Friday, June 9, 2023
HomeEntertainmentತುಳು ಜನರು ಹೆಣ್ಣಿಗೆ ಬಹಳಷ್ಟು ಗೌರವ ನೀಡ್ತಾರೆ. ಅವತ್ತು ಬೆಡ್ ರೂಂ ನಲ್ಲಿ ಸಾನ್ಯಾ ಜೊತೆ...

ತುಳು ಜನರು ಹೆಣ್ಣಿಗೆ ಬಹಳಷ್ಟು ಗೌರವ ನೀಡ್ತಾರೆ. ಅವತ್ತು ಬೆಡ್ ರೂಂ ನಲ್ಲಿ ಸಾನ್ಯಾ ಜೊತೆ ಆದ ಘಟನೆ ಹೇಳ್ತಿನಿ ಕೇಳಿ ಆಮೇಲೆ ನಿರ್ಧಾರ ಮಾಡಿ ನಾನು ಮಾಡಿದ್ದು ತಪ್ಪ ಅಥವಾ ಸರಿ ನಾ ಅಂತ.

 

ರೂಪೇಶ್ ಶೆಟ್ಟಿ ಅವರು ಈ ವರ್ಷದ ಬಿಗ್ ಬಾಸ್ ಕಾರ್ಯಕ್ರಮದ ವಿನ್ನರ್ ಹಾಕಿ ಹೊರಬಂದಿದ್ದಾರೆ. ಇವರು ಓಟಿಟಿಗೆ ಪ್ರವೇಶ ಪಡೆದ ದಿನದಿಂದಲೇ ಹಲವಾರು ಜನರು ಇವರೇ ವಿನ್ನರ್ ಆಗುತ್ತಾರೆ ಎಂದು ಊಹಿಸಿದ್ದರು. ಎಲ್ಲರ ನಿರೀಕ್ಷೆಯಂತೆ ತಮ್ಮ ಅತ್ಯುತ್ತಮ ವ್ಯಕ್ತಿತ್ವ ಹಾಗೂ ಉತ್ತಮ ಆಟದಿಂದ ರೂಪೇಶ್ ಶೆಟ್ಟಿ ಅವರು ವಿನ್ ಆಗಿದ್ದಾರೆ. ಗೆದ್ದು ಬಂದ ಬಳಿಕ ಹಲವು ಸಂದರ್ಶನಗಳಲ್ಲೂ ಭಾಗಿಯಾಗುತ್ತಿದ್ದಾರೆ.

ಈ ಸಂದರ್ಶನದಲ್ಲಿ ಬಿಗ್ ಬಾಸ್ ದಿನದ ಕ್ಷಣಗಳ ಕುರಿತು, ಅಲ್ಲಿ ಆದ ಫ್ರೆಂಡ್ಶಿಪ್ ಪ್ರೀತಿ ಜಗಳ ನೋವು ನಲಿವು ಆಟ ಎಲ್ಲದರ ಕುರಿತು ಮಾತನಾಡಿದ್ದಾರೆ. ಜೊತೆಗೆ ಎಲ್ಲರ ಕೋಪಕ್ಕೆ ಗುರಿ ಆಗಿದ್ದ ಕ್ಯಾಪ್ಟನ್ ಬೆಡ್ರೂಮ್ ವಿಷಯದ ಬಗ್ಗೆ ಸ್ಪಷ್ಟತೆ ಕೂಡ ಕೊಟ್ಟಿದ್ದಾರೆ. ಒಟಿಟಿ ಶೋ ಮುಗಿದ ಬಳಿಕ ಬಿಗ್ ಮನೆ ಬಿಗ್ಬಾಸ್ ಗೆ ಹೋದ ಮೂರನೇ ವಾರದಲ್ಲಿ ಕ್ಯಾಪ್ಟನ್ ರೂಮ್ ಅನ್ನು ಆರ್ಯವರ್ಧನ್ ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅವರು ಬಳಸಿಕೊಂಡಿದ್ದರು.

ಕ್ಯಾಪ್ಟನ್ ಬೆಡ್ ಮೇಲೆ ಮಲಗಿ ಮೂರು ಜನ ಮಾತನಾಡುತ್ತಿದ್ದರು. ಆದರೆ ಈ ರೀತಿ ಕ್ಯಾಪ್ಟನ್ ರೂಮ್ ಅನ್ನು ಟಾಸ್ಕ್ ನಡೆದ ವೇಳೆ ಬೇರೆ ಬಾತ್ ರೂಮ್ಗಳನ್ನು ಮುಚ್ಚಿದಾಗ ಮಾತ್ರ ಬಳಸಬೇಕಾಗಿತ್ತು. ಆದರೆ ಎಲ್ಲವೂ ಮುಗಿದ ಬಳಿಕ ಕ್ಯಾಪ್ಟನ್ ರೂಮ್ ಇಂದ ಆಚೆ ಬರದೇ ಅಲ್ಲೇ ಮೂರು ಜನ ಇದ್ದದ್ದನ್ನು ಕಂಡು ಸುದೀಪ್ ಕೋಪಗೊಂಡಿದ್ದರು. ಅದರ ಬಗ್ಗೆ ಬಹಳ ಖಾರವಾಗಿ ಆ ವಾರದ ಪಂಚಾಯಿತಿ ಕಟ್ಟೆಯಲ್ಲಿ ಮೂರು ಜನರನ್ನು ತರಾಟೆಗೂ ತೆಗೆದುಕೊಂಡಿದ್ದರು.

ಆ ಸಂದರ್ಭದಲ್ಲಿ ರೂಪೇಶ್ ಶೆಟ್ಟಿ ಅವರು ಕಣ್ಣೀರು ಕೂಡ ಹಾಕಿದ್ದರು ಆ ದಿನ ಆ ಘಟನೆ ನಡೆದಾಗ ನನ್ನ ಬಗ್ಗೆ ಏನು ಅಭಿಪ್ರಾಯ ಹೊರ ಬರುತ್ತಿದೆ ನಾನು ಎಲ್ಲ ತಪ್ಪು ಮಾಡಿದೆ ಎನ್ನುವ ಭಯ ಕಾಡುತ್ತಿತ್ತು. ತುಳು ಜನರು ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಎಷ್ಟು ಬೆಲೆ ಕೊಡ್ತಾರೆ ಅಂತ ಎಲ್ಲರಿಗೆ ತಿಳಿದಿದೆ. ಅದೇ ರೀತಿ ಹೆಣ್ಣು ಮಕ್ಕಳಿಗೂ ಗೌರವ ಕೊಡುತ್ತಾರೆ ಅಂದು ಸುದೀಪ್ ಅವರು ಹೇಳಿದ ಆ ಮಾತುಗಳನ್ನು ಕೇಳಿ ನಾನು ಹೊರಗೆ ಹೇಗೆ ಬಿಂಬಿತವಾಗುತ್ತಿದ್ದೇನೆ.

ಇಷ್ಟು ದಿನದ ನನ್ನ ವ್ಯಕ್ತಿತ್ವಕ್ಕೆ ಇದು ಕಪ್ಪು ಚುಕ್ಕೆ ಆಗುತ್ತದೆಯೇ ಎನ್ನುವ ಭಯ ಕಾಡಿತ್ತು. ಅದೇ ಬೇಸರದಲ್ಲಿ ಮನೆಯಿಂದ ಹೊರ ಹೋಗುವ ನಿರ್ಧಾರ ಕೂಡ ಮಾಡಿದ್ದೆ. ಆದರೆ ಸುದೀಪ್ ಅವರು ನನಗೆ ಎಲ್ಲವನ್ನು ವಿವರಿಸಿ ಸಮಾಧಾನ ಪಡಿಸಿದರು. ಅಂದು ಅವರು ನನ್ನನ್ನು ಎಚ್ಚರಿಸಿದ್ದರು ಅಷ್ಟೇ ಆ ಘಟನೆ ಆದ ಬಳಿಕ ಆ ರೀತಿ ಎಲ್ಲೂ ಮತ್ತೆ ಮುಂದುವರೆದಂತೆ ನಾನು ನಡೆದುಕೊಂಡೆ.

ಬಿಗ್ ಬಾಸ್ ಮನೆಗೆ ಹೋದಾಗ ಎರಡು ಮೂರು ವಾರಗಳ ಕಾಲ ಮನೆಯ ಕ್ಯಾಮರಗಳ ಕುರಿತು ಕಾನ್ಶಿಯಸ್ ಆಗಿರುತ್ತೇವೆ. ಬಳಿಕ ಮನೆಯಲ್ಲಿ ಹೆಚ್ಚು ದಿನ ಕಳೆಯುತ್ತಿದ್ದಂತೆ ಕ್ಯಾಮರಾ ಇರುವುದನ್ನೇ ನಾವು ಮರೆತು ಬಿಡುತ್ತೇವೆ ಹಾಗೂ ಹೊರಗಡೆ ಜನರು ನಮ್ಮನ್ನು ನೋಡುತ್ತಿದ್ದಾರೆ ಎನ್ನುವುದು ಸಹ ಮರೆತು ಹೋಗುತ್ತದೆ. ಸಾನಿಯಾ ನನ್ನ ಬೆಸ್ಟ್ ಫ್ರೆಂಡ್ ಆಗಿದ್ದರಿಂದ ಅಷ್ಟು ಸಲಿಗೆ ನಮ್ಮ ನಡುವೆ ಇದ್ದಿದ್ದರಿಂದ ಆ ರೀತಿ ನಡೆದುಕೊಂಡೆ ಅಷ್ಟೇ ಎಂದಿದ್ದಾರೆ. ಆ ಸೀನ್ ನೋಡಿ ದಯವಿಟ್ಟು ನಮ್ಮ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಬೇಡಿ ಎಂದು ರೂಪೇಶ್ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