ರಾತ್ರಿ ಮಲಗುವ ಮುನ್ನ ನಾವು ಮಾಡುವಂತಹ ಕೆಲವೊಂದು ತಪ್ಪಿ ನಿಂದ ರಾತ್ರಿ ಪೂರ ನಿದ್ದೆ ಇಲ್ಲದೆ ಇರಬೇಕಾಗುತ್ತದೆ. ಹೌದು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಯಾವ ರೀತಿಯಾಗಿ ಬದುಕಬೇಕು ನಾವು ಯಾವ ಆಹಾರವನ್ನು ಸೇವನೆ ಮಾಡಬೇಕು ಹೀಗೆ ಪ್ರತಿಯೊಂದ ರ ಬಗ್ಗೆ ಕೂಡ ಯೋಚನೆ ಮಾಡುತ್ತೇವೆ.
ಆದರೆ ನಮ್ಮ ಆರೋಗ್ಯದ ಬಗ್ಗೆ ಯಾವುದೇ ರೀತಿಯ ಹೆಚ್ಚಿನ ಕಾಳಜಿಯನ್ನು ವಹಿಸುವುದಿಲ್ಲ ಇಷ್ಟ ಬಂದ ಹಾಗೆ ಎಲ್ಲವನ್ನು ತಿನ್ನುವುದು, ಇಷ್ಟ ಬಂದ ಹಾಗೆ ಕೆಲಸ ಮಾಡುವುದು, ಇಷ್ಟ ಬಂದ ಸಮಯದಲ್ಲಿ ಮಲಗುವುದು, ತಡವಾಗಿ ಎದ್ದೇಳುವುದು, ಹೀಗೆ ಹಲವಾರು ರೀತಿಯ ತಪ್ಪು ವಿಧಾನಗಳನ್ನು ನಾವು ಅನುಸರಿಸು ತ್ತೇವೆ.
ಆದರೆ ಆ ತಪ್ಪಿನಿಂದ ಅದು ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾ ಮ ಬೀರುತ್ತದೆ ಎನ್ನುವ ಆಲೋಚನೆಯನ್ನು ಸಹ ನಾವು ಮಾಡುವುದಿಲ್ಲ ಬದಲಿಗೆ ನಮ್ಮ ಸಮಯಕ್ಕೆ ಅನುಗುಣವಾಗಿ ಹೇಗೆ ನಾವು ಸಮಯಕ್ಕೆ ಹೊಂದಿಕೊಳ್ಳಬೇಕು ಆ ರೀತಿ ಆ ಸಮಯಕ್ಕೆ ನಮ್ಮ ಕೆಲಸವನ್ನು ಮಾಡಿಕೊಳ್ಳುತ್ತಿರುತ್ತೇವೆ ಆದರೆ ಆ ವಿಧಾನಗಳನ್ನು ಅನುಸರಿಸುವುದು ತುಂಬಾ ಕೆಟ್ಟದು ಎಂದೇ ಹೇಳಬಹುದು.
ಹೌದು ನಮ್ಮ ಹಿಂದೆ ಸಮಯ ಬರುವುದಿಲ್ಲ ಸಮಯದ ಹಿಂದೆ ನಾವು ಹೋಗಬೇಕು. ಆದ್ದರಿಂದ ಆ ಸಮಯವನ್ನು ಹೇಗೆ ನಾವು ಸಂಪೂರ್ಣವಾಗಿ ವ್ಯರ್ಥ ಮಾಡದೆ ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.
ಹೌದು ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಾವು ಪ್ರತಿದಿನ ರಾತ್ರಿ ಊಟ ಮಾಡಿದ ತಕ್ಷಣ ಯಾವ ರೀತಿಯ ತಪ್ಪುಗಳನ್ನು ಮಾಡಬಾರದು. ಹಾಗೂ ಊಟ ಮಾಡಿದ ಮೇಲೆ ನಾವು ಯಾವ ವಿಧಾನಗಳನ್ನು ಅನು ಸರಿಸಬೇಕು ಹಾಗೂ ಯಾವ ರೀತಿ ನಾವು ಅನುಸರಿಸುವುದರಿಂದ ಯಾವ ಲಾಭಗಳನ್ನು ಪಡೆದುಕೊಳ್ಳಬಹುದು ಎನ್ನುವ ಮಾಹಿತಿಯ ಬಗ್ಗೆ ಈಗ ತಿಳಿಯೋಣ.
* ರಾತ್ರಿ ಮಲಗುವ ಮುನ್ನ ಬಿಸಿ ಹಾಲು ಕುಡಿದು ಮಲಗುವುದು ಒಳ್ಳೆಯದು. ಇದು ಮೂಳೆಯನ್ನು ಬಲಪಡಿಸುತ್ತದೆ.
* ಯಾವುದೇ ಕಾರಣಕ್ಕೂ ಊಟ ಮಾಡಿದ ತಕ್ಷಣ ಮಲಗಲು ಹೋಗಬೇಡಿ. ಇದರಿಂದ ಆಹಾರ ಜೀರ್ಣವಾಗುವುದು ಕಷ್ಟ. ಬದಲಿಗೆ 10 ರಿಂದ 20 ನಿಮಿಷಗಳ ಕಾಲ ನಡೆದಾಡುವುದು ಉತ್ತಮ ಈ ರೀತಿ ಮಾಡುವುದರಿಂದ ನಾವು ತಿಂದಂತಹ ಆಹಾರ ಸರಿಯಾದ ರೀತಿಯಲ್ಲಿ ಜೀವನವಾಗುವುದು ಹಾಗೂ ಅದು ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾ ಒಳ್ಳೆಯದು ಎಂದೇ ಹೇಳಬಹುದು.
* ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಆಯಾಸ ದೂರವಾಗುತ್ತದೆ.
* ರಾತ್ರಿ ಮಲಗುವ ಮುನ್ನ ದೇವರಿಗೆ ಕೈ ಮುಗಿಯುವುದು, ಶ್ಲೋಕ ಹೇಳುವುದು ಒಳ್ಳೆಯದು. ಇದು ನಮ್ಮ ಮನಸ್ಸಿಗೆ ನೆಮ್ಮದಿಯನ್ನು ಉಂಟುಮಾಡುತ್ತದೆ.
* ಯಾವಾಗಲು ನೀವು ಮಲಗುವ ಸ್ಥಳ ನಿಮಗೆ ಆರಾಮದಾಯಕ ವಾಗಿರಬೇಕು. ಆದ್ದರಿಂದ ನಿಮಗೆ ಇಷ್ಟವಾದ ಸ್ಥಳವನ್ನೇ ಆಯ್ಕೆ ಮಾಡಿ.
* ನೀವು ಮಲಗುವಾಗ ನಿಮ್ಮ ಪಾದಗಳು ಯಾವಾಗಲು ಬಾಗಿಲಿನಿಂದ ವಿರುದ್ಧ ದಿಕ್ಕಿನಲ್ಲಿ ಇರಬೇಕು.
* ಮಲಗುವ ಮುನ್ನ ಕಾಲು ಹಾಗೂ ಪಾದವನ್ನು ಸ್ವಚ್ಛಗೊಳಿಸಿ ಮಲಗಬೇಕು.
* ರಾತ್ರಿ ಮಲಗುವ ಮುನ್ನ ನೀರನ್ನು ಕುಡಿದು ಸ್ವಲ್ಪ ಹೊತ್ತು ಕುಳಿತು ನಂತರ ಮಲಗುವುದು ಒಳ್ಳೆಯದು.
* ಮಲಗುವ ಕೋಣೆಯಲ್ಲಿ ಅತಿಯಾದ ಬೆಳಕು ಇದ್ದರೆ ಕೆಲವರಿಗೆ ನಿದ್ದೆ ಬರುವುದಿಲ್ಲ.ಹಾಗಾಗಿ ಲೈಟ್ ಆಫ್ ಮಾಡಿ ಮಲಗುವುದು ಉತ್ತಮ.
* ನೀವು ಮಲಗುವ ಕೋಣೆ ಅಥವಾ ಜಾಗದಲ್ಲಿ ಹೆಚ್ಚು ಶಬ್ದ ಬಾರದಂತೆ ನೋಡಿಕೊಳ್ಳಿ.
* ಮಲಗುವ ಕೋಣೆ ಹೆಚ್ಚು ಬಿಸಿ ಅಥವಾ ಹೆಚ್ಚು ತಂಪಾಗಿ ಇರಬಾರದು
* ರಾತ್ರಿ ಊಟ ಮಾಡುವುದನ್ನು ತಪ್ಪಿಸಬೇಡಿ.
* ರಾತ್ರಿ ಮಲಗುವ ಮುನ್ನ ಟೀ, ಕಾಫಿ ಕುಡಿಯಬೇಡಿ. ಇದರಿಂದ ನಮಗೆ ಬರುವ ನಿದ್ದೆಯು ಬರುವುದಿಲ್ಲ.