ನಟ ವಿಷ್ಣುವರ್ಧನ್ (Actor Vishnuvardhan) ಅವರು ಅಭಿನವ ಸಂತನಂತೆ ಬದುಕಿ ದುರಂತ ನಾಯಕನಾಗಿ ಅಂತ್ಯ ಕಂಡವರು. ವಿಷ್ಣುವರ್ಧನ್ ಅವರನ್ನು ನಮ್ಮ ಚಿತ್ರರಂಗ ಆಗಲಿ ಸರ್ಕಾರ ಆಗಲಿ ಸರಿಯಾಗಿ ಗುರುತಿಸಲಿಲ್ಲ ಎನ್ನುವ ನೋವು ಪ್ರತಿ ಕನ್ನಡಿಗರ ಮನದಲ್ಲೂ ಇದೆ. ಆದರೆ ವಿಷ್ಣುವರ್ಧನ್ ಅವರ ಸರಳ ವ್ಯಕ್ತಿತ್ವ ಎಂದೂ ಇದನ್ನೆಲ್ಲಾ ಬಯಸಿಯೇ ಇರಲಿಲ್ಲ. ಬದುಕಿನ ಉದ್ದಕ್ಕೂ ನೂರಾರು ನೋವುಗಳನ್ನು ತಿಂದುಕೊಂಡು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕು ಮುಗಿಸಿಬಿಟ್ಟರು ಇವರು.
ವಿಷ್ಣುವರ್ಧನ್ ಅವರನ್ನು ಯಾರು ಗುರುತಿಸದೆ ಇದ್ದರೂ ಅವರ ಹತ್ತಿರದ ಬಳಗದವರು ಮತ್ತು ಅವರ ಅಪ್ಪಟ ಅಭಿಮಾನಿಗಳು ದೇವರ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದಾರೆ, ಅವರ ಆದರ್ಶಗಳನ್ನು ಅದೇ ರೀತಿ ಪಾಲಿಸುತ್ತಿದ್ದಾರೆ. ಈ ಮೂಲಕ ವಿಷ್ಣು ಅವರೆಲ್ಲರ ಮನದಲ್ಲಿ ಸದಾ ಅಮರ ವಿಷ್ಣುವರ್ಧನ್ ಅವರು ಬಹುತೇಕ ಕನ್ನಡ ಚಿತ್ರರಂಗದೊಂದಿಗೂ ಉತ್ತಮವಾದ ಸ್ನೇಹ ಬಾಂಧವ್ಯವನ್ನು ಹೊಂದಿದ್ದರು. ಪ್ರತಿಯೊಬ್ಬರ ಜೊತೆಗೂ ಕೂಡ ವಿಶ್ವಾಸದಿಂದ ಬೆರೆಯುತ್ತಿದ್ದರು.
ಆದರೆ ಅವರ ಆಪ್ತ ವಲಯ ಒಂದಿತ್ತು. ಅದರಲ್ಲಿ ಅಂಬರೀಶ್, ಅಭಿಜಿತ್, ರಮೇಶ್ ಭಟ್, ಅವಿನಾಶ್, ರಮೇಶ್ ಅರವಿಂದ್, ತಾರಾ ಅನುರಾಧ ಇನ್ನು ಕೆಲವು ಕಲಾವಿದರು ಇದ್ದರು. ಅವರ ಜೊತೆಗೆ ಕುಟುಂಬದವಂಥ ಒಡನಾಟ ವಿಷ್ಣುವರ್ಧನ್ ಅವರಿಗೆ ಇತ್ತು. ಎಷ್ಟೋ ಬಾರಿ ಅವರ ಕುಟುಂಬದ ಸಮಸ್ಯೆಗಳನ್ನು ತನ್ನ ಸಮಸ್ಯೆಯಂತೆ ಬಗೆಹರಿಸಿದ್ದಾರೆ ಸಾಹಸ ಸಿಂಹ. ಇಂಥವರಲ್ಲಿ ಅವಿನಾಶ್ (Avinash) ಅವರ ಬದುಕಿನಲ್ಲಾದ ಘಟನೆಯನ್ನು ಸ್ವತಃ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅದೇನೆಂದರೆ ಅವಿನಾಶ್ ಅವರು ಮಾಳ್ವಿಕಾ (Malvika) ಅವರನ್ನು ಬಹಳ ಪ್ರೀತಿಸುತ್ತಿದ್ದರು, ಆದರೆ ಅವಿನಾಶ್ ಅವರಿಗೆ ತಂದೆ ತಾಯಿ ಇಲ್ಲದ ಕಾರಣ ಮಾಳ್ವಿಕ ಮನೆಯಲ್ಲಿ ಮದುವೆ ಮಾಡಿಕೊಡಲು ಹಿಂದೆ ಮುಂದೆ ನೋಡುತ್ತಿದ್ದರು. ಅಂತಹ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರೇ ಅವಿನಾಶ್ ಅವರ ಪರವಾಗಿ ಮಾಳವಿಕಾ ಅವರ ಮನೆಗೆ ಹೋಗಿ ಮಾತನಾಡಿ ಅವನಿಗೆ ಯಾರಿಲ್ಲದಿದ್ದರೂ ನಾನಿದ್ದೇನೆ ನನ್ನನ್ನು ನಂಬಿ ನಿಮ್ಮ ಮಗಳನ್ನು ಧಾರೆ ಎರೆದು ಕೊಡಿ ಎಂದು ಹೇಳಿದ್ದರು.
