Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeViral Newsಸ್ವಂತ ಮನೆಯನ್ನು ಬಾಡಿಗೆ ಕೊಡುವ ಪರಿಸ್ಥಿತಿಗೆ ಬಂದ ನಟಿ ಅಧಿತಿ ಪ್ರಭುದೇವ. ಇಷ್ಟ ಪಟ್ಟ ಖರೀದಿ...

ಸ್ವಂತ ಮನೆಯನ್ನು ಬಾಡಿಗೆ ಕೊಡುವ ಪರಿಸ್ಥಿತಿಗೆ ಬಂದ ನಟಿ ಅಧಿತಿ ಪ್ರಭುದೇವ. ಇಷ್ಟ ಪಟ್ಟ ಖರೀದಿ ಮಾಡಿದ ಮನೆಯನ್ನು ಬಿಟ್ಟು ಹೋಗಲು ಕಾರಣವೇನು ಗೊತ್ತ.?

 

ನಟಿ ಅಧಿತಿ ಪ್ರಭುದೇವ (Adhithi Prabhudev) ಈಗ ಕನ್ನಡಿಗರಿಗೆಲ್ಲರಿಗೂ ಪರಿಚಿತರು. ನೋಡಿದ ತಕ್ಷಣ ಪಕ್ಕದ ಮನೆ ಹುಡುಗಿ ಎನ್ನುವ ಫೀಲ್ ಕೊಡುವ ಈಕೆ ಹಳ್ಳಿ ಹುಡುಗಿ ಪಾತ್ರಕ್ಕೂ ಸೈ, ಸಿಟಿ ಹುಡುಗಿ ಇಮೇಜಿಗೂ ಜೈ. ಕಲರ್ಸ್ ಕನ್ನಡ (Colors kannada) ವಾಹಿನಿಯಲ್ಲಿ ಪ್ರಸಾರವಾದ ನಾಗಕನ್ನಿಕೆ (Nagakannike serial) ಎನ್ನುವ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಇವರು ಅಜಯ್ ರಾವ್ (Ajay Rao) ಅವರ ಧೈರ್ಯಂ (Dairyam) ಸಿನಿಮಾದ ಮೂಲಕ ಬೆಳ್ಳಿ ತೆರೆಗೂ ಬಂದರು.

ಆನಂತರ ಇವರು ತಿರುಗಿ ನೋಡಿದ್ದೆ ಇಲ್ಲ ವರ್ಷಪೂರ್ತಿ ಹತ್ತಾರು ಸಿನಿಮಾಗಳಲ್ಲಿ ಬ್ಯುಸಿ ಇರುವ ಈಕೆ ಕಳೆದ ವರ್ಷ ಕೂಡ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಈಗಲೂ ಹೊಸ ವರ್ಷದಿಂದ ಅವರ ಎರಡು ಸಿನಿಮಾ ರಿಲೀಸ್ ಆಗಿದೆ. ಒಂದು ರೀತಿಯಲ್ಲಿ ಈಗ ಅಧಿತಿ ಪ್ರಭುದೇವ್ ಅವರು ಮುಟ್ಟಿದ್ದೆಲ್ಲ ಚಿನ್ನ ಎನ್ನುವ ರೀತಿ ಅದೃಷ್ಟ ಪಡೆದುಕೊಂಡಿದ್ದಾರೆ. ಯಾವುದೇ ಹೊಸ ಫೇಸ್ ಗೆ ಹೊಸ ಸಿನಿಮಾದಲ್ಲಿ ಅವಕಾಶ ಸಿಗುವುದು ಸುಲಭ, ಆದರೆ ಅದನ್ನು ಉಳಿಸಿಕೊಂಡು ಮೊದಲಿಗಿಂತಲೂ ಹೆಚ್ಚಿನ ಬೇಡಿಕೆ ಸೃಷ್ಟಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.

ಆದರೆ ಇದರಲ್ಲಿ ಅಧಿತಿ ಸೋತಿಲ್ಲ. ಯಾವುದೇ ಝೋನರ್ ಸಿನಿಮಾದ ಯಾವುದೇ ಪಾತ್ರ ಕೊಟ್ಟರು ಜನರಿಗೆ ಇಷ್ಟವಾಗುವ ರೀತಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುವ ಇವರು ಸದ್ಯಕ್ಕೆ ಕೆರಿಯರ್ ಅಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾರೆ. ಜೊತೆಗೆ ಕಳೆದ ವರ್ಷ ವೈವಾಹಿಕ ಜೀವನವನ್ನು ಕೂಡ ಆರಂಭಿಸಿದ್ದಾರೆ 2022 ರ ನವೆಂಬರ್ ತಿಂಗಳಿನಲ್ಲಿ ಉದ್ಯಮಿ ಮತ್ತು ಕೃಷಿಕರಾಗಿರುವ ಯಶಸ್ ಪಾಟ್ಲ (Yashas patla) ಎನ್ನುವ ಕೋಟ್ಯಾಧೀಶ್ವರರನ್ನು ಮದುವೆ ಆಗಿರುವ ಇವರು ಮದುವೆ ಆಗಿ ವರ್ಷ ತುಂಬುವ ಮೊದಲೇ ತಾವಿದ್ದ ಮನೆಯನ್ನು ಬಾಡಿಗೆ ಕೊಡಲು ರೆಡಿಯಾಗಿದ್ದಾರೆ.

