ನಾನು ನನ್ನ ತಾಯಿ ಜವಾಬ್ದಾರಿ ಅಲ್ಲ ಅದಕ್ಕಾಗಿ ಮುಚ್ಕೊಂಡು ಕೆಲಸ ಮಾಡಲೇಬೇಕು ಎಂದ ಲಕ್ಷ್ಮಿ ಪುತ್ರಿ ಐಶ್ವರ್ಯ ಭಾಸ್ಕರನ್. ಕನ್ನಡದ ಜೂಲಿ ಲಕ್ಷ್ಮಿ (Lakshmi) ಅವರ ಮಗಳು ಐಶ್ವರ್ಯ ಭಾಸ್ಕರನ್ (Aishwarya Bhaskaran) ಅವರು ಸಹ ಒಬ್ಬ ನಟಿ ಕನ್ನಡ ತಮಿಳು ತೆಲುಗು ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಇನ್ನೂ ಅನೇಕ ಕೆಲಸಗಳನ್ನು ಅವರು ಮಾಡಿದ್ದಾರೆ. ಅವರು ಮಾಡುವ ಕೆಲಸಗಳ ವಿಷಯವಾಗಿಯೇ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚಿಗೆ ಅವರು ಒಂದು ಯೂಟ್ಯೂಬ್ ಚಾನೆಲ್ ಸಹ ಆರಂಭಿಸಿದ್ದಾರೆ.
ಆಗಲೂ ಸಾಕಷ್ಟು ಜನ ಇವರನ್ನು ಒಬ್ಬ ಸ್ಟಾರ್ ಹೀರೋಯಿನ್ ಮಗಳಾಗಿ ಪ್ರೊಡಕ್ಷನ್ ಶುರು ಮಾಡುವ ಬದಲು ಯೂಟ್ಯೂಬ್ ಚಾನೆಲ್ ಓಪನ್ ಮಾಡಿದ್ದೀರಾ ಎಂದು ಕಾಲೆಳೆದಿದ್ದರು. ಈಗ ನಟಿ ಅದರ ಬಗ್ಗೆ ಮಾತನಾಡಿದ್ದಾರೆ. ನಟ ಮತ್ತು ನಿರ್ದೇಶಕ ರಘು ರಾಮ್ (Raghu Ram) ಅವರು ನಡೆಸುವ ಯೌಟ್ಯೂಬ್ ಚಾನೆಲ್ ನ ನೂರೊಂದು ನೆನಪು (Noorondu nenapu) ಎನ್ನುವ ಕಾರ್ಯಕ್ರಮದಲ್ಲಿ ಇದನ್ನೆಲ್ಲಾ ಹೇಳಿಕೊಂಡಿದ್ದಾರೆ.
ನಾನು ಸ್ಟಾರ್ ಪುತ್ರಿ ಇರಬಹುದು ಯಾವುದೇ ಸ್ಟಾರ್ ಮಕ್ಕಳಾದರೂ ರಾಜಕಾರಣಿ ಮಕ್ಕಳು ಆದರೂ ಅವರ ಕೆಲಸ ಅವರು ಮಾಡಬೇಕು. ನನಗೆ 18 ವರ್ಷ ಆಗುವವರೆಗೆ ನನ್ನ ತಾಯಿ ಜವಾಬ್ದಾರಿ ಆಗಿದ್ದೆ, ಅವರು ನನಗೆ ಒಳ್ಳೆ ವಿದ್ಯಾಭ್ಯಾಸ ಕೊಟ್ಟಿದ್ದಾರೆ. ಈಗ ಬದುಕ ಬೇಕಾಗಿರುವುದು ನನ್ನ ಜವಾಬ್ದಾರಿ. ನಾನು ಸ್ಟಾರ್ ಹೀರೋಯಿನ್ ಮಗಳು ಎನ್ನುವ ರೀತಿ ಬೆಳೆದಿಲ್ಲ ನಾನು ಎಲ್ಲರಂತೆ ಸಾಮಾನ್ಯವಾಗಿ ಬೆಳೆದಿದ್ದೇನೆ.
