ನಟಿ ಸೌಂದರ್ಯ (SOUNDARYA) ಹೆಸರಿಗೆ ತಕ್ಕಂತೆ ರೂಪವಂತೆ, ರೂಪಕ್ಕೆ ತಕ್ಕ ಹಾಗೆ ಬುದ್ಧಿವಂತೆ ಕೂಡ. ಹಾಗೆ ಅಭಿನಯದ ವಿಷಯದಲ್ಲಿ ಆಕೆಗೆ ಆಕೆಯೇ ಸಾಟಿ ಆದರೆ ಅದೃಷ್ಟದ ವಿಚಾರದಲ್ಲಿ ಮಾತ್ರ ಬಹಳ ನತದೃಷ್ಟೆ. ಯಾಕೆಂದರೆ ಸಿನಿಮಾ ರಂಗದಲ್ಲಿ ಚಿಕ್ಕ ವಯಸ್ಸಿಗೆ ದೊಡ್ಡ ಹೆಸರು ಮಾಡಿ ರಾಜಕೀಯ ಭವಿಷ್ಯದ ಬಗ್ಗೆ ಕನಸು ಕಂಡು ಸಾಧಿಸಲು ಸಾಕಷ್ಟು ಇರುವಾಗಲೇ ವಿಧಿಯಾಟಕ್ಕೆ ಬ’ಲಿಯಾಗಿ ಹೋದ ದು’ರಂ’ತ ನಾಯಕಿ.
ಗಂಧರ್ವ (GANDARVA) ಎನ್ನುವ ಸಿನಿಮಾ ಮೂಲಕ ಹಂಸಲೇಖ ಅವರಿಂದ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಸೌಮ್ಯ ನಂತರ ಸೌಂದರ್ಯ ಆಗಿ ಕನ್ನಡ, ತಮಿಳು, ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆಗಳ ಬೇಡಿಕೆಯ ನಟಿ ಆದರು, ತಮ್ಮ ಕೇವಲ 12 ವರ್ಷದ ವೃತ್ತಿ ಜೀವನದಲ್ಲಿ ಬಹುತೇಕ ಈ ಮೇಲೆ ತಿಳಿಸಿದ ಎಲ್ಲಾ ಪಂಚಭಾಷೆಗಳ ಮೇರು ನಟರೊಂದಿಗೆ ತೆರೆ ಮೇಲೆ ಮಿಂಚಿದವರು.
ವೃತ್ತಿ ಜೀವನದ ಉತ್ತುಂಗದ ಯಶಸ್ಸಿನಲ್ಲಿದ್ದರೂ ಕುಟುಂಬ ಹಾಗೂ ಇಂಡಸ್ಟ್ರಿ ಜೊತೆಗೆ ತಮ್ಮ ವಿಧೇಯ ನಡವಳಿಕೆಯಿಂದ ಆತ್ಮೀಯರಾಗಿದ್ದವರು. ಹೀಗಾಗಿಯೇ ಆಕೆ ಅಗಲಿ 21 ವರ್ಷಗಳಾದರೂ ಕೂಡ ಅಭಿಮಾನಿಗಳು ಇಂಡಸ್ಟ್ರಿಯವರು ಮತ್ತು ಕುಟುಂಬಸ್ಥರು ಆಕೆಯ ಇರುವಿಕೆಯನ್ನು ಅನುಭವಿಸುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಕೆಲವು ಕಡೆ ಫ್ಲೈ ಓವರ್ ಒಂದರ ಮೇಲೆ ಸೌಂದರ್ಯ ಆತ್ಮ ಅಲೆದಾಡುತ್ತಿದೆ ಎನ್ನುವ ಸುಳ್ಳು ಸುದ್ದಿಯ ಪ್ರಚಾರವಾಗಿದೆ.
ಈ ಬಗ್ಗೆ ಸಂದರ್ಶನ ಒಂದರಲ್ಲಿ ಸೌಂದರ್ಯ ಅವರ ಬಗ್ಗೆ ಮಾತನಾಡುತ್ತಿದ್ದ ಆಕೆಯ ಅತ್ತಿಗೆ ನಿರ್ಮಲ ಅವರು ಭಾವುಕವಾಗಿ ಮಾತನಾಡಿದ್ದಾರೆ. ಸೌಂದರ್ಯ ಅವರು ಅಂದು ವಿಮಾನ ದುರಂತದಲ್ಲಿ (Flight Accident) ದಹನ ವಾದಾಗ ಆಕೆಯ ಸಹೋದರ ಅಮರ್ ಕೂಡ ಅವರ ಜೊತೆಗಿದ್ದರು. ಆ ಅಮರ್ ಅವರ ಪತ್ನಿಯೇ ನಿರ್ಮಲ (Nirmala). ಸೌಂದರ್ಯ ಅವರ ಸಂಬಂಧಿ ಕ್ಲಾಸ್ಮೇಟ್ ಆಗಿದ್ದ ನಿರ್ಮಲ ಅವರು ಸೌಂದರ್ಯ ಅವರ ಕುಟುಂಬಕ್ಕೆ ಪರಿಚಯಸ್ಥರಾಗಿದ್ದರು, ಹೀಗಾಗಿ ಸೌಂದರ್ಯ ಅವರು ಬಹಳ ವರ್ಷಗಳಿಂದ ನಿರ್ಮಲ ಅವರಿಗೆ ಆತ್ಮೀಯರು.
ಅತ್ತಿಗೆಯಾಗಿ ಕುಟುಂಬ ಸೇರಿದ ಬಳಿಕ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಸೌಂದರ್ಯ ಅವರನ್ನು ಪ್ರೀತಿಸಿದವರು ಆದರೆ ಒಮ್ಮೆಲೇ ಪತಿ ಅಮರ್ ಹಾಗೂ ಸೌಂದರ್ಯ ಅವರ ಅಕಾಲಿಕ ಮ’ರ’ಣ’ದ ಆ.ಘಾ.ತ ಅನುಭವಿಸಿದವರು. ಈಗ ಸೌಂದರ್ಯ ಅವರ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾಗಿ ಸೌಂದರ್ಯ ರವರ ಬಗ್ಗೆಮಾತನಾಡುವಾಗ ಸೌಂದರ್ಯ ಸಾ’ವಿ’ನ ಬಗ್ಗೆ ಇರುವ ಅನೇಕ ಊಹಾಪೋಹಗಳ ಬಗ್ಗೆ ಕೂಡ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಎಲ್ಲರಿಗೂ ಸೌಂದರ್ಯ ಸಾವಿನ ಬಗ್ಗೆ ಇರುವ ಒಂದು ಸಂಶಯವೇನೆಂದರೆ ಆಕೆ ಆತ್ಮಮಿತ್ರ ಸಿನಿಮಾ (APTHAMITRA) ಒಪ್ಪಿಕೊಳ್ಳಬಾರದಿತ್ತು ಹಾಗೆ ನಟಿಸಿದ ನಾಗವಲ್ಲಿ ಪಾತ್ರ ಆಕೆಯನ್ನು ಬಲಿ ತೆಗೆದುಕೊಂಡಿತು ಎನ್ನುವುದು. ಆದರೆ ಇದು ಮೂಲತಃ ತಮಿಳು ಸಿನಿಮಾ ತಮಿಳು ಭಾಷೆಯಲ್ಲಿ ಅಭಿನಯಿಸಿದ ಶೋಭಾ ಅವರು ಇನ್ನೂ ಬದುಕಿದ್ದಾರೆ ಅದಕ್ಕಾಗಿ ನನಗೆ ವಾದಗಳ ಬಗ್ಗೆ ನಂಬಿಕೆ ಇಲ್ಲ. ಸಿನಿಮಾ ಪೂರ್ತಿ ಶೂಟಿಂಗ್ ನಲ್ಲಿ ಇದ್ದಾಗ ಒಂದೇ ಒಂದು ಕಹಿ ಘಟನೆ ಕೂಡ ನಡೆದಿರುವುದಿಲ್ಲ ಎನ್ನುವುದರ ಬಗ್ಗೆ ಕೂಡ ಹೇಳಿದ್ದಾರೆ.
ಅವಳು ಸತ್ತಿದ್ದಾಳೆ ಎಂದು ನಾನು ಭಾವಿಸಿಕೊಳ್ಳುವುದೇ ಇಲ್ಲ ತನ್ನ 12 ವರ್ಷಗಳ ಸಮಯದಲ್ಲಿ ಈಗಾಗಲೇ ಸಾಕಷ್ಟು ಸಾಧಿಸಿ ಆಕೆ ಅನೇಕರ ಪ್ರೀತಿ ಗಳಿಸಿದ್ದರು. ಹಾಗಾಗಿ 21 ವರ್ಷಗಳಾದರೂ ಅಭಿಮಾನಿಗಳು ಮನೆಗೆ ಬರುತ್ತಾರೆ, ಕರೆ ಮಾಡುತ್ತಾರೆ, ಆಕೆಯನ್ನು ನೆನಪಿಸಿಕೊಳ್ಳುತ್ತಾರೆ ಹಾಗಾಗಿ ಸೌಮ್ಯ ಮತ್ತು ಅಮರ್ ನಮ್ಮ ಜೊತೆಗಿದ್ದಾರೆ ಎನ್ನುವ ಭಾವನೆಗೆ ನನಗೆ ಬರುತ್ತದೆ.
ಆದರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಯಾರೋ ಒಬ್ಬರು ಅವರ ಲಾಭಕ್ಕಾಗಿ ಬಾಯಿಗೆ ಬಂದ ಹಾಗೆ ಫ್ಲೈಓವರ್ ಮೇಲೆ ಸೌಂದರ್ಯ ಆತ್ಮ ಅಲೆದಾಡುತ್ತಿದೆ ಎನ್ನುವ ಕಂಟೆಂಟ್ ಮಾಡಿದ್ದರು. ಅದು ನನಗೆ ಬಹಳ ನೋ’ವುಂ’ಟು ಮಾಡಿತ್ತು. ಬದುಕಿರವರೆಗೂ ಕೂಡ ಯಾರಿಗೂ ನೋಯಿಸದ ಜೀವ ಅದು ಎಂದು ತಮ್ಮ ನೋವಿನ ಬಗ್ಗೆ ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.