ಈಗ ಅತಿ ಚಿಕ್ಕ ವಯಸ್ಸಿಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರನ್ನು ನೋಡುತ್ತಿದ್ದೇವೆ. ಯುವಜನತೆ ಹೀಗೆ ಗ್ಯಾಸ್ಟ್ರಿಕ್ ನಿಂದ ಬಳಲುತ್ತಿರುವುದಕ್ಕೆ ಮುಖ್ಯವಾದ ಕಾರಣ ಅವರ ಜೀವನಶೈಲಿ ತಪ್ಪಾಗಿರುವುದು. ಲೇಟಾಗಿ ಮಲಗುವುದು, ರಾತ್ರಿ ಲೇಟಾಗಿ ಊಟ ಮಾಡಿ ಸರಿಯಾಗಿ ನಿದ್ರೆ ಆಗದೆ ಇರುವುದರಿಂದ ಗ್ಯಾಸ್ಟ್ರಿಕ್ ಉಂಟಾಗುತ್ತದೆ.
ಯಾಕೆಂದರೆ ನಿದ್ರೆ ಸಮಯ ಕಡಿಮೆ ಆದಷ್ಟು ದೇಹದಲ್ಲಿ ಜೀರ್ಣಕ್ರಿಯೆಗೆ ಬೇಕಾದ ಎಂಜೈಮ್ಸ್ ಗಳ ಬಿಡುಗಡೆ ಸರಿಯಾಗಿ ಆಗುವುದಿಲ್ಲ. ನಾವು ನಿದ್ರೆ ಮಾಡುವಾಗ ನಮ್ಮ ದೇಹದಲ್ಲಿ ಹಲವಾರು ರೀತಿಯ ಹಾರ್ಮೋನ್ ಗಳು ಬಿಡುಗಡೆ ಆಗುತ್ತದೆ. ಈ ಪ್ರಕ್ರಿಯೆ ನಡೆಯದೇ ಇದ್ದಾಗ ಹಾರ್ಮೋನ್ ವೇರಿಯೇಷನ್ ಇಂದ ದೇಹದ ಆರೋಗ್ಯದಲ್ಲೂ ಸಾಕಷ್ಟು ವ್ಯತ್ಯಾಸಗಳು ಆಗುತ್ತದೆ.
ಇದರಲ್ಲಿ ಗ್ಯಾಸ್ಟ್ರಿಕ್ ಕೂಡ ಎಂದು ಹೇಳಬಹುದು, ಹಾಗಾಗಿ ಇದನ್ನು ಕಾಯಿಲೆ ಎನ್ನದೆ ಡಿಸ್ ಆರ್ಡರ್ ಎನ್ನಬಹುದು ಇದನ್ನು ಹೊರತುಪಡಿಸಿ ನಾವು ತಿನ್ನುವ ಆಹಾರ ಕ್ರಮದ ಮೇಲು ಕೂಡ ಇದು ನಿರ್ಧಾರ ಆಗುತ್ತದೆ. ಬಾಯಲ್ಲಿಯೂ ಕೂಡ ಸಾಕಷ್ಟು ರೀತಿಯ ಜೀರ್ಣಕ್ರಿಯೆಗೆ ಬೇಕಾದ ಸಲೈವಗಳು ಬಿಡುಗಡೆ ಆಗುತ್ತವೆ.
ಅವುಗಳ ಮೂಲಕ ಅದು ಜಠರಕ್ಕೆ ಸೇರಬೇಕು ಹೀಗೆ ಬಾಯಿಯಲ್ಲಿ ಅಗಿಯುವಿಕೆ, ನುಂಗುವಿಕೆ, ಕರುಳಿನಲ್ಲಿ ಜೀರ್ಣ ಆಗುವುದು ಮತ್ತು ನಾವು ತಿಂದ ಆಹಾರದಲ್ಲಿ ಬೇಕಾದ ಪದಾರ್ಥಗಳು ಬೇಡದ ಪದಾರ್ಥಗಳು ವಿಭಾಗ ಹಾಕುವುದು ನಂತರ ಅದು ಹೊರ ಹೋಗುವುದು ಇಷ್ಟು ಕ್ರಮಗಳು ಸರಿಯಾದ ರೀತಿಯಲ್ಲಿ ನಡೆದರೆ ಈ ಡಿಸ್ ಆರ್ಡರ್ ಆಗುವುದಿಲ್ಲ.
ಇದರಲ್ಲಿ ಯಾವುದೇ ಒಂದು ಪ್ರಕ್ರಿಯೆಗೆ ಕ’ಷ್ಟ ಆದಾಗ ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಗ್ಯಾಸ್ಟ್ರಿಕ್ ಆಗುತ್ತದೆ ಅಥವಾ ಅತಿ ಹೆಚ್ಚಿನ ಹಸಿವು ಆಗಿ ಅದರ ಮೂಲಕ ಗ್ಯಾಸ್ಟ್ರಿಕ್ ಆಗುತ್ತದೆ. ನಾವು ತಿನ್ನುವ ಆಹಾರವನ್ನು ಬಾಯಲ್ಲಿ 32 ಬಾರಿ ಜಗಿದು ತಿನ್ನಬೇಕು ಎನ್ನುವ ನಿಯಮ ಇದೆ, ಆದರೆ ಈಗಿನ ಕಾಲದಲ್ಲಿ ಈ ರೀತಿಯ ಮೈಂಡ್ ಫುಲ್ ಈಟಿಂಗ್ ಕಾನ್ಸೆಪ್ಟ್ ಹೋಗಿಬಿಟ್ಟಿದೆ.
ಊಟದ ಮೇಲೆ ಗಮನ ಇಲ್ಲದೆ ಊಟಕ್ಕೆ ಗೌರವ ಕೊಡದೆ ಮೊಬೈಲ್ ನೋಡಿಕೊಂಡು ಟಿವಿ ನೋಡಿಕೊಂಡು ಓಡಾಡುತ್ತಾ ಕೆಲಸ ಮಾಡುತ್ತಾ ಊಟ ಮಾಡುತ್ತಾರೆ. ಊಟದ ಮೇಲೆ ಗಮನ ಇಡದೆ ಇದ್ದರೆ, ಟೆನ್ಶನ್ ನಲ್ಲಿ ಊಟ ಮಾಡಿದರೆ ಸರಿಯಾಗಿ ಜೀರ್ಣ ಆಗುವುದಿಲ್ಲ ಹಿಂದೆ 5 ಬೆರಳನ್ನು ಉಪಯೋಗಿಸಿ ಕೈಯಲ್ಲಿ ಊಟ ಮಾಡುತ್ತಿದ್ದರು.
ಇದರಿಂದ ಸಮಾನ ಮುದ್ರೆ ಆಗುತ್ತಿತ್ತು ಅದು ಜೀರ್ಣಕ್ರಿಯೆಗೆ ಸಹಾಯವಾಗುತ್ತಿತ್ತು ಮತ್ತು ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು ಇದು ಕೂಡ ಜೀರ್ಣ ಕ್ರಿಯೆ ಚೆನ್ನಾಗಿ ಆಗುವಂತೆ ಮಾಡುತ್ತಿತ್ತು. ಆದರೆ ಈಗ ಟೇಬಲ್ ಮೇಲೆ ತಿನ್ನುವುದು ಸ್ಪೂನ್ನಲ್ಲಿ ತಿನ್ನುವುದು ಈ ರೀತಿ ಅಭ್ಯಾಸಗಳು ಕೂಡ ಗ್ಯಾಸ್ಟ್ರಿಕ್ ತರುತ್ತಿದೆ ಎಂದರೆ ತಪ್ಪಾಗುವುದಿಲ್ಲ.
ಇದಕ್ಕೆ ಪರಿಹಾರ ಏನೆಂದರೆ ಈ ಮೇಲೆ ತಿಳಿಸಿದ ಎಲ್ಲಾ ವಿಷಯಗಳಲ್ಲಿ ಸರಿಯಾದ ಕ್ರಮ ಅಳವಡಿಸಿಕೊಳ್ಳುವುದು ಇದರ ಜೊತೆ ಯೋಗ ಹಾಗೂ ಪ್ರಾಣಯಾಮದ ಮೂಲಕ ಈ ಡಿಸ್ಆರ್ಡರ್ ಸರಿಪಡಿಸಿಕೊಳ್ಳಬಹುದು ಹೇಗೆಂದರೆ ಸಮಾನ ಮುದ್ರೆ, ಸೂರ್ಯಮುದ್ರೆ ಮತ್ತು ಅಪಾನ ಮುದ್ರೆ ಮೂಲಕ.
ಈ ಮೂರು ಮುದ್ದೆಗಳಲ್ಲಿ ಐದೈದು ನಿಮಿಷ ಬಸ್ತಿಕ ಪ್ರಾಣಾಯಾಮವನ್ನು, ಐದರಿಂದ ಹತ್ತು ನಿಮಿಷ ನಾಡಿಶೋಧನಾ ಪ್ರಾಣಯಾಮ, ಐದೈದು ನಿಮಿಷ ಕಪಾಲ ಬಾತಿ, ಭ್ರಮರಿ ಪ್ರಾಣಯಾಮವನ್ನು ಮತ್ತು ಉಜ್ಜೈನ್ ಪ್ರಾಣಾಯಾಮವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡುವುದರಿಂದ ಹೊಟ್ಟೆ ಭಾಗ ಕ್ರೀಯಶೀಲವಾಗಿ ಮನಸ್ಸು ಕೂಡ ಪ್ರಸನ್ನವಾಗುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಜೀವಮಾನದಲ್ಲಿ ಬರುವುದಿಲ್ಲ.