Home Useful Information ಫೋನ್ ನಲ್ಲಿ ಫೋಟೋ ಡಿಲೀಟ್ ಆಗಿದ್ದರೆ ಅದನ್ನು ರಿಕವರಿ ಮಾಡುವುದು ಹೇಗೆ ನೋಡಿ.!

ಫೋನ್ ನಲ್ಲಿ ಫೋಟೋ ಡಿಲೀಟ್ ಆಗಿದ್ದರೆ ಅದನ್ನು ರಿಕವರಿ ಮಾಡುವುದು ಹೇಗೆ ನೋಡಿ.!

0
ಫೋನ್ ನಲ್ಲಿ ಫೋಟೋ ಡಿಲೀಟ್ ಆಗಿದ್ದರೆ ಅದನ್ನು ರಿಕವರಿ ಮಾಡುವುದು ಹೇಗೆ ನೋಡಿ.!

 

ನಮ್ಮಲ್ಲಿ ಹೆಚ್ಚಿನವರು ಮೊಬೈಲ್ ಫೋನ್ ಇಟ್ಟುಕೊಂಡಿರುವುದಕ್ಕೆ ಮುಖ್ಯ ಕಾರಣವೇ ಫೋಟೋಸ್ ತೆಗೆಯಲು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಯಾಕೆಂದರೆ ಈಗಿನ ಕಾಲದಲ್ಲಿ ಶಾಲೆಗೆ ಹೋಗುವ ಹುಡುಗಿಯಿಂದ ವಯಸ್ಸಾದವರ ವರೆಗೆ ಪ್ರತಿಯೊಬ್ಬರಿಗೂ ಕೂಡ ಈ ರೀತಿ ಫೋಟೋ ಆಸಕ್ತಿ ಇದೆ.

ತಮಗೆ ಇಷ್ಟವಾದ ನೋಟಗಳನ್ನು ಕ್ಯಾಪ್ಚರ್ ಮಾಡುವುದು, ವಿಡಿಯೋ ರೆಕಾರ್ಡ್ ಮಾಡುವುದು ತಮ್ಮ ಕುಟುಂಬದ ಅಥವಾ ಆತ್ಮೀಯರನ್ನು ಭೇಟಿಯಾದಾಗ ಫೋಟೋ ತೆಗೆದುಕೊಳ್ಳುವುದು ಮತ್ತು ಅವುಗಳನ್ನು ಆಗಾಗ ನೋಡುವುದು ಇವರ ಅಭ್ಯಾಸ. ಈ ರೀತಿ ಇಂಪಾರ್ಟೆಂಟ್ ಡಾಕ್ಯುಮೆಂಟ್ ಗಳನ್ನು ಹಾಗೂ ನೆನಪಿಗಾಗಿ ಕೆಲವು ಫೋಟೋಗಳನ್ನು ಕೂಡ ತೆಗೆದು ತಮ್ಮ ಫೋನ್ ನಲ್ಲಿ ಜೋಪಾನವಾಗಿ ಇಟ್ಟುಕೊಳ್ಳುವ ವರ್ಗವು ಕೂಡ ಇದೆ.

ಆದರೆ ಸ್ಮಾರ್ಟ್ ಫೋನ್ ಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದು ಹ್ಯಾಂಗ್ ಆದಾಗ ಅಥವಾ ಇದಕ್ಕೆ ಇನ್ನೇನೋ ಸಮಸ್ಯೆ ಆದಾಗ ಒಂದನ್ನು ಮಾಡಲು ಹೋಗಿ ಮತ್ತೊಂದು ಆಗುತ್ತದೆ. ಆಗ ನೀವು ಮಿಸ್ ಆಗಿ ಈ ಫೋಟೋಗಳನ್ನು ಕಳೆದುಕೊಂಡಿರಬಹುದು ಅಥವಾ ನೀವೇ ಕೋ’ಪದಲ್ಲಿ ಬೇಕೆಂದು ಡಿಲೀಟ್ ಮಾಡಿರಬಹುದು.

ಈ ಸುದ್ದಿ ಓದಿ:- ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ಇರಲಿ 11 ಸಲ ಈ ಸ್ವಿಚ್ ವರ್ಡ್ ಹೇಳಿಕೊಳ್ಳಿ, ಒಂದೇ ರಾತ್ರಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ.!

ಆದರೆ ಬಹಳ ದಿನಗಳಾದ ನಂತರ ನಿಮಗೆ ಆ ಫೋಟೋ ಬೇಕು ಎಂದರೆ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಇಂಥಹ ಸಮಯದಲ್ಲಿ ಇಂದು ನಾವು ಹೇಳುತ್ತಿರುವ ಈ ಟೆಕ್ನಿಕ್ ನಿಮ್ಮ ಅನುಕೂಲಕ್ಕೆ ಬರುತ್ತದೆ. ಹೀಗೆ ನೀವು ಸ್ಮಾರ್ಟ್ ಫೋನ್ ನಲ್ಲಿ ಈ ರೀತಿ ಅಕಸ್ಮಿತ್ ಆಗಿ ಫೋಟೋ ವಿಡಿಯೋ ಡಿಲೀಟ್ ಮಾಡಿಕೊಂಡಿದ್ದರೆ ನಾವು ಹೇಳಿದ ಈ ವಿಧಾನಗಳನ್ನು ಬಳಸಿ ಮರಳಿ ಪಡೆಯಿರಿ.

