Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪು ಹುಡುಕಿ ಕೊಟ್ಟವರಿಗೆ ಬಹುಮಾನ ಎಂದು ಘೋಷಿಸಿದ ಅಭಿಮಾನಿ, ಈ ಪೋಸ್ಟರ್ ನೋಡಿ ಅಶ್ವಿನಿ ಹೇಳಿದ್ದೇನು ಗೊತ್ತ.?

Posted on July 4, 2022July 4, 2022 By Kannada Trend News No Comments on ಅಪ್ಪು ಹುಡುಕಿ ಕೊಟ್ಟವರಿಗೆ ಬಹುಮಾನ ಎಂದು ಘೋಷಿಸಿದ ಅಭಿಮಾನಿ, ಈ ಪೋಸ್ಟರ್ ನೋಡಿ ಅಶ್ವಿನಿ ಹೇಳಿದ್ದೇನು ಗೊತ್ತ.?

ಹೌದು ಅಪ್ಪು ನಮ್ಮನ್ನಗಲಿ 9 ಮಾಸಗಳು ಹತ್ತಿರವಾಗುತ್ತಿವೆ ಆದರೆ ಇಂದಿಗೂ ಅಪ್ಪುವಿನ ಮುಖದ ಮಾಸದ ನಗು ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಇಂದಿಗೂ ಸಹ ಅಪ್ಪು ಅಭಿಮಾನಿಗಳಿಗೆ ಅಪ್ಪುವಿನ ಅಗಲಿಕೆಯ ನೋವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಮರೆತೇನೆಂದರು ಮರೆಯಲಿ ಹೆಂಗ ಎನ್ನುವಂತೆ ಬಿಟ್ಟು ಬಿಡದೆ ಕಾಡುತಿದೆ ಅಪ್ಪುವಿನ ಚಿರ ನಗು ಮುಖ. ಅಪ್ಪು ನಮ್ಮನ್ನು ದೈಹಿಕವಾಗಿ ಅಗಲಿದ್ದರೂ ಸಹ ಆತ್ಮಿಕವಾಗಿ ನಮ್ಮ ಹೃದಯದಲ್ಲಿ ಸದಾ ಚಿರ ಅಮರರಾಗಿದ್ದಾರೆ. ಆದರೂ ಕೂಡ ಅಭಿಮಾನಿಗಳ ಮೌನ ವೇದನೆಗೆ ಕೊನೆಯೇ ಇಲ್ಲವೇನೋ ಎನ್ನುವ ಹಾಗೆ ಗೋಡೆಗಳ ಮೇಲೆ ಭಾವನಾತ್ಮಕವಾಗಿ ಮೂಡಿಬಂದ ವಿಚಿತ್ರ ರೀತಿಯ ಕರ ಪತ್ರಗಳು ರಾರಾಜಿಸುತ್ತಿವೆ. ಇವುಗಳಿಂದಲೇ ಅಪ್ಪುವಿನ ದೊಡ್ಡತನದ ದೊಡ್ಡ ಗುಣಗಳು ಮತ್ತೆ ಮನಃ ಚಿತ್ರ ಪಟದಲ್ಲಿ ಒಮ್ಮೆಲೆ ಮೂಡಿ ಕಣ್ಣಂಚಿನಲ್ಲಿ ಅಶ್ರುಧಾರೆ ತೊಟ್ಟಿಕ್ಕುವಂತೆ ಮಾಡಿ ಮನ ಮೌನದಿಂದ ಮಿಡಿಯುತ್ತದೆ.

ಅಪ್ಪುವಿಗಾಗಿ ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ವಿಚಿತ್ರ ರೀತಿಯ ಅಭಿಮಾನಿ ಬೇಡಿಕೆಗಳು ಕಾಣ ಬರುತ್ತಿವೆ. ಅದೇ ತರಹ ನಿನ್ನೆ ಒಂದು ಪೋಸ್ಟ್ ವೈರಲ್ ಆಗಿತ್ತು ಅದೇನೆಂದರೆ “ಅಪ್ಪುವಿನ ಫೋಟೋ ಹಾಕಿ ಕಾಣೆಯಾಗಿದ್ದಾರೆ ಹುಡುಕಿ ಕೊಟ್ಟವರಿಗೆ ಪ್ರಪಂಚದಾದ್ಯಂತ ಪ್ರೀತಿ ವಿಶ್ವಾಸ ಉಚಿತವೆಂದು ಬರೆದು ಗೋಡೆಗಳ ಮೇಲೆ ಅಂಟಿಸಿ ಅಭಿಮಾನಿಯೊಬ್ಬರು ತಮ್ಮ ಮನದಾಳದ ನೋ’ವನ್ನು ಹೊರ ಹಾಕಿದ್ದಾರೆ”. ಅಪ್ಪುರವರು ಸತ್ತ ನಂತರವು ಸಹ ತಾವು ಹುಟ್ಟು ಹಾಕಿದ ಅದೆಷ್ಟೋ ವೃದ್ದಾಶ್ರಮ, ಗೋಶಾಲೆ ಹಾಗೂ ಶಾಲೆಗಳ ಮೂಲಕ ಇಂದಿಗೂ ಆಶ್ರಯದಾತರಾಗಿದ್ದಾರೆ. ಇಂದು ಲಕ್ಷಾಂತರ ಮನಗಳು ಅವರಿಗಾಗಿ ಮಿಡಿಯುತ್ತಿವೆಯಂದರೆ ಅದಕ್ಕೆ ಅವರಲ್ಲಿದ್ದ ದೊಡ್ಡತನ, ಪ್ರೀತಿ, ವಿಶ್ವಾಸ, ಅಹಂಭಾವವಿಲ್ಲದ ನಗುಮುಖವೇ ಕಾರಣ. ಅಂದಿಗೂ ಇಂದಿಗೂ ಎಂದೆಂದಿಗೂ ಯಾರಿಂದಲೂ ದ್ವೇಷಕ್ಕೆ ಒಳಗಾಗದ ಹಾಗೂ ಯಾರನ್ನೂ ದ್ವೇಷಿಸದೇ ಸರ್ವರಲ್ಲೂ ಪರಮಾತ್ಮನನ್ನು ಕಂಡ ಪರಮಾತ್ಮ ನಮ್ಮ ಅಪ್ಪು.

ಇಂತಹ ಸಜ್ಜನರಿಗೆ ಮನ ಮಿಡಿಯುವುದು ಸಹಜವೇ ಸರಿ. ಆದರೆ ಯಾರೂ ಊಹಿಸಲಾಗದ ರೀತಿಯಲ್ಲಿ ಕಣ್ಮರೆಯಾದ ಕನ್ನಡದ ಕಣ್ಮಣಿಗಾಗಿ ಅಭಿಮಾನಿಗಳಿಂದು ಪರಿತಪಿಸುತ್ತಿದ್ದಾರೆ. ಕಪ್ಪು ಚುಕ್ಕೆಯೊಂದೂ ಇಲ್ಲದ ಈ ಅಪ್ಪು ಚುಕ್ಕೆ ಒಮ್ಮೆ ಧರೆಯಲ್ಲಿ ಮಿನುಗಲಿ ಎಂಬುದು ಕೋಟ್ಯಂತರ ಹೃದಯಗಳ ಬಯಕೆಯಾಗಿದೆ. ಅಪ್ಪುವಿಗಾಗಿ ಇದೇ ರೀತಿ ಅಭಿಮಾನಿಗಳು ಕಂಬನಿ ಮಿಡಿಯುತ್ತಲೇ ಅಪ್ಪುವಿನ ಅಗಲಿಕೆಯನ್ನು ಸಹಿಸುತ್ತಿದ್ದಾರೆ. ಅಭಿಮಾನಿಯೊಬ್ಬನ ಕಾಣೆಯಾಗಿದ್ದಾರೆ ಕರ ಪತ್ರ ದಿಂದ ಮತ್ತೊಮ್ಮೆ ನೋಡುಗರು ಅಪ್ಪು ನೆನಪಿನ ಬುತ್ತಿಯನ್ನು ಬಿಚ್ಚುತ್ತಿದ್ದಾರೆ. ಅಲ್ಲದೇ ಈ ಪೋಸ್ಟರ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಹ್ಯಾಶ್ಟ್ಯಾಗ್ ಮಾಡಿ ವೈರಲ್ ಮಾಡುತ್ತಿದ್ದು, ಅಶ್ವಿನಿ ಅವರು ಮೌನ ಕಂಬನಿ ಮಿಡಿದಿದ್ದಾರೆ ಇದೊಂದೇ ಅಲ್ಲದೇ ಅಪ್ಪುವಿನ ಮುಂದಿನ ಚಿತ್ರವಾಗಿದ್ದ ದ್ವಿತ್ವ ಸಿನಿಮಾದ ಪೋಸ್ಟರ್ ಗಳನ್ನು ನೋಡಿ ಅಪ್ಪುವಿಲ್ಲದ ಸಿನಿಮಾವನ್ನು ಊಹಿಸಿಕೊಳ್ಳಲಾಗದೆ ಅಭಿಮಾನಿಗಳು ಭಾವನಾತ್ಮಕವಾಗಿ ಕಾಮೆಂಟ್ ಸೆಕ್ಷನ್ ಗಳಲ್ಲಿ ಹಾಗೂ ಸ್ಟೇಟಸ್ ಗಳಲ್ಲಿ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ.

