ಆಶುರೆಡ್ಡಿ
ರಾಮ್ ಗೋಪಾಲ್ ವರ್ಮ ಮತ್ತು ಅಶು ರೆಡ್ಡಿ ಕುರಿತ ಸುದ್ದಿ ಬಗ್ಗೆ ಸ್ಪೋ.ಟ.ಕ ಹೇಳಿಕೆ ನೀಡಿದ ನಟಿ.
ಸದ್ಯಕ್ಕೆ ಸೋಶಿಯಲ್ ಮೀಡಿಯಾ ತುಂಬೆಲ್ಲಾ ತೆಲುಗು ನಟಿ ಅಶು ರೆಡ್ಡಿ ಹಾಗೂ ತೆಲುಗಿನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಕುರಿತ ಸುದ್ದಿಗಳು ಬಾರಿ ಚರ್ಚೆ ಆಗುತ್ತಿವೆ. ಇದಕ್ಕೆಲ್ಲ ಕಾರಣ ಇತ್ತೀಚೆಗೆ ರಾಮ್ ಗೋಪಾಲ್ ವರ್ಮ ಅವರು ಅಶು ರೆಡ್ಡಿ ಅವರ ಕಾಲಿನ ಬೆರಳನ್ನು ನೆಕ್ಕುತ್ತಿರುವ ವೀಡಿಯೋ ವೈರಲ್ ಆಗಿರುವುದು.
ಅಶು ರೆಡ್ಡಿ ಅವರು ರಾಮ್ ಗೋಪಾಲವರ್ಮ ಅವರ ನಿರ್ದೇಶನದ ಡೇಂ.ಜ.ರ್ ಎನ್ನುವ ತೆಲುಗು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಬಗ್ಗೆ ಜನತೆಗೆ ಬಾರಿ ನಿರೀಕ್ಷೆ ಇದ್ದು ಡಿಸೆಂಬರ್ 9 ರಂದು ತೆಲುಗು ಹಾಗೂ ಹಿಂದಿಯಲ್ಲಿ ಚಿತ್ರ ಬಿಡುಗಡೆಗೊಂಡಿದೆ. ಈ ಚಿತ್ರದ ಪ್ರಚಾರ ಮಾಡಲು ಸಂದರ್ಶನ ಒಂದರಲ್ಲಿ ನಿರ್ದೇಶಕ ರಾಜಗೋಪಾಲ್ ವರ್ಮ ಹಾಗೂ ಅಶು ರೆಡ್ಡಿ ಅವರು ಭಾಗಿಯಾಗಿದ್ದರು.
ಸಂದರ್ಶನದ ಮಧ್ಯದಲ್ಲಿ ಅಶು ರೆಡ್ಡಿ ಅವರ ಕಾಲು ಬೆರಳಿಗೆ ಆರ್.ಜಿ ವರ್ಮ ಅವರು ಮುತ್ತನಿಟ್ಟಿದ್ದಾರೆ ಹಾಗೂ ಅವರ ಕಾಲನ್ನು ನೆಕ್ಕಿದ್ದಾರೆ. ಸಿನಿಮಾ ಕುರಿತ ಪ್ರಚಾರಕ್ಕಾಗಿ ಅವರು ಈ ರೀತಿ ನಡೆದುಕೊಂಡಿದ್ದಾರೋ ಅಥವಾ ಆರ್ ಜಿ ವರ್ಮ ಅವರ ವ್ಯಕ್ತಿತ್ವವೇ ಈ ರೀತಿ ಇರುವುದರಿಂದ ಅವರು ಸಹಜವಾಗಿ ಈ ರೀತಿ ನಡೆದುಕೊಂಡಿದ್ದಾರೋ ಗೊತ್ತಿಲ್ಲ.
ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಆ ಫೋಟೋಗಳು ಹಾಗೂ ವೀಡಿಯೋಗಳು ಭಾರಿ ಸಂಚಲನ ಉಂಟು ಮಾಡಿವೆ. ಕಳೆದ ಎರಡು ಮೂರು ದಿನಗಳಿಂದ ಇದೇ ವಿಷಯಕ್ಕಾಗಿ ಅಶುರೆಡ್ಡಿ ಹಾಗೂ ರಾಮ್ ಗೋಪಾಲ್ ವರ್ಮ ಅವರನ್ನು ಟ್ರೋಲ್ ಕೂಡ ಮಾಡಲಾಗುತ್ತಿದೆ. ಇದನ್ನು ಗಮನಿಸಿದ ನಟಿ ಅಶುರೆಡ್ಡಿ ಅವರು ಇದಕ್ಕೆ ತಿರುಗೇಟು ಸಹ ನೀಡಿದ್ದಾರೆ.
ರಾಮ್ ಗೋಪಾಲ್ ವರ್ಮ ಅವರು ಆ ರೀತಿ ಮಾಡಿರುವುದು ನನಗೆ ಖುಷಿ ನೀಡಿದೆ. ಈ ಬಗ್ಗೆ ಯಾರು ಏನೇ ಹೇಳಿದರೂ, ಏನೇ ಮಾತನಾಡಿಕೊಂಡರು ಕೂಡ ಐ ಡೋಂಟ್ ಕೇರ್ ಎಂದಿದ್ದಾರೆ. ಈ ರೀತಿ ಹೇಳಿಕೆ ಕೊಡುವ ಮೂಲಕ ತಾನು ಟ್ರೋಲ್ ಆಗುತ್ತಿರುವುದರ ಬಗ್ಗೆ ತಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ನುಡಿದಿದ್ದಾರೆ.
ಅಶು ರೆಡ್ಡಿ ಅವರು ಮೊದಲಿನಿಂದ ಕೂಡ ಇದೇ ರೀತಿ ಬೋಲ್ಡ್ ಆಗಿ ಇದ್ದವರು. ತೆಲುಗಿನ ಬಿಗ್ ಬಾಸ್ ಮೂರರಲ್ಲಿ ಕಂಟೆಸ್ಟೆಂಟ್ ಆಗಿ ಭಾಗವಹಿಸಿದ್ದ ಇವರು ಸೋಶಿಯಲ್ ಮೀಡಿಯಾ ಸ್ಟಾರ್ ಎನ್ನಬಹುದು. ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಇವರನ್ನು ಅದೇ ಕೋಟದಿಂದ ಬಿಗ್ ಬಾಸ್ ಮನೆಗೆ ಸೇರಿಸಕೊಳ್ಳಲಾಗಿತ್ತು. ಆ ಮೂಲಕ ಇನ್ನು ಹೆಚ್ಚು ಫೇಮಸ್ ಆದ ಇವರು ನಂತರ ಸಿನಿಮಾಗಳಲ್ಲಿ ಪಾತ್ರ ಮಾಡುವ ಅವಕಾಶ ಪಡೆದುಕೊಂಡರು.
ಇನ್ಸ್ಟಾಗ್ರಾಮ್ ಅಲ್ಲಿ ಅತಿ ಹೆಚ್ಚು ಸಂಖ್ಯೆಯ ಫಾಲೋವರ್ಸ್ ಹೊಂದಿರುವ ಈಕೆ ತನ್ನ ಫಾಲೋವರ್ಸ್ ಹಾಗೂ ಅಭಿಮಾನಿಗಳನ್ನು ರಂಜಿಸಲು ಹೊಸ ಹೊಸ ಫೋಟೋ ಶೂಟ್ ಮಾಡಿಸಿ ಹಂಚಿಕೊಳ್ಳುತ್ತಾರೆ. ಅಲ್ಲದೆ ವಿಡಿಯೋ ಎಡಿಟರ್ ಬಗ್ಗೆ ಕೂಡ ಆಸಕ್ತಿ ಹೊಂದಿರುವ ಇವರು ಅದನ್ನು ಸಹ ಅಪ್ಲೋಡ್ ಮಾಡುತ್ತಾರೆ.
ನೋಡುವುದಕ್ಕೆ ಸಮಂತ ಅವರನ್ನೇ ಹೋಲುವ ಇವರು ಜೂನಿಯರ್ ಸಮಂತ ಎಂದು ಕೂಡ ಫೇಮಸ್ ಆಗಿದ್ದಾರೆ. ಸಿನಿಮಾ ರಂಗದಲ್ಲಿ ಅವಕಾಶಗಳನ್ನು ಪಡೆಯುತ್ತಿರುವ ಇವರ ಈ ನಡೆ ಮುಂದೆ ಯಾವ ತಿರುವು ಪಡೆದುಕೊಳ್ಳಲಿದಿಯೋ ಗೊತ್ತಿಲ್ಲ ಆದರೆ ಆದರೆ ನೆಟ್ಟಿಗರು ಮಾತ್ರ ವೈರಲ್ ಆಗುತ್ತಿರುವ ಈ ಫೋಟೋ ನೋಡಿ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.