ತನ್ನ ಅಭಿನಯ ಚಾತುರ್ಯದಿಂದ 1980 ರ ಸಮಯದಲ್ಲಿ ಸಿನಿಪ್ರಿಯರನ್ನು ರಂಜಿಸಿದ್ದ ಕನ್ನಡದ ನಟಿ ಭವ್ಯ ಅವರು ಅಂದು ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದ್ದರು. ಅತ್ಯಂತ ಕಡಿಮೆ ಅವಧಿಯಲ್ಲಿ 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡಿರುವ ಇವರು ನಮ್ಮ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಜೊತೆಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಎನ್ನುವುದು ವಿಶೇಷ. ಅಲ್ಲದೆ ಈ ಜೋಡಿ ಅನೇಕ ಹಿಟ್ ಚಿತ್ರಗಳನ್ನು ನೀಡಿರುವುದಲ್ಲದೆ ಕನ್ನಡಿಗರ ಮನ ಗೆದ್ದಿದೆ ಕೂಡ. ಅಂದಿನ ಕಾಲದಲ್ಲಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯರ ಪೈಕಿ ಇವರು ಒಬ್ಬರಾಗಿದ್ದು ಹೆಚ್ಚಾಗಿ ಭಾವನಾತ್ಮಕ ಪಾತ್ರಗಳಲ್ಲಿ ನಟಿಸಿ ಜನರ ಮನಸ್ಸನ್ನು ಗೆಲ್ಲುತ್ತಿದ್ದರು.
ಭವ್ಯ ಅವರು ಕನ್ನಡದ ಎಲ್ಲಾ ಮೇರು ನಟರೊಂದಿಗೂ ನಟಿಸಿದ್ದು ಇವರ ಕಾಲ್ ಶೀಟ್ ಗಾಗಿ ತಿಂಗಳುಗಟ್ಟಲೆ ಕಾಯುತ್ತಿದ್ದರು ಎನ್ನುವುದು ವಿಶೇಷ. ಜನವರಿ 12 1966 ರಂದು ಜನಿಸಿದ ಭವ್ಯ ಅವರು ತಮ್ಮ 17 ನೆ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಡುತ್ತಾರೆ. ಇವರು ಮೊದಲು ನಟಿಸಿದ ಚಿತ್ರ ಸಿದ್ದಲಿಂಗಯ್ಯನವರ ನಿರ್ದೇಶನದ ಪ್ರೇಮ ಪರ್ವ ಚಿತ್ರವಾಗಿದ್ದು ಈ ಚಿತ್ರದಲ್ಲಿ ತಮ್ಮ ಅದ್ಭುತ ನಟನೆಯನ್ನು ತೋರಿಸಿದ್ದಾರೆ. ಕಲ್ಲು ವೀಣೆ ನುಡಿಯಿತು, ಬಡ್ಡಿ ಬಂಗಾರಮ್ಮ,ಪ್ರೇಮ ಜ್ಯೋತಿ, ಸ್ವರ್ಗದಲ್ಲಿ ಮದುವೆ ಚಿತ್ರಗಳಲ್ಲಿ ಅಭಿನಯಿಸಿದ ಭವ್ಯ ಅವರು ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರ ‘ಪ್ರಳಯಾಂತಕ’ ಚಿತ್ರದಲ್ಲೂ ನಟಿಸಿದ್ದು, ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಚಿತ್ರವೆಂದರೆ ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ ‘ನೀ ಬರೆದ ಕಾದಂಬರಿ’ ಚಿತ್ರ. ಡಾ.ವಿಷ್ಣುವರ್ಧನ್ ಜೊತೆಗೆ ಕರುಣಾಮಯಿ, ಹೃದಯ ಗೀತೆ, ಮತ್ತೆ ಹಾಡಿತು ಕೋಗಿಲೆ ಮುಂತಾದ ಚಿತ್ರಗಳಲ್ಲಿ ಭವ್ಯ ಅಭಿನಯಿಸಿದ್ದಾರೆ.
ಅನಂತ್ ನಾಗ್, ಅಂಬರೀಶ್, ಶಂಕರ್ ನಾಗ್ ಜೊತೆಗೂ ಭವ್ಯ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಭವ್ಯ ಅವರು ನಾಯಕಿಯಾಗಿ ಮಾತ್ರವೆ ಅಭಿನಯಿಸಿದ್ದಲ್ಲದೆ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದು ನನ್ನ ಪ್ರೀತಿಯ ಹುಡುಗಿ, ಮೊನಾಲಿಸಾ, ಆಟೋ ಶಂಕರ್, ಅಮೃತಧಾರೆ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರ ನಿಭಾಯಿಸಿದ್ದಾರೆ. ಇಷ್ಟೆಲ್ಲಾ ಹಿಟ್ ಚಿತ್ರಗಳೊಂದಿಗೆ ಕನ್ನಡಿಗರ ಮನೆ ಮಾತಾಗಿದ್ದ ನಟಿ ಭವ್ಯ ಅವರು ಸುಮಾರು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದು ಕಣ್ಮರೆ ಆಗಿದ್ದರು. ಹೌದು ಭವ್ಯ ಅವರ ಗಂಡ ಮುಖೇಶ್ ಪಾಟೀಲ್ ಅವರು ಮುಂಬೈನಲ್ಲಿ ಹೋಟೆಲ್ ಉದ್ಯಮಿ ಆಗಿದ್ದು ಕುಟುಂಬದೊಂದಿಗೆ ಭವ್ಯ ಅವರೂ ಸಹ ಮುಂಬೈನಲ್ಲಿಯೇ ವಾಸವಾಗಿದ್ದಾರೆ. ವಯಸ್ಸಾದ ಕಾರಣ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ನಟಿ ಭವ್ಯ ಕಿರುತೆರೆಯ ಧಾರವಾಹಿಗಳಲ್ಲಿ ಅಲ್ಲೊಂದು ಇಲ್ಲೊಂದು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಅಲ್ಲದೇ ಮತ್ತೆ ಧಾರವಾಹಿ ಒಂದರಲ್ಲಿ ನಟಿಸುವುದಾಗಿ ಅಭಿಮಾನಿಗಳಿಗೆ ಹಾಗೂ ಧಾರವಾಹಿ ಪ್ರಿಯರಿಗೆ ಸುದ್ದಿ ಒಂದನ್ನು ನೀಡಿದ್ದಾರೆ ಅಂದಹಾಗೆ ಹಿಂದೆ ಕೂಡ ಇಷ್ಟ ದೇವತೆ ಎನ್ನುವ ಧಾರವಾಹಿಯಲ್ಲಿ ನಟಿಸಿದ್ದರು. ಅದೇ ರೀತಿ ಈಗಲೂ ಸಹ ರವಿ ಬೆಳಗೆರೆ ಅವರ ಪ್ರೇಮ ಕಾದಂಬರಿ ಆದ ಹೇಳಿ ಹೋಗು ಕಾರಣ ಎಂಬ ಕಾವ್ಯ ಕೃತಿಯನ್ನು ಅನಿಲ್ ಕೋರಮಂಗಲ ನಿರ್ದೇಶನದಲ್ಲಿ ದೃಶ್ಯ ರೂಪಕ್ಕೆ ಹೊರ ತರುತ್ತಿದ್ದು ರಕ್ಷಾಗೌಡ ಹಾಗೂ ಸೂರಜ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹೇಳಿ ಹೋಗು ಕಾರಣ ಎನ್ನುವ ಧಾರವಾಹಿಯಲ್ಲಿ ನಟಿ ಭವ್ಯ ಅವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಮತ್ತೆ ಧಾರವಾಹಿಯ ಕಿರುತೆರೆಯ ಪರದೆಯಲ್ಲಿ ಮತ್ತೆ ತಮ್ಮ ಅಭಿನಯ ಛಾಪು ಮೂಡಿಸಲು ಮುಂದಾಗಿದ್ದಾರೆ. ಈ ವಿಚಾರ ಕೇಳಿದ ಭವ್ಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ನಿಮ್ಮ ಪ್ರಕಾರ ನಟಿ ಭವ್ಯ ಅವರು ಕಿರುತೆರೆ ಬರುವುದು ಸರಿನಾ ಅಥವಾ ಅವರು ಬೆಳ್ಳಿ ತೆರೆಯಲ್ಲೇ ಇರಬೇಕಾ ಎಂಬುದನ್ನು ಕಾಮೆಂಟ್ ಮುಖಾಂತರ ತಿಳಿಸಿ.