದ್ದಾರೆ.

ಮಣಿಕಂಠನಿಗೆ ತನ್ನ ತಂದೆಯ ಯಾವ ವಿಚಾರಕ್ಕಾಗಿ ವಿರೋಧವಿತ್ತೆಂದು ಪೊಲೀಸರು ಕೇಳಿದಾಗ ಆತ ಉತ್ತರಿಸಿದ್ದಾನಂತೆ. ತಂದೆ ಸಾಕಷ್ಟು ಆಸ್ತಿಯನ್ನು ಹೊಂದಿದ್ದರಂತೆ, ಆದರೆ ಮಗನ ಹೆಸರಿನಲ್ಲಿ ಯಾವುದೇ ಆಸ್ತಿ ಇರಲಿಲ್ಲವಂತೆ. ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಗಳನ್ನು ತಮಗೆ ಇಷ್ಟ ಬಂದವರಿಗೆ ನೀಡುತ್ತಿದ್ದರಂತೆ. ಮಣಿಕಂಠನಿಗೆ ಮದುವೆಯಾಗಿದ್ದರೂ ಕೂಡ ಇನ್ನೊಂದು ಹೆಣ್ಣಿನ ಜೊತೆಗೆ ಸಂಬಂಧವಿತ್ತಂತೆ.

ಅದೇ ವಿಚಾರವಾಗಿ ಗಂಡ ಹೆಂಡತಿಯ ಮಧ್ಯೆ ಆಗಾಗ ಜಗಳವಾಗುತ್ತಿತ್ತಂತೆ. ಮಧ್ಯ ಪ್ರವೇಶಿಸಿದ ನಾರಾಯಣಸ್ವಾಮಿ ಹೆಂಡತಿಗೆ ವಿಚ್ಛೇದನ ನೀಡುವಂತೆ ತಿಳಿಸಿದರಂತೆ. ಅಷ್ಟೇ ಅಲ್ಲದೆ ವಿಚ್ಛೇದನದ ನಂತರದ ಜೀವನದಲ್ಲಿ ಕಷ್ಟಗಳು ಬರಬಾರದೆಂದು ತಮ್ಮ ಸೊಸೆಗಾಗಿ ಒಂದು ಫ್ಲಾಟ್ ಅನ್ನು ಬರೆದುಕೊಡುವುದಾಗಿ ತಿಳಿಸಿದರಂತೆ. ಈ ಎಲ್ಲಾ ಕಾರಣಕ್ಕಾಗಿ ಮಣಿಕಂಠ ತಂದೆಯನ್ನು ಸಾ-ಯಿ-ಸಲು ಸುಪಾರಿ ನೀಡಿದ್ದ ಎಂಬುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಇದೀಗ ಆತ ಪೊಲೀಸರ ಕೈವಶವಾಗಿದ್ದಾನೆ. ನೋಡಿದ್ರಲ್ಲ ತಂದೆಗೆ ಮಗ ಹೇಗೆ ಮಾಡಿದ್ದಾನೆ ಅಂತ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.