Sunday, May 28, 2023
HomeEntertainmentಕೋಟಿ ಆಸ್ತಿ ಒಡೆಯ, ಬಹು ಬೇಡಿಕೆ ನಟ ಆದ್ರೂ ಕೂಡ ಹಳ್ಳಿಯ ಪುಟ್ಟ ಮನೆಯಲ್ಲಿ ವಾಸವಾಗಿದ್ದಾರೆ...

ಕೋಟಿ ಆಸ್ತಿ ಒಡೆಯ, ಬಹು ಬೇಡಿಕೆ ನಟ ಆದ್ರೂ ಕೂಡ ಹಳ್ಳಿಯ ಪುಟ್ಟ ಮನೆಯಲ್ಲಿ ವಾಸವಾಗಿದ್ದಾರೆ ನಟ ಕಿಶೋರ್. ಇವರ ಮನೆ ಹೇಗಿದೆ ಅಂತ ಒಮ್ಮೆ ಈ ವಿಡಿಯೋ ನೋಡಿ.!

 

ಕನ್ನಡದಲ್ಲಿ ಪೊಲೀಸ್ ಪಾತ್ರಗಳಲ್ಲಿ ಮಿಂಚಿರುವ ಜೊತೆಗೆ ನಾಯಕ ನಟನಾಗಿ, ಖಳನಾಯಕನಾಗಿ ಹೆಸರುವಾಸಿಗೆ ಪಡೆದಿರುವ ಬೇಸ್ ವಾಯ್ಸ್ ನಟ ಕಿಶೋರ್. ನಟ ಕಿಶೋರ್ ಅವರು ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಯ ಚಿತ್ರಗಳಲ್ಲೂ ಕೂಡ ನಟಿಸಿದ್ದಾರೆ. ಹಾಗೆ ಎಲ್ಲಾ ಚಿತ್ರರಂದಲ್ಲೂ ಕೂಡ ಅವರ ನಟನೆಗೆ ಬಹಳ ಬೇಡಿಕೆ ಇದೆ. ಇತ್ತೀಚಿಗೆ ತೆರೆ ಕಂಡ ಕನ್ನಡದ ಪ್ಯಾನ್ ಇಂಡಿಯ ಮೂವಿ ಕಾಂತಾರ ಆದ ಮೇಲಂತೂ ಈಗ ದೇಶದಾದ್ಯಂತ ಇವರ ಖ್ಯಾತಿ ಇಮ್ಮಡಿಗೊಂಡಿದೆ.

ಕಾಂತರಾ ಸಿನಿಮಾದಲ್ಲಿ ಇವರು ನಿರ್ವಹಿಸಿರುವ ಆ ಪಾತ್ರವನ್ನು ಮತ್ಯಾವ ನಟನಿಂದಲೂ ಅಷ್ಟು ಜೀವಂತಿಕೆ ತುಂಬಿ ನೈಜವಾಗಿ ಅಭಿನಯಿಸಲು ಅಸಾಧ್ಯ ಎಂದೇ ಸಿನಿಮಾ ನೋಡಿದವರೆಲ್ಲರ ಅಭಿಪ್ರಾಯ. ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದ ಇವರ ಆ ಪಾತ್ರದಲ್ಲಿನ ಸಹಜತೆಗೆ ಕಾರಣ ಅವರ ನಿಜವಾದ ವ್ಯಕ್ತಿತ್ವ ಅಂದರೆ ತಪ್ಪಾಗಲಾರದು. ಕಾರಣ ನಿಜ ಜೀವನದಲ್ಲೂ ಇವರು ಬೆಟ್ಟ-ಗುಡ್ಡ, ಕಾಡು-ಮೇಡುಗಳನ್ನು ಪ್ರೀತಿಸುವ ಪ್ರಕೃತಿ ಪ್ರೇಮಿ ಆಗಿದ್ದರೆ.

ನಟ ಕಿಶೋರ್ ಅವರ ದುಡಿಮೆಗೆ ಅವರು ಬೆಂಗಳೂರು ನಗರದ ಪ್ರತಿಷ್ಠಿತ ಏರಿಯಾದಲ್ಲಿ ಐಷಾರಾಮಿ ಬದುಕು ಕಳೆಯಬಹುದಿತ್ತು ಆದರೆ ನಟ ಕಿಶೋರ್ ಹಾಗೂ ಅವರ ಪತ್ನಿಗಿರುವ ನಿಸರ್ಗದ ಬಗೆಗಿನ ಒಲವು ಅವರು ಕಾಡಿನ ಮಧ್ಯೆ ಜೀವನ ಕಟ್ಟಿಕೊಳ್ಳುವಂತೆ ಪ್ರೇರೇಪಿಸಿದೆ. ನಟನಾಗಿ ಅಲ್ಲದೆ ಈ ಮಣ್ಣಿನ ಮಗನ ಆ ವ್ಯಕ್ತಿತ್ವ ನಾವೆಲ್ಲ ಪಾಲಿಸಿದಷ್ಟು ಆದರ್ಶವಾಗಿದೆ. ಓದಿದ್ದು ಸಿಎ ಆದರೂ ಕಿಶೋರ್ ಅವರು ಸಿನಿಮಾ ಕಡೆ ಬಂದ ಕಥೆಯೇ ರೋಚಕ, ಸಿನಿಮಾ ಕಲಾವಿದನಾಗಿದ್ದರು ಅವರು ಈಗ ಬದುಕುತ್ತಿರುವ ಈ ಬದುಕು ಅದಕ್ಕಿಂತಲೂ ಮೋಹಕ.

ಯಾಕೆಂದರೆ ನಟ ಕಿಶೋರ್ ಅವರು ಕೋಟಿ ಕೋಟಿ ಆಸ್ತಿಯ ಮಾಲೀಕನಾಗಿದ್ದರೆ ಜೊತೆಗೆ ಇವರ ಪತ್ನಿ ವಿಶಾಲಾಕ್ಷಿ ಕೂಡ ತಿಂಗಳಿಗೆ 3 ಲಕ್ಷ ದುಡಿಯುವ ದೊಡ್ಡ ಕೆಲಸದಲ್ಲಿದ್ದರು. ಆದರೆ ಎಲ್ಲವನ್ನು ಬಿಟ್ಟು ಕಾಡಿನಲ್ಲಿ ಮನೆ ಕಟ್ಟಿಕೊಂಡು ಸರಳವಾಗಿ ಜೀವಿಸುತ್ತಿದ್ದಾರೆ. ಕಾಡಿನ ಸಮೀಪ ಇರುವ ಹಳ್ಳಿ ಒಂದರಲ್ಲಿ ತಮ್ಮ ಇಚ್ಛೆಯಂತೆ ಕಾಡು ಬೆಟ್ಟ ನೀರು ಹಳ್ಳಕೊಳ್ಳ ಇರುವ ಪ್ರದೇಶದಲ್ಲಿ ಜಮೀನು ಖರೀದಿಸಿ ಕೃಷಿ ಮಾಡುತ್ತಾ ಅಕ್ಷರಶಃ ಆರ್ಗೆನಿಕ್ ಜೀವನವನ್ನು ನಡೆಸುತ್ತಿದ್ದಾರೆ.

ಅಲ್ಲದೆ ಇವರಿಬ್ಬರು ಮಕ್ಕಳು ಕೂಡ ಇವರೊಂದಿಗೆ ಅದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಣ್ಣಿನಿಂದ ಮಾಡಿದ ಹೆಂಚಿನ ಮನೆ ನಿರ್ಮಿಸಿಕೊಂಡಿರುವ ಅವರ ಮನೆಯ ಸೊಬಗು ಯಾವುದೇ ಅರಮನೆಗಿಂತ ಕಡಿಮೆ ಇಲ್ಲ. ಯಾಕೆಂದರೆ ತಮ್ಮ ಜೊತೆ ಸಾಧ್ಯವಾದಷ್ಟು ಎಲ್ಲಾ ಪ್ರಾಣಿಗಳನ್ನು ಸಾಕಬೇಕು ಎಂದು ಆಸೆ ಹೊಂದಿರುವ ಇವರು ದೊಡ್ಡದಾಗಿ ಮನೆ ನಿರ್ಮಿಸಿದ್ದಾರೆ. ಅಲ್ಲಿ ಪ್ರತ್ಯೇಕವಾಗಿ ಸಾಕುವ ಪ್ರಾಣಿಗಳಿಗೂ ಕೂಡ ಜಾಗ ಮಾಡಿ ಕೊಟ್ಟಿದ್ದಾರೆ.

ಇದರ ಅಡಿಗೆ ಮನೆಯಲ್ಲಂತೂ ಪ್ಲಾಸ್ಟಿಕ್ ವಸ್ತು ಸಿಗುವುದಿಲ್ಲ ಎಂದೇ ಹೇಳಬಹುದು. ನಮ್ಮ ಮೂರು ತಲೆಮಾರಿನ ಹಿಂದಿನ ಮಂದಿ ಹೇಗೆ ಬದುಕುತ್ತಿದ್ದರು ಹಾಗೆ ಮರಗಳಿಂದ ಮಾಡಿದ ಅಡುಗೆ ಸಲಕರಣೆಗಳು ಹಾಗೂ ಮಣ್ಣಿಂದ ಮಾಡಿದ ಮಡಿಕೆಗಳು ಇವರ ಅಡಿಗೆ ಮನೆಯನ್ನು ಅಲಂಕರಿಸಿವೆ. ಇವರ ಮನೆ ತುಂಬಾ ಅವರೇ ಬೆಳೆದ ತರಕಾರಿಗಳಿವೆ, ಕ್ಯಾರೆಟ್ ಕ್ಯಾಪ್ಸಿಕಮ್ ಇಂದ ಹಿಡಿದು ಟೊಮೇಟೊ ನಿಂಬೆಹಣ್ಣಿನವರೆಗೆ, ಸೊಪ್ಪು ತರಕಾರಿಗಳವರೆಗೆ ಜೊತೆಗೆ ಸೀಬೆ ನೆರಳೆಯಿಂದ ಡ್ರೈ ಫ್ರೂಟ್ ತನಕ ಜೊತೆಗೆ ರೇಷ್ಮೆಯನ್ನು ಕೂಡ ಇವರೇ ಅವರ ಜಮೀನಿನಲ್ಲಿ ಬೆಳೆಯುತ್ತಿದ್ದಾರೆ.

ಸಿನಿಮಾ ಇಲ್ಲ ಎಂದರೆ ಕಿಶೋರ್ ಅವರು ಕಾಣಿಸಿಕೊಳ್ಳುವುದು ಅವರ ಜಮೀನಿನಲ್ಲೇ. ಪ್ರೈವೇಟ್ ಜೆಟ್ ಖರೀದಿಸಿ ದೇಶವೆಲ್ಲ ಸುತ್ತಾಡುವಷ್ಟು ಸೌಕರ್ಯ ಹೊಂದಿರುವ ಕಿಶೋರ್ ಅವರು ಬಿಡುವಿದ್ದಾಗೆಲ್ಲಾ ಹೊಲದಲ್ಲಿ ಇಳಿದು ಕೆಲಸಮಾಡುವಷ್ಟು ಸರಳತೆ ರೂಡಿಸಿಕೊಂಡಿದ್ದಾರೆ. ಅವರ ಈ ಅಪರೂಪದ ವಿಡಿಯೋವನ್ನು ನೋಡಿದರೆ ನಿಮಗೆ ಅವರ ಲೈಫ್ ಸ್ಟೈಲ್ ಬಗ್ಗೆ ತಿಳಿಯುತ್ತದೆ.