ನನಗೆ ಗೊತ್ತಿರುವುದು ಇಷ್ಟೇ ಬೇಕು ಇರುವ ತನಕ ದುಡಿಯಬೇಕು, ನಾನು ಸಹ ಸಾಯುವ ತನಕ ಕೆಲಸ ಮಾಡುತ್ತಲೇ ಇರುತ್ತೇನೆ. ಹಿಂದೆಯೂ ನಾನು ಒಂದು ಹಂತ ಆದ ಮೇಲೆ ತಂದೆ ತಾಯಿ ಬಳಿ ಕೈ ಚಾಚುತಿರಲಿಲ್ಲ. ಈಗಲೂ ಸಹ ಗಂಡ ಮಕ್ಕಳ ಮೇಲೆ ಡಿಪೆಂಡ್ ಆಗಲು ನನಗೆ ಇಷ್ಟ ಇಲ್ಲ ಇದೇ ರೀತಿ ಬದುಕಲು ನನಗೆ ಇಷ್ಟ ಹಾಗೆ ಬದುಕುತ್ತಿದ್ದೇನೆ. ಕೆಲವರು ಇರುತ್ತಾರೆ, ಮನೆಯಲ್ಲಿ ಬಿದ್ದುಕೊಂಡು ಹೆತ್ತ ತಂದೆ ತಾಯಿಗೆ ಭಾರ ಆಗಿರುತ್ತಾರೆ ಅಂತವರನ್ನು ಕಂಡರೆ ಅಸಹ್ಯ ಆಗುತ್ತದೆ.
ನಾವು ಬೆಳೆದ ಮೇಲೆ ತಂದೆ ತಾಯಿ ನಮ್ಮ ಜವಾಬ್ದಾರಿ ಈಗಲೂ ಅವರ ಬೆನ್ನು ಬಿದ್ದು ಹಿಂಸೆ ಕೊಡಬಾರದು ಈ ಭೂಮಿ ಮೇಲೆ ನಾವು ನೂರು ವರ್ಷ ಕೂಡ ಇರುವುದಿಲ್ಲ. ಈಗಲೇ ನನಗೆ 50 ವರ್ಷ ಆಗಿ ಹೋಗಿದೆ ಹಾಗಾಗಿ ನಾನು ಜನ ಏನು ಮಾತನಾಡುತ್ತಾರೋ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಯಾವಾಗಲೂ ಏನಾದರೂ ಮಾತನಾಡುತ್ತಲೇ ಇರುತ್ತಾರೆ ನನ್ನ ಬಗ್ಗೆ ಏನಾದರೂ ಹೇಳಲಿ ನನಗೆ ಏನು ಸಾಮರ್ಥ್ಯ ಇದೆ ಎಂದು ನನಗೆ ಗೊತ್ತು ಆ ಸಾಮರ್ಥ್ಯದಲ್ಲಿ ನಾನು ಒಳ್ಳೆ ಕೆಲಸ ಮಾಡುತ್ತಿದ್ದೇನೆ.
ಯೋಗ ಕಲಿತ ಮೇಲೆ ಒಂದು ವಿಚಾರ ತಿಳಿದುಕೊಂಡೆ ಈಗ ನಾವು ಇರುವ ಕಾಲ ಕಲಿಗಾಲದಲ್ಲಿ ಮನುಷ್ಯ ಮನುಷ್ಯನನ್ನೇ ತಿನ್ನುತ್ತಾನೆ, ಮುಂದೆ ಭವಿಷ್ಯ ಅನ್ನುವುದೇ ಇರುವುದಿಲ್ಲ. ಮನುಷ್ಯನಾಗಿ ಹುಟ್ಟಿದ್ದೇವೆ ಎಂದಮೇಲೆ ಮುಕ್ತಿ ಪಡೆಯಬೇಕು. ಮುಕ್ತಿ ಪಡೆಯಬೇಕು ಎಂದರೆ 12 ಜ್ಯೋತಿರ್ಲಿಂಗಗಳನ್ನು ನೋಡಬೇಕು ಎಂದು ಹೇಳುತ್ತಾರೆ, ಅದನ್ನು ಮಾಡಿದ್ದೇನೆ. ಈಗ ನನ್ನ ಗಮನವೆಲ್ಲಾ ನನಗೆ ಗೊತ್ತಿರುವ ಕೆಲಸ ಮಾಡಿಕೊಂಡು ಅದರಲ್ಲಿ ಬರುವ ಹಣದಿಂದ ನನ್ನನ್ನು ಹಾಗೂ ನನ್ನ ಸಾಕು ಪ್ರಾಣಿಗಳನ್ನು ಸಾಕಬೇಕು. ಮತ್ತು ಮಣ್ಣಿನ ಕಡೆ ಹಾಗೂ ತಾಯಿಯ ಕಡೆ ಗಮನ ಇಡಬೇಕು ಅಷ್ಟು ಮಾಡುತ್ತಿದ್ದೇನೆ ಇದರಿಂದ ಖುಷಿಯಾಗಿದ್ದೇನೆ ಎಂದಿದ್ದಾರೆ.