ಕನ್ನಡ ಚಿತ್ರರಂಗದ ಡೈನಾಮಿಕ್ ಹೀರೋ ದೇವರಾಜ್ರವರ ಪುತ್ರ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ರವರು ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದಾರೆ. ರಾಗಿಣಿ ಪ್ರಜ್ವಲ್ ದೇವರಾಜ್ ಹಾಗು ಪ್ರಜ್ವಲ್ ದೇವರಾಜ್ ಇಬ್ಬರೂ ಕೂಡ ಕನ್ನಡ ಚಿತ್ರರಂಗದ ಸುಂದರವಾದ ದಂಪತಿಗಳು ಎಂದು ಹೇಳಬಹುದು. ಚಿಕ್ಕ ವಯಸ್ಸಿನಿಂದ ಜೊತೆಯಲ್ಲಿ ಬೆಳೆದು ಸ್ನೇಹಿತರಾಗಿದ್ದರು.
ನಂತರ ಸ್ನೇಹವು ಪ್ರೀತಿಗೆ ತಿರುಗಿ ಇವರಿಬ್ಬರ ಮಧ್ಯ ಪ್ರೀತಿ ಶುರುವಾಯಿತು. ಬಹಳ ದಿನದಿಂದ ಒಬ್ಬರು ಇನ್ನೊಬ್ಬರನ್ನು ತಿಳಿದಿರುವ ಕಾರಣ ಇವರೊಬ್ಬರ ಮಧ್ಯೆ ಯಾವುದೇ ತರಹದ ವೈ ಮನಸು ಬಂದಿಲ್ಲ, ಇನ್ನು ಒಬ್ಬರು ಇನ್ನೊಬ್ಬರಿಗೆ ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ಸಮಯದಲ್ಲೂ ಪ್ರೋತ್ಸಾಹ ನೀಡಿ ಬೆನ್ನೆಲುಬಾಗಿ ನಿಲ್ಲುತ್ತಾರೆ ಈ ಕಾರಣ ಈ ಸಿನಿ ತಾರೆಯರ ಜೋಡಿಯು ಎಷ್ಟೋ ಜೋಡಿಗಳಿಗೆ ಮಾದರಿಯಾಗಿದೆ.
ಪ್ರಜ್ವಲ್ ದೇವರಾಜ್ ಅವರು ಮದುವೆಯಾಗಿ ಏಳು ವರ್ಷಗಳಾಗಿವೆ. ಇವರಿಬ್ಬರು 2015 ರಲ್ಲಿ ವಿವಾಹವಾದರು ಆ ಸಂದರ್ಭದಲ್ಲಿ ಎಷ್ಟೋ ಅಭಿಮಾನಿಗಳು ಕೂಡ ಬೇಸರಗೊಂಡಿದ್ದಾರೆ ಏಕೆಂದರೆ ಪ್ರಜ್ವಲ್ ದೇವರಾಜ್ ಅವರ ಮಹಿಳಾ ಅಭಿಮಾನಿಗಳಿಗೆ ಇದರಿಂದ ಕೊಂಚ ಬೇಸರವಾಗಿತ್ತು ಈ ಬಗ್ಗೆ ಹಲವು ಕಮೆಂಟ್ಸ್ ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಆದರೆ ರಾಗಿಣಿಯವರು ಪ್ರಜ್ವಲ್ ದೇವರಾಜ್ ಅವರಿಗೆ ಉತ್ತಮವಾದ ಸಂಗಾತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ, ಹೌದು ಸ್ನೇಹಿತರೆ ರಾಗಿಣಿ ಪ್ರಜ್ವಲ್ ದೇವರಾಜ್ ಅವರು ಒಬ್ಬ ಮೋಡಲ್ ಹಾಗೂ ಖಾಸಗಿ ಜಾಹೀರಾತುಗಳಲ್ಲಿ ಅಭಿನಯಿಸುತ್ತಾರೆ. ಇನ್ನು ರಾಗಿಣಿ ಪ್ರಜ್ವಲ್ ದೇವರಾಜ್ ಅವರು ಆರೋಗ್ಯಕ್ಕಾಗಿ ಎಷ್ಟು ಬೇಕೋ ಅಷ್ಟು ಆಹಾರ ಹಾಗೂ ವ್ಯಾಯಾಮಗಳ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ.
ಪುನೀತ್ ರಾಜ್‌ಕುಮಾರ್ ಬ್ಯಾನರ್‌ನ ‘ಲಾ’ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರವೇಶಿಸಿದ ಚೆಲುವೆ ರಾಗಿಣಿ ಚಂದ್ರನ್. ಮಾಡೆಲ್, ಡ್ಯಾನ್ಸರ್, ಟ್ರೈನರ್ ಆಗಿಯೂ ಗುರುತಿಸಿಕೊಂಡವರು. ಡ್ಯಾನ್ಸ್, ಯೋಗ, ಫಿಟ್‌ನೆಸ್ ಕಲಿಸಿಕೊಡೋ ರಾಗಿಣಿ ಅವರ ಸ್ಟುಡಿಯೋ ‘ಉರ್ಹಿತ್ ಮಿಕ್ಸ್. ರಾಗಿಣಿಯವರು ಈ ಮೂಲಕ 6 ರಿಂದ 60 ವರ್ಷ ವರೆಗೂ ಇರುವ ಎಲ್ಲ ವಯಸ್ಸಿಗರಿಗೂ ಡ್ಯಾನ್ಸ್ ಹಾಗೂ ಫಿಟ್ನೆಸ್ ಅನ್ನು ಹೇಳಿ ಕೊಡುತ್ತಾರೆ.
ವರ್ಕೌಟ್‌ಗೆ ಸಂಬಂಧಿಸಿ ಏನೇನೆಲ್ಲ ಪ್ರಯೋಗ ಮಾಡಿ ಸೈ ಎನಿಸಿಕೊಂಡಿದ್ದಾರೆ ರಾಗಿಣಿ. ವಾಟರ್ ಬಾಟಲ್‌ಗಳನ್ನೇ ವೈಟ್ ಲಿಫ್ಟಿಂಗ್ ಬಳಸಿಕೊಂಡಿದ್ದಾರೆ. ಎರಡು ಲೀಟರ್ ವಾಟರ್ ಬಾಟಲ್‌ಗೆ ನೀರು ತುಂಬಿಸಿ ಅದರಲ್ಲೇ ವೈಟ್ ಲಿಫ್ಟಿಂಗ್ ಮಾಡುತ್ತಾರೆ. ಮನೆಯ ಮೆಟ್ಟಿಲುಗಳ ಮೇಲೆ ಏರೋಬಿಕ್ಸ್ ಪ್ರಯೋಗ, ದಿಂಬು ಬಳಸಿ, ಟವಲ್ ಬಳಸಿ ಸಖತ್ ಮಜವಾಗಿ ವರ್ಕೌಟ್ ಮಾಡೋದು ಕಲಿತಿದ್ದಾರೆ.
ಇನ್ನು ರಾಗಿಣಿ ಪ್ರಜ್ವಲ್ ರವರಿಗೆ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ಫ್ಯಾನ್ ಫಾಲೋವರ್ಸ್ ತುಂಬಾ ಹೆಚ್ಚಾಗಿದ್ದು, ಅವರ ಅಭಿಮಾನಿಗಳು ಕೂಡ ಹೆಚ್ಚು ಇದ್ದಾರೆ. ಹಾಗಾಗಿ ರಾಗಿಣಿಯವರು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಇತ್ತೀಚಿಗೆ ಇವರು ಮಾಡಿರುವ ರೀಲ್ಸ್ ಒಂದು ವೈರಲ್ ಆಗಿದೆ ಈ ವಿಡಿಯೋದಲ್ಲಿ ಕಾಂತಾರ ಚಿತ್ರದ ಸಿಂಗಾರ ಸರಿಯೇ ಎಂಬ ಹಾಡಿಗೆ ಕುಣಿದು ಇನ್ಸ್ಟಾಗ್ರಾಮ್ ರಿಲ್ಸ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಜೊತೆಯಲ್ಲಿ ಯು_ರಿಧಮಿಕ್ಸ್ ಅನ್ನು ಸೇರಲು ಪೋಸ್ಟನ್ನು ಹಾಕಿದ್ದಾರೆ ಈ ವಿಡಿಯೋ ಬಗ್ಗೆ ಕೆಲವರು, ರಾಗಿಣಿ ಹಾಕಿರೋ ಬಟ್ಟೆಯ ಬಗ್ಗೆ ನೆಗೆಟಿವ್ ಆಗಿ ಕಾಮೆಂಟ್ ಮಾಡಿದರೆ, ಇನ್ನು ಕೆಲವರು ನಾಟ್ಯದೇವತೆಯೆಂದು ಹೊಗಳಿದ್ದಾರೆ, ಒಟ್ಟಿನಲ್ಲಿ ತಮ್ಮ ನೃತ್ಯದ ಮೂಲಕ ಅಭಿಮಾನಿಗಳನ್ನು ಮನರಂಜಿಸುತ್ತಿರುವುದು ಸುಳ್ಳಲ್ಲ.