* DiskDigger ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ (Playstore) ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ಈ ಅಪ್ಲಿಕೇಶನ್ ಇನ್ಸ್ಟಾಲ್ ಆದಮೇಲೆ ಸ್ಕ್ರೀನ್ ಮೇಲೆ ನಿಮಗೆ ಎರಡು ಆಪ್ಷನ್ ಗಳು ಕಾಣುತ್ತವೆ. ಮೊದಲನೇ ಆಪ್ಷನ್ ನಲ್ಲಿ ಡಿಲೀಟ್ ಆದ ಫೋಟೋಗಳನ್ನು (Search for lost photos) ರಿಕವರಿ ಮಾಡಿಕೊಳ್ಳಬಹುದು, ಎರಡೇ ಆಪ್ಷನ್ ನಲ್ಲಿ ಡಿಲಿಟ್ ಮಾಡಿರುವ ವಿಡಿಯೋಗಳನ್ನು (Search for lost Video) ಮರಳಿ ಪಡೆಯಬಹುದು.

ನೀವು ಸೆಲೆಕ್ಟ್ ಮಾಡಿದ ತಕ್ಷಣವೇ ಸ್ಕ್ರೀನ್ ಮೇಲೆ ಯಾವ ಫೋಟೋ ಅಥವಾ ಗಳು ಬೇಕು ಎನ್ನುವುದಕ್ಕೆ ಡಿಲಿಟ್ ಆಗಿರುವ ಅಷ್ಟು ಆಯ್ಕೆಗಳನ್ನು ನೀಡಲಾಗುತ್ತದೆ. ಅದರಲ್ಲಿ ನೀವು ಯಾವ ಫೋಟೋವನ್ನು ನೋಡುತ್ತಿದ್ದೀರಾ ಅದು ಸಿಕ್ಕಿದ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಆಪ್ಷನ್ ಕ್ಲಿಕ್ ಮಾಡಿ ಗ್ಯಾಲರಿಯಲ್ಲಿ ಮತ್ತೆ ಸೇವ್ ಮಾಡಿಕೊಳ್ಳಬಹುದು.

ಈ ಸುದ್ದಿ ಓದಿ:- ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!

(ಆದರೆ ಇದರಲ್ಲಿರುವ ಒಂದು ಕಂಡೀಶನ್ ಏನೆಂದರೆ ನೀವು ಒಂದು ವರ್ಷಕ್ಕಿಂತ ಹಳೆಯದಾದ ಫೋಟೋಗಳನ್ನು ಮರಳಿ ಪಡೆಯಲು ಸಾಧ್ಯವಿಲ್ಲ, ಈಗ ಕೆಲ ದಿನಗಳ ಹಿಂದೆ ಆಪ್ ಗೆ ವಿಧಿಸಲಾಗಿರುವ ಕಂಡೀಶನ್ ಸಮಯದ ಒಳಗಡೆ ನೀವೇನಾದರೂ ಡಿಲೀಟ್ ಮಾಡಿರುವ ಫೋಟೋ ಪಡೆಯಲು ಬಯಸಿದರೆ ಅದು ಸಾಧ್ಯವಾಗುತ್ತದೆ).

ಇನ್ನು ಕೆಲವು ಫೋನ್ ಗಳಲ್ಲಿ ರೀಸೆಂಟ್ಲಿ ಡಿಲೇಟೆಡ್ ಫೋಟೋಸ್ (Recently Deleted option) ಆಪ್ಷನ್ ಹೊಂದಿರುತ್ತದೆ ಅಥವಾ ಗೂಗಲ್ ಫೋಟೋಸ್ (Google photos), ಕ್ಲೌಡ್ ಫೋಟೋಸ್ ಬ್ಯಾಕ್ ಅಪ್ (Cloud Backup) ಆಪ್ಷನ್ ಹೊಂದಿದ್ದರೆ ಅದು ಕೂಡ ನಿಮ್ಮ ಡಿಲೇಟೆಡ್ ಫೋಟೋಸ್ ಮರಳಿ ಕೊಡುತ್ತದೆ. ಒಂದು ವೇಳೆ ಈ ಎರಡು ಆಪ್ಷನ್ ಗಳು ನಿಮ್ಮ ಫೋನ್ ನಲ್ಲಿ ಇಲ್ಲದೆ ಇದ್ದರೆ ಮಾತ್ರ ಈ ಮೇಲೆ ತಿಳಿಸಿದ ಆಪ್ ಡೌನ್ಲೋಡ್ ಮಾಡಿಕೊಂಡು ಫೋಟೋಗಳನ್ನು ಮರಳಿ ಪಡೆಯಿರಿ.

LEAVE A REPLY

Please enter your comment!
Please enter your name here