ಹೆಣ್ಣು ಮಕ್ಕಳನ್ನು ಮನೆಯ ಮಹಾಲಕ್ಷ್ಮಿ ಎಂದು ಕರೆಯುತ್ತಾರೆ, ಹಾಗಾಗಿ ಹೆಣ್ಣು ಮಕ್ಕಳನ್ನು ಬಹಳ ಪೂಜನ್ಯೀಯ ಸ್ಥಾನದಲ್ಲಿ ಇಟ್ಟು ನೋಡುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು, ಭೂಮಿಯನ್ನು, ನದಿಗಳನ್ನು ಹೆಣ್ಣು ಮಕ್ಕಳಿಗೆ ಹೋಲಿಸಲಾಗಿದೆ ಮನೆಗೆ ಅದೃಷ್ಟ ತರುವ ಅಥವಾ ಮನೆಯ ಕಷ್ಟಕ್ಕೆ ಕಾರಣರಾಗುವವರು ಇದೆ ಹೆಣ್ಣು.
ಯಾವ ಹೆಣ್ಣು ಮನೆಯಲ್ಲಿ ಶಾಂತರೀತಿಯಲ್ಲಿ ಇದ್ದು ಪದ್ಧತಿ ಪ್ರಕಾರ ಸಂಪ್ರಧಾಯ ಬದ್ಧವಾಗಿ ಧರ್ಮದಿಂದ ಸಾಗುತ್ತಾರೋ ಆ ಮನೆಯಲ್ಲಿ ಲಕ್ಷ್ಮೀನಾರಾಯಣ ಸಮೇತರಾಗಿ ಎಲ್ಲ ದೇವತೆಗಳು ನೆಲೆಸುತ್ತಾರೆ, ಆಶೀರ್ವದಿಸುತ್ತಾರೆ ಮತ್ತು ಆಕೆಯ ಪತಿ ಮತ್ತು ಮಕ್ಕಳು ಏಳಿಗೆ ಆಗುವುದರಲ್ಲಿ ಅನುಮಾನವಿಲ್ಲ.
ಅಂತಹ ಕುಟುಂಬದಲ್ಲಿ ಸಂತೋಷಕ್ಕೆ ಪಾರವು ಇರುವುದಿಲ್ಲ. ಪ್ರತಿಯೊಬ್ಬರೂ ಕೂಡ ಇಂತಹ ವಾತಾವರಣದಲ್ಲಿ ಇರಲು ಬಯಸುತ್ತಾರೆ ಹಾಗಾಗಿ ಮನೆ ಹೆಣ್ಣು ಮಕ್ಕಳು ಯಾವ ರೀತಿ ಇರಬೇಕು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಹೆಣ್ಣುಮಕ್ಕಳು ಅದರಲ್ಲೂ ಮದುವೆಯಾಗಿರುವ ಗೃಹಿಣಿಯರು ಈ ನಿಯಮಗಳನ್ನು ಪಾಲಿಸಲೇಬೇಕು.
ಈ ಸುದ್ದಿ ಓದಿ:- ಗೃಹ ಜ್ಯೋತಿ ಫಲಾನುಭವಿಗಳ ಇಲ್ಲಿ ನೋಡಿ, ಇನ್ನು ಮುಂದೆ ಉಚಿತ ಕರೆಂಟ್ ಎಲ್ಲರಿಗೂ ಇಲ್ಲ, ಪೂರ್ತಿ ಬಿಲ್ ಕಟ್ಟಲೇಬೇಕು.!
* ಯಾವಾಗಲು ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು, ತಪ್ಪದೇ ಮನೆ ಮುಂದೆ ಹಾಗೂ ತುಳಸಿ ಕಟ್ಟೆ ಮುಂದೆ ರಂಗೋಲಿ ಹಾಕಬೇಕು.
* ಸ್ನಾನ ಮಾಡಿ ದೇವರ ಕೋಣೆಯಲ್ಲಿ ದೀಪ ಹಚ್ಚಬೇಕು, ಅರಿಶಿನ ಕುಂಕುಮ ಹಚ್ಚಿ ಹೂವು ಇಟ್ಟು ಪ್ರತಿನಿತ್ಯವೂ ಪೂಜೆ ಮಾಡಬೇಕು.
ಈ ಸುದ್ದಿ ಓದಿ:-ನಿಮ್ಮ ಪಾಲಿನ ಆಸ್ತಿ ನಿಮಗೆ ಸಿಗಬೇಕು ಎಂದರೆ ಈ ರೀತಿ ಮಾಡಿ, ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸುಲಭ ಪರಿಹಾರ.!
* ಸ್ನಾನ ಮಾಡಿದ ನಂತರವಷ್ಟೇ ಅಡುಗೆ ಮನೆಗೆ ಪ್ರವೇಶ ಮಾಡಿ ಗ್ಯಾಸ್ ಗೆ ನಮಸ್ಕರಿಸಿ ಆಮೇಲೆ ಬೆಂಕಿ ಹಚ್ಚಿ ಅಡುಗೆ ಆರಂಭಿಸಬೇಕು. ಅದೇ ರೀತಿ ರಾತ್ರಿ ಹೊತ್ತು ಅಡುಗೆ ಆದ ತಕ್ಷಣ ಗ್ಯಾಸ್ ಸ್ವಚ್ಛಗೊಳಿಸಿ ಪಾತ್ರೆಗಳನ್ನು ಸ್ವಚ್ಛಗೊಳಿಸಿ ನಂತರ ಮಲಗಬೇಕು ಯಾವುದೇ ಕಾರಣಕ್ಕೂ ಎಂಜಲು ಪಾತ್ರೆಗಳನ್ನು ಸಿಂಕ್ ನಲ್ಲಿ ಹಾಗೆ ಇಟ್ಟು ಮಲಗಬಾರದು ಇದರಿಂದ ಲಕ್ಷ್ಮಿ ಕೋ’ಪಕ್ಕೆ ತುತ್ತಾಗುತ್ತೇವೆ.