ಈ ರೀತಿಯ ಪೋಸ್ಟರ್ ಗಳನ್ನು ನೋಡಿದವರು ದೇವರಿಗೆ ಕರುಣೆ ಇಲ್ಲ, ಪುನೀತ್ ರವರು ಮಾಡಿದ ಅಪರಾಧವಾದರೂ ಏನು ಏಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಅಪ್ಪುರವರು ಅವರ ಅಭಿಮಾನಿಗಳಿಗಷ್ಟೇ ಸೀಮಿತವಾಗಿರದೆ ಇಡೀ ಕರುನಾಡಿನ ಮನೆ ಮಗನಾಗಿ ಸರ್ವರ ಅಪರಿಮಿತ ಪ್ರೇಮಕ್ಕೆ ಸಾಕ್ಷಿಯಾಗಿ ಮಿಂಚಿನಂತೆ ಮರೆಯಾಗಿದ್ದಾರೆ. ಅಪ್ಪುರವರು ಅವರ ಅಭಿನಯದಿಂದಷ್ಟೇ ಅಲ್ಲದೇ ಕಂಠದಿಂದಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಈ ಅಕಾಲಿಕ ಮೃ’ತ್ಯು ಚಿತ್ರರಂಗಕ್ಕಿಂತ ಹೆಚ್ಚಾಗಿ ಕರುನಾಡಿಗೆ ನ’ಷ್ಟವಾಗಿದೆ. ಸಾಧ್ಯವಾದರೆ ಮತ್ತೊಮ್ಮೆ ಬನ್ನಿ ಅಪ್ಪು ಎಂದು ಸರ್ವರ ಆಶಯವಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಿಮ್ಮ ಮನದಾಳದ ಮಾತುಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

https://youtu.be/4emCZKfyoTE

Entertainment Tags:Appu, Appu ashwini
WhatsApp Group Join Now
Telegram Group Join Now

Post navigation

Previous Post: ಹಣ ಇದ್ರೆ ನ್ಯಾಷನಲ್ ಅಲ್ಲ ಇಂಟರ್ ನ್ಯಾಷನಲ್ ಕ್ರಶ್ ಕೂಡ ಆಗಬಹುದು, ರಶ್ಮಿಕಾ ಗೆ ಟಾಂಗ್ ಕೊಟ್ಟ ಸಂಯುಕ್ತ ಹೆಗ್ಡೆ.
Next Post: ಹುಟ್ಟುಹಬ್ಬಕ್ಕೆ ಪತ್ನಿ & ಮಕ್ಕಳು ಕೊಟ್ಟ ಸರ್ಪೈಸ್ ನೋಡಿ, ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಗೋಲ್ಡನ್ ಸ್ಟಾರ್.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore