ಬಣ್ಣದ ಜಗತ್ತು ಹಾಗೆ ಎಲ್ಲರನ್ನು ಕೈ ಬೀಸಿ ತನ್ನತ್ತಾ ಕರೆಯುತ್ತದೆ ಆದರೆ ಇಲ್ಲಿಗೆ ಸಾವಿರ ಕನಸು ಹೊತ್ತಿಕೊಂಡು ಬರುವ ಎಲ್ಲರಿಗೂ ಅವರ ಆಸೆಗಳು ಈಡೇರುವ ಅದೃಷ್ಟ ಇರುವುದಿಲ್ಲ. ಈ ಸಿನಿಮಾ ಜಗತ್ತಿಗೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಂದ ಬಸ್ ಡ್ರೈವರ್ ಒಬ್ಬರ ಮಗ ಪಾನ್ ಇಂಡಿಯಾ ಸ್ಟಾರ್ ಆಗಿ ಮೆರೆದ ಇತಿಹಾಸವು ಇದೆ, ಹಾಗೆಯೇ ಕಲಾವಿದರ ಕುಟುಂಬದಲ್ಲಿ ಹುಟ್ಟಿ ಬೆಳೆದು ಅಭಿನಯವನ್ನೇ ಉಸಿರಾಡಿ ಬೇಕಾದ ತಯಾರಿಗಳೊಂದಿಗೆ ಪಾದರ್ಪಣೆ ಮಾಡಿದ್ದರು ಜನಮನ್ನಣೆ ದೊರೆಕದ ಕಾರಣ ಮೂಲೆ ಗುಂಪಾದ ತೆರೆ ಹಿಂದೆ ಸರಿದವರ ಉದಾಹರಣೆಗಳು ಇದೆ.
ಇಂತಹ ಸಾರಿಗೆ ಬಾಲಿವುಡ್ ನಾ ನೆಪೋ ಕಿಡ್ ಸೇರುತ್ತಿದ್ದಾರೆ. ಕನ್ನಡ ನೆಲದ ನಂಟುಳ್ಳ ಈ ನಟಿ ಇದ್ದಕ್ಕಿದ್ದಂತೆ ಸಿನಿಮಾ ಜಗತ್ತಿನಿಂದ ದೂರ ಉಳಿಯುವ ನಿರ್ಧಾರ ಘೋಷಿಸಿಕೊಂಡು ಶಾ’ಕ್ ನೀಡಿದ್ದಾರೆ. ಬಿ ಟೌನ್ ನಲ್ಲಿ ಅಣ್ಣನೆಂದು ಗುರುತಿಸಿಕೊಳ್ಳುವ ಸುನಿಲ್ ಶೆಟ್ಟಿ ಮೂಲತಃ ಈ ನೆಲದವರೆ, ಇನ್ನು ಮಗಳಾದ ಅಥಿಯಾ ಶೆಟ್ಟಿ ಸ್ಟಾರ್ ಕ್ರಿಕೆಟಿಗ ಕನ್ನಡಿಗ ರಾಹುಲ್ ವಿವಾಹವಾಗಿರುವುದರಿಂದ ಈಕೆ ಕನ್ನಡಿಗರಿಗೆ ಇನ್ನೂ ಹೆಚ್ಚು ಹತ್ತಿರ.
ವಿಶೇಷವೆಂದರೆ, ನಟಿ ಈಗ ಮುದ್ದಾದ ಹೆಣ್ಣು ಮಗುವಿನ ತಾಯಿ ಆಗಿದ್ದಾರೆ. ಸಾಲು ಸಾಲು ಸೋಲು ಕಂಡಿದ್ದ ನಟಿ ಅದೃಷ್ಟ ಮುಂದೆ ಬದಲಾಗುಬಹುದೆಂದು ನಿರೀಕ್ಷೆ ಇದ್ದ ಆಕೆಯ ಅಭಿಮಾನಿಗಳಿಗೆ ಇದೀಗ ಅಪ್ಪ ಸುನೀಲ್ ಶೆಟ್ಟಿ ಹೇಳಿರುವ ಮಾತು ಬರಸಿಡಿಲಿನಂತೆ ಅಪ್ಪಳಿಸಿದೆ. ನನ್ನ ಮಗಳು ಸಿನಿಮಾ ಜಗತ್ತಿನಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾಳೆ.
ಇನ್ನು ಮುಂದೆ ಆಕೆ ಸಿನಿಮಾ ಮಾಡುವುದಿಲ್ಲ ಎನ್ನುವುದನ್ನು, ಸಿನಿಮಾ ನಟನೆ ಬಗ್ಗೆ ತನಗೆ ಆಸಕ್ತಿ ಇಲ್ಲ ಎಂದು ಮಗಳು ಹೇಳಿಕೊಂಡಿದ್ದಾಳೆ. ಸದ್ಯಕ್ಕೆ ಈಗ ಅವಳಿಗೆ ಸಿಕ್ಕಿರುವ ಬದುಕು ಸುಂದರವಾಗಿದೆ ಮಗುವಿನ ಲಾಲನೆ ಪಾಲನೆ ಮಾಡುತ್ತಾ ನನ್ನ ಮಗಳು ಸಂತೋಷವಾಗಿದ್ದಾಳೆ. ಸ್ವತಃ ಅವಳೇ ತನ್ನ ಇಚ್ಛೆಯಿಂದ ಬಣ್ಣದ ಲೋಕದಿಂದ ದೂರ ಉಳಿತು ಬದುಕು ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದಾಳೆ ಎಂದು ಮಗಳ ಈ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಸ್ವತಃ ಸುನೀಲ್ ಶೆಟ್ಟಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಸರಿಯಾಗಿ ದಶಕಗಳ ಹಿಂದೆ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದ ಅಥಿಯಾ ಶೆಟ್ಟಿ ಸಾಕಷ್ಟು ತಯಾರಿಯೊಂದಿಗೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು ನೋಡಲು ಸುಂದರವಾಗಿದ್ದ ಅಭಿನಯದ ಸೈ ಅನಿಸಿಕೊಂಡಿದ್ದ ಈಕೆಯ ಅದೃಷ್ಟ ಮಾತ್ರ ನಿರೀಕ್ಷೆಯಂತಿರಲಿಲ್ಲ. ಸೂರಜ್ ಪಾಂಚೋಲಿ ನಾಯಕನಾಗಿ ಅಭಿನಯಿಸಿದ್ದ ಹೀರೋ ಚಿತ್ರದ ಮೂಲಕ ಲಾಂಚ್ ಹಾಕಿದ್ದ ಈಕೆಗೆ ಮೊದಲ ಸಿನಿಮಾದಲ್ಲಿಯೇ ನಿರಾಸೆ ಕಾದಿತ್ತು.
2017ರಲ್ಲಿ ಮುಬಾರಕನ್ ಚಿತ್ರದಲ್ಲಿ ಈಕೆ ಮುಖ್ಯಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದರು ಆದರೆ ಇಲ್ಲಿಯೂ ಕೂಡ ಆಸೆಯಲ್ಲ ಮಣ್ಣು ಪಾಲು ಆಗಿತ್ತು ಮೂರನೇ ಬಾರಿ 2019ರಲ್ಲಿ ಮೋತಿ ಚೂರ್ ಚಕ್ನಾಚೂರ್ ಚಿತ್ರದಲ್ಲಿ ಕಾಣಿಸಿಕೊಂಡರು, ನವಾಜುದ್ದೀನ್ ಸಿದ್ದಿಕಿ ಇದ್ದರೂ ಕೂಡ ಈ ಚಿತ್ರ ಮಖಾಡೆ ಮಲಗಿತ್ತು.
ಹೀಗೆ ಸತತ ಸಾಲು ಸೋಲುಗಳಿಂದ ಬೇಸತ್ತು ದೂರವಿದ್ದ ನಟಿ ಈಗ ಅಧಿಕೃತವಾಗಿ ಈಗ ಸಂಪೂರ್ಣವಾಗಿ ನಟನೆಯಿಂದ ದೂರ ಇರುವ ಬಗ್ಗೆ ಡಿಸೈಡ್ ಆಗಿಬಿಟ್ಟಿದ್ದಾರೆ. ತಂದೆ ಸುನಿಲ್ ಶೆಟ್ಟಿ ಮಾತ್ರ ಈಗಲೂ ನನ್ನ ಮಗಳಿಗೆ ಸಾಕಷ್ಟು ಸಿನಿಮಾಗಳ ಆಫರ್ ಬರುತ್ತಿದೆ, ಆದರೂ ಆಸಕ್ತಿ ಇಲ್ಲದೆ ಆಕೆ ಈ ನಿರ್ಧಾರಕ್ಕೆ ಬಂದಿದ್ದಾಳೆ ಎಂದು ತಿಳಿಸಿದ್ದಾರೆ.