* ಸೂರ್ಯೋದಯ ಆದ ನಂತರವೂ ಕೂಡ ಮಲಗೇ ಇದ್ದರೆ ಅಂತಹ ಗೃಹಿಣಿಯರು ಕೂಡ ಲಕ್ಷ್ಮಿ ಅವಕೃಪೆಗೆ ಪಾತ್ರರಾಗುತ್ತಾರೆ ಅವರನ್ನು ದಟ್ಟದರಿದ್ರ ಆವರಿಸುತ್ತದೆ.
* ಗೃಹಿಣಿಯರಿಗೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಕೆಟ್ಟ ಭಾಷೆಗಳನ್ನು ಬಳಸಿ ಮಾತನಾಡಬಾರದು, ಹಿರಿಯರಿಗೆ ಗೌರವ ಕೊಟ್ಟೇ ನೋಡಿಕೊಳ್ಳಬೇಕು. ಕಾಯಿಲೆ ಬಿದ್ದರೆ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಹಾಗೆ ಮನೆಗೆ ಯಾರೇ ಅತಿಥಿಗಳು ಬಂದರೂ ಕೂಡ ಅವರನ್ನು ಸತ್ಕರಿಸಿ ಕಳುಹಿಸಬೇಕು.
* ಆಹಾರವನ್ನು ಎಂದಿಗೂ ವ್ಯರ್ಥ ಮಾಡಲೇಬಾರದು ಆಹಾರದ ಬಗ್ಗೆ ಗೌರವ ಇಟ್ಟುಕೊಂಡಿರುವ ಹೆಣ್ಣುಮಕ್ಕಳಿಗೆ ತಾಯಿ ಅನ್ನಪೂರ್ಣೇಶ್ವರಿ ಆಶಿರ್ವಾದ ಕೂಡ ಸಿಗುತ್ತದೆ, ಅಕ್ಕಿಯನ್ನು ಲಕ್ಷ್ಮಿ ಎಂದು ಕರೆಯುತ್ತಾರೆ ಹಾಗಾಗಿ ಮನೆಯಲ್ಲಿ ಅಕ್ಕಿ, ನೀರು ಧಾನ್ಯ ಇವೆಲ್ಲವನ್ನೂ ಕೂಡ ಹಿಡಿತದಲ್ಲಿ ಬಳಸಬೇಕು.
ಈ ಸುದ್ದಿ ಓದಿ:-ಆಂಜನೇಯನ ಬಳಿ ಈ ವಸ್ತು ಇಡಿ, ಎಷ್ಟೇ ಸಾಲ ಇದ್ದರು ಖಂಡಿತ ತೀರುತ್ತೆ.!
* ಅತಿ ಮುಖ್ಯವಾಗಿ ಯಾವಾಗಲೂ ನಗುಮುಖದಿಂದ ಕೂಡಿರಬೇಕು
* ಎಷ್ಟೇ ಬ್ಯುಸಿ ಇದ್ದರೂ ಕೂಡ ಲಕ್ಷಣವಾಗಿ ಮುಖಕ್ಕೆ ಕುಂಕುಮ ಹಚ್ಚಿ ತಲೆ ಬಾಚಿಕೊಂಡು, ಕೈಯಲ್ಲಿ ಬಳೆ, ಮುಡಿಯಲ್ಲಿ ಹೂವು ಇಟ್ಟುಕೊಂಡು ಓಡಾಡಬೇಕು, ಕೆಲಸ ಇದೆ ಎನ್ನುವ ಕಾರಣಕ್ಕೆ ಹೇಗೇಗೋ ಇದ್ದರೆ ಮನೆಗೆ ಶುಭವಲ್ಲ.
* ಪತಿಯನ್ನು ಗೌರವ ಪೂರ್ವಕವಾಗಿ ಕಾಣಬೇಕು.
* ಪತಿ ಒಂದು ವೇಳೆ ಕೆಟ್ಟವರಾಗಿದ್ದರೆ ಅಥವಾ ತಪ್ಪು ದಾರಿ ಹಿಡಿದಿದ್ದರೆ ಒಳ್ಳೆಯ ಮಾತಿನಿಂದ ಅವರನ್ನು ಸರಿದಾರಿಗೆ ತರಬೇಕು
* ಮನೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಧೈರ್ಯ ಮಾಡಬೇಕು. ಅವಶ್ಯಕತೆ ಇದ್ದಾಗ ಸಲಹೆಗಳನ್ನು ಕೊಡಬೇಕು ಎಲ್ಲರಿಗೂ ಒಳಿತನ್ನೇ ಬಯಸಬೇಕು. ಈ ರೀತಿಯ ಗುಣಗಳನ್ನು ಹೊಂದಿರುವ ಮಹಿಳೆಗೆ ತಾಯಿ ಮಹಾಲಕ್ಷ್ಮಿ ಆಶೀರ್ವಾದ ಸದಾ ಇರುತ್ತದೆ ಮತ್ತು ಆಕೆಗೆ ಬದುಕಿನಲ್ಲಿ ಕಡಿಮೆ ಕಷ್ಟಗಳು ಬರುತ್ತವೆ.