ಮತ್ತು ಹೀಗೆ ಎಲ್ಲರ ಮನೆಯಂತೆ ಅವರ ಸಂಸಾರದಲ್ಲೂ ಕಲಹ ಬಂದು ಅವಿನಾಶ್ ಅವರು ಬೇಸರದಲ್ಲಿದ್ದಾಗ ಅದನ್ನು ಗಮನಿಸಿ ವಿಷ್ಣುವರ್ಧನ್ ಅವರೇ ಮಾಳ್ವಿಕಾ ಅವರನ್ನು ಕರೆಸಿ, ಇಬ್ಬರಿಗೂ ಸಂಧಾನ ಮಾಡಿ ಬುದ್ಧಿ ಹೇಳಿದ್ದರು. ಅದೇ ಕೊನೆ ವಿಷ್ಣುವರ್ಧನ್ ಅವರ ಮಾತಿಗೆ ಬೆಲೆ ಕೊಟ್ಟು ಮತ್ತೆಂದೂ ಭಿನ್ನಾಭಿಪ್ರಾಯಕ್ಕೆ ಎಡೆ ಮಾಡಿಕೊಡದೆ ಆದರ್ಶ ದಂಪತಿಗಳಂತೆ ಒಟ್ಟಿಗೆ ಬದುಕುತ್ತಿದ್ದಾರೆ ಅವಿನಾಶ್ ಹಾಗೂ ಮಾಳ್ವಿಕಾ.
ಈ ದಂಪತಿಗಳು ಮನೆ ಕಟ್ಟಿಸಬೇಕು ಎಂದು ಭೂಮಿ ಪೂಜೆ ಮಾಡಿಸುವಾಗ ವಿಶೇಷ ಅತಿಥಿಯಾಗಿ ವಿಷ್ಣುವರ್ಧನ್ ಅವರನ್ನೇ ಕರೆದು ಅವರ ಕೈಯಿಂದಲೇ ಗುದ್ದಲಿ ಪೂಜೆ ಮಾಡಿಸಿದ್ದಾರೆ. ಮೊದಲಿಗೆ ನಾನು ಬೇಡ ಎಂದು ಒಪ್ಪದ ಅವರು ನಂತರ ಅವರ ಒತ್ತಾಯಕ್ಕೆ ಮಾಡಿದ್ದು ಪೂಜೆ ನೆರವೇರಿಸಿದರು. ಅದೇ ಜಾಗದಲ್ಲಿ ಇಂದು ಬೃಹತ್ ಆದ ಬಂಗಲೆಯನ್ನು ಕಟ್ಟಿಕೊಂಡು ಅವಿನಾಶ್ ಹಾಗು ಮಾಳ್ವಿಕಾ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ.
ಜೊತೆಗೆ ತಮ್ಮ ಬದುಕಿನ ಅತಿ ಮುಖ್ಯ ಭಾಗ ಆದ ಕಾರಣ ವಿಷ್ಣುದಾದಾ ಅವರ ಫೋಟೋ ಒಂದನ್ನು ದೇವರ ಕೋಣೆಯಲ್ಲಿಟ್ಟು ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಮಾಳ್ವಿಕಾ ಅವರು ಸಹ ಒಮ್ಮೆ ದಾದನ ಬಗ್ಗೆ ಈ ರೀತಿ ಹೇಳಿಕೊಂಡಿದ್ದಾರೆ. ನನ್ನ ತಂದೆಯ ಸ್ಥಾನದಲ್ಲಿದ್ದು ವಿಷ್ಣು ಸರ್ ನನ್ನನ್ನು ನೋಡಿಕೊಳ್ಳುತ್ತಿದ್ದರು, ಬಹುಬೇಗ ಅವರನ್ನು ಕಳೆದುಕೊಂಡು ಬಿಟ್ಟೆವು. ನನ್ನ ಜೀವನದಲ್ಲಿ ನಾನು ಕಂಡ ಶ್ರೇಷ್ಠ ವ್ಯಕ್ತಿ ಅವರು ಎಂದು ಹೇಳಿಕೊಂಡಿದ್ದಾರೆ.
https://youtu.be/ZbNvH4c7pz8