ಹೆಣ್ಣು ಮಕ್ಕಳಿಗೆ ಅಡುಗೆ ಮಾಡುವುದಕ್ಕಿಂತ ಅಡುಗೆ ಮನೆ ಕ್ಲೀನ್ ಮಾಡುವುದೇ ದೊಡ್ಡ ಸಾಹಸ. ಅದರಲ್ಲೂ ಸ್ಟೌವ್ ಕ್ಲೀನ್ ಮಾಡುವುದಂತೂ ಪ್ರತಿ ಬಾರಿ ಅಡುಗೆ ಮಾಡಿದಾಗಲೂ ಬೇಸರ ಮಾಡುವ ಸಂಗತಿಯಾಗಿದೆ.
ಯಾಕೆಂದರೆ ಕುಕ್ಕರ್ ನಲ್ಲಿ ಗಾಳಿ, ನೀರು ಲೀಕ್ ಆಗಿ ಹೊರಗೆ ಚೆಲ್ಲಿದಾಗ ಅದು ಟೈಲ್ಸ್ ಮೇಲೆ ಸ್ಪ್ರೆಡ್ ಆಗಿರುತ್ತದೆ ಇದನ್ನು ಪ್ರತಿಸಾರಿಯು ಕ್ಲೀನ್ ಮಾಡಲೇ ಬೇಕಾದದ್ದು ಅಡುಗೆ ಮನೆ ಕೆಲಸವನ್ನು ಹೆಚ್ಚು ಸಮಯ ಹಿಡಿಯುವಂತೆ ಮಾಡುತ್ತದೆ. ನಿಮ್ಮ ಮನೆಯಲ್ಲಿ ಕೂಡ ಕುಕ್ಕರ್ ಈ ರೀತಿ ಸಮಸ್ಯೆ ಮಾಡುತ್ತಿದ್ದರೆ ನಾವು ಹೇಳಿದ ಈ ಟೆಕ್ನಿಕ್ ಗಳನ್ನು ಬಳಸಿ ಇನ್ನು ಮುಂದೆ ಇಂತಹ ಸಮಸ್ಯೆ ಬರುವುದಿಲ್ಲ.
* ಕೆಲವರು ಕುಕ್ಕರ್ ಗ್ಯಾಸ್ಕೆಟ್ ನೀರಿಗೆ ಹಾಕುವುದಿಲ್ಲ ಮತ್ತು ಅಥವಾ ನೀರಿಗೆ ಹಾಕಿ ಒಂದು ಬಾರಿ ತೆಗೆದು ಕುಕ್ಕರ್ ಇಟ್ಟಿದ್ದರು ಮತ್ತೆ ಅದನ್ನು ವಾಶ್ ಮಾಡದೆ ಮತ್ತೊಮ್ಮೆ ಕುಕ್ಕರ್ ಇಡುತ್ತಾರೆ. ಈ ರೀತಿ ಮಾಡುವುದರಿಂದ ಸಮಸ್ಯೆ ಆಗುತ್ತದೆ. ಪ್ರತಿ ಬಾರಿಯೂ ಮುಚ್ಚಳ ನೀಟಾಗಿ ಒಳಗಡೆ ಕ್ಲೀನ್ ಮಾಡಿ ಗ್ಯಾಸ್ಕೆಟ್ ನೀರಿಗೆ ಹಾಕಿ ಅದರ ಒಳಗೆ ಅಕ್ಕಿ, ಬೆಳೆ ಕಾಳುಗಳ ಪಾರ್ಟಿಕಲ್ಸ್ ಇವುಗಳನ್ನು ನೋಡಿ ಕ್ಲೀನ್ ಮಾಡಿ ಕುಕ್ಕರ್ ಜೋಡಿಸಿ ಇಡಬೇಕು.
ಈ ಸುದ್ದಿ ಓದಿ:- ಮಕರ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ, 6 ವರ್ಷಗಳಿಂದ ನೀವು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿತು, ಏಪ್ರಿಲ್ ತಿಂಗಳಿನಿಂದಲೇ ರಾಜಯೋಗ ಶುರು.!
* ಹಾಗೆಯೇ ಸೇಫ್ಟಿ ವಾಲ್ ಮತ್ತು ವಿಷಲ್ ಹಾಕುವ ಹೋಲ್ ನಲ್ಲಿ ಏನಾದರೂ ಹೋಗಿದೆಯೇ ಎನ್ನುವುದನ್ನು ನೋಡಿಕೊಂಡು ಕ್ಲೀನ್ ಮಾಡಬೇಕು ಇದರಲ್ಲಿ ಯಾವುದಾದರೂ ಪಾರ್ಟಿಕಲ್ ಸಿಕ್ಕಿ ಹಾಕಿಕೊಂಡಿದ್ದಾಗ ಕೂಡ ಈ ರೀತಿ ಸಮಸ್ಯೆ ಆಗುತ್ತದೆ
* ವಿಷಲ್ ಕೂಡ ಕ್ಯಾಪ್ ಬಿಚ್ಚಿ ಏನಾದರೂ ಸಿಕ್ಕಿಕೊಂಡಿದೆಯೇ ಎನ್ನುವುದನ್ನು ನೋಡಿ ತೆಗೆಯಬೇಕು ಆಗಾಗ ನೀರು ಹಾಕಿ ನೀಟಾಗಿ ವಾಶ್ ಮಾಡಿ ಮೈನ್ಟೈನ್ ಮಾಡಬೇಕು
* ಹೈ ಫ್ಲೇಮ್ ನಲ್ಲಿ ಉರಿ ಇಟ್ಟು ಕುಕ್ಕರ್ ಕೂಗಿಸಬೇಕು ಅಥವಾ ಮೀಡಿಯಂ ಗಿಂತ ಜಾಸ್ತಿ ಹೈಗಿಂತ ಸ್ವಲ್ಪ ಕಡಿಮೆ ಇಡಬೇಕು ಲೋ ಫ್ಲೇಮ್ ನಲ್ಲಿ ಕುಕ್ಕರ್ ಇಟ್ಟರೆ ಆಗಲೂ ಈ ರೀತಿ ಸಮಸ್ಯೆಗಳಾಗುತ್ತವೆ.
* ಅಡುಗೆ ಮಾಡುವಾಗ ಬೇಳೆ ಅಕ್ಕಿ ಅಥವಾ ತರಕಾರಿ ಏನಿದ್ದರೂ ಕೂಡ ಪೂರ್ತಿ ಲೋಡ್ ಆಗುವಂತೆ ಇಡಬಾರದು ಅದಕ್ಕೆ ಸ್ಪೇಸ್ ಇರುವಂತೆ ಬಿಡಬೇಕು ಇಲ್ಲವಾದರೆ ಈ ರೀತಿ ಉಕ್ಕಿ ಎಲ್ಲ ಕೆಳಗಡೆ ಸುರಿಯುತ್ತದೆ
* ಯಾವಾಗಲೂ ಅಕ್ಕಿ, ಬೇಳೆ, ತರಕಾರಿ ಏನೇ ಬೇಯಲು ಇಟ್ಟರು ಅದಕ್ಕೆ ಬೇಕಾದಷ್ಟು ನೀರನ್ನು ಸರಿಯಾಗಿ ಹಾಕಬೇಕು ನೀರು ಹೆಚ್ಚಾಗಿ ಹಾಕಿದರು ಸುರಿಯುತ್ತದೆ ಕಡಿಮೆ ಹಾಕಿದರು ಕೂಡ ಸಮಸ್ಯೆ ಆಗುತ್ತದೆ.
ಈ ಸುದ್ದಿ ಓದಿ:- ಬಾಳೆಹಣ್ಣು ಬೇಗ ಹಾಳಾಗುತ್ತಿದೆಯೇ.? ಈ ಟೆಕ್ನಿಕ್ ಬಳಸಿ ಎಷ್ಟೇ ಹಣ್ಣಾದರೂ ಕೆಡುವುದಿಲ್ಲ.!
* ಮತ್ತೊಂದು ವಿಚಾರ ಏನೆಂದರೆ ತರಕಾರಿ ಸೊಪ್ಪು ಅಥವಾ ಯಾವುದೇ ಕಾಳುಗಳನ್ನು ಹಾಕಿದಾಗ ಅದು ಕುದಿಯಲು ಆರಂಭಿಸಿದ ಮೇಲೆ ಮುಚ್ಚುಳ ಮುಚ್ಚುವುದರಿಂದ ಕೂಡ ಈ ರೀತಿ ಉಕ್ಕಿ ಸುರಿಯುವ ಸಮಸ್ಯೆಯನ್ನು ತಪ್ಪಿಸಬಹುದು
* ಇನ್ನೊಂದು ಉಪಾಯ ಇದೆ ಆದರೆ ಬಹಳ ಎಚ್ಚರಿಕೆಯಿಂದ ಮಾಡಬೇಕು. ಅದೇನೆಂದರೆ ವಿಷಲ್ ತೆಗೆದು ಸ್ವಲ್ಪ ಪ್ರೆಶರ್ ಬಂದಮೇಲೆ ಅದನ್ನು ಹುಷಾರಾಗಿ ನೋಡಿಕೊಂಡಿದ್ದು ಆಗ ವಿಶಾಲ್ ಹಾಕಿದರೆ ಕೂಡ ಸೇಫ್ಟಿ ವಾಲ್ ಸರಿಯಾಗಿದೆಯೇ ಅಥವಾ ಪ್ರೆಷರ್ ಹೋಗುತ್ತಿದೆಯೇ ಎಂದು ತಿಳಿಯುತ್ತದೆ. ಆದರೆ ವಿಷಲ್ ಹಾಕುವುದು ಮರೆತೆ ಹೋದರೆ ಅ’ಪಾ’ಯವಾಗಬಹುದು ಹಾಗಾಗಿ ಎಚ್ಚರಿಕೆಯಿಂದ ಇದನ್ನು ಮಾಡಬೇಕು.
* ಕುಕ್ಕರ್ ನಲ್ಲಿ ಏನು ಇಡುತ್ತಿರೋ ಆ ಪದಾರ್ಥಗಳಿಗೆ ಎಣ್ಣೆ ಸೇರಿಸಬಹುದು ಎನ್ನುವುದಾದರೆ ಒಂದೆರಡು ಚಮಚ ಎಣ್ಣೆ ಹಾಕಿ ಬೇಯಲು ಇಡುವುದು ಒಳ್ಳೆಯದು ಇದರಿಂದ ಕೂಡ ಪದಾರ್ಥಗಳು ಉಕ್ಕಿ ಸುರಿಯುವುದಿಲ್ಲ.
https://youtu.be/12D9TVW5q_s?si=YQx3d9iFZD6d2L_b