ಇವರ ಈ ನಿರ್ಧಾರಕ್ಕೂ ಕೂಡ ಕಾರಣ ಇದೆ. ಮನೆಯನ್ನು ಬೇರೆಯವರಿಗೆ ಬಾಡಿಗೆಗೆ ಕೊಡುತ್ತಾ ಇರುವ ಕಾರಣ ಕೊನೆಯದಾಗಿ ಅವರು ಇದ್ದ ಮನೆಯ ಹೋಂ ಟೂರ್ ಮಾಡಿರುವ ಅಧಿತಿ ಪ್ರಭುದೇವ್ ಅವರು ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಆ ಮನೆ ಖರೀದಿಸಲು ಪಟ್ಟ ಶ್ರಮ ಮತ್ತು ಈಗ ಬಾಡಿಗೆಗೆ (for Rent) ಕೊಡುತ್ತಿರುವ ಕಾರಣ ಕೂಡ ತಿಳಿಸಿದ್ದಾರೆ. ಬ್ಯಾಂಕ್ ಅಲ್ಲಿ ಹೋಂ ಲೋನ್ ಗಳನ್ನು ಕಡಿಮೆ ಬಡ್ಡಿಗೆ ಕೊಡುವ ಕಾರಣ ಲೋನ್ (home loan) ಪಡೆದುಕೊಂಡೆ ಮನೆ ಖರೀದಿಸಿದ್ದರಂತೆ.

ಈಗ ಮನೆ ಖರೀದಿಸಿ ಎರಡು ವರ್ಷಗಳು ಮಾತ್ರ ಆಗಿದೆ ಎನ್ನುವುದನ್ನು ಹೇಳಿದ್ದಾರೆ ಅದನ್ನು ಮಾರುವ ನಿರ್ಧಾರವನ್ನು ಕೂಡ ಮಾಡಿದ್ದ ಇವರು ಈಗ ಮನಸ್ಸು ಬದಲಾಯಿಸಿ ಬಾಡಿಗೆಗೆ ಕೊಟ್ಟಿದ್ದಾರೆ. ಈಗ ಮದುವೆಯಾಗಿ ಗಂಡನ ಮನೆ ಸೇರಿರುವ ಕಾರಣ ಈ ಮನೆಯಲ್ಲಿ ಅವರು ಇರುವುದಿಲ್ಲ ಹಾಗಾಗಿ ಅದು ಹಾಗೆ ಹಾಳಾಗುವುದು ಬೇಡ ಎನ್ನುವ ಕಾರಣಕ್ಕೆ ಬಾಡಿಗೆಗೆ ಕೊಡುವ ನಿರ್ಧಾರಕ್ಕೆ ಬಂದಿದ್ದಾರೆ.

ನಟಿ ಅಧಿತಿ ಪ್ರಭುದೇವ್ ಅವರು ಕನ್ನಡದ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿದ್ದರು ಬದುಕುತ್ತಿರುವುದು ಬಹಳ ಸರಳವಾಗಿ. ತಮ್ಮ ಜೀವನದ ಕುರಿತ ಯಾವುದೇ ವಿಷಯ ಇದ್ದರೂ ಅದನ್ನು ಸೀದಾಸಾದ ಅಭಿಮಾನಿಗಳ ಜೊತೆ ಹೇಳಿಕೊಂಡು ಬಿಡುತ್ತಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾ ಈಗ ಅವರಿಗೂ ಹಾಗೂ ಅಭಿಮಾನಿಗಳಿಗೂ ಕನೆಕ್ಟ್ ಮಾಡಿರುವ ಒಂದು ಬ್ರಿಡ್ಜ್ ಆಗಿದ್ದು, ನಟಿ ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಆಗಿ ಇರುತ್ತಾರೆ ಮತ್ತು ಅಭಿಮಾನಿಗಳ ಪ್ರಶ್ನೆಗಳಿಗೆ ಸ್ಪಂದಿಸಿ ಉತ್ತರಿಸುತ್ತಾರೆ.