ಇಂಡಸ್ಟ್ರಿಯಲ್ಲಿ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಇರುವವರು ಗುರುತಿಸಿಕೊಳ್ಳುವುದು ಬಹಳ ಕಷ್ಟ. ಆದರೆ ಕೆಲವೊಂದು ಹೀರೋಗಳು ಮಾತ್ರ ಪ್ರಯತ್ನ ಹಾಗೂ ಅದೃಷ್ಟದಿಂದ ಹೆಸರು ಮಾಡಿದ್ದಾರೆ. ಇನ್ನುಳಿದಂತೆ ಹೆಚ್ಚಿನ ಜನ ಈಗಾಗಲೇ ಅವರ ಕುಟುಂಬದವರು ಅಥವಾ ಅವರ ತಂದೆ ಇಂಡಸ್ಟ್ರಿಯಲ್ಲಿ ಒಳ್ಳೆ ಹೆಸರು ಪಡೆದಿರುವ ಕಾರಣಕ್ಕೆ ಸಲೀಸಾಗಿ ಅವರು ಚಿತ್ರರಂಗವನ್ನು ಪ್ರವೇಶಿಸಿರುತ್ತಾರೆ. ಈ ರೀತಿ ಬಣ್ಣದ ನಂಟು ಇಲ್ಲದೆ ಇರುವವರನ್ನು ಸೆಳೆದುಬಿಡುವ ಈ ಚಿತ್ರರಂಗ ಅಪ್ಪ ಹೀರೋ ಆಗಿದ್ದಾಗ ಆ ಕಡೆಗೆ ಆಸೆ ಹುಟ್ಟಿಸದೇ ಇರದು.
ಇದೇ ಕಾರಣದಿಂದ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಡಾಕ್ಟರ್ ರಾಜಕುಮಾರ್, ರವಿಚಂದ್ರನ್, ಅಂಬರೀಶ್, ಪ್ರಭಾಕರ್, ತೂಗುದೀಪ್ ಶ್ರೀನಿವಾಸ್ ಈ ರೀತಿ ಅನೇಕ ದೊಡ್ಡ ಕಲಾವಿದರ ಮಕ್ಕಳು ಕೂಡ ಇಂಡಸ್ಟ್ರಿಯಲ್ಗೆ ಬದುಕು ಕಂಡುಕೊಳ್ಳುವಂತೆ ಆಯ್ತು ಎಂದರೆ ತಪ್ಪಾಗಲಾರದು. ಆದರೆ ಇವುಗಳ ಸಾಲಿನಲ್ಲಿ ಶ್ರೀನಾಥ್ (Shreenath) ಅವರ ಪುತ್ರ ರೋಹಿತ್ ಶ್ರೀನಾಥ್ (Rohith Shreenath) ರ ಹೆಸರು ಇಲ್ಲದೆ ಇರುವುದನ್ನು ಕಂಡಾಗ ಅದು ಬಹಳ ಆಶ್ಚರ್ಯ ಅನಿಸಿಬಿಡುತ್ತದೆ.
ಆದರೆ ಅದಕ್ಕೆಲ್ಲ ಒಂದು ಕಾರಣ ಇದೆ. ಶ್ರೀನಾಥ್ ಮಗ ಹೀರೋ ಆಗದೆ ಉಳಿದದ್ದಕ್ಕೆ ಮತ್ತು ಶ್ರೀನಾಥ್ ಅವರು ಅತಿ ಬೇಗನೆ ಹೀರೋಯಿಸಂ ಇಂದ ಪೋಷಕ ನಟನಾಗಿ ಬದಲಾಗಿದ್ದಕ್ಕೆ ಅವರ ಜೀವನದಲ್ಲಿ ಆದ ಒಂದು ಕಹಿ ಘಟನೆಯೇ ಕಾರಣ. ಈ ವಿಷಯವನ್ನು ಅವರು ಜೀ ಕನ್ನಡ (Zee kannada) ವಾಹಿನಿಯ ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾಗ ಕೂಡ ಬಹಳ ಭಾವನಾತ್ಮಕವಾಗಿ ಹಂಚಿಕೊಂಡಿದ್ದರು. ಅದೇನೆಂದರೆ ಶ್ರೀನಾಥ್ ಅವರಿಗೆ ಇಬ್ಬರು ಮಕ್ಕಳು ಅಮೂಲ್ಯ ಮತ್ತು ರೋಹಿತ್.
ರೋಹಿತ್ ಶ್ರೀನಾಥ್ ಅವರು ಬಾಲ್ಯದಲ್ಲಿಯೇ ಪಲ್ಲವಿ ಅನುಪಲ್ಲವಿ (Pallavi Anupallavi) ಎನ್ನುವಂತಹ ಸೂಪರ್ ಹಿಟ್ ಸಿನಿಮಾ ಮತ್ತು ಮಾಲ್ಗುಡಿ ಡೇಸ್ (Malgudi days) ಅಂತಹ ಸೀರಿಯಲ್ ಗಳಲ್ಲಿ ಅಭಿನಯಿಸಿ ಹೆಸರು ಪಡೆದಿದ್ದವರು. ಹೀರೋ ಆಗುವ ಎಲ್ಲಾ ಲಕ್ಷಣಗಳು ಹಾಗೂ ಅರ್ಹತೆಯನ್ನು ಹೊಂದಿದ್ದವರು ಆದರೂ ಕೂಡ ಅವರು ಇಂಡಸ್ಟ್ರಿಗೆ ಬರಲಿಲ್ಲ ಜೊತೆಗೆ ಶ್ರೀನಾಥ್ ಅವರು ಸಹ ಹೀರೋ ಆಗಿ ಮಿಂಚುತ್ತಿದ್ದವರು ಇದ್ದಕ್ಕಿದ್ದಂತೆ ಸಿಕ್ಕಸಿಕ್ಕ ಪಾತ್ರಗಳನ್ನೆಲ್ಲ ಒಪ್ಪಿಕೊಳ್ಳಲು ಶುರು ಮಾಡುತ್ತಾರೆ.
ಸಮಾನ ವಯೋನದವರಾದ ಅಂಬರೀಶ್ ಅವರಿಗೂ ಕೂಡ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಶುರು ಮಾಡುತ್ತಾರೆ. ಅದಕ್ಕೆಲ್ಲ ಕಾರಣ ಹಣದ ಅವಶ್ಯಕತೆ. ಯಾಕೆಂದರೆ ಅವರ ಜೀವನದಲ್ಲಿ ಆದ ಒಂದು ಕಹಿ ಘಟನೆ ಅವರನ್ನು ಈ ಹಂತಕ್ಕೆ ತಂದಿರುತ್ತದೆ ಮಗಳು ಅಮೂಲ್ಯ ಮದುವೆ ತಯಾರಿಯಲ್ಲಿದ್ದ ಶ್ರೀನಾಥ್ ಅವರಿಗೆ ಮಗಳ ಮದುವೆ ಹಿಂದಿನ ದಿವಸ ಆಘಾತ ಒಂದು ಕಾದಿರುತ್ತದೆ. ಅಷ್ಟು ವರ್ಷ ಸಂಪಾದನೆ ಮಾಡಿದ ಹಣವನ್ನೆಲ್ಲ ಕೂಡಿಟ್ಟು ಮಕ್ಕಳಿಗಾಗಿ ಒಡವೆ ಮಾಡಿಸಿರುತ್ತಾರೆ, ಒಡವೆ ಜೊತೆ ಸಾಕಷ್ಟು ಹಣವನ್ನು ಕೂಡ ಮದುವೆ ಕಾರಣ ಮನೆಯಲ್ಲಿ ಇಟ್ಟಿರುತ್ತಾರೆ.
ಆದರೆ ಮದುವೆ ಬ್ಯುಸಿಯಲ್ಲಿ ಮನೆ ಮಂದಿಯೆಲ್ಲಾ ಸಂಭ್ರಮದಲ್ಲಿದ್ದಾಗ ಯಾರೋ ಇವರ ಮನೆಯಲ್ಲಿ ಕಳ್ಳತನ ಮಾಡಿ ಬಿಡುತ್ತಾರೆ ಇದೆಲ್ಲವನ್ನು ನೋಡಿಕೊಂಡಿದ್ದ ಪರಿಚಯಿಸ್ತರೇ, ಆ ಕುಕೃತ್ಯ ಮಾಡಿರುತ್ತಾರೆ. ಆ ವೇಳೆ ಶ್ರೀನಾಥ್ ಅವರಿಗೆ ಬದುಕನ್ನೇ ಕಳೆದುಕೊಂಡ ರೀತಿ ಆಗಿ ಬಿಟ್ಟಿರುತ್ತದೆ ಅದುವರೆಗೂ ಕೂಡಿಟ್ಟಿದ್ದ ಎಲ್ಲಾ ಹಣವು ಸಂಪೂರ್ಣವಾಗಿ ಕಳವಾಗಿರುತ್ತದೆ. ಮರುದಿನವೇ ಮಗಳ ಮದುವೆ ಕೂಡ ಇರುವುದರಿಂದ ವಿಧಿ ಇಲ್ಲದೆ ಅವರು ಸಾಲ ಮಾಡಬೇಕಾಗುತ್ತದೆ. ಆ ಸಾಲವನ್ನು ತೀರಿಸುವ ಸಲುವಾಗಿ ನಂತರ ಶ್ರೀನಾಥ್ ಅವರು ಯಾವುದೇ ಪಾತ್ರ ಸಿಕ್ಕರೂ ಅಭಿನಯಿಸಲು ಶುರುಮಾಡುತ್ತಾರೆ.
ಜೊತೆಗೆ ಅಪ್ಪನ ಕಷ್ಟಕ್ಕೆ ನೆರವಾಗುವ ಸಲುವಾಗಿ ಹೀರೋ ಆಗಲು ಕಾಯುತ್ತ ಕುಳಿತರೆ ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ವಿದ್ಯಾಭ್ಯಾಸದಿಂದ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ರೋಹಿತ್ ಶ್ರೀನಾಥ್ ಅವರು ಸಹ ಅದೇ ಕೆಲಸದಲ್ಲಿ ಮುಂದುವರಿದುಕೊಂಡು ತಂದೆಯ ಸಾಲ ತೀರಿಸಲು ಸಹಾಯ ಮಾಡುತ್ತಾರೆ. ಈ ರೀತಿ ಆ ಒಂದು ಆಚಾತುರ್ಯದಿಂದ ಕನ್ನಡ ಇಂಡಸ್ಟ್ರಿ ಯಲ್ಲಿ ಮಿಂಚಬೇಕಾಗಿದ್ದ ಮತ್ತೊಬ್ಬ ಹೀರೋನನ್ನು ಕಳೆದುಕೊಳ್ಳುವಂತೆ ಆಗಿಬಿಡುತ್ತದೆ. ಈ ವಿಚಾರವನ್ನು ಸ್ವತಹ ಶ್ರೀನಾಥ್ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