ಲೀಲಾವತಿ ಅವರು ಕನ್ನಡದ ಹೆಸರಾಂತ ಹಿರಿಯ ಕಲಾವಿದೆ. ಕನ್ನಡ ಚಿತ್ರರಂಗ ಇಂದು ಎಷ್ಟೇ ಅಂತರಾಷ್ಟ್ರೀಯ ಮಟ್ಟಕ್ಕೆ ಹೆಸರು ಮಾಡಿದರು ಅದಕ್ಕೆ ಭದ್ರ ಬುನಾದಿ ಹಾಕಿದ ಕಲಾವಿದರಲ್ಲಿ ಲೀಲಾವತಿ ಅವರ ಹೆಸರು ಕೂಡ ಸೇರುತ್ತದೆ ಎಂದರೆ ಆ ಮಾತು ತಪ್ಪಾಗುವುದಿಲ್ಲ. ನಾಟಕಗಳಲ್ಲಿ ಕಪ್ಪು ಬಿಳುಪು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಇವರು ಸುಮಾರು ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ತನ್ನ ವೃತ್ತಿ ಜೀವನದ ಉದ್ದಕ್ಕೂ ಸಿನಿಮಾದ ನಾಯಕಿ ಮಹಾರಾಣಿ, ಬಜಾರಿ ಅತ್ತೆ, ಮುಗ್ಧ ಸೊಸೆ, ಪ್ರೀತಿಯ ಮಡದಿ, ಖಳನಾಯಕಿ, ತಾಯಿ ಹೀಗೆ ನಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಇವರು ಮದುವೆ ಆದ ಬಳಿಕ ಅನುಭವಿಸಿದ ಸಮಸ್ಯೆಗಳು ಹಾಗೂ ಅದರಲ್ಲೂ ಮಗ ವಿನೋದ್ ರಾಜಕುಮಾರ್ ಅವರು ಜನಿಸಿದ ಬಳಿಕ ಕಂಡ ಕಷ್ಟಗಳ ಬಗ್ಗೆ ರವಿ ಬೆಳಗೆರೆ ಅವರು ಬರೆದಿರುವ ರಾಜ್ ಲೀಲಾ ವಿನೋದ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.
ಈ ಪುಸ್ತಕವು ಬಿಡುಗಡೆ ಆದ ಮೇಲೆ ವಿವಾದದಲ್ಲಿ ಸಿಲುಕಿಕೊಂಡಿತ್ತು ಅಲ್ಲದೆ ಈ ಪುಸ್ತಕದ ಮುಖ ಪುಟದಲ್ಲಿ ಇದ್ದ ರಾಜ್ ಲೀಲಾವತಿ ಮತ್ತು ವಿನೋದ್ ರಾಜ್ ಅವರ ಫೋಟೋ ಇಂದ ಬಹಳ ಕುತೂಹಲ ಉಂಟು ಮಾಡಿ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಹೊಂದಿತ್ತು. ಈ ಪುಸ್ತಕದಲ್ಲಿ ರಾಜ್ ಕುಮಾರ್ ಅವರ ಜೀವನದ ಕುರಿತು ಮತ್ತು ಅವರ ಸಂಬಂಧದ ಹಲವು ವಿಷಯಗಳನ್ನು ಬರೆಯಲಾಗಿದೆ.
ಈ ಪುಸ್ತಕಕ್ಕೆ ಮಾಹಿತಿಯನ್ನು ಸ್ವತಃ ಲೀಲಾವತಿ ಅವರೇ ಕೊಟ್ಟಿದ್ದು ಅವರು ಹೇಳಿದ್ದ ವಿಷಯವನ್ನು ಅದೇ ರೀತಿ ಅಚ್ಚಿಳಿಸಲಾಗಿದೆ ಯಾವುದೇ ವಿಷಯವನ್ನು ಕೂಡ ಮುಚ್ಚಿಡಿದ ಇವರು ಒಮ್ಮೆ ಸಾ.ಯು.ವ ಬಗ್ಗೆ ನಿರ್ಧಾರ ಮಾಡಿದ ವಿಷಯವನ್ನು ಕೂಡ ಅದರಲ್ಲಿ ಹೇಳಿಕೊಂಡಿದ್ದಾರೆ. ವಿನೋದ್ ರಾಜಕುಮಾರ್ ಅವರು ಹೊಟ್ಟೆಯಲ್ಲಿರುವಾಗ ಲೀಲಾವತಿ ಅವರಿಗೆ ಅವಕಾಶಗಳು ಹೆಚ್ಚಾಗಿ ಸಿಗುತ್ತಿರಲಿಲ್ಲವಂತೆ.
ಅಲ್ಲದೆ ಗರ್ಭಿಣಿ ಆಗಿದ್ದ ಅವರಿಗೆ ಆ ಸಮಯದಲ್ಲಿ ಅವರು ಹಣಕಾಸಿನ ಸಮಸ್ಯೆಯನ್ನು ಕೂಡ ಅನುಭವಿಸಿದ್ದಾರಂತೆ. ಎಷ್ಟರ ಮಟ್ಟಿಗೆ ಎಂದರೆ ಕೋಳಿ ಮೊಟ್ಟೆಯನ್ನು ತಿನ್ನಲು ಹಣ ಇಲ್ಲದ ಕಾರಣ ಬಯಕೆ ಆದ ಕೋಳಿಮೊಟ್ಟೆ ತಿನ್ನುವ ಆಸೆಯನ್ನು ಈಡೇರಿಸಿಕೊಳ್ಳಲು ಕಡಿಮೆ ಬೆಲೆಗೆ ಸಿಗುವ ಬಾತುಕೋಳಿ ಮೊಟ್ಟೆಯನ್ನು ತಿಂದಿದ್ದಾರಂತೆ. ಮಗು ಚಿಕ್ಕವರಾಗಿದ್ದಾಗ ಮನೆ ಕೆಲಸದವರು ಕೂಡ ಕೆಲಸ ಬಿಟ್ಟು ಹೋದರಂತೆ.
ಮನೆಯನ್ನು ನಡೆಸಲು ತೀರ ಹಣಕಾಸಿನ ಅಭಾವ ಉಂಟಾದ ಸಂದರ್ಭದಲ್ಲಿ ಒಂದು ಸಮಯದಲ್ಲಿ ಮಗುವನ್ನು ಸಾ.ಯಿ.ಸಿ ತಾವು ಕೂಡ ಸಾ.ಯು.ವ ನಿರ್ಧಾರವನ್ನು ಮಾಡಿದ್ದರಂತೆ. ಒಂದು ದಿನ ವಿನೋದ್ ರಾಜಕುಮಾರ್ ಅವರನ್ನು ತೊಟ್ಟಿಲಿನಲ್ಲಿ ಹಾಕಿ ಜೋರಾಗಿ ತೂಗುತ್ತಿದ್ದರಂತೆ. ಅಳುತ್ತಿದ್ದ ವಿನೋದ್ ರಾಜ್ ಅವರು ತಕ್ಷಣ ಸುಮ್ಮನಾಗಿ ಅವರನ್ನೇ ದಿಟ್ಟಿಸಿ ನೋಡುತ್ತಿದ್ದರಂತೆ.
ಆಗ ಅವರು ತಮ್ಮ ಸಾ.ಯು.ವ ನಿರ್ಧಾರವನ್ನು ಕೈ ಬಿಟ್ಟು ಜೀವನದಲ್ಲಿ ಏನೇ ಸಮಸ್ಯೆ ಬಂದರೂ ಛಲದಿಂದ ಬದುಕುತ್ತೇನೆ ನಿನ್ನನ್ನು ಸಹ ಅದೇ ರೀತಿ ಬೆಳೆಸುತ್ತೇನೆ ಎಂದು ದೊಡ್ಡ ನಿರ್ಧಾರ ಮಾಡಿ ಮತ್ತೆ ಚಿತ್ರ ರಂಗಕ್ಕೆ ಮರಳುವ ನಿರ್ಧಾರ ಮಾಡಿದರಂತೆ. ಈಗ ಚಿತ್ರರಂಗದ ಸಹವಾಸವೇ ಬೇಡ ಎಂದು ಅಮ್ಮ ಮಗ ಇಬ್ಬರೂ ಕೂಡ ಕೃಷಿ ಮಾಡುವ ನಿರ್ಧಾರ ಮಾಡಿ ನೆಲಮಂಗಲ ಸಮೀಪ ಜಮೀನು ಖರೀದಿಸಿ ಕೃಷಿ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಈ ಪುಸ್ತಕದಲ್ಲಿ ಇವರ ಬದುಕಿನ ಕುರಿತು ಹಲವು ಮಾಹಿತಿ ಇದ್ದು ರಾಜ್ ಲೀಲಾ ಮತ್ತು ವಿನೋದರ ಕುರಿತ ಹಲವು ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ.