ನಿಮ್ಮೆಲ್ಲರಿಗೂ ತಿಳಿದಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಮಾಧ್ಯಮಗಳಿಂದ ಬ್ಯಾನ್ ಮಾಡಿ ಆರು ತಿಂಗಳಿಗೆ ಕಳೆದು ಹೋಗಿದೆ ಹೌದು ನಿರ್ಮಾಪಕ ಉಮಾಪತಿ ಮತ್ತು ಅರುಣದೇವಿ ಸಂಬಂಧ ಪಟ್ಟಂತಹ ಪ್ರಕರಣ ಒಂದರಲ್ಲಿ ನಟ ದರ್ಶನ್ ಅವರು ಮಾಧ್ಯಮಗಳ ವಿರುದ್ಧ ಗುಡುಗಿದ್ದಾರೆ ಹಾಗೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಕಾರಣದಿಂದಾಗಿ ಮಾಧ್ಯಮ ಮಿತ್ರರೆಲ್ಲರೂ ಕೂಡ ದರ್ಶನ್ ಅವರನ್ನು ಬ್ಯಾನ್ ಮಾಡಿದ್ದರು. ದರ್ಶನ್ ಗೆ ಸಂಬಂಧಪಟ್ಟಂತಹ ಯಾವುದೇ ವಿಚಾರ ಆಗಿರಬಹುದು ಸಿನಿಮಾ ಸಂಬಂಧಪಟ್ಟಂತಹ ಯಾವುದೇ ವಿಚಾರವಾದರೂ ಕೂಡ ಅವುಗಳನ್ನು ಇನ್ನು ಮುಂದೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು ಎಂಬ ನಿರ್ಧಾರವನ್ನು ಕೈಗೊಂಡರು. ಇದೇ ಕಾರಣಕ್ಕಾಗಿ ದರ್ಶನ ಅವರ ಯಾವ ಸಿನಿಮಾದ ಅಪ್ಡೇಟ್ಸ್ ಗಳನ್ನು ಮಾಧ್ಯಮಗಳಲ್ಲಿ ತೋರಿಸುತ್ತಿಲ್ಲ.
ಕ್ರಾಂತಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ ಇದಾದ ನಂತರ ದರ್ಶನ್ ಅವರ ಐವತ್ತಾರನೇ ಸಿನಿಮಾ ಆದಂತಹ ಕಾಟೇರ ಸಿನಿಮಾ ಕೂಡ ಸೆಟ್ಟೇರಿದೆ ಇದರ ಬಗ್ಗೆಯೂ ಕೂಡ ಮಾಧ್ಯಮದಲ್ಲಿ ಎಲ್ಲಿಯೂ ಕೂಡ ಸಣ್ಣದೊಂದು ಸುಳಿವನ್ನು ಕೂಡ ನೀಡಿಲ್ಲ. ಇದೆಲ್ಲದರಿಂದ ತಿಳಿಯುತ್ತಿದೆ ಮಾಧ್ಯಮ ಮಿತ್ರರು ದರ್ಶನ್ ಅವರ ಮೇಲೆ ಎಷ್ಟು ಹಠ ಮತ್ತು ದ್ವೇ.ಷ ಹಗೆತನವನ್ನು ಸಾಧಿಸುತ್ತಿದ್ದಾರೆ ಅಂತ. ಮಧ್ಯಮದವರು ಕೇವಲ ಇದೊಂದು ವಿಚಾರವನ್ನು ಮಾತ್ರ ಪರಿಗಣಿಗೆ ತೆಗೆದುಕೊಂಡಿಲ್ಲ ದರ್ಶನ್ ಅವರು ಯಾವುದೇ ಕಾರ್ಯಕ್ರಮಕ್ಕೆ ಆಗಮಿಸಿದರು ಕೂಡ ದರ್ಶನವರು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಕೂಡ ಆ ಕಾರ್ಯಕ್ರಮದ ಎಪಿಸೋಡ್ ಗಳನ್ನು ಆಗಿರಬಹುದು ಅಥವಾ ಆ ಕಾರ್ಯಕ್ರಮದ ವಿಡಿಯೋ ಕ್ಲಿಪ್ ಗಳನ್ನು ಆಗಿರಬಹುದು ತಮ್ಮ ಮಾಧ್ಯಮಗಳಲ್ಲಿ ತೋರಿಸುತ್ತಿಲ್ಲ.
ದರ್ಶನ್ ಅವರಿಗೆ ವಿರೋಧಿಗಳು ಎಷ್ಟಿದ್ದಾರೋ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಇರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಇನ್ನು ಕನ್ನಡ ಸಿನಿಮಾ ರಂಗದಲ್ಲಿ ದರ್ಶನ ಅವರನ್ನು ಇಷ್ಟಪಡುವಂತಹ ಸಾಕಷ್ಟು ಕಲಾವಿದರು ಇದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಂಬರೀಶ್ ಅವರು ದರ್ಶನ್ ಅವರ ಜೊತೆ ಹೆಚ್ಚು ಒಡನಾಟವನ್ನು ಹೊಂದಿದ್ದರು. ಇನ್ನು ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಕೂಡ ದರ್ಶನ್ ಅವರನ್ನು ತಮ್ಮ ಸ್ವಂತ ಅಣ್ಣನಂತೆ ಭಾವಿಸುತ್ತಾರೆ. ವಿನೋದ್ ಪ್ರಭಾಕರ್ ಆಗಿರಬಹುದು ಅಥವಾ ಸೃಜನ್ ಲೋಕೇಶ್ ಆಗಿರಬಹುದು ಹೀಗೆ ಕನ್ನಡದ ಬಹುತೇಕ ನಟರು ದರ್ಶನ್ ಅವರನ್ನು ಇಷ್ಟಪಡುತ್ತಾರೆ. ದರ್ಶನ್ ಅವರು ಮಾಧ್ಯಮದಿಂದ ಬ್ಯಾನ್ ಮಾಡಿರುವ ವಿಚಾರ ಇವರಿಗೆ ಸಾಕಷ್ಟು ನೋವು ನೀಡಿದೆ.
ಈ ಕಾರಣಕ್ಕಾಗಿಯೇ ಅಭಿಷೇಕ್ ಅಂಬರೀಶ್ ಮತ್ತು ವಿನೋದ್ ಪ್ರಭಾಕರ್ ಇಬ್ಬರೂ ಕೂಡ ಮಾಧ್ಯಮದವರಿಗೆ ಮುಟ್ಟಿ ನೋಡಿಕೊಳ್ಳುವಂತಹ ವಿಚಾರ ಒಂದನ್ನು ಹೇಳಿದರೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು ಪೊಲಿಟಿಷಿಯನ್ ಆದಂತಹ ಜಾಮೀರ್ ಅಹಮ್ಮದ್ ಖಾನ್ ಅವರ ಪುತ್ರ ಜಹೀದ್ ಖಾನ್ ಅವರು ಇದೀಗ ಕನ್ನಡ ಇಂಡಸ್ಟ್ರಿಯ ಪಾದರ್ಪಣೆ ಮಾಡುತ್ತಿದ್ದಾರೆ. ಹೊಸದೊಂದು ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ನಲ್ಲಿ ಲಾಂಚ್ ಆಗುತ್ತಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ ಅಭಿಷೇಕ್ ಅಂಬರೀಶ್ ವಿನೋದ್ ಪ್ರಭಾಕರ್ ಶೈಲಜಾ ನಾಗ್ ಸೇರಿದಂತೆ ಚಿತ್ರರಂಗದ ಬಹುತೇಕ ಗಣ್ಯ ವ್ಯಕ್ತಿಗಳು ಬಂದು ಶುಭಾಶಯವನ್ನು ಕೋರಿದ್ದಾರೆ.
ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಜಂಗಿರ್ ಅಹಮದ್ ಖಾನ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ ಇವರ ಮಗ ಚಿತ್ರರಂಗಕ್ಕೆ ಬರುವುದಕ್ಕೆ ದರ್ಶನ್ ಅವರು ಕೂಡ ಒಂದು ರೀತಿಯಲ್ಲಿ ಕಾರಣ. ಹಾಗಾಗಿ ತಮ್ಮ ಮಗನಿಗೆ ಬೇಕಾದಂತಹ ಎಲ್ಲಾ ಸಹಕಾರವನ್ನು ಪ್ರೋತ್ಸಾಹವನ್ನು ದರ್ಶನವರು ನೀಡಿದ್ದಾರೆ ಆದರೆ ಜಾಹಿದ್ ಖಾನ್ ಅವರು ಲಾಂಚ್ ಆಗುತ್ತಿರುವಂತಹ ಕಾರ್ಯಕ್ರಮಕ್ಕೆ ದರ್ಶನವರು ಆಗಮಿಸಿಲ್ಲ. ಇದಕ್ಕೆ ಮುಖ್ಯ ಕಾರಣ ಏನೆಂದರೆ ಈ ಒಂದು ಕಾರ್ಯಕ್ರಮಕ್ಕೆ ಮಾಧ್ಯಮ ಮಿತ್ರರು ಬಂದಿರುತ್ತಾರೆ ನಾನು ಒಂದು ವೇಳೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರೆ ಆ ಎಪಿಸೋಡನ್ನು ಅವರು ಮಾಧ್ಯಮದಲ್ಲಿ ತೋರಿಸುವುದಿಲ್ಲ.
ಇದರಿಂದ ಜಹಾದ್ ಖಾನ್ ಅವರ ಸಿನಿಮಾ ಎಂಟ್ರಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದಾಗಿ ದರ್ಶನ್ ಅವರು ಈ ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ. ಆದರೂ ಕೂಡ ಅಭಿಷೇಕ ಕರೆ ಮಾಡಿ ನೀವೆಲ್ಲರೂ ಕಾರ್ಯಕ್ರಮಕ್ಕೆ ಹೋಗಿ ಬನ್ನಿ ಕಾರ್ಯಕ್ರಮವನ್ನು ಚೆನ್ನಾಗಿ ಮಾಡಿ ಮುಗಿಸಿ ಎಂದು ಹೇಳಿದ್ದಾರೆ. ನಿಜಕ್ಕೂ ದರ್ಶನ್ ಅವರ ಈ ಒಂದು ದೊಡ್ಡ ಗುಣವನ್ನು ನಾವು ಮೆಚ್ಚಲೇಬೇಕು ಈ ಮಾತನ್ನು ಸ್ವತಃ ವಿನೋದ್ ಪ್ರಭಾಕರ್ ಮತ್ತು ಅಭಿಷೇಕ್ ಅಂಬರೀಶ್ ಅವರೇ ಹೇಳಿದ್ದಾರೆ ಆ ವಿಡಿಯೋ ಕೆಳಗೆ ಇದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.