Friday, June 9, 2023
HomeEntertainmentಪ್ರೀತಿಯ ಅಣ್ಣನಿಗೋಸ್ಕರ ಬೈಕ್ ನಲ್ಲಿ ಕ್ರಾಂತಿ ಸಿನಿಮಾ ಪ್ರಮೋಷನ್ ಮಾಡುತ್ತಿರುವ ಅಭಿಷೇಕ್ ಅಂಬರೀಶ್ ವಿಡಿಯೋ ನೋಡಿ.

ಪ್ರೀತಿಯ ಅಣ್ಣನಿಗೋಸ್ಕರ ಬೈಕ್ ನಲ್ಲಿ ಕ್ರಾಂತಿ ಸಿನಿಮಾ ಪ್ರಮೋಷನ್ ಮಾಡುತ್ತಿರುವ ಅಭಿಷೇಕ್ ಅಂಬರೀಶ್ ವಿಡಿಯೋ ನೋಡಿ.

 

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ(Kranti Kannada Cinema) ಸಿನಿಮಾ ಇದೇ ತಿಂಗಳ ಜನವರಿ 26ನೇ ತಾರೀಕಿನಂದು ದೇಶಾದ್ಯಂತ ಬಿಡುಗಡೆಯಾಗುತ್ತಿರುವ ವಿಚಾರ ನಿಮಗೆ ತಿಳಿದೇ ಇದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಆದರೂ ಕೂಡ ಸುಮಾರು ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಕ್ರಾಂತಿ ಸಿನಿಮಾದ ಪ್ರಮೋಷನ್ ಗಾಗಿ ದರ್ಶನ್ ಕಳೆದ ಎರಡು ತಿಂಗಳಿನಿಂದ ಸಾಕಷ್ಟು youtube ಚಾನೆಲ್ ಗಳಿಗೆ ಹಾಗೂ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವ ವಿಚಾರ ನಿಮಗೆ ತಿಳಿದೇ ಇದೆ.

ಕೇವಲ ಇದಿಷ್ಟು ಮಾತ್ರವಲ್ಲದೆ ತನ್ನ ಸೆಲೆಬ್ರಿಟಿಗಳು ಇರುವಂತಹ ಜಾಗಕ್ಕೆ ನಟ ದರ್ಶನ್ ಅವರೇ ಕುದ್ದು ಹೋಗಿ ಅವರ ಸಿನಿಮಾ ಸಾಂಗ್ ಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಈಗಾಗಲೇ ಮೈಸೂರಿನ ಕೆಆರ್ ಪೇಟೆಯಲ್ಲಿ ಮೊದಲ ಹಾಡು ಹಾಗೂ ಹೊಸಪೇಟೆಯಲ್ಲಿ ಎರಡನೇ ಹಾಡು ಹುಬ್ಬಳ್ಳಿಯಲ್ಲಿ ಮೂರನೇ ಹಾಡು ಬಿಡುಗಡೆಯಾಗಿದೆ ನಾಲ್ಕನೇ ಹಾಡನ್ನು ತುಮಕೂರಿನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಶಿಕ್ಷಣದ ಬಗ್ಗೆ ಅತ್ಯುತ್ತಮ ಸಿನಿಮಾ ಮಾಡಿರುವಂತಹ ದರ್ಶನ್ ಅವರ ಕ್ರಾಂತಿ ಸಿನಿಮಾದಲ್ಲಿ ಬಹು ತಾರ ಬಳಗವಿದೆ ಹೌದು ನಾಯಕ ನಟಿಯಾಗಿ ರಚಿತಾ ರಾಮ್ ಅವರು ಕಾಣಿಸಿಕೊಂಡರೆ. ದರ್ಶನ್ ಅವರ ತಂದೆಯ ಪಾತ್ರದಲ್ಲಿ ಡಾಕ್ಟರ್ ರವಿಚಂದ್ರನ್ ಹಾಗೂ ಸುಮಲತಾ ಅಂಬರೀಶ್, ಬಿ ಸುರೇಶ್, ರವಿಶಂಕರ್, ಗಿರಿಜಾ ಲೋಕೇಶ್ ಸೇರಿದಂತೆ ಸಾಕಷ್ಟು ಕಲಾವಿದರನ್ನು ಈ ಸಿನಿಮಾದಲ್ಲಿ ನಾವು ಕಾಣಬಹುದಾಗಿದೆ ಇನ್ನು ಕ್ರಾಂತಿ ಸಿನಿಮಾ ಬಿಡುಗಡೆಯಾಗುವುದಕ್ಕಿಂತ ಮುಂಚೆಯೇ ಸಾಕಷ್ಟು ಕಾಂಟ್ರವರ್ಸಿ ಮಾಡಿಕೊಂಡಿರುವ ವಿಚಾರ ನಿಮಗೆ ತಿಳಿದೇ ಇದೆ.

ಆದರೂ ಕೂಡ ದರ್ಶನ್ ಅಭಿಮಾನಿಗಳು ಎಂದಿಗೂ ಅವರ ಕೈ ಬಿಡುವುದಿಲ್ಲ ಇದರ ಜೊತೆಗೆ ದರ್ಶನ್ ಅವರ ದೊಡ್ಡ ಬೆನ್ನೆಲುಬಾಗಿ ನಿಂತಿರುವವರು ಕಲಾವಿದರು. ಹೌದು ಕೇವಲ ಫ್ಯಾನ್ಸ್ ಗಳು ಮಾತ್ರವಲ್ಲದೆ ಇದೀಗ ನಟ ನಟಿಯರು ಕೂಡ ದರ್ಶನ್ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಮಾಡಿದರು.

ಇದಾದ ನಂತರ ಅಭಿಷೇಕ್ ಅಂಬರೀಶ್(Abhishek Ambareesh) ಕೂಡ ತಮ್ಮ ಪ್ರೀತಿಯ ಅಣ್ಣನಿಗಾಗಿ ಕ್ರಾಂತಿ ಸಿನಿಮಾದ ಪೋಸ್ಟರ್ ಅನ್ನು ಅಂಟಿಸಿರುವಂತಹ ಬೈಕ್ ನಲ್ಲಿ ರಾಲಿ ಮಾಡುವ ಮೂಲಕ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯ ಮಾಡುತ್ತಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅಂಬರೀಶ್ ಅವರ ದೊಡ್ಡ ಮಗ ಇದ್ದಂತೆ ಈ ವಿಚಾರವನ್ನು ಸಾಕಷ್ಟು ಬಾರಿ ಸುಮಲತಾ ಅಂಬರೀಶ್ ಅವರು ಕೂಡ ಹೇಳಿಕೊಂಡಿದ್ದಾರೆ. ದರ್ಶನ್ ನನ್ನ ಮೊದಲ ಮಗ ಅಭಿಷೇಕ್ ಎರಡನೇ ಮಗ ಅಂತ ಈ ಕಾರಣಕ್ಕಾಗಿ ಅಭಿಷೇಕ್ ಅಂಬರೀಶ್ ತಮ್ಮ ಪ್ರೀತಿಯ ಅಣ್ಣನಿಗೆ ಬೈಕ್ ನಲ್ಲಿ ರಾಲಿ ಮಾಡುವುದರ ಮೂಲಕ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ.

ಅದೆಷ್ಟೇ ಅಡೆತಡೆಗಳು ಬಂದರೂ ಕೂಡ ಅವೆಲ್ಲವನ್ನು ಮೆಟ್ಟಿ ನಿಂತಿ ಕ್ರಾಂತಿ ಕನ್ನಡದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಅಂತಾನೇ ಹೇಳಬಹುದು. ಸರ್ಕಾರಿ ಶಾಲೆಯ ಮಕ್ಕಳ ದುಸ್ಥಿತಿ ಹಾಗೂ ಶಿಕ್ಷಣ ಆದ ವ್ಯವಸ್ಥೆ ಹಾಗೂ ಹಿಂದಿನ ಕಾಲದಲ್ಲಿ ಶಿಕ್ಷಣ ಇಷ್ಟು ದುಬಾರಿಯಾಗುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕ್ರಾಂತಿ ಸಿನಿಮಾದಲ್ಲಿ ನೀಡಲಾಗಿದೆ. ಹಾಗಾಗಿ ಮುಂದಿನ ಪೀಳಿಗೆಗೆ ಕ್ರಾಂತಿ ಸಿನಿಮಾದಿಂದ ಕಲಿಯುವುದು ಸಾಕಷ್ಟಿದೆ ಎಂಬುವುದು ಚಿತ್ರತಂಡದ ವಾದವಾಗಿದೆ. ಅಭಿಷೇಕ್ ಅಂಬರೀಶ್ ಬೈಕ್ ನಲ್ಲಿ ರಾಲಿ ಮಾಡಿದಂತಹ ವಿಡಿಯೋ ಈ ಕೆಳಗಿದೆ ನೋಡಿ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ.