ದರ್ಶನ್ ಹಚ್ಚೆ ಹಾಕಿಸಿಕೊಂಡಿರುವುದರ ಬಗ್ಗೆ ಅಭಿಷೇಕ್ ಅಂಬರೀಶ್ ಅವರನ್ನು ಕೇಳಿದಾಗ ಅಭಿ ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್ ಆದ್ರೂ

 

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರು ನೆನ್ನೆ ತಮ್ಮ ಅಭಿಮಾನಿಗಳಿಗಾಗಿ (for fan’s) ಎದೆ ಮೇಲೆ ನನ್ನ ಸೆಲೆಬ್ರಿಟಿಸ್ ಎಂದು ಹಚ್ಚೆ (Tattoo) ಹಾಕಿಸಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳನ್ನು ತುಂಬಾ ಭಾವುಕರನ್ನಾಗಿ ಮಾಡಿದ್ದು ಒಂದು ರೀತಿಯಲ್ಲಿ ಕೂಡ ಸಂತಸದಲ್ಲಿ ಕಂಬನಿ ಮಿಡಿಯುವಂತೆ ಮಾಡಿದೆ. ದರ್ಶನ್ ಅವರಿಗೆ ಅವರ ಅಭಿಮಾನಿಗಳ ಮೇಲೆ ಎಷ್ಟು ಪ್ರೀತಿ ಇದೆ ಎಂದು ಎಲ್ಲರಿಗೂ ಗೊತ್ತು. ಹಾಗಾಗಿ ಅವರು ಅಭಿಮಾನದಿಂದ ಅಭಿಮಾನಿಗಳನ್ನು ನನ್ನ ಸೆಲೆಬ್ರಿಟಿಸ್ ಎಂದೇ ಕರೆಯುತ್ತಾರೆ.

ಈಗ ಅದೇ ಹೆಸರನ್ನು ಎದೆ ಮೇಲೆ ಹಚ್ಚೆಯಾಗಿ ಕೂಡ ಹಾಕಿಸಿಕೊಂಡಿದ್ದಾರೆ ಅಭಿಮಾನಿಗಳು ಸಹ ದರ್ಶನ್ ಅವರನ್ನು ಅಷ್ಟೇ ಇಷ್ಟಪಡುತ್ತಾರೆ. ವೈಯಕ್ತಿಕವಾಗಿ ಅವರ ವಿವಾದಗಳು ಏನೇ ಇದ್ದರೆ ಕೂಡ ಒಬ್ಬ ಸ್ಟಾರ್ ನಟನಾಗಿ ಅಭಿಮಾನಿಗಳು ಇಟ್ಟಿರುವ ಅಭಿಮಾನ ಎಂದೂ ಕಡಿಮೆ ಆಗಿಲ್ಲ. ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ಅವರು ಈ ರೀತಿ ಅಭಿಮಾನಿಗಳ ಬಗ್ಗೆ ಟ್ಯಾಟು ಹಾಕಿಸಿಕೊಂಡಿರುವುದು ಅಭಿಮಾನಿಗಳ ಜೊತೆ ಸ್ಯಾಂಡಲ್ ವುಡ್‌ ಇತರ ತಾರೆಗಳಿಗೂ ಮೆಚ್ಚುಗೆ ಆಗಿದೆ.

ಎಲ್ಲರೂ ಸಹ ದರ್ಶನ್ ಅವರ ಈ ನಡೆ ಬಗ್ಗೆ ಬಹಳ ಹೆಮ್ಮೆ ಹಾಗು ಸಂತಸ ವ್ಯಕ್ತಪಡಿಸುತ್ತಿದ್ದಾರೆ ದರ್ಶನ್ ಅವರೇ ಟ್ಯಾಟು ಹಾಕಿಸಿಕೊಳ್ಳುವ ಮುಂಚೆ ಹೇಳಿಕೊಂಡಿದ್ದರು ನನ್ನ ಸೆಲೆಬ್ರಿಟಿಸ್ ನನಗಾಗಿ ಅಷ್ಟೊಂದು ಮಾಡುತ್ತಾರೆ. ಅದರ ಮುಂದೆ ಇದೆಲ್ಲ ಯಾವ ಲೆಕ್ಕ ನನ್ನ ಕಡೆಯಿಂದ ಅವರಿಗಾಗಿ ಒಂದು ಸಣ್ಣ ಅರ್ಪಣೆ ಅಷ್ಟೇ ಎಂದು ಹೇಳಿ ಟ್ಯಾಟು ಹಾಕಿಸಿಕೊಂಡಿದ್ದರು. ಈಗ ದರ್ಶನ್ ತಮ್ಮ ಎಂದೇ ಹೆಸರಾಗಿರುವ ಅಭಿಷೇಕ್ ಅಂಬರೀಶ್ (Abhishek Ambarish) ಅಣ್ಣನ ಈ ನಡೆ ಬಗ್ಗೆ ತಮ್ಮ ಮಾತುಗಳನ್ನು ಈ ರೀತಿ ಹಂಚಿಕೊಂಡಿದ್ದಾರೆ.

ದರ್ಶನ್ ಅಣ್ಣ ಅಭಿಮಾನಿಗಳನ್ನು ಎಷ್ಟು ಇಷ್ಟ ಪಡುತ್ತಾರೆಂದು ಅವರ ಸುತ್ತಮುತ್ತ ಇರುವ ಎಲ್ಲರಿಗೂ ಗೊತ್ತು ಒಮ್ಮೆ ಯಾವುದೋ ಸಂದರ್ಭದಲ್ಲಿ ಕಣ್ಣಾರೆ ನಾನು ಕಂಡಿದ್ದೇನೆ. ತುಂಬಾ ಸ್ಟ್ರೈನ್ ಆಗಿದ್ದರು ಒಂದು ಸಿನಿಮಾ ತಯಾರಿಗಾಗಿ ಬಹಳ ಜಿಮ್ ಮಾಡುತ್ತಿದ್ದರು ಅವರು ಎರಡು ತಾಸು ರೆಸ್ಟ್ ಮಾಡುತ್ತಾರೆ ಅಷ್ಟೇ ಎಂದು ಅವರ ಅಸಿಸ್ಟೆಂಟ್ಗಳು ಹೇಳಿದ್ದರು. ಹಾಗಾಗಿ ನಾನು ಹೇಳಿದೆ ಯಾಕಾಗಿ ಇಷ್ಟೊಂದು ಸ್ಟ್ರೆಸ್ ತೆಗೆದುಕೊಳ್ಳುತ್ತೀರಾ ಆರಾಮಾಗಿರಿ ಸ್ವಲ್ಪ ದಿನ, ಇಷ್ಟು ಕಷ್ಟ ಬೇಕಾ ನಿಮಗೆ ಎಂದು ಕೂಡ ಕೇಳಿದೆ.

ಅದಕ್ಕೆ ದರ್ಶನ್ ಅಣ್ಣ ಹೇಳಿದ್ದು ಒಂದೇ ಮಾತು ನನ್ನ ಅಭಿಮಾನಿಗಳು ನನ್ನ ಮೇಲೆ ಏನೋ ಒಂದು ಎಕ್ಸ್ಪೆಕ್ಟೇಶನ್ ಇಟ್ಟುಕೊಂಡಿದ್ದಾರೆ ಅವರಿಗೆ ನಿರಾಸೆ ಮಾಡಲು ಇಷ್ಟ ಇಲ್ಲ. ನನ್ನ ಫ್ಯಾನ್ಸ್ ಗೆ ನಾನು ಹೇಗೆ ಬೇಕೋ ಹಾಗೆ ತಯಾರಾಗುತ್ತೇನೆ ಕಷ್ಟ ಆಗಿದ್ದರು ಪರವಾಗಿಲ್ಲ ಎಂದು ಹೇಳಿದ್ದರು. ಈಗ ಎಲ್ಲರಂತೆ ನನಗೂ ಸಹ ಅವರು ಟ್ಯಾಟು ಹಾಕಿಸಿಕೊಂಡಿರುವ ವಿಷಯ ಬಹಳ ಎಮೋಷನಲ್ ಮಾಡಿದ್ದು ಕರೆ ಮಾಡಿ ನಾನು ವಿಚಾರಿಸಿದೆ.

ಆಗ ಅಣ್ಣ ಹೇಳಿದ್ದು ಹೀಗೆಂದರು “ಎದೆ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದಲ್ಲ ನನ್ನ ಎದೆ ಬಗೆದರೂ ಕೂಡ ಅವರೇ ಇರುವುದು, ಎಲ್ಲರ ಹೆಸರನ್ನು ಹಾಕಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಎಲ್ಲರ ಹೆಸರನ್ನು ಸೇರಿಸಿ ಒಂದೇ ಹೆಸರಿನಲ್ಲಿ ಹಾಕಿಸಿಕೊಂಡಿದ್ದೇನೆ ಎಂದು ಹೇಳಿದರು” ಎಂದಿದ್ದಾರೆ. ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ಸ್ಟಾರ್ ಅಭಿಮಾನಿಗಳಿಗಾಗಿ ಈ ರೀತಿ ಅಭಿಮಾನದಿಂದ ಟ್ಯಾಟು ಹಾಕಿಸಿಕೊಂಡಿರುವುದು ಅದರಲ್ಲಿ ಅಣ್ಣನೇ ಫಸ್ಟ್ ಎಂದು ಹೇಳಿದ್ದಾನೆ. ಈ ವಿಚಾರ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave a Comment