Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ಅಜ್ಜಿಯನ್ನು ಬಿಕ್ಷುಕಿ ಎಂದುಕೊಂಡು ಅರೆಸ್ಟ್ ಮಾಡಲು ಹೋದ ಪೋಲೀಸರು.! ಅಜ್ಜಿಯ ಕೈ ಚೀಲ ನೋಡಿ ಬೆರಗಾದರೂ.!

Posted on March 1, 2023 By Kannada Trend News No Comments on ಈ ಅಜ್ಜಿಯನ್ನು ಬಿಕ್ಷುಕಿ ಎಂದುಕೊಂಡು ಅರೆಸ್ಟ್ ಮಾಡಲು ಹೋದ ಪೋಲೀಸರು.! ಅಜ್ಜಿಯ ಕೈ ಚೀಲ ನೋಡಿ ಬೆರಗಾದರೂ.!

 

ನವದೆಹಲಿಯ ಸರ್ಕಾರವು ಒಂದು ದೊಡ್ಡ ಕಾರ್ಯವನ್ನು ಕೈಗೊಂಡಿದೆ ಅದು ಏನೆಂದರೆ ನಗರದಲ್ಲಿ ಯಾರೆಲ್ಲರು ಬಿಕ್ಷೆ ಬೇಡುತ್ತಾರೋ ಅವರನ್ನು ವಶಕ್ಕೆ ತೆಗೆದುಕೊಂಡು ಅದರಲ್ಲಿ ವಯಸ್ಸಾದವರನ್ನು ವೃದ್ಧಾಶ್ರಮಗಳಿಗೆ, ಮಕ್ಕಳನ್ನು ಅನಾಥಾಶ್ರಮಗಳಿಗೆ, ಕೈ ಕಾಲು ಗಟ್ಟಿಯಿದ್ದು ದುಡಿಯಲು ಸಮರ್ಥರಾಗಿ ಇರುವವರನ್ನು ವಿವಿಧ ಚಿಕ್ಕ ಪುಟ್ಟ ಕೆಲಸಗಳಿಗೆ ಸೇರಿಸುವಂತಹ ಮಹತ್ತರವಾದ ನಿರ್ಧಾರವನ್ನು ದೆಹಲಿಯ ಕ್ರೇಜಿ ವಾಲ್ ಸರ್ಕಾರವು ಕೈಗೆತ್ತಿಕೊಂಡಿದೆ.

ಅದಕ್ಕಾಗಿ ಪೋಲೀಸರು ದೆಹಲಿ ರಾಜ್ಯದ ಎಲ್ಲೆಡೆ ಶೋಧಿಸಿ ಭಿಕ್ಷೆ ಬೇಡುತ್ತಿರುವವರನ್ನು ಹುಡುಕಿ ವಶ ಪಡಿಸಿಕೊಳ್ಳಲು ಹೋದರು. ಆ ಸಂದರ್ಭದಲ್ಲಿ ಭಿಕ್ಷೆ ಬೇಡುತ್ತಿರುವ 82 ವರ್ಷ ವಯಸ್ಸಾಗಿರುವ ಒಬ್ಬ ಅಜ್ಜಿಯನ್ನು ವಶ ಪಡಿಸಿಕೊಳ್ಳಲು ಹೋಗುತ್ತಾರೆ. ಆ ಅಜ್ಜಿ ಬಳಿ ಹೋದಾಗ ಅವರ ಕೈಯಲ್ಲಿ ಇದ್ದ ಕೈಚೀಲವನ್ನು ನೋಡಿ ಅದರಲ್ಲಿ ಏನಿದೆ? ಅದನ್ನು ತೆಗೆದು ತೋರಿಸು ಎಂದು ಬಲವಂತ ಮಾಡುತ್ತಾರೆ ಆದರೆ ಅಜ್ಜಿ ಅದನ್ನು ತೆಗೆಯುವುದಿಲ್ಲ.

ನಂತರ ಅದನ್ನು ಪೋಲೀಸರೇ ತೆಗೆದು ನೋಡಿದಾಗ ಅದರಲ್ಲಿ ಸರಿ ಸುಮಾರು 2 ಲಕ್ಷ ರೂಪಾಯಿಗಳ ವರೆಗೆ ಹಣವಿರುತ್ತದೆ. ಅದನ್ನು ನೋಡಿದ ಪೋಲೀಸರು ಈ ಹಣ, ಇಷ್ಟೊಂದು ಹಣ ಎಲ್ಲಿಂದ ಬಂತ್ತು‌, ಎಲ್ಲಿ ಕಳ್ಳತನ ಮಾಡಿರುತ್ತಾರೋ ಎಂದು ಕೊಂಡು ಅಜ್ಜಿ ವಿಚಾರಿಸುತ್ತಾರೆ. ಆಗ ಅಜ್ಜಿ ಅದರ ಸತ್ಯಾಂಶವನ್ನು ಪೋಲೀಸರಿಗೆ ಹೇಳುತ್ತಾರೆ ಅದು ಏನೆಂದರೆ ಈ ಅಜ್ಜಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಉತ್ತರಪ್ರದೇಶದ ಒಂದು ಹಳ್ಳಿಯಲ್ಲಿ ಸುಮಾರು 10 ಎಕರೆಗಳಷ್ಟು ಸ್ವಂತ ಜಮೀನು ಕೂಡ ಇರುತ್ತದೆ.

13 ವರ್ಷಗಳ ಹಿಂದೆ ಅಜ್ಜಿಯ ಗಂಡ ಮ.ರ.ಣ ಹೊಂದಿರುತ್ತಾರೆ. ಆ ಸಂದರ್ಭದಲ್ಲಿ ಆ ಅಜ್ಜಿಯ ಇಬ್ಬರು ಮಕ್ಕಳು ಇರುವಂತಹ ಜಮೀನು ಆಸ್ತಿ ಪಾಸ್ತಿ ಎಲ್ಲವನ್ನು ಎರಡು ಪಾಲು ಮಾಡಿಕೊಂಡು ಅಜ್ಜಿಯನ್ನು ಹೊರ ಹಾಕಿರುತ್ತಾರೆ. ಆ ಸಮಯದಲ್ಲಿ ಅಜ್ಜಿಗೆ ಏನು ಮಾಡಬೇಕು, ಹೇಗೆ ಬದುಕಬೇಕು ಎಂದು ತಿಳಿಯದೆ ರೈಲು ಹತ್ತಿ ಬಂದು ದೆಹಲಿಯಲ್ಲಿ ಬಂದು ಇಳಿದರು. ಅಲ್ಲಿ ಭಿಕ್ಷೆ ಬೇಡಲು ಪ್ರಾರಂಭಿಸಿ ಅಂದಿನಿಂದ 13 ವರ್ಷಗಳ ಕಾಲ ಭಿಕ್ಷೆ ಬೇಡಿ ಬಂದ ಹಣವನ್ನು ಚೀಲದಲ್ಲಿ ತುಂಬಿಟ್ಟಿದ್ದರು.

ಈ ವಿಷಯವನ್ನು ಅರಿತ ಪೋಲೀಸರು ಆ ಅಜ್ಜಿಯ ಮಕ್ಕಳಿಗೆ ತಿಳಿಸಿದಾಗ ಆ ಮಕ್ಕಳು ದಯವಿಟ್ಟು ಅವರನ್ನು ಇಲ್ಲಿಗೆ ಕರೆತರಬೇಡಿ ಅಲ್ಲಿಯೆ ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸಿ ಬಿಡಿ ಎಂದು ಹೇಳಿ ಬಿಡುತ್ತಾರೆ. ಇಷ್ಟೆಲ್ಲಾ ಆದರೂ ಆ ಅಜ್ಜಿಯು ತಾನು ಭಿಕ್ಷೆ ಬೇಡಿ ಕೂಡಿ ಇಟ್ಟಿದ್ದ ಹಣವನ್ನು ತನ್ನ ಮೊಮಕ್ಕಳಿಗೆ ಹಂಚಿಬಿಡಿ ಎಂದು ಹೇಳುತ್ತಾರೆ. ಹೀಗೆ ಹೇಳಿದ ಅಜ್ಜಿ ತನ್ನ ತಾಯ್ತನವನ್ನು ಮೆರೆದಿದ್ದಾರೆ.

ಒಬ್ಬ ತಾಯಿಯು ತನಗೆ ಎಷ್ಟೇ ಕಷ್ಟ ಬಂದರು ತನ್ನ ಹೊಟ್ಟಗೆ ಬಟ್ಟೆ ಕಟ್ಟಿಕೊಂಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಊಟ, ಬಟ್ಟೆ ಎಲ್ಲ ಕೋಟ್ಟು ಅವರ ಜೀವನವನ್ನೆ ಮಕ್ಕಳಿಗಾಗಿ ಮುಡಿಪಾಗಿ ಇಟ್ಟಿರುತ್ತಾರೆ. ಆದರೆ ಮಕ್ಕಳು ಬೆಳೆದು ದೊಡ್ಡವರಾದ ಬಳಿಕ ತಂದೆ ತಾಯಿಯರನ್ನು ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ಸೇರಿಸಿ‌ಬಿಡುತ್ತಾರೆ. ಒಬ್ಬ ತಾಯಿಯುವು ತ್ಯಾಗಮಯಿ, ಕರುಣಮಯಿ ಅವಳಿಗೆ ನಮ್ಮದೊಂದು ನಮಸ್ಕಾರಗಳು.

Public Vishya
WhatsApp Group Join Now
Telegram Group Join Now

Post navigation

Previous Post: ಕರೆಂಟ್ ವಾಟರ್ ಹೀಟರ್ ಅವಘಡದಿಂದ ತಾಯಿ ಮಗ ಬ-ಲಿ ಮುಗಿಲು ಮಟ್ಟಿದ ಕುಟುಂಬಸ್ಥರ ಆಕ್ರಂಧನ.
Next Post: ನಾನು ಮಾಡಿದ ತಮಿಳು ಸಿನಿಮಾಗೆ ಥಿಯೇಟರ್ ನೇ ಕೊಡ್ಲಿಲ್ಲ ಆದ್ರೆ ನಾವು ಮಾತ್ರ ತಮಿಳರ ಎಲ್ಲಾ ಸಿನಿಮಾಗೂ ಥಿಯೇಟರ್‌ ಕೊಡ್ತಿವಿ ಎಂದು ಬೇಸರ ವ್ಯಕ್ತ ಪಡಿಸಿದ ಕಿಟ್ಟಿ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore