Thursday, April 24, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentನನ್ಗೆ ಮಕ್ಕಳು ಇಲ್ಲದೇ ಇರಬಹುದು, ಆದ್ರೆ ಶ್ವಾನಗಳೇ ನನಗೆ ಮಕ್ಕಳ ಸಮಾನ ಎಂದ ನಟಿ ರಮ್ಯಾ.

ನನ್ಗೆ ಮಕ್ಕಳು ಇಲ್ಲದೇ ಇರಬಹುದು, ಆದ್ರೆ ಶ್ವಾನಗಳೇ ನನಗೆ ಮಕ್ಕಳ ಸಮಾನ ಎಂದ ನಟಿ ರಮ್ಯಾ.

 

ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ 5ನೇ ಸೀಸನ್ ಮೊದಲ ಅತಿಥಿ ಆಗಿ ಬಂದಿದ್ದರು. ಈಗ ಸೋಶಿಯಲ್ ಮೀಡಿಯಾದಲೆಲ್ಲ ರಮ್ಯಾ ಅವರ ಇಂಗ್ಲಿಷ್ ಮಾತಿನ ಬಗ್ಗೆ ಸಕ್ಕತ್ ಚರ್ಚೆ ಶುರುವಾಗಿದೆ. ಹಲವಾರು ಟ್ರೋಲ್ ಪೇಜ್ ಗಳು ನಮ್ಮ ಅಜ್ಜಿಗೆ ಇಂಗ್ಲಿಷ್ ಬರಲ್ಲ ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಮ್ಯಾ ಅವರು ಕಾಣಿಸಿಕೊಂಡಿದ್ದ ಫೋಟೋ ಹಾಕಿ ಟ್ರೋಲ್ ಮಾಡುತ್ತಿದ್ದಾರೆ.

ಈ ವಾರಪೂರ್ತಿ ಸೋಶಿಯಲ್ ಮೀಡಿಯಾದಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ, ರಮ್ಯ ಅವರ ಇಂಗ್ಲಿಷ್ ಮಾತು, ಡಾ.ಬ್ರೋ ಬಗೆಗಿನ ವಿಚಾರ ಹಾಗೂ ರಾಘವೇಂದ್ರ ಹುಣಸೂರು ಅವರು ಡಾ. ಬ್ರೊ ಅವರ ಬಗ್ಗೆ ಆಡಿದ ವಿಡಂಭನಕಾರಿ ಮಾತುಗಳ ಬಗ್ಗೆಯೇ ಹೆಚ್ಚು ಚರ್ಚೆ ಮಾತುಕತೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ರಮ್ಯಾ ಅವರು ಅತಿ ಹೆಚ್ಚು ಇಂಗ್ಲೀಷ್ ಬಳಸಿ ಮಾತನಾಡಿದರು, ಶೇಕಡ 20%ರಷ್ಟು ಕನ್ನಡ ಬಳಕೆ ಮಾಡಲಿಲ್ಲ ಎನ್ನುವುದನ್ನು ಬಿಟ್ಟರೆ ರಮ್ಯಾ ಅವರ ಬಗ್ಗೆ ಜನಸಾಮಾನ್ಯರಿಗೆ ಗೊತ್ತಿರದ ಅನೇಕ ವಿಷಯಗಳನ್ನು ಅವರು ಮಾತನಾಡಿದ್ದಾರೆ.

ರಮ್ಯಾ ಅವರ ಜೀವನದ ಕಥೆ ಕೇಳಬೇಕು ಎಂದು ಕಿರುತೆರೆ ಪ್ರೇಕ್ಷಕರು ಕೂಡ ಕಾದಿದ್ದರು. ಈವರೆಗೆ ನಡೆದ ನಾಲ್ಕು ಸೀಸನ್ನಲ್ಲೂ ಕೂಡ ಇವರು ಅತಿಥಿಯಾಗಿ ಬರುತ್ತಾನೆ ಎನ್ನುವ ನಿರೀಕ್ಷೆ ಇತ್ತು. ಅಂತಿಮವಾಗಿ ಪ್ರೇಕ್ಷಕರ ಕುತೂಹಲಕ್ಕೆ ತಕ್ಕ ಹಾಗೆ ರಮ್ಯಾ ಅವರು ಸಾಧಕರ ಸೀಟ್ ಏರಿದ್ದಾರೆ. ಹಾಗೆ ಬದುಕಿನ ಸ್ವಾರಸ್ಯಕರ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮುಖ್ಯವಾಗಿ ರಮ್ಯಾ ಅವರು ತಂದೆಯ ಬಗ್ಗೆ ಎಲ್ಲೂ ಸಹ ಇದುವರೆಗೆ ಹೇಳಿಕೊಂಡಿರಲಿಲ್ಲ, ಈ ಕಾರ್ಯಕ್ರಮದಲ್ಲಿ ಸಾಕು ತಂದೆ ಆರ್.ಟಿ ನಾರಾಯಣ್ ಅವರ ಬಗ್ಗೆ ರಮ್ಯ ಮಾತನಾಡಿದ್ದಾರೆ.

ಜೊತೆಗೆ ಅವರ ತಂದೆ ತೀರಿಕೊಂಡಾಗ ಡಿಪ್ರೆಷನ್ ಗೆ ಹೋಗಿದ್ದು, ರಾಹುಲ್ ಗಾಂಧಿ ಅವರು ಆ ಸಮಯದಲ್ಲಿ ಧೈರ್ಯ ಹೇಳಿದ್ದು ಬದುಕನ್ನು ಅರ್ಥ ಮಾಡಿಸಿದರ ಬಗ್ಗೆಯೂ ಮಾತನಾಡಿದ್ದಾರೆ. ಅವರ ಬದುಕಿನಲ್ಲಿ ತಂದೆ-ತಾಯಿ ಬಿಟ್ಟರೆ ರಾಹುಲ್ ಗಾಂಧಿಯೇ ಪ್ರಮುಖ ವ್ಯಕ್ತಿ ಎಂದು ಹೇಳಿಕೊಂಡಿರುವ ಅವರು ಪ್ರಾಣಿಗಳ ಬಗ್ಗೆ ಕೂಡ ಮಾತನಾಡಿದ್ದಾರೆ. ಸೆಲೆಬ್ರಿಟಿಗಳಿಗೆಲ್ಲರಿಗೂ ಸಾಮಾನ್ಯವಾಗಿ ಪೆಟ್ಗಳ ಬಗ್ಗೆ ಆಸಕ್ತಿ ಇರುತ್ತದೆ.

ಅದರಲ್ಲೂ ಚಂದನವನದ ಪದ್ಮಾವತಿ ಶ್ವಾನಪ್ರಿಯೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ರಮ್ಯಾ ಅವರು ಲಕ್ಕಿ ಸಿನಿಮಾದಲ್ಲೂ ಕೂಡ ತಮ್ಮ ನಿಜ ಜೀವನದ ಕ್ಯಾರೆಕ್ಟರ್ ರೀತಿ ಕಾಣಿಸಿಕೊಂಡಿದ್ದರು. ಅಂದರೆ ಆ ಸಿನಿಮಾದಲ್ಲಿ ಕೂಡ ಅವರು ನಾಯಿಯನ್ನು ಹೆಚ್ಚು ಪ್ರೀತಿಸುವ ಯುವತಿ ಪಾತ್ರ ಮಾಡಿದ್ದರು. ಶ್ವಾನಗಳು ಎಂದರೆ ರಮ್ಯಾ ಅವರಿಗೆ ಬಹಳ ಪ್ರೀತಿ ಈ ಕಾರ್ಯಕ್ರಮದಲ್ಲಿ ಕೂಡ ನಾಯಿಗಳ ಬಗ್ಗೆ ಮಾತನಾಡಿದ ಅವರು ನಮ್ಮ ಮನೆಯಲ್ಲಿ ಮಕ್ಕಳು ಇರದೇ ಇರಬಹುದು, ಆದರೆ ನನಗೆ ಶ್ವಾನಗಳೇ ಮಕ್ಕಳ ಸಮಾನ ಎಂದು ಹೇಳಿದ್ದಾರೆ.

ಈಗ ಅವರ ಮನೆಯಲ್ಲಿ ಇರುವ 16 ವರ್ಷದ ಚಾಂಪಿ ಎನ್ನುವ ನಾಯಿ ಬಗ್ಗೆ ಮಾತನಾಡಿ, ಅದಕ್ಕೆ ಹೃದಯ ಸಂಬಂಧಿ ಕಾಯಿಲೆ ಇದೆ ಎನ್ನುವುದನ್ನು ಹೇಳಿದ್ದಾರೆ. ಮತ್ತೊಂದು ರಾಣಿ ಎನ್ನುವ ನಾಯಿ ಗೋವಾದಲ್ಲಿ ಆಕ್ಸಿಡೆಂಟ್ ಮಾಡಿಕೊಂಡಿದ್ದು, ರಾಣಿ ಬಂದ ಮೇಲೆ ಬದುಕು ಬದಲಾಗಿದ್ದು ಎಲ್ಲವನ್ನು ಹೇಳಿಕೊಂಡಿದ್ದಾರೆ. ಜೊತೆಗೆ ಅವರಿಗೆ ಈ ಕಾರ್ಯಕ್ರಮದಲ್ಲಿ ಅವರ ಪ್ರೀತಿಯ ಬ್ರಾಂಡಿ ಶ್ವಾನದ ಫೋಟೋವನ್ನು ಸರ್ಪ್ರೈಸ್ ಗಿಫ್ಟಾಗಿ ನೀಡಲಾಗಿದೆ. ಅದನ್ನು ಅಂಬರೀಶ್ ಅವರು ಗಿಫ್ಟ್ ನೀಡಿದ್ದರು ಆದರೆ ಮಾರ್ಚ್ 14, 2022ರಂದು ಅವಳು ತೀರಿಕೊಂಡಳು ಎನ್ನುವ ವಿಚಾರ ಹೇಳಿಕೊಂಡು ತುಂಬಾ ಹಚ್ಚಿಕೊಂಡಿದ್ದ ಬ್ರ್ಯಾಂಡಿ ನೆನೆದುಕೊಂಡು ಭಾವುಕರಾಗಿದ್ದಾರೆ ರಮ್ಯಾ.