Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸ್ಯಾಂಡಲ್ ವುಡ್ ನಟ & ನಿರ್ಮಾಪಕ ಗುರುಪ್ರಸಾದ್ ಅವರನ್ನು ಪೋಲಿಸರು ಈಗಷ್ಟೇ ಬಂಧಿಸಿದ್ದಾರೆ. ಕಾರಣವೇನು ಗೊತ್ತಾ.?

Posted on January 13, 2023January 13, 2023 By Kannada Trend News No Comments on ಸ್ಯಾಂಡಲ್ ವುಡ್ ನಟ & ನಿರ್ಮಾಪಕ ಗುರುಪ್ರಸಾದ್ ಅವರನ್ನು ಪೋಲಿಸರು ಈಗಷ್ಟೇ ಬಂಧಿಸಿದ್ದಾರೆ. ಕಾರಣವೇನು ಗೊತ್ತಾ.?

 

ನಿರ್ದೇಶಕ ಗುರುಪ್ರಸಾದ್(Guru Prasad) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಮಠ ಸಿನಿಮಾ ಎಂದ ತಕ್ಷಣ ನಮ್ಮ ಕಣ್ಮುಂದೆ ಬರುವಂತಹ ವ್ಯಕ್ತಿ ಅಂದರೆ ಅದು ನಿರ್ದೇಶಕ ಗುರುಪ್ರಸಾದ್ ಅಂತಾನೆ ಹೇಳಬಹುದು. ಕನ್ನಡದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಅದರಲ್ಲಿಯೂ ಕೂಡ “ಎದ್ದೇಳು ಮಂಜುನಾಥ” ಇವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಸಿನಿಮಾ ಅಂತಾನೆ ಹೇಳಬಹುದು.

ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಹಾಗೂ ಡೈರೆಕ್ಟರ್ ಆಗಿ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಕೇವಲ ಇದಿಷ್ಟು ಮಾತ್ರವಲ್ಲದೆ ಬಿಗ್ ಬಾಸ್ ಸೀಸನ್ ಎರಡರಲ್ಲಿಯೂ ಕೂಡ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಂಡರು. ಇಲ್ಲಿಂದ ಹೊರ ಬಂದ ನಂತರ ಸಣ್ಣಪುಟ್ಟ ಸಿನಿಮಾಗಳಲ್ಲಿ ಕೆಲಸ ಮಾಡಿಕೊಳ್ಳುತ್ತಿದ್ದರು. ಆದರೆ ಅದೃಷ್ಟ ಎಂಬುವುದು ಇವರ ಕೈಹಿಡಿಯಲಿಲ್ಲ ಸಾಕಷ್ಟು ಸಿನಿಮಾಗಳನ್ನು ಮಾಡಿದರು ಅವೆಲ್ಲವೂ ಕೂಡ ಫ್ಲಾಫ್ ಆಯಿತು.

ಒಂದರ ಮೇಲೆ ಮತ್ತೊಂದರಂತೆ ಸೋಲುಗಳನ್ನು ಕಂಡಂತಹ ಗುರುಪ್ರಸಾದ್(Guruprasad) ಅವರು ಸಿನಿಮಾ ರಂಗದಿಂದ ದೂರ ಉಳಿಯುವಂತಹ ಯೋಚನೆ ಮಾಡುತ್ತಾರೆ. ಆದರೂ ಕೂಡ ಚಿತ್ರರಂಗ ಇವರನ್ನು ಕೈ ಬೀಸಿ ಕರೆಯುತ್ತದೆ ತದನಂತರ ಹೊಸ ಸಿನಿಮಾ ಒಂದನ್ನು ನಿರ್ದೇಶನ ಮಾಡುವ ಸಲುವಾಗಿ ಗುರುಪ್ರಸಾದ್ ಬಳಿ ಕೆಲಸ ಮಾಡುತ್ತಿದ್ದಂತಹ ಶ್ರೀನಿವಾಸ್ ಎಂಬ ವ್ಯಕ್ತಿಯ ಬಳಿ ಸುಮಾರು 30 ಲಕ್ಷ ರೂಪಾಯಿಗಳ ಸಾಲವನ್ನು ಪಡೆಯುತ್ತಾರೆ.

ಹಲವು ದಿನಗಳಾದರೂ ಕೂಡ ಗುರುಪ್ರಸಾದ್(Director Guru Prasad) ಅವರು ಶ್ರೀನಿವಾಸ್ ಅವರ ಬಳಿ ಪಡೆದುಕೊಂಡಿದಂತಹ 30 ಲಕ್ಷ ರೂಪಾಯಿ ಹಣವನ್ನು ಹಿಂತಿರುಗಿಸಿ ನೀಡಿಲ್ಲ. ಹಾಗಾಗಿ ಶ್ರೀನಿವಾಸ್ ಗುರು ಪ್ರಸಾದ್ ವಿರುದ್ಧ ನನಗೆ ವಂಚನೆ ಮಾಡಿದ್ದಾರೆ ಅಷ್ಟೇ ಅಲ್ಲದೆ ಹಣವನ್ನು ಕೇಳಿದ್ದಕ್ಕೆ ನನ್ನ ಮೇಲೆ ಸುಳ್ಳು ಕೇಸ್ ದಾಖಲೆ ಮಾಡಿದ್ದಾರೆ ಎಂದು ಶ್ರೀನಿವಾಸ್ ದೂರು ನೀಡಿದ್ದಾರೆ‌. ಈ ಪ್ರಕರಣದ ಹಿನ್ನೆಲೆಯಲ್ಲಿ ಕೋರ್ಟ್ ನಿಂದ ಎನ್.ಬಿ ಡಬ್ಲ್ಯು ಜಾರಿ ಆಗಿತ್ತು. ಎನ್.ಐ ಆಕ್ಟ್ ಅಡಿ ಗುರುಪ್ರಸಾದ್ ವಿರುದ್ದ ಚೆಕ್ ಬೌನ್ಸ್ ಕೇಸ್ ನಲ್ಲಿ ವಾರೆಂಟ್ ಜಾರಿ ಆಗಿತ್ತು.

ಹಾಗಾಗಿ ಗುರುಪ್ರಸಾದ್ ಅವರ ವಿರುದ್ಧ ಚೆಕ್ ಬೌನ್ಸ್ ದೂರನ್ನು ದಾಖಲೆ ಮಾಡಿದ್ದಾರೆ ಶ್ರೀನಿವಾಸ್ ಅವರು ನೀಡಿದಂತಹ ಕಂಪ್ಲೇಂಟ್ ನಾ ಆಧಾರದ ಮೇಲೆ ಗುರುಪ್ರಸಾದ್ ಅವರನ್ನು ಗಿರಿ ನಗರ ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಹಾಜರು ಪಡಿಸುವುದಕ್ಕಿಂತ ಮುಂಚೆ ಅವರಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ ವೈದ್ಯಕೀಯ ಪರೀಕ್ಷೆ ನಡೆದ ನಂತರವಷ್ಟೇ ಗುರುಪ್ರಸಾದ್ ಅವರನ್ನು ಕೋರ್ಟ್ ಗೆ ಹಾಜರುಪಡಿಸಲಾಗುತ್ತದೆ.

ಈ ಸಿನಿಮಾ ರಂಗ ಎಂಬುವುದು ಏಳು ಬೀಳಿನ ಆಟ ಇಲ್ಲಿ ಯಾರು ಬೇಕಾದರೂ ಗೆಲಬಹುದು ಯಾರು ಬೇಕಾದರೂ ಸೋಲಬಹುದು ಅಷ್ಟೇ ಅಲ್ಲದೆ ಈ ದಿನ ಸಿರಿವಂತನಾಗಿದ್ದವನು ಮುಂದೊಂದು ದಿನ ಬೇರೆಯವರ ಮುಂದೆ ಕೈ ಚಾಚುವಂತಹ ಪರಿಸ್ಥಿತಿಯು ಕೂಡ ಏರ್ಪಡಬಹುದು. ಸದ್ಯಕ್ಕೆ ಗುರುಪ್ರಸಾದ್ ಅವರ ಬದುಕಿನಲ್ಲಿಯೂ ಕೂಡ ಇದೇ ಆಗಿರುವುದು ಇದೆ, ಒಂದು ಕಾಲದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಂತಹ ವ್ಯಕ್ತಿ.

ಈಗ ಅದೇ ಸಿನಿಮಗಳಿಂದಲೇ ಸೋಲನ್ನು ಅನುಭವಿಸಿ ಇದೀಗ ಮತ್ತೊಬ್ಬರ ಮುಂದೆ ಕೈ ಚಾಚುವಂತಹ ಪರಿಸ್ಥಿತಿ ಏರ್ಪಟ್ಟಿದೆ. ಇದರ ಎಷ್ಟರ ಮಟ್ಟಿಗೆ ತೀವ್ರತೆ ಎಷ್ಟರ ಮಟ್ಟಿಗೆ ಇದೆ ಎಂದರೆ ತನ್ನ ಕೈ ಕೆಳಗೆ ಕೆಲಸ ಮಾಡುತ್ತಿದ್ದಂತಹ ವ್ಯಕ್ತಿಯ ಬಳಿಯೇ ಹಣವನ್ನು ಪಡೆದಿದ್ದಾರೆ. ಮತ್ತೆ ಆ ಹಣವನ್ನು ಹಿಂತಿರುಗಿಸಲಾಗಿದೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ನಿಜಕ್ಕೂ ಕೂಡ ಇದು ಚಿತ್ರರಂಗಕ್ಕೆ ಒಂದು ಕಪ್ಪು ಚುಕ್ಕಿ ಅಂತಾನೆ ಹೇಳಬಹುದು, ಆದಷ್ಟು ಬೇಗ ಗುರುಪ್ರಸಾದ್ ಅವರು ತಮಗೆ ಬಂದಿರುವಂತಹ ಸಂಕಷ್ಟವನ್ನು ದೂರ ಮಾಡಿಕೊಂಡು ಬಿಡುಗಡೆಯಾಗಲಿ ಎಂಬುವುದಷ್ಟೇ ಅಭಿಮಾನಿಗಳ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

 

Entertainment Tags:Director Guruprasad, Guru Prasad
WhatsApp Group Join Now
Telegram Group Join Now

Post navigation

Previous Post: ಅಣ್ಣವ್ರು ಹೆಸರೇಲಿ ಕೆಲಸವನ್ನು ಬೆದರಿಸಿ ಮಾಡಿಸಿಕೊಳ್ಳುತ್ತಿದ್ರು. ಇದಕ್ಕೆಲ್ಲಾ ಪಾವರ್ತಮ್ಮನವರೇ ಕುಮ್ಮಕ್ಕು ಕೊಡ್ತಿದ್ರು. ಸತ್ಯ ಬಿಚ್ಚಿಟ್ಟ ಹಿರಿಯ ಕಲಾವಿದ
Next Post: ಪ್ರೀತಿಯ ಅಣ್ಣನಿಗೋಸ್ಕರ ಬೈಕ್ ನಲ್ಲಿ ಕ್ರಾಂತಿ ಸಿನಿಮಾ ಪ್ರಮೋಷನ್ ಮಾಡುತ್ತಿರುವ ಅಭಿಷೇಕ್ ಅಂಬರೀಶ್ ವಿಡಿಯೋ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore