Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ವಯಸ್ಸಿನಲ್ಲಿ ತನಿಗಿಂತ 3 ವರ್ಷ ಹಿರಿಯ ಹುಡುಗಿಯೊಂದಿಗೆ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದೆಕೆ ಗೊತ್ತ.? ಅವಿವಾ ಬಿದ್ದಪ್ಪ ಬ್ಯಾಗ್ರೌಂಡ್ ಕೇಳಿದ್ರೆ ಬೆಚ್ಚಿ ಬಿಳ್ತೀರಾ

Posted on December 12, 2022 By Kannada Trend News No Comments on ವಯಸ್ಸಿನಲ್ಲಿ ತನಿಗಿಂತ 3 ವರ್ಷ ಹಿರಿಯ ಹುಡುಗಿಯೊಂದಿಗೆ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದೆಕೆ ಗೊತ್ತ.? ಅವಿವಾ ಬಿದ್ದಪ್ಪ ಬ್ಯಾಗ್ರೌಂಡ್ ಕೇಳಿದ್ರೆ ಬೆಚ್ಚಿ ಬಿಳ್ತೀರಾ

ಅಭಿಷೇಕ್ ಅವಿವಾ

ಅಗರ್ಭ ಶ್ರೀಮಂತೆ ಜೊತೆ ಅಂಬರೀಶ್ ಪುತ್ರನ ವಿವಾಹ, ಇಬ್ಬರ ನಡುವಿನ ವಯಸ್ಸಿನ ಅಂತರ ಕೇಳಿ ಶಾ-ಕ್ ಆದ ಜನತೆ.

ಕಳೆದ ಕೆಲವು ದಿನಗಳಿಂದ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಅಂಬರೀಷ್ ಮತ್ತು ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಅವರ ವಿವಾಹದ ಬಗ್ಗೆ ಹೆಚ್ಚು ಸುದ್ದಿ ಆಗುತ್ತಿತ್ತು. ಇದೇ ಡಿಸೆಂಬರ್ ತಿಂಗಳಿನಲ್ಲಿ ಅವರ ನಿಶ್ಚಿತಾರ್ಥ ಅದ್ದೂರಿಯಾಗಿ ಆಗಲಿದೆ ಮುಂದಿನ ತಿಂಗಳಲ್ಲಿ ಅವರ ಮದುವೆ ನಡೆಯುತ್ತದೆ ಎಂದು ಎಲ್ಲರೂ ಸುದ್ದಿಯನ್ನು ಬಿತ್ತರ ಪಡಿಸಿದ್ದರೂ ಕೂಡ ಹುಡುಗಿ ಯಾರು ಎನ್ನುವ ಸುಳಿವನ್ನು ಬಿಟ್ಟು ಕೊಟ್ಟಿರಲಿಲ್ಲ ಇದೀಗ ಎಲ್ಲಾ ಊಹಾಪೋಹಗಳಿಗೂ ತೆರೆ ಬಿದ್ದಿದೆ.

ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಅಭಿಷೇಕ್ ಅಂಬರೀಶ್ ಅವರು ತನ್ನ ಮನದರಿಸಿಗೆ ಉಂಗುರ ತೊಡಿಸಿ ಎಂಗೇಜ್ಮೆಂಟ್ ಮಾಡಿಕೊಂಡು ಅದನ್ನು ಅಫಿಶಿಯಲ್ ಆಗಿ ಅನೌನ್ಸ್ ಕೂಡ ಮಾಡಿದ್ದಾರೆ. ಇಷ್ಟಕ್ಕೂ ಜೂನಿಯರ್ ರೆಬಲ್ ಸ್ಟಾರ್ ಕೈ ಹಿಡಿಯುತ್ತಿರುವ ಅದೃಷ್ಟವಂತೆ ಹೆಸರು ಅವಿವಾ ಬಿದಪ್ಪ.

ಮಾಡಲ್ ಕಮ್ ಫ್ಯಾಶನ್ ಡಿಸೈನರ್ ಆಗಿರುವ ಅವಿವಾ ಅವರು ಲಂಡನ್ ಅಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ ಈಗ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾರೆ. ಭಾರತದ ಫ್ಯಾಷನ್ ಡಿಸೈನಿಂಗ್ ಲೋಕದಲ್ಲಿ ಫ್ಯಾಶನ್ ಗುರು ಹೆಸರು ಮಾಡಿರುವ ಪ್ರಸಾದ್ ಬಿದ್ದಪ್ಪ ಅವರ ಮುದ್ದಿನ ಮಗಳು ಈಕೆ. ಪ್ರಸಾದ್ ಬಿದ್ದಪ್ಪ ಅವರು ಮಾಡಲಿಂಗ್ ಹಾಗೂ ಫ್ಯಾಷನ್ ಅನ್ನು ಉದ್ಯೋಗ ಹಾಗೂ ಉದ್ದಿಮೆ ಮಾಡಿಕೊಂಡಿದ್ದಾರೆ.

ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಲಾರಾದತ್ತರಂತಹ ನಟಿಮಣಿಯರಿಗೂ ಕೂಡ ಫ್ಯಾಷನ್ ಡಿಸೈನಿಂಗ್ ಮಾಡಿ ಸೈ ಎನಿಸಿಕೊಂಡಿರುವ ಪ್ರಸಾದ್ ಬಿದ್ದಪ್ಪ ಅವರ ಹೆಸರು ಕರ್ನಾಟಕದಲ್ಲಿ ಮಾತ್ರವಲ್ಲದೆ ಬಾಲಿವುಡ್ ಅಲ್ಲೂ ಸಹ ಬಹಳ ಫೇಮಸ್. ಈಗ ಇಂಡಿಯಾದ ಫ್ಯಾಶನ್ ಲೋಕದಲ್ಲಿ ಹೆಚ್ಚು ಪ್ರಚಲಿತರಾಗಿರುವ ಪ್ರಸಾದ್ ಬಿದ್ದಪ್ಪ ಅವರು ಮೂಲತಃ ಕೊಡಗಿನವರು.

ಈಗ ಬೆಂಗಳೂರಿನಲ್ಲಿಯೇ ನೆಲೆಸಿರುವ ಇವರು ಪ್ರಸಾದ್ ಬಿದ್ದಪ್ಪ ಅಸೋಸಿಯೇಟ್ ಕೂಡ ನಡೆಸುತ್ತಿದ್ದಾರೆ. ಅ ಮೂಲಕ ಸಾವಿರಾರು ಪ್ರತಿಭೆಗಳನ್ನು ಫ್ಯಾಶನ್ ಲೋಕಕ್ಕೆ ಪರಿಚಯಿಸಿದ್ದಾರೆ. ಇದೀಗ ಅವರ ಮಗಳು ಅವಿವಾ ಕೂಡ ಇದೇ ಕ್ಷೇತ್ರವನ್ನು ಆಯ್ದುಕೊಂಡಿದ್ದು ಪ್ರಸಾದ್ ಬಿದ್ದಪ್ಪ ಅಸೋಸಿಯೇಟಿಗೆ ನಿರ್ದೇಶಕಿ ಮತ್ತು ಖ್ಯಾತ ಮಾಡಲ್ ಹಾಗೂ ನಟಿ ಕೂಡ ಆಗಿದ್ದಾರೆ.

ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಶ್ ಅವರ ನಡುವೆ ನಾಲ್ಕು ವರ್ಷದ ಪರಿಚಯ ಇದ್ದು ಆ ಸ್ನೇಹ ಪ್ರೀತಿಯಾಗಿ ತಿರುಗಿ ಈಗ ಹಸೆಮೆಣೆ ಏರಲು ನಿರ್ಧಾರ ಮಾಡಿದ್ದಾರೆ. ಅಂಬರೀಶ್ ಅವರು ಸಹ ಇದೇ ರೀತಿ ಸುಮಲತಾ ಅವರನ್ನು ಪ್ರೇಮ ವಿವಾಹ ಆಗಿದ್ದರು ಈಗ ಪುತ್ರ ಅಭಿಷೇಕ್ ಅಂಬರೀಶ್ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದ್ದು ಅವಿವಾ ಅವರ ಕೈ ಹಿಡಿಯುತ್ತಿದ್ದಾರೆ.

ಈಗ ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರ ಬಾರಿ ಚರ್ಚೆ ಆಗುತ್ತಿದ್ದು 29 ವರ್ಷ ವಯಸ್ಸಿನ ಅಭಿಷೇಕ್ ಅಂಬರೀಶ್ ಅವರು ತಮಗಿಂತ ಮೂರು ವರ್ಷ ಹಿರಿಯರಾದ 32 ವರ್ಷ ಆ ವಯಸ್ಸಿನ ಅವಿವಾ ಅವರನ್ನು ಕೈ ಹಿಡಿಯುತ್ತಿದ್ದಾರೆ. ಆದರೆ ಈ ರೀತಿ ವಯಸ್ಸಿಗಿಂತ ಹಿರಿಯರನ್ನು ಮದುವೆ ಆಗುತ್ತಿರುವವರಲ್ಲಿ ಇವರೇ ಮೊದಲಿಗರೇನಲ್ಲ ವಿಷ್ಣುವರ್ಧನ್, ರಾಕಿಂಗ್ ಸ್ಟಾರ್ ಯಶ್, ಸಚಿನ್ ತೆಂಡೂಲ್ಕರ್ ಈ ರೀತಿ ಸಾಕಷ್ಟು ಜನ ತಮಗಿಂತ ಹಿರಿಯರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಈಗ ಅಭಿಷೇಕ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದು ಅವರಿಗೂ ಸಹ ದಾಂಪತ್ಯ ಜೀವನದಲ್ಲಿ ಸಂತೋಷ ಸಿಗಲಿ ಎಂದು ಹರಸೋಣ.

Entertainment Tags:Abhishek Ambareesh, Abhishek Aviva, Aviva biddappa
WhatsApp Group Join Now
Telegram Group Join Now

Post navigation

Previous Post: ಮುನಿಸು ಮರೆತು ಮತ್ತೆ ಒಂದಾದ ದೋಸ್ತಿಗಳು, ಕ್ರಾಂತಿ ಸಿನಿಮಾ ಸಂದರ್ಶನದಲ್ಲಿ ದರ್ಶನ್ ಬಾಯಲ್ಲಿ ಸುದೀಪ್ ಹೆಸರು ಕೇಳಿ ಬೆರಗಾದ ಅಭಿಮಾನಿಗಳು.
Next Post: ಗಟ್ಟಿಮೇಳ ಸೀರಿಯಲ್ ಅಧಿತಿ ಹಾಗೂ ಪಾರು ಸೀರಿಯಲ್ ಪ್ರೀತಮ್ ಮದುವೆ ಸಂಭ್ರಮ, ಮದುವೆಗೆ ಯಾರೆಲ್ಲಾ ಬಂದಿದ್ರು ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore